ಮಧ್ಯಪ್ರದೇಶ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಭೋಪಾಲ್, ಇಂದೋರ್, ಜಬಲ್‌ಪುರ ಮತ್ತು ಗ್ವಾಲಿಯರ್‌ನ ಎಲ್ಲಾ ರೆಸ್ಟೋರೆಂಟ್‌ಗಳಲ್ಲಿ ತಂದೂರಿ ರೊಟ್ಟಿಯನ್ನು ನಿಷೇಧಿಸಿದೆ. ಅದಕ್ಕೇನು ಕಾರಣ, ಹೆಚ್ಚಿನ ಮಾಹಿತಿ ಇಲ್ಲಿದೆ.
ಮಧ್ಯಪ್ರದೇಶ : ಹೊಟೇಲ್, ರೆಸ್ಟೋರೆಂಟ್‌ಗಳಿಗೆ ಹೋದರೆ ಸಾಕು ಹೆಚ್ಚಿನವರು ಆರ್ಡರ್ ಮಾಡುವುದು ತಂದೂರಿ ರೋಟಿ. ವೆಜ್ ಕರಿ ಅಥವಾ ನಾನ್‌ವೆಜ್ ಕರಿಯೊಂದಿಗೂ ಇದು ತಿನ್ನಲು ಚೆನ್ನಾಗಿರುತ್ತದೆ. ತಿನ್ನಲು ಸಾಫ್ಟ್ ಆಗಿ ಟೇಸ್ಟೀ ಆಗಿರುವ ಕಾರಣ ಮಕ್ಕಳಿಂದ ಹಿಡಿದು ವೃದ್ಧರೂ ಇದನ್ನು ಇಷ್ಟಪಟ್ಟು ತಿನ್ನುತ್ತಾರೆ. ಅದರಲ್ಲೂ ಚಿಕನ್ ಕರಿಗೆ ಇದು ಹೇಳಿ ಮಾಡಿಸಿದ ಕಾಂಬಿನೇಷನ್. ಆದ್ರೆ ಈ ರಾಜ್ಯದಲ್ಲಿ ಮಾತ್ರ ಇನ್ಮುಂದೆ ಸಾಂಪ್ರದಾಯಿಕವಾಗಿ ತಯಾರಿಸೋ ತಂದೂರಿ ರೋಟಿ ಸಿಗಲ್ಲ. ಅದ್ಯಾಕೆ ಅನ್ನೋ ಮಾಹಿತಿ ಇಲ್ಲಿದೆ.
ಮಧ್ಯಪ್ರದೇಶ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಇಲ್ಲಿನ ಎಲ್ಲಾ ರೆಸ್ಟೋರೆಂಟ್‌ಗಳಲ್ಲಿ ತಂದೂರಿ ರೊಟ್ಟಿಯನ್ನು ನಿಷೇಧಿಸಿದೆ. ಭೋಪಾಲ್, ಇಂದೋರ್, ಜಬಲ್‌ಪುರ ಮತ್ತು ಗ್ವಾಲಿಯರ್‌ನಲ್ಲಿ ತಂದೂರಿ ರೋಟಿ ಲಭ್ಯವಿಲ್ಲ. ಹೆಚ್ಚುತ್ತಿರುವ ವಾಯು ಮಾಲಿನ್ಯದ ದೃಷ್ಟಿಯಿಂದ ಮಧ್ಯಪ್ರದೇಶ ಸರ್ಕಾರ (Madyapradesh government) ತಂದೂರಿಯನ್ನು ನಿಷೇಧಿಸಿದೆ (Ban). ಸರ್ಕಾರದ ಆದೇಶವನ್ನು ಪಾಲಿಸದಿದ್ದಲ್ಲಿ 5 ಲಕ್ಷ ರೂ.ವರೆಗೆ ದಂಡ (Fine) ವಿಧಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅನ್ನದೊಂದಿಗೆ ರೊಟ್ಟಿ ತಿಂದರೆ ಆರೋಗ್ಯದ ಮೇಲೆ ಏನು ಪರಿಣಾಮ ಬೀರುತ್ತೆ ?
ಮಧ್ಯಪ್ರದೇಶದ ಜಬಲ್ಪುರದಲ್ಲಿ ಜಿಲ್ಲಾಡಳಿತದಿಂದ ತಂದೂರಿ ನಿಷೇಧದ ಆದೇಶ
ಮಧ್ಯಪ್ರದೇಶದ ಜಬಲ್ಪುರದಲ್ಲಿ ಜಿಲ್ಲಾಡಳಿತ ಆದೇಶವೊಂದನ್ನು ಹೊರಡಿಸಿದ್ದು, ಇದು ಹೋಟೆಲ್ ಮಾಲೀಕರು ಮತ್ತು ಗ್ರಾಹಕರಲ್ಲಿ ಅಚ್ಚರಿ ಮೂಡಿಸಿದೆ. ವಾಸ್ತವವಾಗಿ, ಮಧ್ಯಪ್ರದೇಶದ ಅನೇಕ ನಗರಗಳಲ್ಲಿ ವಾಯು ಮಾಲಿನ್ಯವು (Air pollution) ವೇಗವಾಗಿ ಹರಡುತ್ತಿದೆ. ಇದನ್ನು ತಡೆಯಲು ಸರಕಾರವೂ ಸಜ್ಜಾಗಿದೆ. ವಾಯು ಮಾಲಿನ್ಯದ ಹಿನ್ನೆಲೆಯಲ್ಲಿ ಸರ್ಕಾರ (Government) ಈ ಕ್ರಮ ಕೈಗೊಂಡಿದೆ. ಮಧ್ಯಪ್ರದೇಶದ ಆಹಾರ ಇಲಾಖೆ ಈ ಆದೇಶ ಹೊರಡಿಸಿದೆ. ರಾಜ್ಯದ ಹೋಟೆಲ್-ಧಾಬಾ ನಿರ್ವಾಹಕರಿಗೆ ಆಹಾರ ಇಲಾಖೆಯಿಂದ ನೋಟಿಸ್ ನೀಡಲಾಗಿದೆ. ಆಹಾರ ಇಲಾಖೆ ಆದೇಶದ ಅಡಿಯಲ್ಲಿ ಹೆಚ್ಚುತ್ತಿರುವ ಮಾಲಿನ್ಯವನ್ನು ಉಲ್ಲೇಖಿಸಿದೆ.
