ಸಮೋಸಾ (Samosa)ವನ್ನು ಸಾಮಾನ್ಯವಾಗಿ ಎಲ್ರೂ ಇಷ್ಟಪಡೋ ಸ್ನ್ಯಾಕ್ಸ್. ಸಂಜೆ ಟೀ ಜೊತೆ ಸವಿಯಲು ಚೆನ್ನಾಗಿರುತ್ತದೆ. ಆದ್ರೆ ಇಲ್ಲೊಂದು ಬೃಹತ್ ಬಾಹುಬಲಿ ಸಮೋಸಾವಿದೆ. ಇದರ ತೂಕ ಬರೋಬ್ಬರಿ 8 ಕೆಜಿ. ಇದನ್ನು 30 ನಿಮಿಷಗಳಲ್ಲಿ ತಿಂದವರು 51,000 ರೂ. ಬಹುಮಾನ (Prize) ಪಡೆಯುತ್ತಾರೆ.
ಸಮೋಸಾ (Samosa) ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಮಸಾಲೆಯುಕ್ತ ಆಲೂಗಡ್ಡೆ (Potato) ಮತ್ತು ಸರಳವಾದ ಹಿಟ್ಟಿನಿಂದ ಮಾಡಿದ ಡೀಪ್ ಫ್ರೈಡ್ ಸ್ನ್ಯಾಕ್ ರೆಸಿಪಿ ಹಲವರ ಫೇವರಿಟ್. ತರಕಾರಿಗಳ ಮಿಶ್ರಣ ಹೊಂದಿರುವ, ಖಾರವಾದ ಈ ಸ್ನ್ಯಾಕ್ (Snacks)ನ್ನು ದಹಿ ಚಟ್ನಿ, ಇಮ್ಲಿ ಚಟ್ನಿ ಮತ್ತು ಹಸಿರು ಚಟ್ನಿಯೊಂದಿಗೆ ಸೇವಿಸಬಹುದಾಗಿದೆ. ಮಧ್ಯಕಾಲೀನ ಕಾಲದಲ್ಲಿ ಅಥವಾ ಅದಕ್ಕಿಂತ ಮುಂಚೆಯೇ ಹುಟ್ಟಿಕೊಂಡ ಈ ಪ್ರಸಿದ್ಧ ತಿನಿಸು ಹಳೆಯ ಮೂಲವನ್ನೂ ಹೊಂದಿದೆ. ಸಮೋಸಾಗಳು ದಕ್ಷಿಣ ಏಷ್ಯಾ, ಮಧ್ಯಪ್ರಾಚ್ಯ, ಮಧ್ಯ ಏಷ್ಯಾ, ಪೂರ್ವ ಆಫ್ರಿಕಾ ಮತ್ತು ಇತರ ಪ್ರದೇಶಗಳ ಸ್ಥಳೀಯ ಪಾಕಪದ್ಧತಿಗಳಲ್ಲಿ ಜನಪ್ರಿಯ ಆಹಾರ. ಹಸಿವಾಗುವಾಗ ತಟ್ಟನೆ ತಿನ್ನುವ ಬೂಸ್ಟರ್ ತಿಂಡಿಗಳಾಗಿವೆ ಸಮೋಸ. ವಲಸೆ ಮತ್ತು ಸಾಂಸ್ಕೃತಿಕ ಪ್ರಸರಣದಿಂದಾಗಿ, ಇಂದು ಸಮೋಸಾಗಳನ್ನು ಪ್ರಪಂಚದ ಇತರ ಭಾಗಗಳಲ್ಲಿ ಹೆಚ್ಚಾಗಿ ತಯಾರಿಸಲಾಗುತ್ತದೆ ಎಂದು ತಿಳಿದುಬಂದಿದೆ.
8 ಕೆಜಿ ತೂಕದ ಬೃಹತ್ ಸಮೋಸಾ
ಸಾಮಾನ್ಯವಾಗಿ ಅಂಗೈಯಲ್ಲಿ ನಿಲ್ಲೋ ಸಮೋಸಾವನ್ನು ಎಲ್ರೂ ನೋಡಿರ್ತೀವೆ. ಆದ್ರೆ ಇದು ಎರಡೂ ಕೈಯಲ್ಲೂ ನಿಲ್ಲದ ಬೃಹತ್ ಬಾಹುಬಲಿ ಸಮೋಸಾ. ಇದು ಬರೋಬ್ಬರಿ 8 ಕೆಜಿ ತೂಕವಿದೆ. ಇದನ್ನು 30 ನಿಮಿಷಗಳಲ್ಲಿ ತಿನ್ನಲು ಸಾಧ್ಯವಾದರೆ 51,000 ರೂ. ನಗದು ಬಹುಮಾನ ಗೆಲ್ಲಬಹುದಾಗಿದೆ.
