
ಫುಡ್ ಡೆಲಿವರಿ ಆಪ್‌ಗಳು ಅದೆಷ್ಟೋ ಮಂದಿಗೆ ಬದುಕು ಕಟ್ಟಿಕೊಟ್ಟಿವೆ. ಕಾಲೇಜಿಗೆ ಹೋಗುವವರು, ತಿಂಗಳ ಸಂಬಳ ಸಾಕಾಗದವರು ಇಂಥಾ ಫುಡ್ ಆಪ್‌ನಲ್ಲಿ ಪಾರ್ಟ್ ಟೈಂ ಕೆಲಸ ಮಾಡಿ ಜೀವನ ಸಾಗಿಸುತ್ತಾರೆ. ಎಷ್ಟೋ ಜನರ ಪಾಲಿಗೆ ಇಂಥಾ ಫುಡ್ ಆಪ್‌ಗಳು ಜೀವನಕ್ಕೆ ದಾರಿಯಾಗಿವೆ. ವಿಶೇಷ ಚೇತನರು, ಮಹಿಳೆಯರು ಸಹ ಝೊಮೇಟೋ, ಸ್ವಿಗ್ಗಿಯಲ್ಲಿ ಜೀವನ ಮಾಡಿ ಜೀವನ ಕಟ್ಟಿಕೊಳ್ಳುತ್ತಾರೆ. ಇಂಥಾ ಆಸಕ್ತಿದಾಯಕ ವಿಚಾರಗಳು ಆಗಿಂದಾಗೆ ವೈರಲ್ ಆಗುತ್ತಲೇ ಇರುತ್ತವೆ. ಸದ್ಯ ವಿಶೇಷ ಸಾಮರ್ಥ್ಯವುಳ್ಳ Zomato ಡೆಲಿವರಿ ಬಾಯ್ ವಿಚಾರ ಸಾಮಾಜಿಕ ಮಾಧ್ಯಮದಲ್ಲಿ (Social media) ವೈರಲ್ ಆಗ್ತಿದೆ.
ಇಂಟರ್ನೆಟ್ ಎಲ್ಲರಿಗೂ ಆಸಕ್ತಿದಾಯಕ ಸ್ಥಳವಾಗಿದೆ. ಇದು ವಿಭಿನ್ನವಾದ ಘಟನೆಯನ್ನು ಮುಂದಿಡುತ್ತದೆ ಅದು ನಮಗೆ ಉತ್ತಮ ವೈಬ್ಸ್ ಮತ್ತು ಧನಾತ್ಮಕತೆಯನ್ನು ನೀಡುತ್ತದೆ. ಅಂಗವೈಕಲ್ಯವು ಯಶಸ್ಸಿಗೆ ಅಡ್ಡಿಯಾಗಬಾರದು ಎಂದು ಈಗಾಗಲೇ ಅದೆಷ್ಟೋ ಮಂದಿ ಸಾಬೀತುಪಡಿಸಿದ್ದಾರೆ. ಜೀವನದಲ್ಲಿ ಏನನ್ನಾದರೂ ಮಾಡಲು ದೃಢ ಮನಸ್ಸು ಮಾಡಿದರೆ ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂಬುದನ್ನು ಗಾಲಿಕುರ್ಚಿಯಲ್ಲಿ (Wheelchair) ಓಡಾಡಿ ಫುಡ್ ವಿತರಣೆ (Food delivery) ಮಾಡುವ ಈ ವ್ಯಕ್ತಿ ಸಾಬೀತುಪಡಿಸಿದ್ದಾರೆ. ಇತ್ತೀಚೆಗೆ, Zomato ಡೆಲಿವರಿ ಏಜೆಂಟ್‌ನ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಟ್ರಾಫಿಕ್ ಮಧ್ಯೆ ಬೈಕ್ ಸವಾರನೊಬ್ಬ ವಿಡಿಯೋ ಚಿತ್ರೀಕರಿಸಿದ್ದಾನೆ. ಇಲ್ಲಿ ಎಲ್ಲರ ಗಮನಸೆಳೆಯುತ್ತಿರೋದು ವಿಶಿಷ್ಟವಾದ ವಾಹನ.
