ಮಳೆ, ಚಳಿಗೆ ಮುದ ನೀಡತ್ತೆ ಈ ಸೂಪರ್‌ ಸೂಪ್‌: ಫಟಾಫಟ್‌ ಅಂತ ಮಾಡಬಹುದು

By Suvarna News  |  First Published Jul 13, 2022, 5:10 PM IST

ಮಳೆಗಾಲದಲ್ಲಿ ಜಿಟಿಜಿಟಿ ಮಳೆಯ ಜತೆಗೆ ಮುದ ನೀಡುವ ಚಳಿಯೂ ಮಳೆಗಾಲದಲ್ಲಿ ಹೊರಗಿನ ತಿಂಡಿ ಪದಾರ್ಥಗಳಿಗಿಂತ ಮನೆಯಲ್ಲೇ ಮಾಡಿ ಸೇವಿಸುವುದು ಇನ್ನೂ ಒಳ್ಳೆಯದು. ಬೆಚ್ಚಗೆ ಮನೆಯಲ್ಲಿ ಕೂತು ಬಿಸಿಬಿಸಿ ಪದಾರ್ಥಗಳನ್ನು ಮಾಡಿ ತಿನ್ನುವುದು ಇನ್ನೂ ಆನಂದ ತರುತ್ತದೆ. ಮಳೆ, ಚಳಿಗೆ ಆರೋಗ್ಯಕ್ಕೂ ಒಳ್ಳೆಯದಾದ ಸೂಪ್‌ ದೇಹವನ್ನು ಹೀಲ್ಮಾಡುವುದರ ಜೊತೆಗೆ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತವೆ. ಈ ಬಗ್ಗೆ ಇಲ್ಲಿದೆ ಮಾಹಿತಿ.


ಮಳೆಗಾಲದಲ್ಲಿ ಜಿಟಿಜಿಟಿ ಮಳೆಯ ಜತೆಗೆ ಮುದ ನೀಡುವ ಚಳಿಯೂ ಹೆಚ್ಚು. ಬೆಚ್ಚಗೆ ಮನೆಯಲ್ಲಿ ಕೂತು ಬಿಸಿಬಿಸಿ ಪದಾರ್ಥಗಳನ್ನು ಮಾಡಿ ತಿನ್ನುವುದು ಇನ್ನೂ ಆನಂದ ತರುತ್ತದೆ. ಮಳೆಗಾಲದಲ್ಲಿ ಹೊರಗಿನ ತಿಂಡಿ ಪದಾರ್ಥಗಳಿಗಿಂತ ಮನೆಯಲ್ಲೇ ಮಾಡಿ ಸೇವಿಸುವುದು ಇನ್ನೂ ಒಳ್ಳೆಯದು. ಮಳೆ, ಚಳಿಗೆ ಆರೋಗ್ಯಕ್ಕೂ ಒಳ್ಳೆಯದಾದ ಸೂಪ್‌ಗಳು ಇಂದಿನ ಸ್ಪೆಷನ್. ಪಕೋಡ, ಬಜ್ಜಿಗಳಿಗಿಂತ ಸೂಪ್ ಮಾಡಿ ಸೇವಿಸುವುದು ಉತ್ತಮ. ಇವು ದೇಹವನ್ನು ಹೀಲ್ ಮಾಡುವುದರ ಜೊತೆಗೆ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತವೆ. ಮಳೆಗಾಲದಲ್ಲಿ ಮನೆಯಲ್ಲೇ ಮಾಡಬಹುದಾದ ಆರೋಗ್ಯಕಾರಿ ಸೂಪ್ ರೆಸಿಪಿ ಇಲ್ಲಿದೆ.

ಕುಂಬಳಕಾಯಿ ಸೂಪ್
ಕುಂಬಳಕಾಯಿಯನ್ನು ಪೌಷ್ಟಿಕ ಆಹಾರವೆಂದು ಪರಿಗಣಿಸಲಾಗುತ್ತದೆ. ಇದು ಹೃದಯ, ಕಣ್ಣಿನ ಆರೋಗ್ಯ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ದೇಹದ ಒಟ್ಟಾರೆ ಆರೋಗ್ಯವನ್ನು ಕಾಯ್ದುಕೊಳ್ಳುತ್ತದೆ. ಹೆಚ್ಚಿನ ಪೋಷಕಾಂಶಗಳನ್ನು ಹೊಂದಿರುವ ಕುಂಬಳಕಾಯಿಯು ಕಡಿಮೆ ಕ್ಯಾಲೋರಿ ಆಹಾರವಾಗಿದೆ. ಇದರಲ್ಲಿ ವಿಟಮಿನ್ ಎ, ಸಿ, ಇ ಕಬ್ಬಿಣಾಂಶ, ಕ್ಯಾಲ್ಶಿಯಂ ಮತ್ತು ಮಿನರಲ್ಸ್ ಇದ್ದು, ಮಳೆಗಾಲದಲ್ಲಿ ಉತ್ತಮ ಆಯ್ಕೆಯಾಗಿದೆ.  

