ಸ್ಟ್ರೀಟ್ ಫುಡ್ ಅಂದ್ರೆ ಸಾಕು ಭಾರತೀಯರು ಬಾಯಿ ಚಪ್ಪರಿಸಿಕೊಂಡು ತಿನ್ತಾರೆ. ಅದರಲ್ಲೂ ಚಾಟ್ಸ್ ಅಂದ್ರೆ ಸಾಕು ಸಿಕ್ಕಾಪಟ್ಟೆ ಇಷ್ಟ. ಭೇಲ್‌ಪುರಿಯಂತೂ ಹಲವರ ಫೇವರಿಟ್. ಹೀಗಿರುವಾಗ ಡ್ಯಾನ್ಸಿಂಗ್ ಭೇಲ್‌ಪುರಿಯ ವಿಡೀಯೋವೊಂದು ಎಲ್ಲೆಡೆ ವೈರಲ್ ಆಗ್ತಿದೆ. ಏನಿದು ? ಇಂಟರ್‌ನೆಟ್‌ನಲ್ಲಿ ವೈರಲ್ ಆಗ್ತಿರೋದ್ಯಾಕೆ ನೋಡಿ.
ಭೇಲ್‌ಪುರಿ ಭಾರತದಲ್ಲಿ ಹಲವರ ಅಚ್ಚುಮೆಚ್ಚಿನ ಚಾಟ್ಸ್ ಆಗಿದೆ. ಕೆಲವೊಬ್ಬರು ಇದನ್ನು ಮನೆಯಲ್ಲಿ ಸಹ ಮಾಡಿ ಸವಿಯುತ್ತಾರೆ. ಆದರೆ ಹೆಚ್ಚಿನವರು ಸ್ಟ್ರೀಟ್‌ನಲ್ಲಿ ತಿನ್ನುವುದೇ ಜಾಸ್ತಿ. ಇದನ್ನು ಪಫ್ಡ್ ರೈಸ್ ಬಳಸಿ ತಯಾರಿಸಲಾಗುತ್ತದೆ. ಸಿಹಿ, ಹುಳಿ, ಖಾರ ಯಾವುದನ್ನಾದರೂ ಹೆಚ್ಚು ಸೇರಿಸಿಕೊಂಡು ಇದನ್ನು ಸವಿಯಬಹುದು. ಆದರೆ ಸದ್ಯ ಇಲ್ಲೊಂದೆಡೆ ಡ್ಯಾನ್ಸಿಂಗ್ ಭೇಲ್‌ಪುರಿಯ ವಿಡೀಯೋ ವೈರಲ್ ಆಗ್ತಿದೆ. ಅದನ್ನು ಒಂದಲ್ಲ ಎರಡಲ್ಲ 60 ಪದಾರ್ಥಗಳನ್ನು ಸೇರಿಸಿ ಇದನ್ನು ಸಿದ್ಧಪಡಿಸಲಾಗುತ್ತದೆ ಎಂದು ತಯಾರಿಸುವವರು ಹೇಳುತ್ತಾರೆ. ಅದನ್ನು ತಯಾರಿಸುವ ವಿಧಾನ ಎಷ್ಟು ಅದ್ಭುತವಾಗಿದೆ ಎಂದರೆ ಈ ಭೇಲ್ಪುರಿಗೆ ಡ್ಯಾನ್ಸಿಂಗ್ ಭೇಲ್ಪುರಿ ಎಂದು ಹೆಸರಿಸಲಾಗಿದೆ.
ಫುಡ್ ಬ್ಲಾಗರ್‌ಗಳಿಂದಾಗಿ ರುಚಿಕರವಾದ, ಚಿತ್ರ-ವಿಚಿತ್ರವಾಗಿ ಆಹಾರ ತಯಾರಿಸುವವರ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ.. ಹಾಗೆಯೇ ಸದ್ಯ ಡ್ಯಾನ್ಸಿಂಗ್ ಭೇಲ್‌ಪುರಿಯ ವಿಡೀಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಇನ್‌ಸ್ಟಾಗ್ರಾಮ್‌ನಲ್ಲಿ 'ಆಪ್ಕಾ ಭಾಯಿ ಫುಡಿ' ಹೆಸರಿನ ಪುಟದಲ್ಲಿ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ.
ಮೊಸರು ಗುಲಾಬ್ ಜಾಮೂನ್, ಫಾಂಟಾ ಮ್ಯಾಗಿ… ಏನೀ ವಿಚಿತ್ರ ಕಾಂಬಿನೇಷನ್ ಸ್ನ್ಯಾಕ್ಸ್?
