
ಭಾರತೀಯರ ದಿನಚರಿಯಲ್ಲಿ ಟೀ (Tea) ಬಹು ಮುಖ್ಯ ಪಾತ್ರ ವಹಿಸುತ್ತದೆ. ದಿನವಿಡೀ ಏನೇ ತಿಂದ್ರೂ ಬೆಳಗ್ಗೆ, ಸಂಜೆ ಹೊತ್ತು ತಪ್ಪದೇ ಟೀ ಕುಡಿಯುವವರು ಹಲವರು. ಟೀ ಕುಡಿಯೋದ್ರಿಂದ ತಲೆನೋವು ಹೋಗುತ್ತೆ, ರಿಲ್ಯಾಕ್ಸ್ (Relax) ಆಗುತ್ತೆ ಅನ್ನೋ ಕಾರಣಕ್ಕಾಗಿ ಹಲವರು ಚಹಾ ಕುಡಿಯವುದನ್ನು ರೂಢಿ ಮಾಡಿಕೊಂಡಿರುತ್ತಾರೆ. ಟೀಯಲ್ಲಿ ಮಿಲ್ಕ್ ಟೀ, ಜಿಂಜರ್ ಟೀ, ಮಸಾಲೆ ಟೀ, ಬ್ಲ್ಯಾಕ್ ಟೀ ಎಂದು ಹಲವು ವೆರೈಟಿ ಸಹ ಇರುವ ಕಾರಣ ಇಷ್ಟವಿರುವುದನ್ನು ತಯಾರಿಸಿ ಕುಡಿಯಲು ಸಾಧ್ಯವಾಗುತ್ತದೆ. ಇವಿಷ್ಟೇ ಅಲ್ಲದೆ ಇಲ್ಲೊಂದು ಸ್ಪೆಷಲ್ ಟೀ ಇದೆ. ಅದುವೇ ಮುಲ್ಲೀನ್ ಟೀ (Mullein Tea). ಇದನ್ನು ಕುಡಿಯೋದ್ರಿಂದ ಹಲವು ಆರೋಗ್ಯ ಸಮಸ್ಯೆಗಳು ಸುಲಭವಾಗಿ ನಿವಾರಣೆಯಾಗುತ್ತವೆ.
ಮುಲ್ಲೀನ್ ಟೀ ಎಂದರೇನು ?
ಮುಲ್ಲೀನ್ ಎಂಬುದು ಒಂದು ಹೂಬಿಡುವ ಸಸ್ಯವಾಗಿದೆ. ಈ ಗಿಡದಿಂದ ಎಲೆಗಳನ್ನು ಸಂಗ್ರಹಿಸಿ ಮುಲ್ಲೀನ್ ಟೀಯನ್ನು ತಯಾರಿಸಲಾಗುತ್ತದೆ. ಮುಲ್ಲೀನ್ ಟೀ ಕೆಫೀನ್-ಮುಕ್ತ ಗಿಡಮೂಲಿಕೆ ಚಹಾವಾಗಿದೆ. ತಜ್ಞರ ಪ್ರಕಾರ, ಇದು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಔಷಧೀಯ ಚಹಾವಾಗಿದೆ. ಮನೆಯಲ್ಲಿ ಇದನ್ನು ಹೇಗೆ ತಯಾರಿಸುವುದು ಮತ್ತು ಅದರ ಆರೋಗ್ಯ (Health) ಪ್ರಯೋಜನಗಳೇನು ಎಂಬುದನ್ನು ತಿಳಿಯೋಣ.
Hibiscus Benefits : ದಾಸವಾಳ ಚಹಾದಲ್ಲಿದೆ ಹಲವು ಗುಣ..!
ಮುಲ್ಲೀನ್ ಟೀ ಮಾಡುವುದು ಹೇಗೆ ?
ಮುಲ್ಲೀನ್ ಟೀ ತಯಾರಿಸಲು ಮೊದಲಿಗೆ, 1.5 ಕಪ್ ನೀರನ್ನು ಕುದಿಸಿಕೊಳ್ಳಬೇಕು. ನಂತರ ಇದಕ್ಕೆ ಒಂದು ಟೀ ಚಮಚ ಒಣಗಿದ ಮುಲ್ಲೀನ್ ಟೀ ಎಲೆಗಳನ್ನು ಸೇರಿಸಿ 10-15 ನಿಮಿಷಗಳ ಚೆನ್ನಾಗಿ ಕುದಿಯಲು ಬಿಡಬೇಕು. ನಂತರ ಇದನ್ನು ಸೋಸಿಕೊಂಡು 1 ಸ್ಪೂನ್ ಜೇನುತುಪ್ಪ ಬೆರೆಸಿ ಕುಡಿಯಬೇಕು. ಮುಲ್ಲೀನ್ ಟೀ ಕುಡಿಯುವುದರಿಂದ ಹಲವಾರು ಆರೋಗ್ಯ ಸಮಸ್ಯೆಗಳು ನಿವಾರಣೆಯಾಗುತ್ತವೆ.
