Drinking Ritual: ಕುಡಿಯುವ ಮೊದಲು ಮದ್ಯವನ್ನು ನೆಲಕ್ಕೆ ಸಿಂಪಡಿಸುವುದೇಕೆ ?

By Suvarna News  |  First Published Jan 26, 2022, 5:24 PM IST

ಅಲ್ಕೋಹಾಲ್ (Alcohol) ಕುಡಿಯುವಾಗ ಚಿಯರ್ಸ್ ಅನ್ನೋದನ್ನು ನೀವು ನೋಡಿರ್ತೀರಿ. ಆದ್ರೆ  ಕೆಲವೊಬ್ಬರು ಮದ್ಯವನ್ನು ಸೇವಿಸುವ ಮೊದಲು ನೆಲಕ್ಕೆ ಸಿಂಪಡಿಸುವುದು ಇದೇ. ಹೀಗೆ ಮಾಡುವುದು ಯಾವ ಕಾರಣ (Reason)ಕ್ಕೆ ಅನ್ನೋದು ನಿಮಗೆ ಗೊತ್ತಾ ?


ಪ್ರತಿಯೊಂದು ದೇಶದಲ್ಲೂ ಭಿನ್ನ-ವಿಭಿನ್ನ ರೀತಿಯ ಸಂಪ್ರದಾಯಗಳಿವೆ, ಆಚರಣೆಗಳಿವೆ. ಪುರಾತನ ಕಾಲದಿಂದಲೂ ಅನುಸರಿಸಿಕೊಂಡು ಬಂದ ಪದ್ಧತಿ, ನಂಬಿಕೆಗಳನ್ನು ಅಡಿಪಾಯವಾಗಿರಿಸಿಕೊಂಡು ಇಂಥಹಾ ಕ್ರಮಗಳು ಜಾರಿಗೆ ಬಂದಿರುತ್ತವೆ. ಇದರಲ್ಲಿ ಕೆಲವೊಂದು ಆಚರಣೆಗಳು ಯಾಕೆಂಬುದುಕ್ಕೆ ಕಾರಣವೇ ಇರುವುದಿಲ್ಲ.  ಹೀಗಾಗಿಯೇ ಕೆಲವರು ಇದನ್ನು ಮೂಢನಂಬಿಕೆಯಂತೆ ಕಂಡರೆ, ಇನ್ನು ಕೆಲವರು ಗೌರವದಿಂದ ಅನುಸರಿಸುತ್ತಾರೆ. ಅಂಥಹಾ ವಿಚಾರಗಳಲ್ಲೊಂದು ಅಲ್ಕೋಹಾಲ್ (Alcohol)ಸೇವಿಸುವ ಮೊದಲು ನೆಲಕ್ಕೆ ಸಿಂಪಡಿಸುವ ಸಂಪ್ರದಾಯ. ಮದ್ಯ ಸೇವಿಸುವಾಗ ಎಲ್ಲರೂ ಈ ರೀತಿ ಮಾಡದಿದ್ದರೂ ಹೆಚ್ಚಿನವರು ಈ ವಿಧಾನವನ್ನು ಅನುಸರಿಸುತ್ತಾರೆ.

ಭಾರತೀಯರು ಭೈರವ ದೇವರಿಗೆ ಮದ್ಯವನ್ನು ಸಮರ್ಪಿಸುವ ಸಂಪ್ರದಾಯ ಹಲವು ವರ್ಷಗಳಿಂದಲೂ ಇದೆ.  ಭೈರವ ಅಥವಾ ಭೈರವನಾಥ ಗೋರಖನಾಥರ ಶಿಷ್ಯರಾಗಿದ್ದರು, ಅವರ ಗುರು ಮತ್ಸ್ಯೇಂದ್ರನಾಥರು. ಒಟ್ಟಾರೆ ತಾಂತ್ರಿಕ ಸಿದ್ಧಿಗಳನ್ನು ನಿಯಂತ್ರಿಸುವ ಶಕ್ತಿಯನ್ನು ಅವರು ಹೊಂದಿದ್ದರು. ಇವರು ಮದ್ಯವನ್ನು ನೆಲಕ್ಕೆ ಸಿಂಪಡಿಸಿ ಬಳಿಕ ಸೇವಿಸುತ್ತಿದ್ದರು. ಲಿಬೇಷನ್ ಎಂಬುದು ಯಜ್ಞಕ್ಕೆ ದ್ರವವನ್ನು ಸುರಿಯುವ ಪ್ರಕ್ರಿಯೆಯಾಗಿದೆ. ಹಿಂದಿನ ಕಾಲದಲ್ಲಿ ಯಜ್ಞ ಯಾಗಾದಿಗಳನ್ನು ನಡೆಸುವಾದ ದೇವತೆಗಳು ಪ್ರಸನ್ನವಾಗಲೆಂದು ವೈನ್‌ (Wine)ನಂತಹಾ ದ್ರವವನ್ನು ಅದಕ್ಕೆ ಅರ್ಪಿಸುತ್ತಿದ್ದರು. ಜತೆಗೆ ಕುಟುಂಬ ಮತ್ತು ಸುತ್ತಮುತ್ತಲಿನ ಜನರ ಒಳಿತಿಗಾಗಿ ಪ್ರಾರ್ಥಿಸುತ್ತಿದ್ದರು.