ಹೊಸ ಪೋನ್ ಕಳೆದುಕೊಂಡ ಕೊಹ್ಲಿ, ಹೆಂಡ್ತಿ ಮೊಬೈಲ್‌ನಿಂದ ಐಸ್‌ಕ್ರೀಂ ಆರ್ಡರ್ ಮಾಡಿ ಎಂದ ಝೊಮೇಟೋ!
ಕ್ಲಿಪ್ ಮೋಟಾರೀಕೃತ ಗಾಲಿಕುರ್ಚಿಯಲ್ಲಿ ಕುಳಿತಿರುವ Zomato ಡೆಲಿವರಿ ಏಜೆಂಟ್ ಅನ್ನು ತೋರಿಸುತ್ತದೆ. ವ್ಯಕ್ತಿ ಮುಗುಳ್ನಗುತ್ತಲೇ, ಏನೇ ಆದರೂ ಜೀವನದಲ್ಲಿ ಭರವಸೆ (Hope) ಕಳೆದುಕೊಳ್ಳಬಾರದು ಎಂದು ಹೇಳುತ್ತಾರೆ. ಹಿಮಾಂಶು ಎಂಬವರು ಟ್ವಿಟ್ಟರ್‌ನಲ್ಲಿ ಈ ವೀಡಿಯೋ ಹಂಚಿಕೊಂಡಿದ್ದಾರೆ. ವೀಡಿಯೊದ ಶೀರ್ಷಿಕೆಯು, “Hats off to this man #Zomato #zomatoindia” ಎಂದು ಬರೆಯಲಾಗಿದೆ.
ವೀಡಿಯೊ 10 ಸಾವಿರಕ್ಕೂ ಹೆಚ್ಚು ವೀವ್ಸ್ ಮತ್ತು ಹಲವಾರು ಪ್ರತಿಕ್ರಿಯೆಗಳನ್ನು ಸಂಗ್ರಹಿಸಿದೆ. ಯಂತ್ರಚಾಲಿತ ಗಾಲಿಕುರ್ಚಿಯು ಶಾರ್ಕ್ ಟ್ಯಾಂಕ್ ಇಂಡಿಯಾದಲ್ಲಿ ಸಿದ್ಧಾರ್ಥ್ ದಾಗಾ, ಸ್ವೋಸ್ಟಿಕ್ ಡ್ಯಾಶ್ ಮತ್ತು ಆಶಿಶ್ ಶರ್ಮಾ ಅವರು ಪಿಚ್ ಮಾಡಿದ ಉತ್ಪನ್ನವನ್ನು ಹೋಲುತ್ತದೆ ಎಂದು ಕೆಲವರು ಗಮನಸೆಳೆದರು. ಅನುಪಮ್ ಮಿತ್ತಲ್ ಅವರು ಉತ್ಪನ್ನವನ್ನು ಹೆಚ್ಚು ಶ್ಲಾಘಿಸಿದರು ಮತ್ತು ಗಾಲಿಕುರ್ಚಿಯ ಬೆಲೆಯನ್ನು ಕಡಿತಗೊಳಿಸುವುದರಿಂದ ಭಾರತ ರತ್ನ ಕಂಪನಿಯನ್ನು ಖಚಿತಪಡಿಸಿಕೊಳ್ಳಬಹುದು ಎಂದು ತಂಡಕ್ಕೆ ಭರವಸೆ ನೀಡಿದರು.
ಮುಂಬೈನಲ್ಲಿದ್ದು, ಬೆಂಗಳೂರಿನಿಂದ ಬಿರಿಯಾನಿ ಆರ್ಡರ್ ಮಾಡಿದ ಯುವತಿ, ಬಿಲ್ ಭರ್ತಿ 2500 ರೂ.!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.