ಪ್ರಪಂಚದಲ್ಲಿ ಚಿತ್ರ-ವಿಚಿತ್ರ ಜನರಿದ್ದಾರೆ. ಇಂಥವರು ವಿಚಿತ್ರ ಆಹಾರ ಅಭ್ಯಾಸವನ್ನು ಸಹ ಹೊಂದಿದ್ದಾರೆ. ಕೀಟಗಳನ್ನು ತಿನ್ನುವುದು, ಕಪ್ಪೆಗಳನ್ನು ಫ್ರೈ ಮಾಡುವುದು ಮೊದಲಾದ ಅಭ್ಯಾಸವನ್ನು ಹೊಂದಿರುತ್ತಾರೆ. ಹಾಗೆಯೇ ಇಲ್ಲೊಂದೆಡೆ ಇಲಿಯನ್ನು ನೀಟಾಗಿ ಹಿಟ್ಟಿನಲ್ಲಿ ಅದ್ದಿ ಫ್ರೈ ಮಾಡಿ ತಿನ್ನುತ್ತಾರೆ.
ವಿಶ್ವದ ಬೇರೆ ಬೇರೆ ಪ್ರಾಂತ್ಯಗಳಲ್ಲಿ ವಿಭಿನ್ನ ರೀತಿಯ ಆಹಾರಶೈಲಿಗಳಿವೆ. ಕೆಲವೊಂದು ಆಹಾರಗಳನ್ನು ತಿನ್ನುವುದು, ಅದರ ಬಗ್ಗೆ ಕೇಳುವುದು, ನಮಗೆ ಅಯ್ಯೋ ಇದನ್ನೆಲ್ಲಾ ತಿಂತಾರಾ ಅನ್ನೋ ಭಾವನೆಯನ್ನು ಮೂಡಿಸುತ್ತೆ. ಆದ್ರೂ ಯಾರು ಏನು ಆಹಾರ ತಿನ್ನುತ್ತಾರೆ ಅನ್ನೋದನ್ನು ತಿಳ್ಕೊಳ್ಳುವ ಆಸಕ್ತಿ ಇದ್ದೆ ಇರುತ್ತೆ ಅಲ್ವಾ? ಕೀನ್ಯಾದಲ್ಲಿ ಹಸುವಿನ ರಕ್ತ ಕುಡಿದರೆ, ಗ್ರೀನ್ ಲ್ಯಾಂಡ್ ನಲ್ಲಿ ಕೊಳೆತ ಶಾರ್ಕ್ ತಿನ್ನುತ್ತಾರೆ. ಹಾಗೆಯೇ ವಿಶ್ವದ ವಿವಿಧೆಡೆ ವಿಚಿತ್ರ ರೀತಿಯ ಆಹಾರಪದ್ಧತಿಗಳಿವೆ. ಅಲ್ಲಿನ ಸ್ಥಳೀಯರಿಗೆ ಪ್ರಿಯವಾಗಿರುವ ಇಂಥಾ ಆಹಾರಗಳು ನಾವು ಕೇಳಿದ್ರೆ ಮಾತ್ರ ವಾಕರಿಕೆ ಬರುವಂತೆ ಆಗುವುದು ಖಂಡಿತ. ಅದರಲ್ಲೂ ಇಲ್ಲಿಯ ಜನ್ರು ಸೇವಿಸುವ ವಿಚಿತ್ರ ಆಹಾರ ನೋಡಿದ್ರೆ ನೀವು ಛೀ, ಥೂ ಅಂತ ಕ್ಯಾಕರಿಸಿ ಉಗಿಯೋದು ಪಕ್ಕಾ.