ಮುಲ್ಲೀನ್ ಚಹಾ ಸೇವನೆಯ ಪ್ರಯೋಜನಗಳು
ಉಸಿರಾಟದ ಸಮಸ್ಯೆಯನ್ನು ಬಗೆಹರಿಸುತ್ತದೆ
ಮುಲ್ಲೀನ್ ಚಹಾ ಹಲವು ಆರೋಗ್ಯಕರ ಗುಣಗಳನ್ನು ಹೊಂದಿದೆ. ಮುಖ್ಯವಾಗಿ ಈ ಮುಲ್ಲೀನ್, ಬ್ಯಾಕ್ಟೀರಿಯಾ (Bacteria) ವಿರೋಧಿ ಗುಣಗಳನ್ನು ಹೊಂದಿದೆ. ಹೀಗಾಗಿ ಮುಲ್ಲೀನ್ ಟೀಯ ಸೇವನೆ ಶೀತ, ಕೆಮ್ಮು ಮತ್ತು ಬ್ರಾಂಕೈಟಿಸ್‌ನಂತಹ ಉಸಿರಾಟದ ಸಮಸ್ಯೆಗಳನ್ನು ಎದುರಿಸಲು ಸಹಾಯ ಮಾಡುತ್ತದೆ. ತಜ್ಞರ ಪ್ರಕಾರ, ಇದು ಅಸ್ತಮಾ ರೋಗಿಗಳಿಗೂ ಪ್ರಯೋಜನಕಾರಿಯಾಗಿದೆ. ಚಹಾದ ನಿಯಮಿತ ಸೇವನೆಯು ದೀರ್ಘಕಾಲದ ಕೆಮ್ಮನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
Health Tips: ಹೆಚ್ಚು ಹಾಲು ಹಾಕಿದ ಟೀ ಕುಡಿದ್ರೆ ಆರೋಗ್ಯ ಸಮಸ್ಯೆನೂ ಹೆಚ್ಚು
ಸೋಂಕಿನ ವಿರುದ್ಧ ಹೋರಾಡುತ್ತದೆ
ಮುಲ್ಲೀನ್ ಚಹಾ ಆಂಟಿವೈರಲ್ ಗುಣಲಕ್ಷಣಗಳನ್ನು ಹೊಂದಿದೆ ಮತ್ತು ಎಲ್ಲಾ ರೀತಿಯ ವೈರಲ್ ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ ಎಂದು ತಿಳಿದುಬಂದಿದೆ. ನ್ಯಾಷನಲ್ ಯೂನಿವರ್ಸಿಟಿ ಆಫ್ ರಿಯೊ ಕ್ವಾರ್ಟೊ ನಡೆಸಿದ ಅಧ್ಯಯನದ ಪ್ರಕಾರ, ಈ ಚಹಾ ಸೇವನೆಯು ಸೂಡೊರಾಬೀಸ್ ವೈರಸ್ ವಿರುದ್ಧ ಹೋರಾಡಲು ಸಹಕಾರಿಯಾಗಿದೆ.
ಒತ್ತಡ ನಿವಾರಿಸಿ, ಉತ್ತಮ ನಿದ್ರೆ ಕೊಡುತ್ತದೆ
ದಿನಕ್ಕೆ ಎರಡು ಕಪ್ಗಳಷ್ಟು ಮುಲ್ಲೀನ್ ಟೀ ಸೇವಿಸುವುದರಿಂದ ಒತ್ತಡ ಕಡಿಮೆಯಾಗಿ ಮನಸ್ಸು ನಿರಾಳವಾಗುತ್ತದೆ. ಈ ಚಹಾ ಸೇವನೆ ನಿದ್ದೆ (Sleep)ಯ ಸಮಸ್ಯೆಯನ್ನು ಸಹ ಸುಧಾರಿಸಲು ಸಹಾಯ ಮಾಡುತ್ತದೆ. ತಜ್ಞರ ಪ್ರಕಾರ, ಇದು ನೈಸರ್ಗಿಕ ನಿದ್ರಾಜನಕವಾಗಿ ಕಾರ್ಯನಿರ್ವಹಿಸುತ್ತದೆ.
ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ
ತಜ್ಞರ ಪ್ರಕಾರ, ಊಟದ ನಂತರ ಮುಲ್ಲೀನ್ ಚಹಾವನ್ನು ಸೇವಿಸುವುದು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಮಾತ್ರವಲ್ಲ ಅತಿಸಾರ ಮತ್ತು ಮಲಬದ್ಧತೆ ಸಮಸ್ಯೆಯನ್ನು ಶಮನಗೊಳಿಸುತ್ತದೆ.
ಚರ್ಮಕ್ಕೆ ಒಳ್ಳೆಯದು
ಮುಲ್ಲೀನ್ ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಹೀಗಾಗಿ ಇದು ಚರ್ಮವನ್ನು ಯಾವುದೇ ರೀತಿಯ ಹಾನಿಯಿಂದ ರಕ್ಷಿಸುತ್ತದೆ. ಮುಖದಲ್ಲಿ ಉಂಟಾಗುವ ಗುಳ್ಳೆಗಳು, ಗಾಯಗಳು ಮತ್ತು ಕಲೆಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ.
ತಲೆನೋವಿನ ವಿರುದ್ಧ ಪರಿಣಾಮಕಾರಿ
ಅಬಾಂಟ್ ಇಝೆಟ್ ಬೇಸೆಲ್ ವಿಶ್ವವಿದ್ಯಾನಿಲಯವು ನಡೆಸಿದ ಅಧ್ಯಯನದ ಪ್ರಕಾರ, ಮುಲ್ಲೀನ್ ಎಲೆಗಳು ಮತ್ತು ಹಣ್ಣುಗಳ ಗಿಡಮೂಲಿಕೆಗಳ ಸಾರವು ತಲೆನೋವುಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಹೀಗಾಗಿ ಇದರ ಸೇವನೆಯು ತಲೆನೋವಿನ ವಿರುದ್ಧ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಮಾತ್ರವಲ್ಲ ಮುಲ್ಲೀನ್ ಚಹಾದ ಸೇವಮೆ ಮೈಗ್ರೇನ್‌ಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. ಇನ್ಯಾಕೆ ತಡ, ಟೆನ್ಶನ್ ಬಿಟ್ಬಿಡಿ, ಮುಲ್ಲೀನ್ ಟೀ ಕುಡೀರಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.