ಬಿಸಿಲಿನ ಧಗೆಗೆ ತಂಪಾಗಿರಲು ಜ್ಯೂಸ್(Juice) ಕುಡೀಬೇಕು ಅನಿಸುವುದು ಸಹಜ. ಆರೋಗ್ಯಕ್ಕೆ ಉತ್ತಮವಾದ, ವಿಟಮಿನ್(vitamin) ಇರುವ ಎನರ್ಜಿ ಡ್ರಿಂಕ್ಸ್‌ಗಳ (energy drink) ರೆಸಿಪಿ ಇಲ್ಲಿದೆ. ಮನೆಯಲ್ಲೇ ತಯಾರಿಸಿ ಕುಡೀರಿ.
ಸುಡುವ ಬಿಸಿಲ ಧಗೆಗೆ ಏನಾದರು ತಂಪು ತಂಪಾಗಿರುವುದು ಬೇಕು ಎನ್ನಿಸುವುದು ಸಹಜ. ಹೀಗಿರುವಾಗ ಆರೋಗ್ಯಕ್ಕೆ ಉತ್ತಮವಾದ ಹಾಗೂ ಹಿತವಾದ ಜ್ಯೂಸ್‌ಗಳನ್ನು ಕುಡಿದರೆ ರಿಲಾಕ್ಸ್ ಫೀಲ್(relax feel) ಆಗುತ್ತೆ. ಬೇಸಿಗೆಯಲ್ಲಿ ಕಲ್ಲಂಗಡಿ(watermelon), ಮೂಸಂಬಿ(sweet lemon), ಸಪೋಟ(chicku) ಹೀಗೆ ಹಲವು ಜ್ಯೂಸ್ ಗಳ ಮೊರೆ ಹೋಗುವುದು ಕಾಮನ್. ಅವುಗಳ ಜೊತೆ ಮತ್ತಷ್ಟು ಹಣ್ಣಿನ(fruit) ಜ್ಯೂಸ್‌ಗಳಿವೆ. ಇವುಗಳನ್ನು ಕುಡಿದರೆ ದೇಹಕ್ಕೆ ಎನರ್ಜಿ(energy) ಸಿಕ್ಕಿದಂತಾಗುತ್ತೆ. ಈ ಹಣ್ಣುಗಳಲ್ಲಿ ಪೌಷ್ಠಿಕಾಂಶ, ವಿಟಮಿನ್ ಹಾಗೂ ಇತರ ಆರೋಗ್ಯಕರ ಅಂಶಗಳಿರುತ್ತವೆ. ಇದನ್ನು ಕುಡಿದರೆ ಫುಲ್ ಡೇ ನೀವು ಎನರ್ಜಿಟಿನ್ ಆಗಿರುವುದರಲ್ಲಿ ಡೌಟೇ ಇಲ್ಲ.
ಬೇಸಿಗೆಯಲ್ಲಿ ಕುಡಿಯಬಹುದಾದ ಬೆಸ್ಟ್ ಜ್ಯೂಸ್ ರೆಸಿಪಿ ಇಲ್ಲಿದೆ.
ಮಾವಿನ ಜ್ಯೂಸ್
ಹಣ್ಣುಗಳ ರಾಜ ಮಾವು(mango) ಯಾರಿಗೆ ಇಷ್ಟವಿಲ್ಲ ಹೇಳಿ. ಬೇಸಿಗೆಯಲ್ಲಿ ಸಿಗುವ ಈ ಮಾವು ಎಂಥವರ ಬಾಯಲ್ಲೂ ನೀರು ತರಿಸುತ್ತೆ. ಇದರ ಜ್ಯೂಸ್ ಕುಡಿದರೆ ಆರೋಗ್ಯಕ್ಕೂ ಹಲವು ಪ್ರಯೋಜನವಿದೆ.
ಬೇಕಾದ ಸಾಮಗ್ರಿ:
ಮಾವು, ಕಪ್ಪು ಉಪ್ಪು, ಹುರಿದ ಜೀರಿಗೆ(cumin) ಪುಡಿ, ಸಕ್ಕರೆ, ಐಸ್ ಮತ್ತು ಪುದೀನ.
