Season ಇದು, ಹಸಿದ ಹೊಟ್ಟೆಗೆ ಹಲಸು ತಿಂದು ಸೊಂಪಾಗಿ ನಿದ್ರಿಸಿದರೆ?

Published : May 31, 2022, 10:08 AM ISTUpdated : May 31, 2022, 10:09 AM IST
Season ಇದು, ಹಸಿದ ಹೊಟ್ಟೆಗೆ ಹಲಸು ತಿಂದು ಸೊಂಪಾಗಿ ನಿದ್ರಿಸಿದರೆ?

ಸಾರಾಂಶ

ಮಲೆನಾಡಿನಲ್ಲಂತೂ ಹಲಸಿನ ಸಂಭ್ರಮ. ಬೆಳಗ್ಗೆ ತಿಂಡಿ, ಮಧ್ಯಾಹ್ನದ ಅಡುಗೆ, ಸಂಜೆ ಸ್ನ್ಯಾಕ್ಸ್ ಎಲ್ಲವೂ ಹಲಸಿನ ಕಾಯಿ, ಹಣ್ಣಿನಿಂದಾನೇ ಮಾಡಿದ ಆಹಾರ ಪದಾರ್ಥಗಳ ಸಮಾರಾಧನೆ. ಹಸಿದ ಹೊಟ್ಟೆಗೆ ಹಲಸು, ಉಂಡ ಹೊಟ್ಟೆಗೆ ಮಾವು ಅನ್ನುವಂತೆ, ಹಸಿವನ್ನೂ ನೀಗಿಸುವ ಹಲಸು ತಿಂದರೆ ಸಿಗೋ ಮಜಾನೇ ಬೇರೆ. ಹಳ್ಳಿಯಲ್ಲಂತೂ ಕಂಡ್ ಕಂಡಲ್ಲಿ ಸಿಗುವ ಈ ಹಣ್ಣನ್ನು ಈ ಋತುವಿನಲ್ಲಿ ಎಷ್ಟಾಯಿತೋ ಅಷ್ಟು ಬಳಸೋದು ಬೆಸ್ಟ್. ಅಷ್ಟಕ್ಕೂ ಇದರಿಂದೇನು ಆರೋಗ್ಯಕ್ಕೆ ಪ್ರಯೋಜನ?

ಕಡಬು, ಮೂಳಕ, ಪಾಯಸ, ದೋಸೆ, ಹಲಸಿನ ಕಾಯಿ ಪಲ್ಯ, ಹುಳಿ, ಚಿಪ್ಸ್ (Chips)....ಒಂದಾ, ಎರಡಾ? ಮಲೆನಾಡಿನ ಹಳ್ಳಿ ಮನೆಗೆ ಹೋದರೆ ಈಗ ಬರೀ ಹಲಸಿನ ಹಣ್ಣಿನದ್ದೇ ಮಾತುಕತೆ. ಮನೆಯವರೆಲ್ಲ ಒಟ್ಟಿಗೆ ಕೂತು ತೊಳೆ ಬಿಡಿಸುವ ಮಜಾನೇ ಬೇರೆ. ಕೈಗೆ ಎಣ್ಣೆ ಹಚ್ಕೊಂಡು, ತೊಳೆ ಬಿಡಿಸುತ್ತಾ ಹಂಚಿ ಕೊಳ್ಳುವ ಭಾವನೆಗಳು ಸಂಬಂಧವನ್ನೂ ಗಟ್ಟಿಗೊಳಿಸಬಹುದು. ಸೀಸನ್ (Seaons) ಹೊರತು ಪಡಿಸಿ, ಬೇರೆ ಸಮಯದಲ್ಲಿ ತಿನ್ನಲು ಹಪ್ಪಳ, ಹಣ್ಣ್‌ಚೆಟ್ಟು, ಸಂರಕ್ಷಿಸಿದ ತೊಳೆ...ಒಂದಾ ಎರಡಾ? ಈ ಹಲಸಿನ ಹಣ್ಣಿನ ಸಂಭ್ರಮದ ಬಗ್ಗೆ ಎಷ್ಟು ಬೇಕಾದರೂ ಹೇಳಬಹುದು. ಇಷ್ಟೆಲ್ಲಾ ಸಂಭ್ರಮ ತರೋ, ನೆನಪಿಸಿಕೊಂಡರೆ ತಿನ್ನಬೇಕೆನ್ನುವ ಬಯಕೆ ತರಿಸೋ ಈ ಹಣ್ಣು ನಿಜವಾಗಲೂ ಆರೋಗ್ಯಕ್ಕೆ ಒಳಿತಾ? ಅಷ್ಟಕ್ಕೂ ಯಾವುದಕ್ಕೆ ಒಳ್ಳೆಯದು ಈ ಹಳದಿ ಹಣ್ಣು? 

