Viral Recipe : ಡೈರಿ ಮಿಲ್ಕ್‌ನಿಂದ ತಯಾರಾಗಿದೆ ಆಮ್ಲೆಟ್, ಟೇಸ್ಟ್ ಮಾಡ್ಬೇಕಾ?

By Suvarna News  |  First Published Feb 22, 2023, 1:31 PM IST

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ಕೆಲ ರೆಸಿಪಿ ಬಾಯಲ್ಲಿ ನೂರೂರಿಸುತ್ತೆ. ಮತ್ತೆ ಕೆಲ ರೆಸಿಪಿಗೆ ಜನರು ಕಣ್ಣು ಕೆಂಪು ಮಾಡ್ತಾರೆ. ಈಗ ವೈರಲ್ ಆಗಿರುವ ರೆಸಿಪಿಯೊಂದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆ ವ್ಯಕ್ತಿ ತಯಾರಿಸಿದ ಖಾದ್ಯ ಯಾವುದು ಗೊತ್ತಾ?
 


ಆಹಾರದ ವಿಷಯಕ್ಕೆ ಬಂದರೆ, ಇತ್ತೀಚಿನ ದಿನಗಳಲ್ಲಿ ಜನರು ಕೆಲವು ನವೀನ ಭಕ್ಷ್ಯಗಳನ್ನು ತಯಾರಿಸಲು ಸೃಜನಶೀಲತೆ ಬಳಕೆ ಮಾಡ್ತಿದ್ದಾರೆ. ಬೀದಿ ಆಹಾರ ಮಾರಾಟಗಾರರು ದಾಲ್ ಮಖಾನಿಯಿಂದ ಐಸ್ ಕ್ರೀಮ್ ರೋಲ್‌,  ಚಾಕೊಲೇಟ್ ಮ್ಯಾಗಿಯಿಂದ ಚೀಸ್ ಚಾಯ್, ಟಿಕ್ ಟಾಕ್ ಚೀಸಿ ಕೇಕ್, ವೇಪರ್ ಕಾಫಿ, ವೈನ್ ಗ್ಲಾಸ್ ನಲ್ಲಿ ಪಾಸ್ತಾ, ಕಪ್ಪು ಬಣ್ಣದ ನೂಡಲ್ಸ್ ಸೇರಿದಂತೆ ದಿನಕ್ಕೊಂದು ರೆಸಿಪಿ ತಯಾರಿಸ್ತಿದ್ದಾರೆ.  

ಆಹಾರ (Food) ದಲ್ಲಿ ಹೊಸ ಹೊಸ ಪ್ರಯೋಗಗಳು ಈಗಿನ ದಿನಗಳಲ್ಲಿ ಹೆಚ್ಚಾಗ್ತಿದೆ. ಆಹಾರ ಪ್ರೇಮಿಗಳು ಕೆಲ ಪ್ರಯೋಗವನ್ನು ಇಷ್ಟಪಡ್ತಿದ್ದಾರೆ ಕೂಡ.  ಸಾಮಾಜಿಕ ಜಾಲತಾಣ (Social Network) ದಲ್ಲಿ ದಿನಕ್ಕೊಂದು ರೆಸಿಪಿ ವೈರಲ್ ಆಗ್ತಿದೆ. ಟಿಕ್ ಟಾಕ್, ಇನ್ಸ್ಟಾಗ್ರಾಮ್ (Instagram) ನಲ್ಲಿ ನವೀನ ಖಾದ್ಯಗಳು ಪೋಸ್ಟ್ ಆಗ್ತಿದೆ. ವಿಲಕ್ಷಣ ಭಕ್ಷ್ಯಗಳು  ನೋಡುಗರ ಬಾಯಲ್ಲಿ ನೀರು ತರಿಸ್ತಿವೆ. ಕೆಲ ಆಹಾರವನ್ನು ಸಾಮಾಜಿಕ ಜಾಲತಾಣ ಬಳಕೆದಾರರು ಇಷ್ಟಪಡ್ತಿದ್ದು, ಅದನ್ನು ಮಾಡುವ ಪ್ರಯತ್ನ ನಡೆಸಿದ್ದಿದೆ. ಹಾಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ, ರೆಸಿಪಿ ವೈರಲ್ ಆಗ್ತಿದ್ದಂತೆ ವ್ಯಾಪಾರಸ್ಥನ ವ್ಯಾಪಾರ ಡಬಲ್ ಆಗಿದ್ದಿದೆ. 