Latest Videos

undefined

ಇದನ್ನೂ ಓದಿ: ಟೊಮೆಟೊ ಸಿಪ್ಪೆ ಎಸೆಯಬೇಡಿ… ಹೀಗೂ ಬಳಸಿ ನೋಡಿ

ಮಸೂರ ಸೂಪ್
ಮಸೂರ(Masur) ಒಂದು ಸೂಪರ್ ಆಹಾರವಾಗಿದ್ದು ಹೆಚ್ಚಿನ ಫೈಬರ್(Fiber) ಅನ್ನು ಒದಗಿಸುತ್ತದೆ. ಅಲ್ಲದೆ ಕರುಳಿನ ಚಲನೆಯನ್ನು ಬೆಂಬಲಿಸುತ್ತದೆ. ಇದರಲ್ಲಿ ಪೌಷ್ಟಿಕಾಂಶ ಹೆಚ್ಚಿದ್ದು, ರುಚಿಕರ ಆಹಾರ ಪದಾರ್ಥವಾಗಿದೆ. ಇದನ್ನು ಸೂಪ್ ಮಾಡಿ ಕುಡಿದರೆ ಬೆಚ್ಚಗಿನ ಅನುಭವ ನೀಡುತ್ತದೆ.

ಬ್ರೊಕೋಲಿ ಮಶ್ರೂಮ್ ಸೂಪ್
ಮಳೆಗಾಲದಲ್ಲಿ ಒಂದು ಬೌಲ್ ಬ್ರೊಕೋಲಿ ಮಶ್ರೂಮ್ ಸೂಪ್ (Broccoli Mushroom Soup) ಕುಡಿದರೆ ದೇಹಕ್ಕೆ ಬಲ ನೀಡುವುದರ ಜೊತೆಗೆ ರೋಗದಿಂದ ರಕ್ಷಿಸುತ್ತದೆ. ಉತ್ತಮ ಪ್ರಮಾಣದ ಪ್ರೊಟೀನ್‌ಗಳನ್ನು ನೀಡುವುದರ ಜೊತೆಗೆ ದೇಹವನ್ನು ನಿರ್ಜಲೀಕರಣವಾಗದಂತೆ ನೋಡಿಕೊಳ್ಳುತ್ತದೆ. ಬ್ರೊಕೋಲಿಯಲ್ಲಿ ಫೈಬರ್ ಹಾಗೂ ಪ್ರೊಟೀನ್ ಪ್ರಮಾಣ ಹೆಚ್ಚಿದ್ದು, ಜೊತೆಗೆ ಕಬ್ಬಿಣಾಂಶ, ಪೊಟ್ಯಾಶಿಯಂ, ಕ್ಯಾಲ್ಶಿಯಂ, ಸೆಲೆನಿಯಮ್, ಮೆಗ್ನೀಶಿಯಂ ಹೇರಳವಾಗಿದೆ. ಇದರಲ್ಲಿ Vitamin A,C,E,K ಮತ್ತು Folic Acid ಸಹ ಉತ್ತಮವಾಗಿದೆ. 

ಇದನ್ನೂ ಓದಿ: Food Trend: ಐಸ್‌ಕ್ರೀಂ ಸೂಪ್‌ ನೂಡಲ್ಸ್‌ ಟೇಸ್ಟ್ ಮಾಡಿದ್ದೀರಾ ?

ಟೊಮೆಟೋ ಸೂಪ್
ದೇಹದ ಒಟ್ಟಾರೆ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿರುವ ಟೊಮೆಟೊ ಸೂಪ್ ಸಾಕಷ್ಟು ಪೋಷಕಾಂಶಗಳಿಂದ ತುಂಬಿದೆ. ಇದು ರೋಗನಿರಧಕ ಶಕ್ತಿಯನ್ನು ಹೆಚ್ಚಿಸುವುದು, ತೂಕ ಕಡಿಮೆ (Weight Loss) ಮಾಡಲು ಸಹಕಾರಿಯಾಗಿದೆ. ಇದರಲ್ಲಿ ವಿಟಮಿನ್, ಬಿ, ಇ, ಕೆ, ಪೊಟ್ಯಾಶಿಯಂ, ಮತ್ತು ಕ್ಯಾಲ್ಶಿಯಂ ಇದ್ದು ಮೂಳೆಗಳನ್ನು ಬಲವಾಗಿ ಮತ್ತು ಆರೋಗ್ಯಕರವಾಗಿರುವಂತೆ ನೋಡಿಕೊಳ್ಳುತ್ತದೆ. ಅಲ್ಲದೆ ಇದು ಹೃದಯ ಬಡಿತ ಮತ್ತು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.

