ಹಣ್ಣು, ತರಕಾರಿ ಬಗ್ಗೆ ಅನೇಕರಿಗೆ ಸರಿಯಾಗಿ ತಿಳಿದಿರೋದಿಲ್ಲ. ಕೆಲವರು ಆರೋಗ್ಯಕರ ಬೀಜಗಳನ್ನು ಎಸೆದ್ರೆ ಮತ್ತೆ ಕೆಲವರು ಆರೋಗ್ಯಕ್ಕೆ ಹಾನಿ ಮಾಡುವ ಬೀಜವನ್ನು ತಿನ್ನುತ್ತಾರೆ. ಹಾಗಾಗಿ ಯಾವುದೇ ಹಣ್ಣು, ತರಕಾರಿ ಬೀಜ ಸೇವನೆ ಮಾಡುವ ಮೊದಲು ಅದ್ರ ಬಗ್ಗೆ ತಿಳಿದಿರಬೇಕು.
ಹಣ್ಣು, ತರಕಾರಿ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದು ಎಲ್ಲರಿಗೂ ತಿಳಿದಿರುವ ಸಂಗತಿ. ಹಾಗೆಯೇ ಹಣ್ಣು ಹಾಗೂ ತರಕಾರಿ ಬೀಜವನ್ನು ಸೇವನೆ ಮಾಡುವಂತೆ ಸಲಹೆ ನೀಡಲಾಗುತ್ತದೆ. ಜನರು ಅವುಗಳನ್ನು ಸೂಪರ್‌ಫುಡ್ ಎಂದು ಪರಿಗಣಿಸುತ್ತಾರೆ. ಹಾಗಾಗಿಯೇ ಹಣ್ಣುಗಳ ಬೀಜಗಳನ್ನು ಎಂದಿಗೂ ಎಸೆಯಬಾರದು ಎನ್ನುತ್ತಾರೆ. ಆರೋಗ್ಯ ಕ್ಕೆ ಹೆಚ್ಚು ಮಹತ್ವ ನೀಡುವ ಜನರು ಬೀಜಗಳನ್ನು ಕಸಕ್ಕೆ ಹಾಕದೆ ಅದನ್ನು ಡಯಟ್ ನಲ್ಲಿ ಬಳಕೆ ಮಾಡಿಕೊಳ್ತಾರೆ. ವಿವಿಧ ಹಣ್ಣು ಮತ್ತು ತರಕಾರಿ ಬೀಜಗಳು ಸಾಕಷ್ಟು ಪೋಷಕಾಂಶವನ್ನು ಹೊಂದಿರುತ್ತವೆ. ಆದ್ರೆ ಎಲ್ಲ ತರಕಾರಿ ಬೀಜಗಳೂ ಒಳ್ಳೆಯದಲ್ಲ. ಕೆಲ ಬೀಜಗಳು ಆರೋಗ್ಯವನ್ನು ಹಾಳು ಮಾಡುತ್ತವೆ. ಈ ಬೀಜಗಳನ್ನು ಸೇವಿಸಿದ್ರೆ ಅನೇಕ ಆರೋಗ್ಯ ಸಮಸ್ಯೆ ಎದುರಾಗುತ್ತದೆ. ಕೆಲವೊಮ್ಮೆ ಅವುಗಳ ಸೇವನೆಯಿಂದ ವ್ಯಕ್ತಿಯ ಪ್ರಾಣ ಹೋಗ್ಬಹುದು. ಹಾಗಾಗಿ ಹಣ್ಣು ಮತ್ತು ತರಕಾರಿ ಬೀಜ ಒಳ್ಳೆಯದು ಎನ್ನುವ ಕಾರಣಕ್ಕೆ ಎಲ್ಲ ಬೀಜಗಳ ಸೇವನೆ ಮಾಡ್ಬಾರದು. ಇಂದು ನಾವು ಯಾವ ಹಣ್ಣು ಹಾಗೂ ತರಕಾರಿ ಬೀಜ ಆಪತ್ತಿಗೆ ಆಹ್ವಾನ ನೀಡುತ್ತದೆ ಎಂಬುದನ್ನು ಹೇಳ್ತೇವೆ.
ಸೇಬು ಹಣ್ಣಿನ (Apple) ಬೀಜ : ಪ್ರತಿ ದಿನ ಸೇಬು ಹಣ್ಣನ್ನು ಸೇವಿಸಿ, ವೈದ್ಯರಿಂದ ದೂರವಿರಿ ಎಂಬ ಮಾತನ್ನು ನಾವೆಲ್ಲ ಕೇಳಿರ್ತೇವೆ. ಪ್ರತಿ ದಿ ನ ಸೇಬು ಹಣ್ಣಿನ ಸೇವನೆ ಒಳ್ಳೆಯದು. ಆದ್ರೆ ಸೇಬು ಹಣ್ಣಿನ ಬೀಜ ಒಳ್ಳೆಯದಲ್ಲ. ಸೇಬು ಬೀಜದಲ್ಲಿ ಅಮಿಗ್ಡಾಲಿನ್ ಎಂಬ ಅಂಶವರಿರುತ್ತದೆ. ಸೇಬಿನ ಬೀಜಗಳನ್ನು ತಿನ್ನುವಾಗ ಮತ್ತು ಅಗಿದಾಗ ಅಮಿಗ್ಡಾಲಿನ್, ಹೈಡ್ರೋಜನ್ ಸೈನೈಡ್ ಅನ್ನು ಬಿಡುಗಡೆ ಮಾಡುತ್ತದೆ. ಇದು ಸಾವಿಗೆ ಕಾರಣವಾಗಬಹುದು. ಹಾಗಂತ ಒಂದೋ ಎರಡೋ ಬೀಜ ಬಾಯಿಗೆ ಹೋದ್ರೆ ಅಪಾಯವಿಲ್ಲ. ಇದಕ್ಕೆ ಆತಂಕಪಡಬೇಕಾಗಿಲ್ಲ. ನಿಯಮಿತವಾಗಿ ಅಥವಾ ಹೆಚ್ಚಿನ ಪ್ರಮಾಣದಲ್ಲಿ ಸೇಬು ಹಣ್ಣಿನ ಬೀಜ ತಿನ್ನಬೇಡಿ.
