
ಪಾನಿಪುರಿ ಅಥವಾ ಗೋಲ್ಗಪ್ಪ ಇದನ್ನು ಇಷ್ಟಪಡದವರಿಲ್ಲ. ರಸ್ತೆ ಬದಿಯೇ ಇರಲಿ ಫೈವ್ ಸ್ಟಾರ್ ಹೊಟೇಲೇ ಆಗಲಿ ಪಾನಿಪುರಿ ಇರುವಲ್ಲೆಲ್ಲಾ ಜನ ಗುಂಪು ಗೂಡಿರುತ್ತಾರೆ. ಪಾನಿಪುರಿ ಎಂದರೆ ಹೆಣ್ಣು ಮಕ್ಕಳಿಗೆ ಅದೊಂತರ ಇಮೋಷನಲ್, ಎಲ್ಲಿ ಪಾನಿಪುರಿ ಇದೆಯೋ ಅಲ್ಲೆಲ್ಲಾ ಔರ್ ಏಕ್ ಬಯ್ಯಾ ಔರ್ ಏಕ್ ಎಂದು ಹೇಳುತ್ತಾ ಹೆಣ್ಣು ಮಕ್ಕಳು ಸುತ್ತ ನಿಂತಿರುತ್ತಾರೆ. ಪಾನಿಪುರಿ ಮಾಡುವವನು ಕೂಡ ಅಷ್ಟೇ ಖುಷಿಯಿಂದ ಹೆಂಗೆಳೆಯರಿಗೆ ಪಾನಿಪುರಿ ಬಡಿಸುತ್ತಾನೆ. ಹಾಗೆಯೇ ಇಂದು ವಿಭಿನ್ನ ವಿಧದ ಪಾನಿಪುರಿಗಳು ಬಂದಿದ್ದು, ವಿವಿಧ ರುಚಿಗಳಲ್ಲಿ ಇದು ಲಭ್ಯವಿದೆ. ಆದರೆ ತಂಪು ಪಾನೀಯ ಥಮ್ಸ್ ತುಂಬಿಸಿ ಪಾನಿಪುರಿ ನೀಡುವುದನ್ನು ನೀವು ಎಲ್ಲಾದರು ನೋಡಿದ್ದೀರಾ ಇಲ್ಲ ಎಂದಾದರೆ ಇಲ್ಲೊಂದು ಕಡೆ ಪಾನಿಪುರಿವಾಲಾ ಹೊಸತನ ಪ್ರಯೋಗ ಮಾಡಿದ್ದು, ಥಮ್ಸಪ್ ಪಾನಿಪುರಿ ನೀಡಲು ಶುರು ಮಾಡಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
@MFuturewala ಎಂಬುವವರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ (Social Media) ಪೋಸ್ಟ್ ಮಾಡಿದ್ದಾರೆ. ಪಾನಿ ಪುರಿ ಪ್ರಿಯರೇ, ಇಲ್ಲಿ ಥಂಪ್ಸ್ ಅಪ್ ಪಾನಿ ಪುರಿ (thums Up panipuri) ನೀಡಲಾಗುತ್ತದೆ. ಥಂಬ್ಸ್ ಡೌನ್ ಮಾಡುವ ಮೂಲಕ ನಿಮ್ಮ ಪ್ರೀತಿಯನ್ನು ತೋರಿಸಿ ಎಂದು ಅವರು ಬರೆದುಕೊಂಡಿದ್ದಾರೆ. 26 ಸೆಕೆಂಡ್‌ಗಳ ಈ ವಿಡಿಯೋದಲ್ಲಿ ಈ ಪಾನಿಪುರಿ ತಯಾರಿಸಲು ಪಾನಿಪುರಿವಾಲಾ ನೀರಿನ ಬದಲು ಥಮ್ಸ್ ಅಪ್ ಬಳಸಿದ್ದಾರೆ. ಅಲ್ಲದೇ ಥಮ್ಸ್ ಅಪ್‌ಗೆ ಅವರು ವಿವಿಧ ಮಾಸಾಲೆಗಳನ್ನು ಬೆರೆಸಿ ರುಚಿ ಹೆಚ್ಚಿಸುವ ಪ್ರಯತ್ನ ಮಾಡಿದ್ದಾರೆ. ನಂತರ ಸಮೀಪದಲ್ಲಿ ಪಾನಿಪುರಿಗಾಗಿ ನಿಂತಿದ್ದ ಮಹಿಳೆಯೊಬ್ಬರಿಗೆ ಥಮ್ಸ್ಅಪ್ ಪಾನಿಪುರಿ ನೀಡಿದ್ದು, ಅದನ್ನು ತಿಂದ ಆಕೆ ಚೆನ್ನಾಗಿದೆ ನನಗೆ ಇಷ್ಟವಾಯ್ತು ಎಂದು ಹೇಳುತ್ತಾರೆ.
