ಫ್ರೆಂಚ್ ಫ್ರೈ ಹೆಸರು ಹೇಳ್ತಿದ್ದಂತೆ ಮಕ್ಕಳು ಆಕ್ಟಿವ್ ಆಗ್ತಾರೆ. ಫಾಸ್ಟ್ ಫುಡ್ ನಲ್ಲಿ ಮೊದಲ ಸ್ಥಾನದಲ್ಲಿರುವ ಫ್ರೆಂಚ್ ಫ್ರೈ ಹೇಗೆ ತಯಾರಿಸೋದು ಎಂಬುದು ಅನೇಕರಿಗೆ ಗೊತ್ತು. ಆದ್ರೆ ಅದನ್ನು ಮೊದಲು ತಯಾರಿಸಿದ್ದು ಯಾರು ಎಂಬ ಬಗ್ಗೆ ಎಲ್ಲರಿಗೂ ತಿಳಿದಿಲ್ಲ. ನಾವಿಂದು ಅದ್ರ ಇತಿಹಾಸ ಹೇಳ್ತೇವೆ ಓದಿ.
ಫ್ರೆಂಚ್ ಫ್ರೈ ಯಾರಿಗೆ ಇಷ್ಟವಿಲ್ಲ ಹೇಳಿ. ಹೆಸರು ಕೇಳ್ತಿದ್ದಂತೆ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರ ಬಾಯಲ್ಲಿ ನೀರು ಬರುತ್ತೆ. ಜನಪ್ರಿಯ ಫಾಸ್ಟ್ ಫುಡ್ ಫ್ರೆಂಚ್ ಫ್ರೈಯನ್ನು ಕೆಲವರು ವಾರಕ್ಕೆ ಎರಡು – ಮೂರು ಬಾರಿ ತಿನ್ನಲು ಇಷ್ಟಪಡ್ತಾರೆ. ಪ್ರತಿ ವರ್ಷ ಜುಲೈ 13 ರಂದು ಅಮೆರಿಕದಲ್ಲಿ ನ್ಯಾಷನಲ್ ಫ್ರೆಂಚ್ ಫ್ರೈ ಡೇ ಆಚರಿಸಲಾಗುತ್ತದೆ. ಅಮೆರಿಕ (America) ದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಫ್ರೆಂಚ್ ಫ್ರೈಸ್ ಪ್ರಿಯರು ಈ ದಿನವನ್ನು ನ್ಯಾಷನಲ್ ಫ್ರೆಂಚ್ ಫ್ರೈ ಡೇ ಆಗಿ ಆಚರಿಸಲು ಇಷ್ಟಪಡುತ್ತಾರೆ. ಒಮ್ಮೆ ತಿಂದ್ರೆ ಮತ್ತೆ ಮತ್ತೆ ತನ್ನ ಬಳಿ ಆಕರ್ಷಿಸುವ ಶಕ್ತಿ ಫ್ರೆಂಚ್ ಫ್ರೈಗೆ ಇದೆ. ಫ್ರೆಂಚ್ ಫ್ರೈ ಇತಿಹಾಸದ ಬಗ್ಗೆ ಅನೇಕರಿಗೆ ಗೊಂದಲವಿದೆ. ಕೆಲವು ತಪ್ಪುಕಲ್ಪನೆಗಳಿವೆ. ನಾವಿಂದು ಫ್ರೆಂಚ್ ಫ್ರೈ ಇತಿಹಾಸದ ಬಗ್ಗೆ ನಿಮಗೆ ಹೇಳ್ತೇವೆ.