ಪ್ರತಿಯೊಬ್ಬರ ಆಹಾರ ಸಂಸ್ಕೃತಿಯನ್ನು ಗೌರವಿಸಬೇಕು. ಯಾವ ಆಹಾರವನ್ನು (Food) ನೋಡಿಯೋ ಛೀ, ಥೂ ಅನ್ನಬಾರದು ಎಂದು ಹಿರಿಯರು ಹೇಳುತ್ತಾರೆ. ಆದರೆ ವಿಚಿತ್ರವಾದ ಕೆಲವು ಆಹಾರಗಳನ್ನು ನೋಡಿದಾಗ ಮನಸ್ಸು ತಡೆಯದೆ ಹಾಗೆ ಹೇಳುವಂತಾಗುವುದು ನಿಜ. ಸದ್ಯ ಎಲ್ಲೆಡೆ ವೈರಲ್ ಆಗುತ್ತಿರುವ ಈ ವೀಡಿಯೋ ನೋಡಿದರೆ ಸಹ ಹಾಗೆಯೇ ಅನಿಸುತ್ತದೆ.
ಚಿಕನ್ ಲೆಗ್ ಪೀಸ್ ಅಲ್ಲ, ಭಾರತದ ಈ ತಾಣದಲ್ಲಿ ಕಪ್ಪೆ ಲೆಗ್ ಪೀಸ್ ಸಖತ್ ಫೇಮಸ್
ಇಲಿ ಬೋನಿಗೆ ಬಿದ್ರೆ ಇಲ್ಲಿನ ಜನರಿಗೆ ಭರ್ಜರಿ ಊಟ
ಸಾಮಾನ್ಯವಾಗಿ ಹಳ್ಳಿಗಳಲ್ಲೆಲ್ಲಾ ಹೆಚ್ಚಿನ ಪ್ರಮಾಣದಲ್ಲಿ ಇಲಿಗಳು (Rat) ಇರುತ್ತವೆ. ಅಕ್ಕಿ, ಧಾನ್ಯಗಳನ್ನು ತಿಂದು, ಬಟ್ಟೆ, ಇತರ ವಸ್ತುಗಳನ್ನು ಹರಿದು ಹಾಕಿ ಹಾಳು ಮಾಡುತ್ತವೆ. ಹೀಗಾಗಿಯೇ ಹಳ್ಳಿಯ ಜನರು ಇವುಗಳನ್ನು ಹಿಡಿಯಲು ಇಲಿಬೋನುಗಳನ್ನು ಹಿಡಿಯುತ್ತಾರೆ. ಇಲಿ ಬೋನಿಗೆ ಬಿದ್ದ ನಂತರ ದೂರದ ಕಾಡಿಗೆ ಬಿಟ್ಟು ಬರುತ್ತಾರೆ. ಕೆಲವರು ಸಾಯಿಸಿ ಬಿಡುತ್ತಾರೆ. ಆದರೆ ಹೆಸರು ತಿಳಿಯದ ಈ ಊರಲ್ಲಿ ಮಾತ್ರ ಜನರು ಹೀಗೆಲ್ಲಾ ಮಾಡೋಲ್ಲ. ಬದಲಿಗೆ ಅವರ ಪಾಲಿಗೆ ಇದು ಭರ್ಜರಿ ಆಹಾರ. ಇಲಿಯನ್ನು ಇಲ್ಲಿನ ಜನರು ನೀಟಾಗಿ ಫ್ರೈ ಮಾಡಿ ತಿನ್ತಾರೆ.
ನಂಬೋಕೆ ಕಷ್ಟವೆನಿಸಿದರೂ ಇದು ನಿಜ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ವ್ಯಕ್ತಿ, ಇಲಿಯನ್ನು ಹಿಟ್ಟಿನಲ್ಲಿ ಕಲಸಿ ಎಣ್ಣೆಯಲ್ಲಿ (Oil) ಬಿಡುತ್ತಾನೆ. ನಂತರ ಇದರ ಮೇಲೆ ಸ್ಪೂನ್‌ನಿಂದ ಎಣ್ಣೆ ಹಾಕುತ್ತಾನೆ. ಸ್ಪಲ್ಪ ಹೊತ್ತು ಎಣ್ಣೆಯಲ್ಲಿ ಫ್ರೈ ಮಾಡಿ ನಂತರ ಪ್ಲೇಟ್‌ಗೆ ಹಾಕಿ ಸರ್ವ್ ಮಾಡುತ್ತಾನೆ. ವೈರಲ್ ಆಗಿರುವ ವಿಡಿಯೋಗೆ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಕೆಲವರು ಛೀ ಏನೆಲ್ಲಾ ತಿನ್ತಾರಪ್ಪಾ ಎಂದು ಹೀಯಾಳಿಸಿದ್ದಾರೆ. ಮತ್ತೆ ಕೆಲವರು 'ಇಂಥದನ್ನೆಲ್ಲಾ ಮಾಡಿ ತಿನ್ನೋದು ಸಿಕ್ಕಾಪಟ್ಟೆ ಹೇಸಿಗೆಯ ವಿಚಾರ' ಎಂದು ಟೀಕಿಸಿದ್ದಾರೆ.
