
ಮಧುಮೇಹಿ(Diabetes)ಗಳ ಪಾಡು ಒಂದೆರಡಲ್ಲ. ಆಹಾರ(Food)ದ ವಿಷಯದಲ್ಲಿ ಸ್ವಲ್ಪ ಹೆಚ್ಚು ಜಾಗ್ರತೆ ವಹಿಸಬೇಕಾಗುವುದರಿಂದ ಎಲ್ಲವನ್ನೂ ಆರಾಮಾಗಿ ತಿನ್ನುವ ಅವಕಾಶ ಅವರಿಗೆ ಇರುವುದಿಲ್ಲ. ಎಲ್ಲಾದರೂ ಫಂಕ್ಷನ್ ಗಳಿಗೆ ಹೋಗುವುದಂತೂ ಭಾರೀ ಸಮಸ್ಯೆಯಾಗುತ್ತದೆ. ಆಹಾರವೇ ಮುಖ್ಯ ಸಮಸ್ಯೆಯಾಗಿರುತ್ತದೆ. ಆದರೆ, ನಿಮಗೆ ಗೊತ್ತೇ? ಕೆಲವು ತರಕಾರಿ(Vegetables)ಗಳು ಮಧುಮೇಹಿಗಳಿಗೆ ಯಾವುದೇ ತೊಂದರೆ ನೀಡುವುದಿಲ್ಲ. ಅಂದರೆ, ಕ್ಯಾಲರಿ (Calorie) ಮತ್ತು ಸಕ್ಕರೆಯಂಶ (Sugar) ಕಡಿಮೆ ಹೊಂದಿರುವ ತರಕಾರಿಗಳನ್ನು ಆಯ್ಕೆ ಮಾಡಿಕೊಂಡು ಅವರು ಸೇವನೆ ಮಾಡಬೇಕು. ಅಂತಹ ಹಲವಾರು ತರಕಾರಿಗಳಿವೆ.
• ಮೊದಲನೆಯದಾಗಿ, ಬೀಟ್ ರೂಟ್ (Beetroot): ಬೀಟ್ ರೂಟ್ ಅತ್ಯುತ್ತಮ ತರಕಾರಿಗಳಲ್ಲೊಂದು. ಯಾವುದೇ ರೀತಿಯ ದೇಹ ಪ್ರಕೃತಿಯವರಿಗೂ ಬೀಟ್ ರೂಟ್ ಅತ್ಯುತ್ತಮ. ಮಧುಮೇಹಿಗಳಿಗಂತೂ ಬೀಟ್ ರೂಟ್ ಭಾರೀ ಉತ್ತಮ. ಸಕ್ಕರೆಯಂಶ ಹೊರತಾದ ತರಕಾರಿಯಾಗಿರುವ ಇದರಲ್ಲಿ ಕ್ಯಾಲರಿ ಬಹಳ ಕಡಿಮೆ. ಮಹಿಳೆಯರು ಫೋಲೇಟ್ (Folate) ಅಂಶದ ಕೊರತೆಯಾಗದಿರಲು ಇದರ ಸೇವನೆ ಮಾಡಬೇಕು. ರಕ್ತದೊತ್ತಡ ನಿಯಂತ್ರಿಸುತ್ತದೆ. 100 ಗ್ರಾಮ್ ಬೀಟ್ ರೂಟ್ ನಲ್ಲಿ ಶೇ.20ರಷ್ಟು ಫೋಲೇಟ್, 0.2 ಗ್ರಾಮ್ ಕೊಬ್ಬು (Fat), 2 ಗ್ರಾಮ್ ನಾರಿನಂಶ (Fibre), 1.7 ಗ್ರಾಮ್ ಪ್ರೊಟೀನ್ (Protein) ದೊರೆಯುತ್ತದೆ.
• ಎಲೆಕೋಸು ಅಥವಾ ಕ್ಯಾಬೀಜ(Cabbage): ಸಾಮಾನ್ಯವಾಗಿ ಎಲೆಕೋಸು ನಾರಿನಂಶ, ಮ್ಯಾಂಗನೀಸ್, ವಿಟಮಿನ್ ಬಿ6, ವಿಟಮಿನ್ ಕೆ, ವಿಟಮಿನ್ ಸಿ ಅಂಶಗಳ ಮೂಲ. ಆಂಟಿಆಕ್ಸಿಡೆಂಟ್ (Anti Oxidants)ಗಳನ್ನು ಉತ್ತಮ ಪ್ರಮಾಣದಲ್ಲಿ ಹೊಂದಿರುವುದರಿಂದ ಮಧುಮೇಹಕ್ಕೆ ಉತ್ತಮ.
• ಪಪ್ಪಾಯ(Pappaya): ಪಪ್ಪಾಯದಲ್ಲಿ ಸೋಡಿಯಂ ಅಂಶ ಕಡಿಮೆ ಇರುತ್ತದೆ. ಕೊಬ್ಬು ಮತ್ತು ರಕ್ತದಲ್ಲಿ ಸಕ್ಕರೆಯಂಶಯನ್ನು ನಿಯಂತ್ರಿಸುತ್ತದೆ. ವಿಟಮಿನ್ ಎ, ಸಿ, ಫೊಲೇಟ್, ಪೊಟ್ಯಾಶಿಯಂ, ಪ್ರೊಟೀನ್ ಮತ್ತು ನಾರಿನಂಶಗಳು ಉತ್ತಮ ಪ್ರಮಾಣದಲ್ಲಿರುತ್ತವೆ. ವಿಟಮಿನ್ ಬಿ, ಕ್ಯಾಲ್ಸಿಯಂ, ಮ್ಯಾಂಗನೀಸ್, ವಿಟಮಿನ್ ಕೆ ಕೂಡ ಇರುತ್ತವೆ.