ಫಾಸ್ಟ್ ಫುಡ್ ಫ್ರೆಂಚ್ ಫ್ರೈ ಇತಿಹಾಸ : ಫ್ರೆಂಚ್ ಫ್ರೈ ಅಂದ್ರೆ ಆಲೂಗಡ್ಡೆ ಹುರಿದು ತಿನ್ನೋದು ಎಂಬ ವಿಷ್ಯ ಎಲ್ಲರಿಗೂ ಗೊತ್ತು. ಆದ್ರೆ ಈ ಆಲೂಗಡ್ಡೆ ಹುರಿದು ತಿನ್ನುವ ಪಾಕ ವಿಧಾನ ಎಲ್ಲಿಂದ ಶುರುವಾಯ್ತು ಗೊತ್ತಾ?. ಆಲೂಗಡ್ಡೆ ಹುರಿಯುವ ಅಭ್ಯಾಸವು ಮೊದಲು ಫ್ರಾನ್ಸ್ ಮತ್ತು ಉತ್ತರ ಬೆಲ್ಜಿಯಂನ ಸುತ್ತಮುತ್ತಲಿನ ಸ್ಥಳಗಳಲ್ಲಿ ಪ್ರಾರಂಭವಾಯಿತು. ಬೆಲ್ಜಿಯಂನ ಮಾಸ್ ಕಣಿವೆಯ ಬಳಿ ಒಂದು ಹಳ್ಳಿಯಿತ್ತು. ಈ ಹಳ್ಳಿಯ ಜನರು ನದಿಯಲ್ಲಿರುವ ಮೀನನ್ನು ಹಿಡಿದು ಅದನ್ನು ಫ್ರೈ ಮಾಡಿ ತಿನ್ನುತ್ತಿದ್ದರು. ಆದ್ರೆ ಚಳಿಗಾಲದಲ್ಲಿ ನದಿ ಮಂಜುಗಡ್ಡೆಯಾಗ್ತಿತ್ತು. ಆಗ ಮೀನುಗಳು ಸರಿಯಾಗಿ ಸಿಗ್ತಿರಲಿಲ್ಲ. ಹಾಗಾಗಿ ಅವರಿಗೆ ಸರಿಯಾದ ಆಹಾರ ಸಿಗ್ತಿರಲಿಲ್ಲ. ಹೊಟ್ಟೆ ತುಂಬಿಸಿಕೊಳ್ಳಲು ಅಲ್ಲಿನ ಜನರು ಆಲೂಗಡ್ಡೆ ಫ್ರೈ ಮಾಡಿ ತಿನ್ನಲು ಶುರು ಮಾಡಿದ್ರು. ಆಲೂಗಡ್ಡೆಯನ್ನೂ ಮೀನಿನ ರೀತಿಯಲ್ಲಿ ಕತ್ತರಿಸಿ ಫ್ರೈ ಮಾಡಿ ತಿನ್ನುತ್ತಿದ್ದರು. ಚಳಿಗಾಲದಲ್ಲಿ ಇದು ಅವರುಸ್ಥಿರ ಆಹಾರವಾಯಿತು.
ಫ್ರೆಂಚ್ ಕ್ರಾಂತಿಯ ಸಮಯದಲ್ಲಿ ಇದಕ್ಕೆ ಬಂತು ಫ್ರೆಂಚ್ ಫ್ರೈಸ್ ಹೆಸರು : 17 ನೇ ಶತಮಾನದ ಸಮಯದಲ್ಲಿ ಫ್ರೆಂಚ್ ಕ್ರಾಂತಿ ನಡೆಯುತ್ತಿತ್ತು. ಈ ವೇಳೆ ಸೈನಿಕರಿಗೆ ತಿನ್ನಲು ಫ್ರೆಂಚ್ ಫ್ರೈಗಳನ್ನು ನೀಡಲಾಗುತ್ತಿತ್ತು. ಫ್ರಾನ್ಸ್ ನ ಪ್ರಸಿದ್ಧ ಪ್ಯಾರಿಸ್ ಸೇತುವೆಯ ನಂತರ ಇದನ್ನು ಫ್ರೈಟ್ಸ್ ಪಾಂಟ್ ನ್ಯೂಫ್ ಎಂದು ಕರೆಯಲಾಯಿತು. ಮೊದಲ ಮಹಾಯುದ್ಧದ ಸಮಯದಲ್ಲಿ ಅಮೇರಿಕನ್ ಸೈನ್ಯವು ಇಲ್ಲಿಗೆ ಬಂದಿತು. ಆಗ ಅಮೆರಿಕನ್ ಸೈನಿಕರು ಫ್ರೆಂಚ್ ಫ್ರೈ ಬಗ್ಗೆ ಬಗ್ಗೆ ತಿಳಿದುಕೊಂಡರು ಮತ್ತು ಅವರು ಅದನ್ನು ತುಂಬಾ ಇಷ್ಟಪಟ್ಟರು. ಅವರು ಇದನ್ನು ಮೊದಲು ಕೆಚಪ್, ಮೇಯನೀಸ್ ಮತ್ತು ವಿನೆಗರ್ ಜೊತೆಗೆ ತಿನ್ನಲು ಪ್ರಾರಂಭಿಸಿದರು. ನಂತರ ಅವರು ಅದಕ್ಕೆ ಫ್ರೆಂಚ್ ಫ್ರೈಸ್ ಎಂದು ನಾಮಕರಣ ಮಾಡಿದ್ರು.