ಮಾಡುವ ವಿಧಾನ:
ಹುಳಿ ಮಾವನ್ನು ಮೊದಲು ಒಂದು ಪಾತ್ರೆಯಲ್ಲಿ ನೀರಿಟ್ಟು ಬೇಯಿಸಿಕೊಳ್ಳಿ. ಬೆಂದ ನಂತರ ಅದರ ಸಿಪ್ಪೆ ತೆಗೆಯಬೇಕು. ಅದರ ತಿರುಳನ್ನು ತೆಗೆದು ನುಣ್ಣಗೆ ಮಿಕ್ಸರ್‌ನಲ್ಲಿ ರುಬ್ಬಿಕೊಳ್ಳಬೇಕು. ರುಬ್ಬಿದ ಮಿಶ್ರಣವನ್ನು ಒಂದು ಬೌಲ್‌ಗೆ ಟ್ರಾನ್ಸಫರ್ ಮಾಡಿ ಒಲೆ ಮೇಲಿಡಿ. ಅದಕ್ಕೆ ಸಕ್ಕರೆ ಹಾಕಿ ಕರಗುವವರೆಗೂ ಕೈಯಾಡಬೇಕು. ಸಕ್ಕರೆ ಕರಗಿದ ಮೇಲೆ ಹುರಿದು ಪುಡಿಮಾಡಿಕೊಂಡ ಜೀರಿಗೆ, ಕಪ್ಪು ಉಪ್ಪು(black salt) ಹಾಕಿ ಸ್ಟೌ ಆಫ್ ಮಾಡಬೇಕು. ಹುಳಿ ಮಾವಿನ ಪೇಸ್ಟ್ ರೆಡಿಯಾದ ಮೇಲೆ ಒಂದು ಗ್ಲಾಸ್‌ಗೆ ತಣ್ಣನೆ ನೀರು ಹಾಕಿ, ಅದಕ್ಕೆ ನಿಮಗೆ ಬೇಕಾದಷ್ಟು ಪೇಸ್ಟ್ ಹಾಕಿ ಪುದಿನ ಸೊಪ್ಪಿನಿಂದ ಅಲಂಕರಿಸಿದರೆ ಆಮ್ ಪಾನ್ ಜ್ಯೂಸ್ ರೆಡಿ.
Summer Tips : ರೋಗದಿಂದ ದೂರವಿರ್ಬೇಕೆಂದ್ರೆ ಪ್ರತಿ ದಿನ ಮಾವು ತಿನ್ನಿ
ಬೇಲದ ಹಣ್ಣಿನ ಜ್ಯೂಸ್
ಒಂದು ಬಾಲ್ ಶೇಪ್‌ನಲ್ಲಿರುವ ಈ ಹಣ್ಣಿಗೆ ಬೇಲದ ಹಣ್ಣೆಂದು ಕರೆಯುತ್ತದೆ. ಇದರೊಳಗೆ ಸಾಫ್ಟ್ ಟೆಕ್ಸಚರ್‌ನ ಪಲ್ಪ್(soft texture pulp) ಇರುತ್ತೆ ಜೊತೆಗೆ ಬೀಜಗಳು ಇರುತ್ತೆ. ಇಂಗ್ಲಿಷ್‌ನಲ್ಲಿ ವುಡ್ ಆಪಲ್(wood apple) ಎಂದು ಕರೆಯುತ್ತಾರೆ. ಬೇಲದ ಹಣ್ಣಿನಲ್ಲಿ ಔಷಧೀಯ ಗುಣಗಳಿವೆ. ಜೊತೆಗೆ ವಿಟಮಿನ್ A, B, C ಇದ್ದು ಉರಿಯೂತಕ್ಕೆ ರಾಮಬಾಣದಂತೆ ಕೆಲಸ ಮಾಡುತ್ತೆ. ಈ ಹಣ್ಣನ್ನು ಬೇಯಿಸದೆ, ಸಾಮಾನ್ಯವಾಗಿ ಹಾಗೇ ತಿನ್ನುತ್ತಾರೆ.
ಬೇಕಾಗುವ ಸಾಮಗ್ರಿಗಳು
ಬೆಲ್ಲದ ಹಣ್ಣು, ಕಪ್ಪು ಕಾಳುಮೆಣಸಿನ ಪುಡಿ, ಕಪ್ಪು ಉಪ್ಪು, ನೀರು, ಸಕ್ಕರೆ(sugar).