Latest Videos

undefined

Side Effects of Wine: ಒಂದು ಪೆಗ್ ವೈನ್ ಕುಡಿದರೆ ಆರೋಗ್ಯಕ್ಕೆ ಎಷ್ಟು ಹಾನಿಯಿದೆ ಗೊತ್ತಾ ?

ಭಾರತೀಯ ಸಂಪ್ರದಾಯದಲ್ಲಿ ಆಹಾರವನ್ನು ಪರಮ ಪೂಜ್ಯವೆಂದು ನಂಬಲಾಗುತ್ತದೆ. ಊಟ ಮಾಡುವ ಮೊದಲು ಬಟ್ಟಲಿಗೆ ನಮಸ್ಕರಿಸುವ ಮೂಲಕ ಆಹಾರ (Food)ವನ್ನು ದಯಮಾಡಿಸಿದ ದೇವರಿಗೆ ಕೃತಜ್ಞತೆ ಸಲ್ಲಿಸುತ್ತಾರೆ. ಅದೇ ರೀತಿ ಊಟ ಮಾಡುವ ಮೊದಲು ಎಲ್ಲಾ ರೀತಿಯ ಅಡುಗೆಯನ್ನು ಸ್ಪಲ್ಪ ಪ್ರಮಾಣದಲ್ಲಿ ಎತ್ತಿ ಬಟ್ಟಲಿನ ಕೆಳಗಿಡುವ ಸಂಪ್ರದಾಯವಿದೆ. ಇದು ಸದ್ಗತಿ ಹೊಂದಿದ ಹಿರಿಯರಿಗೆ ಸಮರ್ಪಿತವಾಗುತ್ತದೆ ಎಂಬ ನಂಬಿಕೆಯಿದೆ. ಆಲ್ಕೋಹಾಲ್‌ನ್ನುಉ ನೆಲಕ್ಕೆ ಚಿಮುಕಿಸುವುದು ಸಹ ಇದೇ ರೀತಿಯ ಅರ್ಥದಲ್ಲಾಗಿದೆ.

ಮದ್ಯವನ್ನು ಚಿಮುಕಿಸುವುದು ಆತ್ಮಕ್ಕಾಗಿ !
ಮದ್ಯವನ್ನು ಚಿಮುಕಿಸುವುದು ವ್ಯಕ್ತಿಯ ಸತ್ತವರ ಆತ್ಮ (Soul)ಕ್ಕಾಗಿ ಎಂದು ನಂಬಲಾಗುತ್ತದೆ. ಅದು ಮನೆಯ ಹಿರಿಯರು, ಕಿರಿಯರು, ಕುಟುಂಬದವರು ಅಥವಾ ಸ್ನೇಹಿತರ ಬಳಗದಲ್ಲಿ ಅಕಾಲಿಕವಾಗಿ ಮರಣ ಹೊಂದಿದವರು ಯಾರು ಸಹ ಆಗಿರಬಹುದು. ಅವರಿಗಾಗಿ ಡ್ರಿಂಕ್ಸ್ ಪಾರ್ಟಿ ಮಾಡುವ ಮೊದಲು ಮದ್ಯಕ್ಕೆ ನೆಲಕ್ಕೆ ಚಿಮುಕಿಸಿ ಸಮರ್ಪಿಸಲಾಗುತ್ತದೆ. ಈಜಿಪ್ಟ್, ಗ್ರೀಸ್ ಮತ್ತು ರೋನ್‌ನಲ್ಲಿ, ಸಹ ಇದನ್ನೇ ಅನುಸರಿಸಲಾಗುತ್ತದೆ. ಕ್ಯೂಬಾ ಮತ್ತು ಬ್ರೆಜಿಲ್‌ನಲ್ಲಿ, ಜನರು ಇದನ್ನು ಆಚರಣೆ ಮಾಡುತ್ತಾರೆ ಮತ್ತು ಇದನ್ನು ಪ್ಯಾರಾ ಲಾಸ್ ಸ್ಯಾಂಟೋಸ್ ಎಂದು ಹೇಳುತ್ತಾರೆ.