ಹೆಸರುಬೇಳೆ ಕಿವಿ ಸೂಪ್
ನಿಮಗೆ ಕಿವಿ(Kiwi) ಹಣ್ಣಿನ ಸಿಹಿ ಇಷ್ಟವಾಗುವುದಾದರೆ ಈ ಸೂಪ್ ಸಹ ನಿಮಗೆ ಇಷ್ಟವಾಗುತ್ತದೆ. ಹೆಸರು ಬೇಳೆ(Moong Dal), ಕಿವಿ ಹಣ್ಣು(Kiwi Fruit) ಹಾಗೂ ತೆಂಗಿನಕಾಯಿಯ ಕ್ರೀಮ್‌ನಿಂದ(Coconut Cream) ಸೂಪ್‌ನ ರುಚಿ ಇನ್ನಷ್ಟು ಹೆಚ್ಚುತ್ತದೆ. ಕಿವಿ ಹಣ್ಣು ನಿರ್ಜಲೀಕರಣ(Dehydrate) ಆಗದಂತೆ ಮತ್ತು ರೋಗನಿರೋಧಕ ಶಕ್ತಿಯನ್ನು(Immunity Power) ಹೆಚ್ಚಿಸುವ ವಿಟಮಿನ್ ಸಿ(Vitamin C) ಪೋಷಕಾಂಶಗಳ ಉತ್ತಮ ಮೂಲವಾಗಿದೆ. ಇದರಲ್ಲಿ ಆಂಟಿಆಕ್ಸಿಡೆAಟ್(Antioxidant) ಹೇರಳವಾಗಿದ್ದು ದೇಹವನ್ನು ರೋಗ(Disease) ಮತ್ತು ಉರಿಯೂತದಿಂದ(Inflammation) ರಕ್ಷಿಸುತ್ತದೆ. 

ವೆಜಿಟೇಬಲ್ ಸೂಪ್
ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕೆಂದು ಪ್ರಯತ್ನಿಸುತ್ತಿರುವವರಿಗೆ ಈ ವೆಜಿಟೇಬಲ್ ಸೂಪ್(Vegetable Soup) ಉತ್ತಮ. ಏಕೆಂದರೆ ಇದರಲ್ಲಿ ತಾಜಾ ತರಕಾರಿಗಳಿದ್ದು. ಆರೋಗ್ಯ ವೃದ್ಧಿಗೆ ಸಹಕಾರಿಯಾಗಿದೆ. ಇದರಲ್ಲಿ ಕ್ಯಾರೆಟ್(Carrot), ಫ್ರೆಂಚ್ ಬೀನ್ಸ್(French Beans), ಟೊಮೆಟೊ(Tomato), ಬಟಾಣಿ(Peace), ಕ್ಯಾಪ್ಸಿಕಮ್(Capsicum) ಇದೆ. ಟೊಮೆಟೊದಲ್ಲಿ ವಿಟಮಿನ್ ಸಿ, ಕೆ(Vitamin C,K), ಪೊಟ್ಯಶಿಯಂ(Potassium), ಫೊಲೇಟ್ ಉತ್ತಮವಾಗಿದ್ದು ಡಯಾಬಿಟಿಸ್(Diabetes) ರೋಗಿಗಳಿಗೂ ಒಳ್ಳೆಯದು.

ಇದನ್ನೂ ಓದಿ: Best Winter Soups: ತೂಕ ಇಳಿಸಿಕೊಳ್ಳಬಹುದು ಟ್ರೈ ಮಾಡಿ

ಕ್ಯಾರೆಟ್ ಜಿಂಜರ್ ಸೂಪ್
ಶುಂಠಿ(Ginger) ಮತ್ತು ಕ್ಯಾರೆಟ್‌ನ(Carrot) ಸುಂದರವಾದ ಈ ಸೂಪ್ ತರಕಾರಿ ಸ್ಟಾಕ್, ಕ್ಯಾರೆಟ್, ಶುಂಠಿ ಮತ್ತು ಥೈಮ್‌ನ ಪೌಷ್ಠಿಕಾಂಶದ ಪ್ರಯೋಜನಗಳನ್ನು ಸಂಯೋಜಿಸುತ್ತದೆ. ಶುಂಠಿಯು ಜೀರ್ಣಕ್ರಿತೆಗೆ(Digestion) ಸಸಹಾಯ ಮಾಡುವುದರ ಜೊತೆಗೆ ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡುತ್ತದೆ. ಕ್ಯಾರೆಟ್‌ನಲ್ಲಿ ಫೈಬರ್(Fiber) ಹೆಚ್ಚಿನ ಪ್ರಮಾಣದಲ್ಲಿದ್ದು, ಜೀರ್ಣಕಾರಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದು ವಿಟಮಿನ್(Vitamin), ಖನಿಜಗಳು(Mineral) ಮತ್ತು ಆಂಟಿಆಕ್ಸಿಡೆAಟ್‌ಗಳಾದ(Antioxidant) ಪೊಟ್ಯಾಸಿಯಮ್, ಫಾಸ್ಫರಸ್(Phosphorus) ಮುಂತಾದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಅಂಶಗಳನ್ನು ಒಳಗೊಂಡಿದೆ.
 

click me!