ಮಾಡುವ ವಿಧಾನ
ಮೊದಲು ಬೆಲ್ಲದ ಹಣ್ಣಿನ ಮೇಲ್ಭಾಗದಲ್ಲಿರುವ ಶೆಲ್(shell) ಒಡೆದುಕೊಳ್ಳಬೇಕು. ಅದರೊಳಗಿನ ಸಾಫ್ಟ್ ಟೆಕ್ಸಚರ್ ಹಣ್ಣನ್ನು ಒಂದು ಬೌಲ್‌ಗೆ ಹಾಕಿಕೊಂಡು ಸ್ಮಾö್ಯಶ್(smash) ಮಾಡಬೇಕು. ಚೆನ್ನಾಗಿ ಸ್ಮಾö್ಯಶ್ ಮಾಡಿ ಅದರ ಬೀಜವನ್ನು ಬೇರ್ಪಡಿಸಿಕೊಳ್ಳಿ. ನಂತರ ಪಲ್ಪಗೆ ಸಕ್ಕರೆ, ಚಿಟಿಕೆ ಕಪ್ಪು ಉಪ್ಪು, ಚಿಟಿಕೆ ಕಾಳು ಮೆಣಸಿನ ಪುಡಿ, ನೀರು ಹಾಕಿ ಮಿಕ್ಸ್ ಮಾಡಿ. ಸಕ್ಕರೆ ಚೆನ್ನಾಗಿ ಕರಗಿದ ನಂತರ ಬೇಕಿದ್ದಲ್ಲಿ ಲಿಂಬೆ ರಸ(lemon) ಹಾಕಿಕೊಳ್ಳಬಹುದು. ಬೆಲ್ಲದ ಹಣ್ಣು ಸಿಹಿಯಾಗಿದ್ದಲ್ಲಿ ಸಕ್ಕರೆಯನ್ನು ಬಿಡಬಹುದು.
ಕೋಕಮ್ ಶರಬತ್
ಕೊಂಕಣ್ ಪ್ರಾಂತ್ಯದಲ್ಲಿ ಹೆಚ್ಚಾಗಿ ಕಾಣಸಿಗುವ ಕೋಕಮ್ ಅಥವಾ ಮುರಿನೋಡು ಬೇಸಿಗೆಯಲ್ಲಿ ಹೆಚ್ಚು ಬಳಸುತ್ತಾರೆ. ಇದರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿದೆ. ಮಾತ್ರವಲ್ಲ ಅಜೀರ್ಣ, ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಗುಣಪಡಿಸುತ್ತದೆ.
ಬೇಕಾದ ಸಾಮಗ್ರಿಗಳು
ಕೋಕಮ್, ಸಕ್ಕರೆ, ಹುರಿದು ಪುಡಿ ಮಾಡಿದ ಜೀರಿಗೆ, ಕಪ್ಪು ಉಪ್ಪು.
ಮಾಡುವ ವಿಧಾನ
ಒಂದು ಪಾತ್ರೆಗೆ ನೀರು ಹಾಕಿ ಕೋಕಮ್ ಅನ್ನು ನೆನೆಯಲು ಬಿಡಿ. ಚೆನ್ನಾಗಿ ನೆನೆದ ನಂತರ ಅದೇ ನೀರಿನಲ್ಲಿ ಚೆನ್ನಾಗಿ ಕಿವುಚಿಕೊಳ್ಳಬೇಕು. ಅದನ್ನು ಒಂದು ಪ್ಯಾನ್‌ಗೆ ಶಿಫ್ಟ್ ಮಾಡಿ ಅದಕ್ಕೆ ಸಕ್ಕರೆ, ಜೀರಿಗೆ ಪುಡಿ, ಚಿಟಿಕೆ ಉಪ್ಪು, ಹಾಕಿ ಸಕ್ಕರೆ ಕರಗುವವರೆಗೂ ಬೇಯಿಸಿಕೊಳ್ಳಬೇಕು. ಸಕ್ಕರೆ ಕರಗಿದ ನಂತರ ತಣ್ಣಗಾದ ಮೇಲೆ ನಿಮಗೆ ಬೇಕಾದಷ್ಟು ಪೇಸ್ಟ್‌ನ್ನು ಒಂದು ಗ್ಲಾಸ್‌ಗೆ ಹಾಕಿಕೊಂಡು ಅದಕ್ಕೆ ನೀರು ಹಾಕಿ ಕಲಸಿದರೆ ಶರಬತ್ ರೆಡಿ.
ಬೇಸಿಗೆಯಲ್ಲಿ ತಂಪಾಗಿರಲು ಈ ತರಕಾರಿ ಜ್ಯೂಸ್‌ಗಳನ್ನು ತಪ್ಪದೇ ತಿನ್ನಿ
ಕಲ್ಲಂಗಡಿ(watermelon) ಜ್ಯೂಸ್
ಬೇಸಿಗೆಯಲ್ಲಿ ಅತೀ ಹೆಚ್ಚಾಗಿ ಸಿಗುವ ಕಲ್ಲಂಗಡಿ ಹಣ್ಣಲ್ಲಿ ನೀರಿನಂಶ ಹೆಚ್ಚಾಗಿರುತ್ತೆ. ದೇಹ ಡೀಹೈಡ್ರೇಟ್(dehydrate) ಆಗುವುದನ್ನು ತಪ್ಪಿಸುತ್ತದೆ ಜೊತೆಗೆ ಶಕ್ತಿ ತುಂಬುತ್ತದೆ. ಜೀರ್ಣಕ್ರಿಯೆ (digestion) ಸುಲಭ ಮಾಡುತ್ತಲ್ಲದೆ, ಚರ್ಮಕ್ಕೆ ಹಾಗೂ ಹೃದಯಕ್ಕೆ ಒಳ್ಳೆಯದು. ಸ್ನಾಯುಗಳ(muscles) ಸೆಳೆತವನ್ನು ತಪ್ಪಿಸುತ್ತದೆ.