ಮದ್ಯಪಾನ ಮಾಡಿದ ನಂತ್ರ ಇದನ್ನ ಕುಡಿಲೇಬೇಡಿ: ಆರೋಗ್ಯಕ್ಕೆ ಮಾರಕ

ಮದ್ಯಪಾನ ಪ್ರಿಯ ಭೈರವ
ಭಾರತದಲ್ಲಿ ಮದ್ಯ ಪ್ರಿಯ ದೇವರ ದೇವಾಲಯ (Temple)ವೇ ಒಂದಿದೆ. ಕಾಲ ಭೈರವ ದೇವಾಲಯವು ಮಧ್ಯಪ್ರದೇಶದ ಉಜ್ಜಯಿನಿ ನಗರದಲ್ಲಿ ಶಿಪ್ರಾ ನದಿಯ ದಡದಲ್ಲಿರುವ ಹಿಂದೂ ದೇವಾಲಯವಾಗಿದೆ. ಇದು ನಗರದ ರಕ್ಷಕ ದೇವತೆಯಾದ ಕಾಲ ಭೈರವನಿಗೆ ಸಮರ್ಪಿತವಾಗಿದೆ. ಇದು ರಾಜ್ಯದ ಅತಿ ಹೆಚ್ಚು ಭೇಟಿ ನೀಡುವ ದೇವಾಲಯಗಳಲ್ಲಿ ಒಂದಾಗಿದೆ. ಹೆಸರೇ ಸೂಚಿಸುವಂತೆ, ಈ ದೇವಾಲಯವನ್ನು ಕಾಲ ಭೈರವನಿಗೆ ಸಮರ್ಪಿಸಲಾಗಿದೆ. ಇಲ್ಲಿನ ದೇವರ ಚಿತ್ರವು ಕುಂಕುಮ ಅಥವಾ ಸಿಂಧೂರದಿಂದ ಕೂಡಿದ ಬಂಡೆಯ ರೂಪದಲ್ಲಿರುವ ಒಂದು ಮುಖವಾಗಿದೆ. ಭೈರವ ಭಗವಾನ್ ಶಿವನ ಅತ್ಯಂತ ಭಯಾನಕ ರೂಪ. ಅವನು ಭಕ್ತರನ್ನು ಲೋಭ, ಕಾಮ ಮತ್ತು ಕ್ರೋಧದಿಂದ ರಕ್ಷಿಸುತ್ತಾನೆ. ಆದುದರಿಂದ ಭಗವಾನ್ ಭೈರವನನ್ನು ಸ್ತ್ರೀಯರ ರಕ್ಷಕನೆಂದೂ ಹೇಳಲಾಗುತ್ತದೆ. ಈ ದೇವಾಲಯದ ವಿಶೇಷತೆಯೆಂದರೆ ಇಲ್ಲಿ ಕಾಲಭೈರವನಿಗೆ ಮದ್ಯವನ್ನು ಸಮರ್ಪಿಸಲಾಗುತ್ತದೆ.

ಕಾಲ ಭೈರವನಿಗೆ ಮದ್ಯವನ್ನು ಏಕೆ ಅರ್ಪಿಸಲಾಗುತ್ತದೆ ?
ಅಷ್ಟ ಭೈರವರ ಆರಾಧನೆಯು ಶೈವ ಸಂಪ್ರದಾಯದ ಒಂದು ಭಾಗವಾಗಿದೆ ಮತ್ತು ಕಾಲ ಭೈರವರನ್ನು ಅವರ ಮುಖ್ಯಸ್ಥ ಎಂದು ಪರಿಗಣಿಸಲಾಗುತ್ತದೆ. ಕಾಪಾಲಿಕ ಮತ್ತು ಅಘೋರ ಪಂಥಗಳಲ್ಲಿ ಕಾಲ ಭೈರವನ ಆರಾಧನೆಯು ಸಾಂಪ್ರದಾಯಿಕವಾಗಿ ಜನಪ್ರಿಯವಾಗಿತ್ತು. ಮದ್ಯವನ್ನು ಸಮರ್ಪಿಸಿದರೆ ಭೈರವ ಪ್ರಸನನ್ನಾಗಿ ಬೇಡಿಕೆಗಳನ್ನು ಈಡೇರಿಸುತ್ತಾನೆ ಎಂದು ನಂಬಲಾಗುತ್ತದೆ.

click me!