ಈ ದೇಸಿ ರೆಸಿಪಿ ಟ್ರೈ ಮಾಡಿ, ಸಖತ್ ರುಚಿ, ದೇಹಕ್ಕೂ ಒಳ್ಳೆಯದು

By Suvarna NewsFirst Published Feb 7, 2020, 12:12 PM IST
Highlights

ಅಡುಗೆ ಮಾಡ್ಕೊಂಡು ಕೂರೋದಿಕ್ಕೆ ಟೈಮ್ ಇಲ್ಲ ಅನ್ನುತ್ತಲೇ ಮೊಬೈಲ್ ಸ್ಕ್ರೋಲ್ ಮಾಡೋ ಕಾಲದಲ್ಲಿದ್ದೀವಿ ನಾವು. ನಮ್ಮ ನೆಲದ ದೇಸಿ ಅಡುಗೆಗಳ ಹೊಸ ಜನರೇಶನ್ ನಿಂದ ದೂರವೇ ಉಳಿದಿವೆ. ಅಂಥ ಅಪರೂಪದ ಅಡುಗೆಗಳು ಇಲ್ಲಿವೆ.

ಅಡುಗೆ ಮಾಡ್ಕೊಂಡು ಕೂರೋದಿಕ್ಕೆ ಟೈಮ್ ಇಲ್ಲ ಅನ್ನುತ್ತಲೇ ಮೊಬೈಲ್ ಸ್ಕ್ರೋಲ್ ಮಾಡೋ ಕಾಲದಲ್ಲಿದ್ದೀವಿ ನಾವು. ನಮ್ಮ ನೆಲದ ದೇಸಿ ಅಡುಗೆಗಳ ಹೊಸ ಜನರೇಶನ್ ನಿಂದ ದೂರವೇ ಉಳಿದಿವೆ. ಅಂಥ ಅಪರೂಪದ ಅಡುಗೆಗಳು ಇಲ್ಲಿವೆ.

ತಿಮರೆ ಚಟ್ನಿ

ತಿಮರೆಗೆ ಬ್ರಾಹ್ಮಿ, ಒಂದೆಲಗ, ಉರಗೆ ಅಂತೆಲ್ಲ ಕರೀತಾರೆ. ಇದು ನೆನಪಿನ ಶಕ್ತಿ ವೃದ್ಧಿಸುತ್ತದೆ. ಚಿಕ್ಕ ಮಕ್ಕಳಿಗೆ ಹಸಿ ಹೊಟ್ಟೆಯಲ್ಲಿ ಇದನ್ನು ದಿನಾ ತಿನ್ನಿಸುತ್ತಿದ್ದರೆ ಮಕ್ಕಳ ನೆನಪಿನ ಶಕ್ತಿ ಚೆನ್ನಾಗಿರುತ್ತೆ ಅಂತ ಹಿರಿಯರು ಹೇಳುತ್ತಾರೆ. ಇದು ದೇಹದಲ್ಲಿರುವ ವಿಷಪೂರಿತ ಅಂಶಗಳನ್ನು ನಿವಾರಿಸುತ್ತದೆ ಅನ್ನೋದನ್ನು ಆಯುರ್ವೇದ ಹೇಳುತ್ತದೆ. ಡಯಾಬಿಟೀಸ್ ಇರುವವರು ಒಂದೆಲಗವನ್ನು ತಿನ್ನುತ್ತಿದ್ದರೆ ಬ್ಲಡ್ ಶುಗರ್ ಲೆವೆಲ್ ಸಮತೋಲನದಲ್ಲಿರುತ್ತದೆ. ನಿದ್ರಾಹೀನತೆ ನಿವಾರಣೆಯಾಗಿ ಚೆನ್ನಾಗಿ ನಿದ್ದೆ ಬರುತ್ತೆ. ಈ ಕಾಲದ ಲೈಫ್ ಸ್ಟೈಲ್ ಸಮಸ್ಯೆಗಳಾದ ಸ್ಟ್ರೆಸ್, ಉದ್ವೇಗ ನಿವಾರಣೆಯಲ್ಲೂ ಇದು ಮಹತ್ವದ ಪಾತ್ರ ವಹಿಸುತ್ತದೆ, ಹಿಂದೆಲ್ಲ ನಮ್ಮ ಅಡುಗೆಗಳಲ್ಲಿ ಈ ಬ್ರಾಹ್ಮಿ ಇದ್ದೇ ಇರುತ್ತಿತ್ತು. ಆದರೆ ಈಗ ಮರೆಯಾಗಿದೆ.