ಲಿಚಿ (Lithi) ಬೀಜ : ಬೇಸಿಗೆಯಲ್ಲಿ ಎಲ್ಲರೂ ಲಿಚಿ ಸೇವನೆ ಮಾಡಲು ಇಷ್ಟಪಡ್ತಾರೆ. ರುಚಿಕರ ಹಣ್ಣುಗಳಲ್ಲಿ ಲಿಚಿ ಕೂಡ ಒಂದು. ಆದ್ರೆ ಲಿಚಿ ಬೀಜಗಳು ನಮ್ಮ ದೇಹಕ್ಕೆ ವಿಷದಂತೆ ಕೆಲಸ ಮಾಡುತ್ತವೆ. ಅದರಲ್ಲಿರುವ ಕೆಲ ಅಂಶಗಳು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಲಿಚಿ ಬೀಜ ಅಮೈನೋ ಆಮ್ಲವನ್ನು ಹೊಂದಿರುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.
ಹಣ್ಣಿಗೆ ಉಪ್ಪು, ಚಾಟ್ ಮಸಾಲ ಸಿಂಪಡಿಸಿ ತಿನ್ನೋ ಅಭ್ಯಾಸ ಒಳ್ಳೇದಾ ?
ಟೋಮೋಟೋ (Tomato) ಬೀಜ : ಟೋಮೋಟೋ ಇಲ್ಲದೆ ಅಡುಗೆ ಇಲ್ಲ ಎನ್ನುವವರಿದ್ದಾರೆ. ಪ್ರತಿ ದಿನ ಬಹುತೇಕ ಎಲ್ಲರ ಮನೆಯಲ್ಲೂ ಟೋಮೋಟೋ ಬಳಕೆ ಮಾಡಲಾಗುತ್ತದೆ. ಒಂದಲ್ಲ ಒಂದು ವಿಧಾನದಲ್ಲಿ ಟೋಮೋಟೋ ನಮ್ಮ ಹೊಟ್ಟೆ ಸೇರುತ್ತದೆ. ಆದ್ರೆ ಟೋಮೋಟೋ ಬೀಜ ಒಳ್ಳೆಯದಲ್ಲ ಎನ್ನುತ್ತಾರೆ ತಜ್ಞರು. ಟೋಮೋಟೋದ ಸಣ್ಣ ಬೀಜಗಳು ಅನೇಕ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಟೋಮೋಟೋ ಬೀಜಗಳನ್ನು ತಿನ್ನುವುದು ಮೂತ್ರಪಿಂಡದ ಕಲ್ಲುಗಳಿಗೆ ಕಾರಣವಾಗಬಹುದು. ಟೊಮೆಟೊ ಬೀಜಗಳಲ್ಲಿ ಆಕ್ಸಲೇಟ್ ಇರುವುದರಿಂದ ಇದು ಈ ಕಲ್ಲುಗಳ ರಚನೆಗೆ ಸಹಾಯ ಮಾಡುತ್ತದೆ. ಹಾಗಾಗಿ ಆದಷ್ಟು ಬೀಜ ಸೇವನೆ ತಪ್ಪಿಸಿ. ಸಣ್ಣ ಪ್ರಮಾಣದಲ್ಲಿ ಬೀಜ ದೇಹ ಸೇರಿದ್ರೆ ಅಪಾಯವಿಲ್ಲ.
ಛೀ..ಕಂಬಳಿ ಹುಳದಲ್ಲೂ ಚಾಕೊಲೇಟ್ ಮಾಡ್ತಾರಂತೆ !
ಈ ಹಣ್ಣಿನ ಬೀಜದ ಬಗ್ಗೆಯೂ ಇರಲಿ ಗಮನ : ಸೇಬು, ಲಿಚಿ ಮಾತ್ರವಲ್ಲ ಏಪ್ರಿಕಾಟ್, ಪ್ಲಮ್, ಚೆರ್ರಿ ಮತ್ತು ಪೀಚ್ ಬೀಜಗಳನ್ನು ಕೂಡ ಸೇವನೆ ಮಾಡದಿರುವುದು ಒಳ್ಳೆಯದು. ಈ ಹಣ್ಣುಗಳು ಸೈನೋಜೆನಿಕ್ ಸಂಯುಕ್ತಗಳಲ್ಲಿ ಸಮೃದ್ಧವಾಗಿವೆ. ಈ ಹಣ್ಣಿನ ಬೀಜಗಳು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಹಾಗಾಗಿ ಈ ಹಣ್ಣುಗಳನ್ನು ತಿನ್ನುವಾಗ ಬೀಜವನ್ನು ಕಸಕ್ಕೆ ಎಸೆಯಿರಿ.