ಕುಣಿಯುತ್ತಾ ಭೇಲ್‌ಪುರಿ ತಯಾರಿಸುವ ವಿಧಾನ
ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಚಾಟ್ಸ್ ಅಂಗಡಿಯಲ್ಲಿ ನಿಂತು ಭೇಲ್‌ಪುರಿ ಮಾಡುವುದನ್ನು ನೋಡಬಹುದು. ಇದಕ್ಕಾಗಿ ಮೊದಲು ದೊಡ್ಡ ಪಾತ್ರೆಯಲ್ಲಿ ಪಫ್ಡ್ ರೈಸ್ ಹಾಕುತ್ತಾರೆ, ನಂತರ ಕೊತ್ತಂಬರಿ, ಹಸಿಮೆಣಸು, ಚಟ್ನಿ, ಈರುಳ್ಳಿ, ಟೊಮೆಟೊ ಹೀಗೆ ಸುಮಾರು 60 ಸಾಮಗ್ರಿಗಳನ್ನು ಸೇರಿಸುತ್ತಾರೆ. ನಂತರ ಕುಣಿಯುವ ಶೈಲಿಯಲ್ಲಿ ಇವೆಲ್ಲವನ್ನೂ ಮಿಕ್ಸ್ ಮಾಡುತ್ತಾರೆ. ಅದಕ್ಕಾಗಿಯೇ ಈ ಭೇಲ್ಪುರಿಗೆ ಡ್ಯಾನ್ಸಿಂಗ್ ಭೇಲ್ಪುರಿ ಎಂದು ಹೆಸರಿಸಲಾಗಿದೆ. ಇದು ಇತ್ತೀಚಿನ ದಿನಗಳಲ್ಲಿ ತನ್ನ ವಿಶಿಷ್ಟ ಶೈಲಿಯಿಂದ ಸಾಮಾಜಿಕ ಮಾಧ್ಯಮದಲ್ಲಿ (Social media) ವೈರಲ್ ಆಗುತ್ತಿದೆ. ಸುಮಾರು 1 ದಶಲಕ್ಷಕ್ಕೂ ಹೆಚ್ಚು ಜನರು ಈ ವೀಡಿಯೊವನ್ನು ಇಷ್ಟಪಟ್ಟಿದ್ದಾರೆ. ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.
ಆಯುಷ್ಮಾನ್ ಪರಾಶರ್ ಎಂಬ ಬಳಕೆದಾರರು (User) 'ಅವರು ಇನ್ನೂ 2 ಸೆಕೆಂಡುಗಳ ಕಾಲ ತಿರುಗಿದ್ದರೆ, ಈ ಹೆಲಿಕಾಪ್ಟರ್ ಟೇಕ್ ಆಫ್ ಆಗುತ್ತಿತ್ತು' ಎಂದಿದ್ದಾರೆ. ಮತ್ತೊಬ್ಬರು 'ಆಹಾರವು (Food) ಎಲ್ಲೆಂದರಲ್ಲಿ ಹರಡಿಕೊಂಡಿರುವುದರಿಂದ ಇದು ಆಹಾರದ ವ್ಯರ್ಥ' ಎಂದು ಕಮೆಂಟಿಸಿದ್ದಾರೆ. ಇನ್ನೊಬ್ಬರು 'ಭೇಲ್ಪುರಿಯನ್ನು ನೃತ್ಯ ಮಾಡದೆ ಮಾಡಲು ಸಾಧ್ಯವಿಲ್ಲವೇ?' ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ. ಹಾಗೆಯೇ, ಅನೇಕ ಬಳಕೆದಾರರು ಈ ಬಗ್ಗೆ ತಮಾಷೆಯ ಕಾಮೆಂಟ್‌ಗಳನ್ನು ಮಾಡಿದ್ದಾರೆ.
ವಡಾ ಪಾವ್ ಪಿಜ್ಜಾ ಮಾಡೋ ವೀಡಿಯೋ ವೈರಲ್, ಯಾಕ್ರಪ್ಪಾ ಹೀಗೆಲ್ಲಾ ಅಸಹ್ಯ ಮಾಡ್ತೀರಿ!
ಆದರೆ, ಆಹಾರ ಮಾರಾಟಗಾರರು ತಮ್ಮ ವಿಶಿಷ್ಟ ಶೈಲಿಯಿಂದ ಗಮನ ಸೆಳೆಯುತ್ತಿರುವುದು ಇದೇ ಮೊದಲಲ್ಲ, ಈ ಮೊದಲು ಸಹ ವಿಶಿಷ್ಟ ರೀತಿಯಲ್ಲಿ ಆಹಾರ ಮಾಡೋ ವಿಡಿಯೋಗಳು ವೈರಲ್ಚ ಆಗಿವೆ. ಹಾದಿಂದ ಐಸ್ ಕ್ರೀಮ್ ಮಾಡುವುದು, ಮ್ಯಾಗಿ ಐಸ್‌ಕ್ರೀಂ ಮೊದಲಾದ ತಮಾಷೆಯ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.