 

ಸಂದರ್ಭ: ಮಧ್ಯಾಹ್ನದ ಊಟ

ಅವಧಿ: ಹದಿನೈದರಿಂದ ಇಪ್ಪತ್ತು ನಿಮಿಷ

 

ಏನೇನು ಸಾಮಗ್ರಿ ಬೇಕು?

ತಿಮರೆ ಅಥವಾ ಒಂದೆಲಗ ಸೊಪ್ಪು ಎಷ್ಟಿದ್ದರೂ ಒಳ್ಳೆಯದು, ತೆಂಗಿನ ಕಾಯಿ ಒಂದು ಕಪ್, ಬ್ಯಾಡಗಿ ಮೆಣಸು ೩ ಅಥವಾ ೪, ಜೀರಿಗೆ ಸ್ವಲ್ಪ, ಬೆಳ್ಳುಳ್ಳಿ ಐದು ಎಸಳು, ಕಲ್ಲು ಉಪ್ಪು.

 

ದಚ್ಚು, ಕಿಚ್ಚ, ರಕ್ಚಿತ್ ಶೆಟ್ಟಿ ಫೇವರೆಟ್ ಫುಡ್ ಯಾವ್ದು ಗೊತ್ತಾ?

 

ಮಾಡೋದು ಹೇಗೆ?:

* ತಿಮರೆಯನ್ನು ಚೆನ್ನಾಗಿ ತೊಳೆದು ಅದರ ಬೇರು ಸಪರೇಟ್ ಮಾಡಿ.

* ತೊಟ್ಟು ತೆಗೆಯಬೇಕು, ಅಥವಾ ಚಿಕ್ಕದಾಗಿ ಹೆಚ್ಚಬಹುದು.

* ಮಿಕ್ಸಿಗೆ ತಿಮರೆ, ತೆಂಗಿನ ಕಾಯಿ, ಉಪ್ಪು, ಮೆಣಸು ಹಾಕಿ ಎರಡು ರೌಂಡ್ ತಿರುಗಿಸಿ.

* ಇದಕ್ಕೆ ಉಪ್ಪು, ಜೀರಿಗೆ, ಬೆಳ್ಳುಳ್ಳಿ ಹಾಕಿ ಇನ್ನೆರಡು ಸುತ್ತು ತಿರುಗಿಸಿ,

* ಉಪ್ಪು ಖಾರ ಸರಿಯಾಗಿಯಾ ಪರೀಕ್ಷಿಸಿ, ಬೇಕಿದ್ದರೆ ಅದನ್ನು ಸೇರಿಸಿ ಮತ್ತೆ ಮಿಕ್ಸ್ ಮಾಡಬಹುದು.

 

ಇದನ್ನು ಕರಾವಳಿಯ ಕಡೆಗೆ ಕುಚ್ಚಿಲಕ್ಕಿ ಗಂಜಿಯ ಜೊತೆಗೆ ತಿನ್ನುತ್ತಾರೆ. ಗಂಜಿಯ ಮೇಲೆ ಕೊಬ್ಬರಿ ಎಣ್ಣೆ, ಸ್ವಲ್ಪ ಉಪ್ಪು ಹಾಕಿ ಈ ಚಟ್ನಿ ನೆಚ್ಚಿಕೊಂಡು ತಿಂದರೆ ಎಂಥಾ ನಿದ್ರಾ ಹೀನತೆ ಇದ್ದವರಿಗೂ ಸುಖ ನಿದ್ರೆ ಗ್ಯಾರೆಂಟಿ. ಅನ್ನದ ಜೊತೆಗೆ ತಿನ್ನಬಹುದು. ಅನ್ನಕ್ಕೆ ಕೊಬ್ಬರಿ ಎಣ್ಣೆ ಹಾಕಿ ಈ ಚಟ್ನಿ ನೆಚ್ಚಿಕೊಂಡು ತಿನ್ನಲು ರುಚಿ ಇರುತ್ತೆ.