ಧಾಬಾ-ಹೋಟೆಲ್‌ಗಳ ಮೇಲೆ ಭಾರೀ ಪರಿಣಾಮ
ಸಾಮಾನ್ಯವಾಗಿ ತಂದೂರಿ ರೋಟಿಯನ್ನು ತಯಾರಿಸಲು ಮರ ಮತ್ತು ಕಲ್ಲಿದ್ದಲನ್ನು ಬಳಸಲಾಗುತ್ತದೆ. ಇದರಿಂದ ಹೊಗೆ ಹೊರಸೂಸುತ್ತದೆ ಮತ್ತು ವಾಯು ಮಾಲಿನ್ಯ ಹೆಚ್ಚಾಗುತ್ತದೆ. ಅದರ ಬದಲಿಗೆ ಎಲೆಕ್ಟ್ರಿಕ್ ಓವನ್ ಅಥವಾ ಎಲ್ಪಿಜಿ ಗ್ಯಾಸ್ ಸಿಲಿಂಡರ್‌ಗಳನ್ನು ಬಳಸುವಂತೆ ಸೂಚನೆ ನೀಡಲಾಗಿದೆ. ಆದರೆ ಎಲೆಕ್ಟ್ರಿಕ್ ಓವನ್ ಅಥವಾ ಸಿಲಿಂಡರ್‌ನಲ್ಲಿ ಮಾಡಿದ ತಂದೂರಿ ರೋಟಿ ರುಚಿಯಾಗಿರುವುದಿಲ್ಲ. ಸರ್ಕಾರದ ಈ ಆದೇಶದ ನಂತರ ಢಾಬಾ ಹೋಟೆಲ್ ವ್ಯಾಪಾರದ ಮೇಲೆ ಭಾರಿ ಪರಿಣಾಮ ಬೀರಲಿದೆ ಎಂದು ಢಾಬಾ ಮಾಲೀಕರು ಆತಂಕ ವ್ಯಕ್ತಪಡಿಸಿದ್ದಾರೆ.
ಗರ್ಭಿಣಿಯರು ಈ ಮಲ್ಟಿ ಗ್ರೇನ್ ರೊಟ್ಟಿ ಸೇವಿಸಿದ್ರೆ, ಮಲಬದ್ಧತೆ ಸಮಸ್ಯೆ ಇರೋದಿಲ್ಲ
ರಾಜ್ಯದ ಪ್ರಮುಖ ನಗರಗಳಲ್ಲಿ ವಾಯುಮಾಲಿನ್ಯ
ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ (CPC) ವರದಿಯ ಪ್ರಕಾರ, ಗ್ವಾಲಿಯರ್‌ನ AQI 329 ಕ್ಕೆ ತಲುಪಿದ್ದರೆ, ಭೋಪಾಲ್‌ನ 299, ಕಟ್ನಿ 263, ಪಿತಾಮ್‌ಪುರ 260, ಮಂಡಿದೀಪ್ 260, ಜಬಲ್‌ಪುರ 214, ಸಿಂಗ್ರೌಲಿ 253 ಮತ್ತು ಉಜ್ಜಯಿನಿಯ ವಾಯು ಗುಣಮಟ್ಟ ಸೂಚ್ಯಂಕ P181 ಗೆ ತಲುಪಿದೆ ಎಂದು ತಿಳಿದುಬಂದಿದೆ.
ಅಷ್ಟೇ ಅಲ್ಲ, ವಾಯು ಮಾಲಿನ್ಯದಿಂದ ಅಸ್ತಮಾ, ಉಸಿರಾಟದ ತೊಂದರೆ, ಕಣ್ಣು ಉರಿ, ತಲೆನೋವು (Headache) ಮುಂತಾದ ಸಮಸ್ಯೆಗಳೂ ಉಂಟಾಗುತ್ತವೆ. ಹಾಗೆ ನೋಡಿದರೆ ಮಧ್ಯಪ್ರದೇಶ ಸರ್ಕಾರ ವಾಯು ಮಾಲಿನ್ಯದ ವಿರುದ್ಧ ಹೋರಾಡಲು ಎಲ್ಲಾ ರೀತಿಯಲ್ಲಿ ಪ್ರಯತ್ನ ಪಡುತ್ತಿದೆ. ಹೀಗಾಗಿ ಮಾಲಿನ್ಯವನ್ನು ಕುಗ್ಗಿಸಲು ರಾಜ್ಯದ ಎಲ್ಲಾ ಹೋಟೆಲ್‌ಗಳಿಗೂ ಮತ್ತು ಡಾಬಾಗಳಿಗೆ ನೋಟಿಸ್ ನೀಡಲಾಗಿದೆ.