ಕಾಲ ಬದಲಾದಂತೆ ಜನರ ಜೀವನಶೈಲಿ (Lifestyle)ಯು ಬದಲಾಗುತ್ತಿದೆ. ಇದರೊಂದಿಗೇ ಆಹಾರ ಪದ್ಧತಿಯು ಬದಲಾಗುತ್ತಾ ಹೋಗುತ್ತಿದೆ. ಜಂಕ್ ಫುಡ್ (Junk Food), ಕೆಮಿಕಲ್ ಸೇರಿಸಿರುವ ಕೂಲ್ ಡ್ರಿಂಕ್ಸ್ (Cool Drinks) ಜನರಿಗೆ ಪ್ರಿಯವಾಗುತ್ತಿದೆ. ಆದರೆ ಈ ರೀತಿ ಸೋಡಾ ಕುಡಿಯವುದು ಆರೋಗ್ಯಕ್ಕೆ ಯಾವ ರೀತಿಯಲ್ಲೂ ಉತ್ತಮವಲ್ಲ.
ಆಧುನಿಕ ಜೀವನಶೈಲಿ ಮನುಷ್ಯನ ಆಹಾರಪದ್ಧತಿಯನ್ನೂ ಬದಲಾಯಿಸಿದೆ. ಮನೆಯಲ್ಲೇ ತಯಾರಿಸುವ ಆಹಾರಕ್ಕಿಂತ ಎಲ್ಲರಿಗೂ ಈಗ ಹೊಟೇಲ್, ರೆಸ್ಟೋರೆಂಟ್‌ಗಳಲ್ಲಿ ಸಿಗುವ ಜಂಕ್ ಫುಡ್, ಕೂಲ್ ಡ್ರಿಂಕ್ಸ್‌ಗಳೇ ಪ್ರಿಯವಾಗುತ್ತಿವೆ. ಸ್ನ್ಯಾಕ್ಸ್ ಅಥವಾ ಊಟದ ಜತೆಗೆ ಕೂಲ್ ಡ್ರಿಂಕ್ಸ್ ಜತೆಗೆ ಬೇಕೇ ಬೇಕು ಎಂಬಂತಾಗಿದೆ. ಆದರೆ ಕೃತಕವಾದ ಸಕ್ಕರೆ ಅಂಶಗಳು ಹೊಂದಿರುವ ಈ ಸೋಡಾಗಳು ಆರೋಗ್ಯಕ್ಕೆ ಹಾನಿಕಾರಿಯಾಗಿದೆ. ಒಂದು ಗ್ಲಾಸ್ ಸೋಡಾ ಅಥವಾ ಸೋಡಾ ಮಿಶ್ರಿತ ಕೂಲ್ ಡ್ರಿಂಕ್ಸ್‌ನ್ನು ಕುಡಿಯುವುದರಿಂದ ಆರೋಗ್ಯಕ್ಕಾಗುವ ತೊಂದರೆಗಳೇನು ?
ಫಲವತ್ತತೆಯನ್ನು ಕಡಿಮೆ ಮಾಡಬಹುದು
ಮಕ್ಕಳನ್ನು ಹೊಂದಲು ಪ್ಲಾನ್ ಮಾಡುತ್ತಿರುವವರು ಸ್ವಲ್ಪ ಸಮಯದವರೆಗೆ ಸೋಡಾ ಕುಡಿಯುವುದು ಬಿಟ್ಟು ಬಿಡುವುದು ಒಳ್ಳೆಯದು. ಜರ್ನಲ್ ಎಪಿಡೆಮಿಯಾಲಜಿಯಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಸಂಶೋಧಕರು ಸುಮಾರು 5,000 ದಂಪತಿಗಳನ್ನು ಸಮೀಕ್ಷೆ ಮಾಡಿದರು. ಇದರಲ್ಲಿ ಪುರುಷ ಅಥವಾ ಮಹಿಳೆ ಪ್ರತಿದಿನ ಸೋಡಾದಂತಹ ಒಂದು ಅಥವಾ ಹೆಚ್ಚಿನ ಸಕ್ಕರೆ-ಸಿಹಿ ಪಾನೀಯಗಳನ್ನು ಕುಡಿಯುವುದರಿಂದ ಗರ್ಭಿಣಿಯಾಗುವ ಸಾಧ್ಯತೆ ಕಡಿಮೆಯಾಗಿದೆ ಎಂದು ತಿಳಿದುಬಂದಿದೆ.
ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸಬಹುದು.
ಸೋಡಾ ಮಿಶ್ರಿತ ಕೂಲ್ ಡ್ರಿಂಕ್ಸ್ ಕುಡಿಯುವವರಲ್ಲಿ ಸ್ಟ್ರೋಕ್ (Stroke) ಅಪಾಯ ಹೆಚ್ಚಾಗಿರುತ್ತದೆ. ಜರ್ನಲ್ ಸ್ಟ್ರೋಕ್‌ನಲ್ಲಿ ಪ್ರಕಟವಾದ ಅಧ್ಯಯನವು 10 ವರ್ಷಗಳ ಅವಧಿಯಲ್ಲಿ 2,888 ಜನರನ್ನು ಅಧ್ಯಯನ ಮಾಡಿತು. ಈ ಅಧ್ಯಯನದಿಂದ ದಿನಕ್ಕೆ ಕನಿಷ್ಠ ಒಂದು ಸೋಡಾವನ್ನು ಕುಡಿಯುವವರಿಗೆ ಕಾಯಿಲೆಯ ಸಾಧ್ಯತೆ ಮೂರು ಪಟ್ಟು ಹೆಚ್ಚಿಸಿದೆ ಎಂದು ತಿಳಿದುಬಂದಿದೆ.
ಹೃದಯಾಘಾತಕ್ಕೆ ಕಾರಣವಾಗೋ ಆಹಾರ, ಅವೈಯ್ಡ್ ಮಾಡಿದವನೇ ಜಾಣ
ಬೇಗ ವಯಸ್ಸಾದವರಂತೆ ಕಾಣಿಸುತ್ತದೆ
ಸೋಡಾ (Soda) ಸೇವನೆಯಿಂದ ವೇಗ ವಯಸ್ಸಾಗುವಂತೆ ಕಾಣುತ್ತದೆ. ಬಹಳಷ್ಟು ಸೋಡಾವನ್ನು ಸೇವಿಸುವುದರಿಂದ ಜೀವಕೋಶದ ಆರೋಗ್ಯ (Health)ದ ಮೇಲೆ ಪರಿಣಾಮ ಬೀರಬಹುದು ಎಂದು ಯುಸಿ ಸ್ಯಾನ್ ಫ್ರಾನ್ಸಿಸ್ಕೋದ ಅಧ್ಯಯನವು ಹೇಳುತ್ತದೆ. 20 ಔನ್ಸ್ ಸೋಡಾದ ದೈನಂದಿನ ಸೇವನೆಯು ಜೀವಕೋಶದ ಮೇಲೆ ಪರಿಣಾಮ ಬೀರುತ್ತದೆ. ಇದು ಚರ್ಮದ ಮೇಲೆ ಪರಿಣಾಮ ಬೀರಿ ಬೇಗ ವಯಸ್ಸಾದಂತೆ ಕಾಣುವಂತೆ ಮಾಡುತ್ತದೆ.
ಮೂಳೆಗಳನ್ನು ದುರ್ಬಲಗೊಳಿಸಬಹುದು
ವಯಸ್ಸಾದಂತೆ ಬಲವಾದ ಮತ್ತು ಆರೋಗ್ಯಕರ ಮೂಳೆಗಳು ಅತ್ಯಗತ್ಯ. ಸಾಕಷ್ಟು ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಅನ್ನು ಪಡೆಯುವುದು ಮೂಳೆಯ ನಷ್ಟವನ್ನು ತಡೆಯಲು ಸಹಾಯ ಮಾಡುತ್ತದೆ. ಆದರೆ ಸಾಕಷ್ಟು ಸೋಡಾ ಮಿಶ್ರಿತ ಕೂಲ್ ಡ್ರಿಂಕ್ಸ್ ಕುಡಿಯುವುದು ದೇಹದಲ್ಲಿರುವ ಮೂಳೆ (Bone)ಗಳನ್ನು ದುರ್ಬಲಗೊಳಿಸಬಹುದು. ಅಮೇರಿಕನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಷನ್‌ನ ಅಧ್ಯಯನದ ಪ್ರಕಾರ, ಸೋಡಾ ಕುಡಿಯುವ ಮಹಿಳೆಯರಲ್ಲಿ ಸೊಂಟದ ಮೂಳೆಗಳು ದುರ್ಬಲವಾಗಿರುವುದು ಕಂಡುಬಂದಿದೆ.