Latest Videos

undefined

ಥಮ್ಸಪ್ ಪಾನಿಪುರಿಗೆ ಮನಸೋತ ಮಹಿಳೆ... ವಿಡಿಯೋ ನೋಡಿ ನೀವೂ ಮಾಡಿ

ಪ್ರಪಂಚದಾದ್ಯಂತ ಜನರು ಸಿಹಿ ಮತ್ತು ಖಾರದ ಸಂಯೋಜನೆಗಳನ್ನು ಸಾಕಷ್ಟು ಇಷ್ಟಪಡ್ತಾರೆ. ಅನೇಕರಿಗೆ ಮಸಾಲೆ ಆಹಾರ ಸೇವನೆ ಮಾಡ್ಬೇಕಿದ್ರೆ ಸಿಹಿ ಬೇಕು. ಇನ್ನು ಕೆಲವರು ಇವೆರಡನ್ನು ಒಟ್ಟಿಗೆ ಸೇರಿಸಿ ಸೇವನೆ ಮಾಡ್ತಾರೆ. ಇದನ್ನೇ ಆಧಾರವಾಗಿಟ್ಟುಕೊಂಡು ಬೀದಿಬದಿ ವ್ಯಾಪಾರಿಯೊಬ್ಬ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾನೆ. ಬೀದಿ ವ್ಯಾಪಾರಿಯೊಬ್ಬರು ಮಾಡಿದ ಡೈರಿ ಮಿಲ್ಕ್ ಆಮ್ಲೆಟ್ ಸಾಕಷ್ಟು ಸದ್ದು ಮಾಡ್ತಿದೆ. ಇನ್ಸ್ಟಾಗ್ರಾಮ್ ನಲ್ಲಿ ಡೈರಿ ಮಿಲ್ಕ್ ಹಾಗೂ ಚಾಕೊಲೇಟ್ ಸಿರಪ್ ನಿಂದ ತಯಾರಿಸಿದ ಆಮ್ಲೆಟನ್ನು ಸಾಮಾಜಿಕ ಜಾಲತಾಣ ಬಳಕೆದಾರರು ಅಷ್ಟಾಗಿ ಇಷ್ಟಪಟ್ಟಿಲ್ಲ. ಯಾಕೆಂದ್ರೆ ಸಾಮಾನ್ಯ ಆಮ್ಲೆಟ್ ತಯಾರಿಸಿದಂತೆ ಇದನ್ನು ತಯಾರಿಸಲಾಗುತ್ತದೆ ಎಂಬುದು ಕೆಲವರ ವಾದ. ನಾವಿಂದು ಡೈರಿ ಮಿಲ್ಕ್ ಆಮ್ಲೆಟ್ ತಯಾರಿಸೋದು ಹೇಗೆ ಎನ್ನುವ ಬಗ್ಗೆ ನಿಮಗೊಂದಿಷ್ಟು ಮಾಹಿತಿ ನೀಡ್ತೇವೆ.