ಮಧುಮೇಹಕ್ಕೆ (Diabetic) ಬೆಸ್ಟ್
ಶುಗರ್ ಸಮಸ್ಯೆ ಇದೆ ಅಂದ್ರ ಅವರು ಸಿಹಿಯಿಂದ ಮಾರು ದೂರ ಹೋಗುತ್ತಾರೆ. ಆದರೆ, ಈ ಆರೋಗ್ಯ ಸಮಸ್ಯೆ (Health Issue) ಬಳಲುತ್ತಿರುವವರು ಸಿಹಿ ಸಿಹಿಯಾದ ಹಲಸಿನ ಹಣ್ಣನ್ನು ತಿನ್ನಬಹುದು. ಈ ಹಣ್ಣಲ್ಲಿರೋ ಫೈಬರ್‌ (Fibre) ಪ್ರಮಾಣ ದೇಹದಲ್ಲಿ ಗ್ಲೂಕೋಸ್ (Glucose) ಮತ್ತು ಇನ್ಸುಲಿನ್ (Insulin) ಬಿಡುಗಡೆಯನ್ನು ನಿಧಾನಗೊಳಿಸುತ್ತದೆ. ಆ ಮೂಲಕ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಲ್ಲದು. 

ಬೇಸಿಗೆಯ ಬೆಸ್ಟ್ ಸೀಸನಲ್ ಫ್ರೂಟ್ಸ್ ಇವು

ಪ್ರತಿರೋಧಕ (Immunity Power) ಶಕ್ತಿ ಹೆಚ್ಚಳ
ಋತು ಬದಲಾವಣೆಯೊಂದಿಗೆ ಕಾಯಿಲೆಗಳೂ ಕಾಡೋದು ಕಾಮನ್. ಚೈತ್ರ ಮಾಸ ಮುಗಿದು, ಒಂದು ಇಳೆಗೆ ಮಳೆ (Rain) ಬೀಳುತ್ತಿದ್ದಂತೆ ಆರಂಭವಾಗುವ ಹಲಸನ್ನು ತಿನ್ನುವುದರಿಂದ ಆಯಾ ಕಾಲಕ್ಕೆ ಕಾಡೋ ಸೋಂಕು (Infection) ಮತ್ತು ಕಾಯಿಲೆಗಳನ್ನು ದೂರ ಇಡಬಹುದು. ಇದರಲ್ಲಿ ಆಹಾರದ ಫೈಬರ್, ವಿಟಮಿನ್ ಎ, ವಿಟಮಿನ್ ಸಿ ಮತ್ತು ಬಿ ಜೀವಸತ್ವಗಳು, ಪೊಟ್ಯಾಷಿಯಮ್ (Potasium), ಕಬ್ಬಿಣ (iron), ಮ್ಯಾಂಗನೀಸ್, ಮೆಗ್ನೀಷಿಯಮ್, ಸತು ಮತ್ತು ರಂಜಕದಂತಹ ಪೋಷಕಾಂಶಗಳು ಹೇರಳವಾಗಿದೆ. ಇದು ನೈಸರ್ಗಿಕವಾಗಿ ದೇಹದಲ್ಲಿ ರೋಗ ನಿರೋಧಕ ಶಕ್ತಿ (Immunity Power)ಯನ್ನು ಹೆಚ್ಚಿಸುತ್ತದೆ.

ತೂಕ (Weight) ಕಡಿಮೆಯಾಗುತ್ತೆ!
ಹೆಚ್ಚಿನ ಫೈಬರ್ ಅಂಶ, ಕನಿಷ್ಠ ಕ್ಯಾಲೋರಿ (Calorie) ಇರೋ ಈ ಹಣ್ಣು ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತದೆ. ಹಲಸು ತಿಂದ ಹಲವು ಗಂಟೆ ಹೊಟ್ಟೆ ತುಂಬಿದ ಭಾವ ಇರುತ್ತದೆ. ಮತ್ತೇನೋ ತಿನ್ನೋ ಬಯಕೆ ಇರೋಲ್ಲ. ಅಲ್ಲದೇ ತಿಂದಾಗ ಕ್ಲೀಯರ್ ಮೋಷನ್ ಆಗಿ, ಹೊಟ್ಟೆ ಹಗುರ ಅನ್ಸುತ್ತೆ. ದೇಹದಲ್ಲಿ ಮೆಟಾಬಾಲಿಕ್ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಇದರಿಂದ ತೂಕವೂ ಕಡಿಮೆಯಾಗುತ್ತದೆ. 

