ಅನ್ನ ಚೆಲ್ಲುವ ಮುನ್ನ ಯೋಚಿಸಿ... ಒಂದು ಹೊತ್ತು ಊಟ ಕೊಟ್ಟಿದಕ್ಕೆ ಕಣ್ಣೀರಾದರು... ವೈರಲ್ ವೀಡಿಯೋ

By Anusha KbFirst Published Jun 7, 2023, 4:40 PM IST
Highlights

ಬೀದಿಯಲ್ಲಿ ಕಸ ಆಯುವ ಇಬ್ಬರು ಹೆಣ್ಣು ಮಕ್ಕಳು ಭಾವುಕವಾಗಿ ಕಣ್ತುಂಬಿಸಿಕೊಂಡ ವೀಡಿಯೋವೊಂದು ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದ್ದು, ಎಲ್ಲರ ಮನ ಮಿಡಿಯುವಂತೆ ಮಾಡುತ್ತಿದೆ.

ಅನ್ನ ಪರಬ್ರಹ್ಮ ಸ್ವರೂಪ ಅನ್ನವನ್ನು ಚೆಲ್ಲಬಾರದು ಹಾಳು ಮಾಡಬಾರದು ಎಂದು ನಾವು ಹಿರಿಯರು ಹೇಳುವುದನ್ನು ಕೇಳಿದ್ದೇವೆ. ಒಂದು ಹೊತ್ತಿನ ಊಟಕ್ಕೆ ಗತಿ ಇಲ್ಲದ ಲಕ್ಷಾಂತರ ಜನ ಪ್ರಪಂಚದಲ್ಲಿ ಇದ್ದಾರೆ ಮತ್ತೊಂದೆಡೆ ಐಷಾರಾಮ ಅದ್ಧೂರಿತನದ ಹೆಸರಿನಲ್ಲಿ ಒಂದು ಹೊತ್ತಿನ ಊಟಕ್ಕೆ ಲಕ್ಷ ಲಕ್ಷ ಖರ್ಚು ಮಾಡುವ ಜನರು ಇದ್ದಾರೆ, ಇದರೊಂದಿಗೆ ಅಷ್ಟೇ ಪ್ರಮಾಣದಲ್ಲಿ ಆಹಾರವನ್ನು ಪೋಲು ಮಾಡುವವರು ಇದ್ದಾರೆ. ಹೀಗಿರುವಾಗ ಒಂದು ಹೊತ್ತಿನ ಊಟ ನೀಡಿದ್ದಕ್ಕೆ ಬೀದಿಯಲ್ಲಿ ಕಸ ಆಯುವ ಇಬ್ಬರು ಹೆಣ್ಣು ಮಕ್ಕಳು ಭಾವುಕವಾಗಿ ಕಣ್ತುಂಬಿಸಿಕೊಂಡ ವೀಡಿಯೋವೊಂದು ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದ್ದು, ಎಲ್ಲರ ಮನ ಮಿಡಿಯುವಂತೆ ಮಾಡುತ್ತಿದೆ. ಮೂರು ಹೊತ್ತು ಆರಾಮಾಗಿ ಊಟ ಮಾಡುವ ಯಾರೂ ಕೂಡ ಒಂದು ಹೊತ್ತಿನ ಊಟಕ್ಕೆ ಇಷ್ಟೊಂದು ಭಾವುಕರಾಗಲು ಸಾಧ್ಯವೇ ಇಲ್ಲ. ಈ ವೀಡಿಯೋದಲ್ಲಿಯೇ ತಿಳಿಯುತ್ತಿದೆ. ಈ ಜೀವಗಳು ಎಷ್ಟೊಂದು ಹಸಿವಿನಿಂದ ಕಂಗೆಟ್ಟಿರಬಹುದು ಎಂಬುದು.