ಮೊಟ್ಟೆ (Egg), ಈರುಳ್ಳಿ (Onion), ಟೊಮ್ಯಾಟೊ ಮತ್ತು ಚೀಸ್ (Cheese), ಹಸಿಮೆಣಸಿನಕಾಯಿ ಇದಕ್ಕೆ ಬಳಕೆ ಮಾಡಲಾಗುತ್ತದೆ. ಮಾರಾಟಗಾರ ಮೊದಲು ಬಾಣಲೆಗೆ ಬೆಣ್ಣೆಯನ್ನು ಹಾಕ್ತಾನೆ. ನಂತ್ರ ಮೊಟ್ಟೆಯನ್ನು ಒಡೆದು ಅದಕ್ಕೆ ಹಾಕುವ ಜೊತೆಗೆ ಈರುಳ್ಳಿ, ಟೊಮ್ಯಾಟೊ, ಹಸಿಮೆಣಸಿನಕಾಯಿ ತುಂಡುಗಳು, ಮಸಾಲೆ, ಉಪ್ಪನ್ನು ಸೇರಿಸುತ್ತಾನೆ. ನಂತ್ರ ಚೀಸ್ ತುಂಡು ಹಾಗೂ ಕೊತ್ತಂಬರಿ ಸೊಪ್ಪನ್ನು ಉದುರಿಸುತ್ತಾನೆ. ನಂತ್ರ ಡೈರಿ ಮಿಲ್ಕ್ ಚಾಕೊಲೇಟನ್ನು ತೆಗೆದುಕೊಂಡು ಅದನ್ನು ತುರಿದು ಆಮ್ಲೆಟ್ ಮೇಲೆ ಹಾಕುತ್ತಾನೆ. ಆಮ್ಲೆಟ್ ಒಂದು ಕಡೆ ಬೆಂದಿದ್ದು ಇನ್ನೊಂದು ಕಡೆ ತಿರುಗಿಸುವ ಮೊದಲು ಚಾಕೊಲೇಟ್ ಸಿರಪ್ ಅನ್ನು ಅದರ ಮೇಲೆ ಹಾಕುತ್ತಾನೆ. ನಂತ್ರ ಆಮ್ಲೆಟ್ ಮೇಲೆ ಎರಡು ಬ್ರೆಡ್ ಹಾಕಿ, ಮತ್ತೊಂದೆರಡು ಚೀಸ್ ಪೀಸ್ ಹಾಕಿ ಮತ್ತೆ ರೋಸ್ಟ್ ಮಾಡಲಾಗುತ್ತದೆ. ಅದ್ರ ಮೇಲೆ ಚಾಕೊಲೇಟ್ ಸಿರಪ್ ಹಾಕಿ ಆಮ್ಲೆಟ್ ಅಲಂಕರಿಸಿ ಸರ್ವ್ ಮಾಡುತ್ತಾನೆ. ಸರ್ವ್ ಮಾಡುವ ವೇಳೆ ಡೈರಿ ಮಿಲ್ಕ್, ಸಾಸ್ ಹಾಗೂ ಚಾಕೊಲೇಟ್ ಸಿರಪನ್ನು ಪ್ರತ್ಯೇಕವಾಗಿ ನೀಡ್ತಾನೆ.

Diet Tips : ಮಾಂಸಹಾರದ ಡಯಟ್ ಶುರು ಮಾಡುವ ಮುನ್ನ ಇದು ತಿಳಿದಿರಲಿ

ಇನ್ಸ್ಟಾಗ್ರಾಮ್ ನಲ್ಲಿ ವೈರಲ್ ಆದ ಈ ವಿಡಿಯೋವನ್ನು ಏಳು ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆ ಮಾಡಲಾಗಿದೆ. ಇದಕ್ಕೆ ಸಾಕಷ್ಟು ಕಮೆಂಟ್ ಕೂಡ ಬಂದಿದೆ. ಮೊಟ್ಟೆ ಹಾಗೂ ಚಾಕೊಲೇಟ್ ಕಾಂಬಿನೇಷನ್ ಚೆನ್ನಾಗಿಲ್ಲ, ಪ್ಯಾನ್ ಕೇಕ್ ತಯಾರಿಸಿ ಅಂತಾ ಒಬ್ಬ ಬಳಕೆದಾರ ಹೇಳಿದ್ರೆ, ಇನ್ನೊಬ್ಬರು ಇಂಥ ಫುಡ್ ಗಳನ್ನು ಕಾನೂನು ಬಾಹಿರ ಮಾಡ್ಬೇಕು ಎಂದಿದ್ದಾರೆ. ಇನ್ನು ಕೆಲವರು ಮೆಚ್ಚುಗೆ ಮಾತನಾಡಿದ್ದಾರೆ. ನನಗೆ ಈ ಆಮ್ಲೆಟ್ ತಿನ್ನಬೇಕು ಎನ್ನಿಸಿದೆ ಅಂತಾ ಒಬ್ಬ ಕಮೆಂಟ್ ಮಾಡಿದ್ದಾನೆ.
 

click me!