ಈ ಒಂದೆಲಗ ಸೊಪ್ಪಿನ ತಂಬುಳಿ ಮಲೆನಾಡಿನಲ್ಲಿ ಸಖತ್ ಫೇಮಸ್. ಇದರ ಎಲೆ ಮತ್ತು ದಂಟನ್ನು ತೆಂಗಿನ ಕಾಯಿ ತುರಿ ಜೊತೆಗೆ ಸಣ್ಣಗೆ ರುಬ್ಬಬೇಕು. ನಂತರ ಇದನ್ನು ತೆಗೆದು ಮಿಕ್ಸಿಗೆ ಮತ್ತೆ ನೀರು, ಮಜ್ಜಿಗೆ, ಉಪ್ಪು ಹಾಕಿ ಮತ್ತೊಂದು ರೌಡ್ ತಿರುಗಿಸಿ ಮೊದಲೇ ತೆಗೆದಿಟ್ಟ ಪಾಕಕ್ಕೆ ಸೇರಿಸಬೇಕು. ಇನ್ನೇನು ಬೇಸಿಗೆ ಬಂತಲ್ಲಾ, ಆ ಈ ತಂಬುಳಿ ದೇಹಕ್ಕೆ ಬಹಳ ತಂಪಾದ ಫೀಲ್ ಕೊಡುತ್ತೆ. ಇದಕ್ಕೆ ಬೇಕಿದ್ದರೆ ಸಾಸಿವೆ, ಕೊಬ್ಬರಿ ಎಣ್ಣೆ ಒಗ್ಗರಣೆ ಕೊಡಬಹುದು.

 

ವೀಕೆಂಡ್‌ನಲ್ಲಿ ಮಕ್ಕಳಿಗೆ ವೆಜ್ ಪರೋಠಾ ಮಾಡ್ಕೊಡಿ

 

ಬಾಳೆ ಹೂವಿನ ಪಲ್ಯ

ಇದೂ ಕರಾವಳಿ ಕಡೆಯ ಅಡುಗೆ. ಮಧ್ಯಾಹ್ನದ ಊಟಕ್ಕೆ ಬೆಸ್ಟ್. ಇತ್ತೀಚೆಗೆ ನಮ್ಮ ಆಹಾರದಿಂದ ನಾರಿನ ಅಂಶ ಮರೆಯಾಗ್ತಿದೆ. ಇದರಿಂದ ಮಲಬದ್ಧತೆ ಸೇರಿದಂತೆ ಅನೇಕ ಸಮಸ್ಯೆಗಳು ಬರುತ್ತವೆ. ಈ ಪಲ್ಯದಲ್ಲಿ ನಾರಿನಂಶ ಹೇರಳವಾಗಿದೆ. ಇದನ್ನು ಆಗಾಗ ಊಟದಲ್ಲಿ ಬಳಸುತ್ತಿದ್ದರೆ ಕಾಂಸ್ಟಿಪೇಶನ್ ಬರಲ್ಲ.

ಏನೇನು ಸಾಮಗ್ರಿ ಬೇಕು?: ಬಾಳೆ ಹೂವು, ಉಪ್ಪು, ಬೆಲ್ಲ, ಖಾರದ ಪುಡಿ, ತೆಂಗಿನ ತುರಿ ಸ್ವಲ್ಪ

 

ಸ್ಪೆಷಲ್ ತಿಂಡಿ ಬೇಕೆಂಬ ಮಕ್ಕಳಿಗೆ ಮಾಡಿ ಕೊಡಿ ಮಂಗಳೂರು ಬನ್ಸ್

 

ಮಾಡೋದು ಹೇಗೆ?

* ಬಾಳೆ ಹೂವಿನ ಮೇಲ್ಪದರ ತೆಗೆದು ನಂತರದ ಭಾಗವನ್ನು ಸಣ್ಣಗೆ ಹೆಚ್ಚಿ ನೀರಿಗೆ ಹಾಕಿ.

* ನಂತರ ನೀರನ್ನು ಸೋಸಿ ತೆಗೆದು ಒಲೆಯ ಮೇಲೆ ಬಾಣಲೆ ಇಟ್ಟು ಬಿಸಿ ಮಾಡಿ.

* ಕೊಬ್ಬರಿ ಅಥವಾ ಅಡುಗೆ ಎಣ್ಣೆ, ಸಾಸಿವೆ, ಬ್ಯಾಡಗಿ ಮೆಣಸು, ಕರಿಬೇವು ಒಗ್ಗರಣೆ ರೆಡಿ ಮಾಡಿ.

* ಇದಕ್ಕೆ ಹೆಚ್ಚಿದ ಬಾಳೆ ಹೂವನ್ನು ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿ, ಮೇಲಿಂದ ಸ್ವಲ್ಪ ನೀರು ಹಾಕಿ.

* ನಂತರ ಉಪ್ಪು, ಬೆಲ್ಲ, ಖಾರದ ಪುಡಿ ಹಾಕಿ ಮುಚ್ಚಿಡಿ.

* ನೀರಿನ ಅಂಶ ಹೋಗಿ ತರಿ ತರಿಯಾದ ಮೇಲೆ ತೆಂಗಿನ ತುರಿ ಹಾಕಿ ಮಿಕ್ಸ್ ಮಾಡಿ.

ಊಟದ ಜೊತೆಗೆ ಬೆಸ್ಟ್ ಕಾಂಬಿನೇಶನ್.

click me!