ಕೈಯ್ಯ ಐದು ಬೆರಳುಗಳು ಹೇಗೆ ಒಂದೇ ಆಕಾರದಲ್ಲಿ ಇರಲು ಸಾಧ್ಯವಿಲ್ಲವೋ ಹಾಗೆಯೇ ಪ್ರಪಂಚದಲ್ಲಿರುವ ಎಲ್ಲರ ಜೀವನ ಒಂದೇ ತರ ಇರಲು ಸಾಧ್ಯವಿಲ್ಲ, ಕೆಲವರು ಕೂತುಂಡರು ಕರಗದಷ್ಟು ಆಸ್ತಿ ಹೊಂದಿದ್ದರೆ ಮತ್ತೆ ಕೆಲವು ಒಂದು ಹೊತ್ತಿನ ಊಟಕ್ಕಾಗಿ ಇನ್ನಿಲ್ಲದ ಬವಣೆ ಬರುತ್ತಾರೆ. ಕಸ ಆಯುತ್ತಾ, ಹಲವು ಮನೆಗಳಲ್ಲಿ ಕೆಲಸ ಮಾಡುತ್ತಾ ಬದುಕುವ ಅನೇಕರಿಗೆ ಒಂದು ಹೊತ್ತು ಊಟ ಮಾಡುವುದು ಎಂದರೆ ಅದೇ ಮೃಷ್ಟಾನ್ನಇದೇ ಕಾರಣಕ್ಕೆ ಒಂದು ಹೊತ್ತು ಉತ್ತಮ ಆಹಾರ ನೀಡಿದ ವ್ಯಕ್ತಿಯತ್ತ ಅವರು ಧನ್ಯತಾ ಭಾವದಿಂದ ನೋಡುತ್ತಾ ಭಾವುಕರಾಗುತ್ತಾರೆ. 

Poorest Country : ಬುರುಂಡಿ ವಿಶ್ವದಲ್ಲಿಯೇ ಬಡ ರಾಷ್ಟ್ರವಾಗಲು ಕಾರಣವೇನು?

heart______420 ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಈ ವೀಡಿಯೋ ಅಪ್‌ಲೋಡ್ ಆಗಿದ್ದು, ಈ ವೀಡಿಯೋ ನೋಡಿದ ಅನೇಕರು ಭಾವುಕರಾಗಿದ್ದಾರೆ. ವೀಡಿಯೋ ನೋಡಿದ ಅನೇಕರು ಈ ಧರ್ಮಕಾರ್ಯದಲ್ಲಿ ತೊಡಗಿದ್ದ ವ್ಯಕ್ತಿಗೆ ತಾವಿದ್ದಲ್ಲಿಂದಲೇ ಹರಸಿದ್ದಾರೆ.  ಕೆಲವರು ಸಹೋದರ ನೀ ಹೃದಯವನ್ನು ಗೆದ್ದೆ ಎಂದು ಕಾಮೆಂಟ್ ಮಾಡಿದ್ದಾರೆ. ಕರುಣೆ ತೋರುವುದಕ್ಕೆ ಧರ್ಮ ಜಾತಿಗಳಿಲ್ಲ, ದೇವರು ನಿಮ್ಮನ್ನು ಆಶೀರ್ವದಿಸಲು ಎಂದು ಅನೇಕರು ಮನದುಂಬಿ ಹಾರೈಸಿದ್ದಾರೆ. 

ಬಡತನ, ಖಾಲಿ ಜೇಬು ಹಸಿದ ಹೊಟ್ಟೆಜೀವನದಲ್ಲಿ ಒಳ್ಳೆಯ ಪಾಠವನ್ನು ಕಲಿಸುತ್ತದೆ ಎಂಬುದನ್ನು ನೀವು ಕೇಳಿರಬಹುದು. ಹಸಿದವರಿಗೆ ಗೊತ್ತು ಒಂದು ಹೊತ್ತಿನ ಊಟದ ಬೆಲೆ ಏನು ಎಂಬುದು ಇದೇ ಕಾರಣಕ್ಕೆ ತಮಗೆ ಅಗತ್ಯವಿಲ್ಲದಿದ್ದರೂ ತಟ್ಟೆ ತುಂಬ ತುಂಬಿಕೊಂಡು ಆಹಾರವನ್ನು ಪೋಲು ಮಾಡುವ ಮೊದಲು ಒಮ್ಮೆ ಯೋಚಿಸಿ ನಾವು ಪೋಲು ಮಾಡುವ ಆಹಾರ ಇನ್ಯಾರದ್ದೋ ಹೊಟ್ಟೆ ತುಂಬಿಸಬಹುದು ಅಲ್ಲವೇ.?

ಹಾವು ಕಚ್ಚಿದ ಪುತ್ರನಿಗೆ ಕಿಡ್ನಿ ಕೊಟ್ಟು ಮರುಜನ್ಮ ನೀಡುತ್ತಿರುವ ತಾಯಿ: ಆರ್ಥಿಕ ಸಹಾಯಕ್ಕೆ ಮನವಿ

 
 
 
 
 
 
 
 
 
 
 
 
 
 
 

A post shared by Héårt (@heart______420)

 

click me!