Healthy Food : ಹಳಸಿದ ರೊಟ್ಟಿ ಎಸೆಯುವ ಮುನ್ನ ಇದನ್ನೊಮ್ಮೆ ಓದಿ
ಈ ವಿಡಿಯೋವನ್ನು ಸಾವಿರಾರು ಜನ ವೀಕ್ಷಿಸಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅನೇಕರು ಕಾಮೆಂಟ್ ಮಾಡಿದ್ದಾರೆ. ಭೂಮಿ ಮೇಲೆ ಜನ ಏಕೆ ಒಳ್ಳೆಯ ಆಹಾರದ ಮೇಲೆ ಏನೇನೋ ಪ್ರಯೋಗ ಮಾಡುತ್ತಾರೆ ಎಂದು ಒಬ್ಬರು ಪ್ರಶ್ನಿಸಿದ್ದಾರೆ. 20 ವರ್ಷಗಳ ಹಿಂದೆ ನಾ ಇದರ ರುಚಿ ನೋಡಿದ್ದೆ, ಇದು ಯಾಕ್ ಎಂಬಂತಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಆದರೆ ಆತನ ಕಾಮೆಂಟ್‌ಗೆ ಪ್ರತಿಕ್ರಿಯಿಸಿದ ಮತ್ತೊಬ್ಬರು 20 ವರ್ಷಗಳ ಹಿಂದೆ ಎಲ್ಲಿ ಹೇಗೆ ಯಾವಾಗ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ಆತ ನಾನು ಕೋಲ್ಕತ್ತಾದಲ್ಲಿ ನೆಲೆಸಿದ್ದಾಗ ನನ್ನ ಸ್ನೇಹಿತರು ಇದನ್ನು ನನಗೆ ಪರಿಚಯಿಸಿದ್ದರು. ಅದೇ ಕೊನೆ ಅದೇ ಮೊದಲು ಎಂದು ಅವರು ಬರೆದುಕೊಂಡಿದ್ದಾರೆ.
ದಿಲ್ಲಿ ವಾಲಾನ ಚೋಲೆ ಬಟುರೆ ಪ್ರೀತಿ, ಕ್ಯಾಮೆರದಲ್ಲಿ ಸೆರೆಯಾಯ್ತು ಕೊಹ್ಲಿ ರಿಯಾಕ್ಷನ್!
ಆಹಾರದ ಪ್ರಯೋಗ ಇವತ್ತು ನಿನ್ನೆಯದಲ್ಲ, ಹಲವು ಪಾಕಶಾಸ್ತ್ರಗಳು ಪ್ರಯೋಗಗಳು ಹೊಸ ಆಹಾರ ಶೈಲಿಯ ರುಚಿಯನ್ನು ಜಗತ್ತಿಗೆ ಪರಿಚಯಿಸಿವೆ. ಅಲ್ಲದೇ ಇತ್ತೀಚೆಗೆ ಆಹಾರದ ಮೇಲೆ ವಿಭಿನ್ನ ಪ್ರಯೋಗ ಮಾಡುವುದು ಸಾಮಾನ್ಯ ಎನಿಸಿದೆ. ಕೆಲವೊಂದು ವಿಚಿತ್ರ ಪ್ರಯೋಗಗಳ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ ವೈರಲ್ ಆಗುತ್ತಿರುತ್ತವೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.