ಹಣ್ಣಿಗೆ ಉಪ್ಪು, ಚಾಟ್ ಮಸಾಲ ಸಿಂಪಡಿಸಿ ತಿನ್ನೋ ಅಭ್ಯಾಸ ಒಳ್ಳೇದಾ ?
ಫ್ರೆಂಚ್ ಫ್ರೈಸ್ ಮೊದಲು ಯಾರು ತಯಾರಿಸಿದ್ದು ? : ಈ ಖಾದ್ಯವನ್ನು ಮೊದಲು ಥಾಮಸ್ ಜೆಫರ್ಸನ್ ಎಂಬ ವ್ಯಕ್ತಿಯಿಂದ ತಯಾರಿಸಲಾಯಿತು ಎಂದು ಇತಿಹಾಸಕಾರರು ನಂಬುತ್ತಾರೆ. ಅದರ ನಂತರ ಕ್ರಮೇಣ ಇದು ಯುರೋಪಿನಾದ್ಯಂತ ಪ್ರಸಿದ್ಧವಾಯಿತು. ನಂತರ ಏಷ್ಯಾದ ದೇಶಗಳು, ಆಫ್ರಿಕನ್ ದೇಶಗಳು ಮತ್ತು ಗಲ್ಫ್ ದೇಶಗಳಲ್ಲಿ ಪ್ರಸಿದ್ಧವಾಯಿತು. ಯುರೋಪಿನಲ್ಲಿ ಇದನ್ನು ಅನೇಕ ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತದೆ. ಉದಾಹರಣೆಗೆ ಸ್ಕಿನ್ನಿ ಫ್ರೆಂಚ್ ಫ್ರೈಸ್, ರೌಂಡ್ ಫ್ರೆಂಚ್ ಫ್ರೈಸ್, ಕ್ಲಾಸಿಕ್ ಫ್ರೆಂಚ್ ಫ್ರೈಸ್ ಇತ್ಯಾದಿ. ಬೆಲ್ಜಿಯಂನಲ್ಲಿ ಫ್ರೆಂಚ್ ಫ್ರೈ ಮ್ಯೂಸಿಯಂ ಕೂಡ ಇದೆ.
ಮಳೆಗಾಲದಲ್ಲಿ ಬೆಚ್ಚಗಿರಬೇಕು ಅಂದ್ರೆ ಇಂಥದ್ದನ್ನೆಲ್ಲಾ ತಿನ್ಬೇಕು
ನೀವೂ ಫ್ರೆಂಚ್ ಫ್ರೈಸ್ ಪ್ರೇಮಿಗಳಾಗಿದ್ದರೆ ಇಂದು ಮನೆಯಲ್ಲಿ ಫ್ರೆಂಚ್ ಫ್ರೈಸ್ ತಯಾರಿಸಿ ರುಚಿ ಸವಿಯಿರಿ.