ಮೂಳೆಗೂ ಬೇಕು 
ಕ್ಯಾಲ್ಸಿಯಂ (Calcium) ಅತ್ಯುತ್ತಮ ಮೂಲಗಳಲ್ಲಿ ಹಲಸೂ ಒಂದು. ಮೂಳೆ (Bone) ಆರೋಗ್ಯವನ್ನು ಇದು ಸುಧಾರಿಸಿ, ಗಟ್ಟಿಗೊಳಿಸುತ್ತದೆ. ಇದರಲ್ಲಿ ವಿಟಮಿನ್ ಸಿ, ಮತ್ತು ಮೆಗ್ನೀಸಿಯಮ್‌ ಸಹ ಸಮೃದ್ಧವಾಗಿದೆ, ಮೂಳೆಗಳನ್ನು ಬಲಪಡಿಸಲು ದೇಹಕ್ಕೆ ಅಗತ್ಯದಷ್ಟು ಕ್ಯಾಲ್ಸಿಯಂ ಹೀರಿಕೊಳ್ಳಲು ನೆರವಾಗುತ್ತದೆ.

ಹಲಸಿಗೂ ದಿನವಿದೆ. ಹಣ್ಣಿನ ಮಹತ್ವ ಹೇಳುತ್ತೆ ಈ ದಿನ

ನಿದ್ರೆಗೆ (Sleep) ಮದ್ದು
ಹಸಿದ ಹೊಟ್ಟೆಗೆ (Hunger) ಹಲಸು ತಿಂದು, ಮಲಗೋ ಮಜಾನೇ ಬೇರೆ. ಅದೂ ಹೊರಗಡೆ ನಿಧಾನಕ್ಕೆ ಮಳೆ ಸುರಿಯುತ್ತಿದ್ದರಂತೂ ಬೆಚ್ಚಗೆ ಮಲಗಿದರೆ ಆಕಾಶವೇ ತಲೆ ಮೇಲೆ ಬಿದ್ದರೂ ಗೊತ್ತಾಗದಷ್ಟು ನಿದ್ರೆ ನಿಮ್ಮನ್ನು ಆವರಿಸಿಕೊಳ್ಳುತ್ತದೆ. ನಿದ್ರಾ ಸಮಸ್ಯೆ ಇದ್ದರೆ ಇದು ಅತ್ಯುತ್ತಮ ಆಹಾರ. ಮೆಗ್ನೀಷಿಯಮ್‌ನಂತಹ ಅಗತ್ಯ ಖನಿಜಗಳು (Minerals) ಇರೋದ್ರಿಂದ ನರಗಳು ವಿಶ್ರಾಂತಿಸಲು ಮತ್ತು ನಿದ್ರೆ (Sleep)ಯನ್ನು ಸುಧಾರಿಸುತ್ತದೆ. ನಿಮ್ಮ ದೈನಂದಿನ ಆಹಾರದಲ್ಲಿ ಹಲಸಿನ ಹಣ್ಣನ್ನು ಸೇರಿಸುವುದು ಅನಿಯಮಿತ ನಿದ್ರೆಯ ಸಮಸ್ಯೆಗೆ ಪರಿಹಾರ ನೀಡಬಲಲ್ಲದು.

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Heart Problemಗೆ ಎಲ್ಲರೂ ಹೇಳೋ ಕಾರಣವಲ್ಲವೇ ಅಲ್ಲ, ಪೌಷ್ಟಿಕ ತಜ್ಞರ ಮಹಾವಂಚನೆ ಬಯಲಿಗೆ
ಆಲೂಗಡ್ಡೆಗೆ ಮೊಳಕೆ ಬಂದರೆ ತಿನ್ನಬಹುದಾ? ತಜ್ಞರ ಎಚ್ಚರಿಕೆ ಏನು, ಯಾವುದು- ಯಾರಿಗೆ ಅಪಾಯ?