ಋತುಚಕ್ರವಾಗುವ ಅವಧಿ ಹೆಚ್ಚುತ್ತದೆ
ಹಾರ್ವರ್ಡ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನ ಅಧ್ಯಯನದ ಪ್ರಕಾರ ಸತತವಾಗಿ ಸೋಡಾ ಸೇವಿಸುವುದರಿಂದ ಹುಡುಗಿರಲ್ಲಿ ಋತುಚಕ್ರವಾಗುವ ಅವಧಿ ಹೆಚ್ಚುತ್ತಾ ಹೋಗುತ್ತದೆ. 9ರಿಂದ 14 ವರ್ಷ ವಯಸ್ಸಿನ 5,583 ಹುಡುಗಿಯರನ್ನು ಆಧರಿಸಿ ಅಧ್ಯಯನ ನಡೆಸಿದಾಗ, ದಿನಕ್ಕೆ ಒಂದು ಬಾರಿ ಸಕ್ಕರೆ ಪಾನೀಯಗಳನ್ನು ಸೇವಿಸಿದವರಲ್ಲಿ ಋತುಚಕ್ರದ ಅವಧಿಯು ಒಂದೆರಡು ತಿಂಗಳು ವ್ಯತ್ಯಾಸವಾಗಿದೆ.
Gastritis Diet: ಖಾಲಿ ಹೊಟ್ಟೆಯಲ್ಲಿ ಈ ಆಹಾರ ಸೇವಿಸಿದ್ರೆ ಗ್ಯಾಸ್ ಸಮಸ್ಯೆ ಖಂಡಿತಾ
ಶ್ವಾಸಕೋಶದ ಸಮಸ್ಯೆಗಳನ್ನು ಉಂಟು ಮಾಡಬಹುದು
ಆಸ್ಟ್ರೇಲಿಯಾದ ಅಡಿಲೇಡ್ ವಿಶ್ವವಿದ್ಯಾನಿಲಯದ ಸಂಶೋಧಕರು ನಡೆಸಿದ ಅಧ್ಯಯನದಲ್ಲಿ ಅಸ್ತಮಾ ಮತ್ತು ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆ ಸೋಡಾಕ್ಕೆ ಸಂಬಂಧಿಸಿದ್ದಾಗಿದೆ ಎಂಬುದು ತಿಳಿದುಬಂದಿದೆ. 15,000ಕ್ಕಿಂತ ಹೆಚ್ಚು ಜನರೊಂದಿಗೆ ನಡೆಸಿದ ಸಮೀಕ್ಷೆಯಲ್ಲಿ, ದಿನಕ್ಕೆ ಕನಿಷ್ಠ ಅರ್ಧ ಲೀಟರ್ ತಂಪು ಪಾನೀಯಗಳನ್ನು ಸೇವಿಸಿದವರು ಶ್ವಾಸಕೋಶದ ಪರಿಸ್ಥಿತಿಗಳನ್ನು ಹೊಂದುವ ಸಾಧ್ಯತೆ ಎರಡು ಪಟ್ಟು ಹೆಚ್ಚು ಎಂಬ ಮಾಹಿತಿ ದೊರಕಿದೆ.
ಹಸಿವನ್ನು ಹೆಚ್ಚಿಸುತ್ತದೆ
ಸೋಡಾವನ್ನು ಕುಡಿಯುವುದು ತೂಕ (Weight)ವನ್ನು ಕಳೆದುಕೊಳ್ಳಲು ಉತ್ತಮ ಮಾರ್ಗವೆಂದು ತೋರುತ್ತದೆ, ಆದರೆ ಸಿಡ್ನಿ ವಿಶ್ವವಿದ್ಯಾಲಯದ ಸಂಶೋಧನೆಯು, ಇಂಥಹಾ ಕೃತಕ ಪಾನೀಯಗಳನ್ನು ಸೇವಿಸುವುದು ಹಸಿವನ್ನು ಹೆಚ್ಚಿಸುತ್ತದೆ ಎಂದು ಕಂಡುಹಿಡಿದಿದೆ.