ಮಕ್ಕಳಿಗೆ 2 ವರ್ಷ ತುಂಬುವ ಮೊದಲು ಸಕ್ಕರೆಯನ್ನು ಕೊಡಲೇಬೇಡಿ
• ಹೂಕೋಸು(CauliFlower): ಚಳಿಗಾಲದಲ್ಲಿ ಹೂಕೋಸಿನ ಬಳಕೆ ಹೆಚ್ಚು. ಇದರಲ್ಲಿ ಸಕ್ಕರೆಯಂಶ ಸ್ವಲ್ಪವೂ ಇರುವುದಿಲ್ಲ. ಹೀಗಾಗಿ, ಮಧುಮೇಹಿಗಳಿಗೆ ಉತ್ತಮವಾಗಿದೆ. ವಿಟಮನಿ ಸಿ, ನಾರಿನಂಶ, ಪೊಟ್ಯಾಶಿಯಂ ಮತ್ತು ಫೊಲೇಟ್ ಅಂಶವೂ ಚೆನ್ನಾಗಿರುತ್ತದೆ.
• ಟೊಮ್ಯಾಟೋ(Tomato): ಮಧುಮೇಹಿಗಳಿಗೆ ಟೊಮ್ಯಾಟೋ ಸೂಪರ್ ಫುಡ್ (SuperFood) ಆಗಿದೆ. ವಿಟಮಿನ್ ಸಿ.ಎ, ಪೊಟ್ಯಾಶಿಯಂ ಮತ್ತು ಇತರ ಪೌಷ್ಟಿಕಾಂಶಗಳು ಸಾಕಷ್ಟು ಪ್ರಮಾಣದಲ್ಲಿವೆ. ಇದರಲ್ಲಿ ಕೇವಲ 32 ಅಂಶ ಕ್ಯಾಲರಿ ಇರುತ್ತದೆ. ಇದರಲ್ಲಿರುವ ಲೈಕೋಪಿನ್ ಅಂಶವು ಕ್ಯಾನ್ಸರ್ (Cancer) ವಿರುದ್ಧ ಹೋರಾಡಲು ಸಹಕಾರಿ. ಅಲ್ಲದೆ, ಟೊಮ್ಯಾಟೋ ಸೇವನೆಯಿಂದ ತ್ವಚೆ (Skin) ಚೆನ್ನಾಗಿರುತ್ತದೆ.
• ಪಾಲಕ್ ಸೊಪ್ಪು(Palak): ಪೌಷ್ಟಿಕ ಹಸಿರು (Green) ಸೊಪ್ಪು (Leave)ಗಳಲ್ಲಿ ಮೊದಲನೇ ಸ್ಥಾನದಲ್ಲಿರುವುದೇ ಪಾಲಕ್ ಸೊಪ್ಪು. ಅದರಲ್ಲೂ ಮಧುಮೇಹಿಗಳು ನಿಶ್ಚಿಂತೆಯಿಂದ ಇದನ್ನು ಸವಿಯಬಹುದು. ಇದರಲ್ಲಿ ನಾರಿನಂಶ, ಕ್ಯಾಲ್ಸಿಯಂ ಅಂಶ ಹೆಚ್ಚಾಗಿರುತ್ತದೆ. ಹೆಚ್ಚು ತಿಂದರೂ ಏನೂ ಸಮಸ್ಯೆ ಆಗುವುದಿಲ್ಲ. ಒಂದು ಕಪ್ ಸೊಪ್ಪಿನಲ್ಲಿ 1.1 ಗ್ರಾಮ್ ಕಾರ್ಬೋಹೈಡ್ರೇಟ್ಸ್, 4.3 ಗ್ರಾಮ್ ನಾರಿನಂಶ ಮತ್ತು ಕೇವಲ 0.4 ಗ್ರಾಮ್ ನೈಸರ್ಗಿಕ ಸಕ್ಕರೆ ಇರುತ್ತದೆ.
• ಸೀಬೆ ಅಥವಾ ಪೇರಳೆ (Gauva): ಅಚ್ಚರಿಯಾಗಬಹುದು. ಸೀಬೆ ಹಣ್ಣು ಸಿಹಿಯಾಗಿದ್ದರೂ ಇದರಲ್ಲಿ ರಕ್ತದ ಸಕ್ಕರೆ ಮಟ್ಟ ಹೆಚ್ಚಿಸುವ ಅಂಶವಿರುವುದಿಲ್ಲ. ಇದರ ಗ್ಲೈಸೆಮಿಕ್ ಇಂಡೆಕ್ಸ್ (Glycemic Index) ಬಹಳ ಕಡಿಮೆ ಹಾಗೂ ನಾರಿನಂಶ ಹೆಚ್ಚಿರುತ್ತದೆ. ಆಂಟಿಆಕ್ಸಿಡೆಂಟ್ ಗಳ ಸಮೃದ್ಧ ಆಗರವಾಗಿರುವುದರಿಂದಲೂ ಮಧುಮೇಹಿಗಳಿಗೆ ಒಳ್ಳೆಯದು. ವಿಟಮಿನ್ ಸಿ ಉತ್ತಮವಾಗಿರುತ್ತದೆ. ಟೈಪ್ 2 ಮಧುಮೇಹ ಉಂಟಾಗುವ ಅಪಾಯವನ್ನು ಕಡಿಮೆ ಮಾಡುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.