ಇಷ್ಟೇ ಅಲ್ಲ. ಪ್ರಪಂಚದ ವಿವಿಧೆಡೆ ಇನ್ನೂ ವಿಚಿತ್ರವಾದ ಆಹಾರಗಳನ್ನು ತಿನ್ನುವ ಅಭ್ಯಾಸವಿದೆ. ಗ್ರೀನ್ ಲ್ಯಾಂಡ್- ಐಸ್ ಲ್ಯಾಂಡ್ ನಲ್ಲಿ ಕೊಳೆತ ಮಾಂಸವನ್ನು ಅಗೆದು (Dig) ಆಯ್ದು ತಿನ್ನುವುದು ಸಾಮಾನ್ಯ. ಅತಿ ಖ್ಯಾತಿ ಹೊಂದಿರುವ ಆಹಾರವೆಂದರೆ ಹುದುಗು ಬರಿಸಿದ ಗ್ರೀನ್ ಲ್ಯಾಂಡ್ ಶಾರ್ಕ್ ಮಾಂಸ. ನೆಲದ ಅಡಿಯಲ್ಲಿ ಹನ್ನೆರಡು ವಾರಗಳ ಕಾಲ ಇಟ್ಟು ಬಳಿಕ ಬೇಯಿಸುತ್ತಾರೆ. ದಕ್ಷಿಣ ಕೀನ್ಯಾ ಮತ್ತು ಉತ್ತರ ತಾಂಜಾನಿಯಾ ಪ್ರದೇಶಗಳಲ್ಲಿ ಪ್ರಾಣಿಗಳ ರಕ್ತವನ್ನು ಸಮಾರಂಭಗಳಲ್ಲಿ (Functions) ಸೇವಿಸುತ್ತಾರೆ. ಮಕ್ಕಳು ಹುಟ್ಟಿದಾಗ, ಮದುವೆ (Marriage) ಸಮಾರಂಭಗಳಲ್ಲಿ ಪ್ರಾಣಿಗಳ ರಕ್ತ ಕುಡಿಯುತ್ತಾರೆ. ಪ್ರಮುಖವಾಗಿ ಹಸುವಿನ ರಕ್ತ ಸಾಮಾನ್ಯ. ಮಸಾಯಿ ಪ್ರದೇಶದಲ್ಲಿ ಹಸುವಿನ (Cow) ರಕ್ತವನ್ನು ಕೇವಲ ಸಮಾರಂಭಗಳಲ್ಲಿ ಸೇವಿಸುತ್ತಾರೆ. ಬಿದಿರಿನಿಂದ ಮಾಡಿದ ಕೊಳವೆಯನ್ನು ಹಸುವಿನ ಜುಗುಲಾರ್ ರಕ್ತನಾಳಕ್ಕೆ ಚುಚ್ಚಿ ಅಲ್ಲಿಂದ ರಕ್ತವನ್ನು ಎಳೆಯಲಾಗುತ್ತದೆ.
ಬೆಳ್ಳುಳ್ಳಿ ಪಾಯಸ! ಇರುವೆ ಚಟ್ನಿ.. ಕೇಳೋಕೆ ವಿಚಿತ್ರ ಅನಿಸೋ ಭಾರತೀಯ ಭಕ್ಷ್ಯಗಳಿವು