ಬೇಕಾದ ಸಾಮಗ್ರಿಗಳು
ಕಲ್ಲಂಗಡಿ, ಕಪ್ಪು ಉಪ್ಪು, ಕಪ್ಪು ಕಾಳು ಮೆಣಸಿನ ಪುಡಿ.
ಮಾಡುವ ವಿಧಾನ
ಕಲ್ಲಂಗಡಿ ಹಣ್ಣಿನ ಒಳಗಿರುವ ಕೆಂಪು ಭಾಗವನ್ನು ಸಣ್ಣದಾಗಿ ಹೆಚ್ಚಿಕೊಳ್ಳಿ. ನಂತರ ಅದನ್ನು ಮಿಕ್ಸಿ ಜಾರ್‌ಗೆ ಹಾಕಿ ರುಬ್ಬಿಕೊಳ್ಳಿ. ರುಬ್ಬಿದ ಮಿಶ್ರಣವನ್ನು ಸೋಸಬೇಕು. ಸೋಸಿದ ನಂತರ ಅದಕ್ಕೆ ಚಿಟಿಕೆ ಉಪ್ಪು, ಕಾಳು ಮೆಣಸಿನ ಪುಡಿ, ಬೇಕೆಂದರೆ ಸಕ್ಕರೆ ಹಾಕಿ ಕೈಯ್ಯಾಡಿದರೆ ಜ್ಯೂಸ್ ರೆಡಿ.
ಆಲೂ ಬುಖಾರ ಶರಬತ್
ಆಲೂ ಬುಖಾರ ಎಂದರೆ ಪ್ಲಮ್(plum) ಹಣ್ಣು. ಕೆಂಪು ಇದರ ಬಣ್ಣವಾಗಿದ್ದು, ಬಹಳ ಸಿಹಿಯಾಗಿರುತ್ತೆ. ಇದು ಸುಗಮ ರಕ್ತ ಸಂಚಾರ, ಜೀರ್ಣಕ್ರಿಯೆ, ಹೃದಯಕ್ಕೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಬೆಟ ಕೆರೊಟಿನ್(beta carotene) ಅಂಶವಿದ್ದು ಕಣ್ಣಿಗೆ ಹೆಚ್ಚು ಸಹಕಾರಿಯಾಗಿದೆ.
ಬೇಕಾದ ಸಾಮಗ್ರಿಗಳು
ಪ್ಲಮ್, ಹುಣಸೆಹಣ್ಣು, ಸಕ್ಕರೆ, ಲಿಂಬೆ ರಸ, ಜೀರಿಗೆ ಪುಡಿ, ಕಪ್ಪು ಉಪ್ಪು.
ಮಾಡುವ ವಿಧಾನ
ಒಂದು ಪ್ಯಾನ್‌ಗೆ ಪ್ಲಮ್ ಹಣ್ಣು, ಹುಣಸೆ ಹಣ್ಣು ನೀರು ಹಾಕಿ ಬೇಯಸಿಕೊಳ್ಳಬೇಕು. ಬೆಂದ ನಂತರ ಪ್ಲಮ್ ಮೇಲಿನ ಸಿಪ್ಪೆ ತೆಗೆದು ಚೆನ್ನಾಗಿ ಕಿವುಚಿಕೊಂಡು ಬೇಯಿಸಬೇಕು. ಇದಕ್ಕೆ ಸಕ್ಕರೆ, ಲಿಂಬೆ ರಸ, ಜೀರಿಗೆ ಪುಡಿ, ಉಪ್ಪು ಹಾಕಿ ಪಲ್ಪ್ ರೆಡಿ ಮಾಡಿಕೊಳ್ಳಬೇಕು. ರೆಡಿಯಾದ ಪಲ್ಪನ್ನು ಒಂದು ಜಾರ್‌ಗೆ ಹಾಕಿಟ್ಟುಕೊಂಡು ಬೇಕಾದಾಗ ಉಪಯೋಗಿಸಿಕೊಳ್ಳಬಹುದು. ಒಂದು ಗ್ಲಾಸ್ ನೀರಿಗೆ ಬೇಕಾದಷ್ಟು ಪ್ಲಮ್ ಪಲ್ಪ್‌ನ್ನು ಹಾಕಿ ಮಿಶ್ರಣ ಮಾಡಿದರೆ ಜ್ಯೂಸ್ ರೆಡಿ.