ಮೋದಿಗಾಗಿ ಸಮೋಸಾ, ಮಾವಿನ ಚಟ್ನಿ ತಯಾರಿಸಿದ ಆಸ್ಟ್ರೇಲಿಯಾ ಪ್ರಧಾನಿ!
30 ನಿಮಿಷಗಳಲ್ಲಿ ತಿನ್ನಲು ಸಾಧ್ಯವಾದರೆ 51,000. ರೂ. ಬಹುಮಾನ
ಉತ್ತರ ಪ್ರದೇಶದ ಮೀರತ್‌ನಲ್ಲಿರುವ ಸಿಹಿತಿಂಡಿ ಅಂಗಡಿಯು ಎಲ್ಲಾ ಸ್ವಯಂ ಘೋಷಿತ ಸ್ಪರ್ಧಾತ್ಮಕ ತಿನ್ನುವವರನ್ನು ಬಾಹುಬಲಿ ಸಮೋಸಾ ಚಾಲೆಂಜ್ ಅನ್ನು ತೆಗೆದುಕೊಳ್ಳಲು ಆಹ್ವಾನಿಸುತ್ತಿದೆ. ಇದು ವೇಗವಾಗಿ ತಿನ್ನುವ ಸ್ಪರ್ಧೆ. ಕಡಿಮೆ ಸಮಯದ ಅಂತರದಲ್ಲಿ 8 ಕೆಜಿ ತೂಕದ ಬೃಹತ್ ಸಮೋಸಾ 0 ನಿಮಿಷಗಳಲ್ಲಿ ತಿನ್ನಲು ಸಾಧ್ಯವಾದರೆ, ತಿಂದವರು 51,000. ರೂ. ನಗದು ಬಹುಮಾನದೊಂದಿಗೆ ಹೊರನಡೆಯುತ್ತಾರೆ. "ನಾನು ಸಮೋಸಾವನ್ನು ಸುದ್ದಿಗೆ ತರಲು ವಿಭಿನ್ನವಾದದ್ದನ್ನು ಮಾಡಲು ಬಯಸಿದೆವು, ಹೀಗಾಗಿ ಸಮೋಸಾ ತಿನ್ನುವ ಸ್ಪರ್ಧೆಯನ್ನು ಏರ್ಪಡಿಸಿದೆವು ಎಂದು ಮೀರತ್‌ನ ಕೌಶಲ್ ಸ್ವೀಟ್ಸ್ ಮಾಲೀಕ ಶುಭಂ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಬಾಹುಬಲಿ ಸಮೋಸಾ ಮಾಡಲು ಮೊದಲು ನಿರ್ಧರಿಸಿದ್ದೇವೆ. ಮೊದಲು ನಾಲ್ಕು ಕೆಜಿ ಸಮೋಸಾ ಮತ್ತು ನಂತರ ಎಂಟು ಕಿಲೋಗ್ರಾಂ ಸಮೋಸಾ ಮಾಡುವ ಮೂಲಕ ಈ ಸ್ಪರ್ಧೆಯನ್ನು ಯೋಜಿಸಲು ಆರಂಭಿಸಿದೆವು ಎಂದು ಸ್ವೀಟ್ಸ್ ಮಾಲೀಕರು ತಿಳಿಸಿದ್ದಾರೆ. 8 ಕೆಜಿಯ ಸಮೋಸಾವನ್ನು ತಯಾರಿಸಲು ಮಾಲೀಕರು 1,100 ಆಲೂಗಡ್ಡೆ (Potato), ಕಾಟೇಜ್ ಚೀಸ್, ಬಟಾಣಿ ಮತ್ತು ಒಣ ಹಣ್ಣುಗಳನ್ನು ಬಳಸಿಕೊಂಡರು. ಇಲ್ಲಿಯವಗೂ ಯಾರೂ ಈಟಿಂಗ್ ಚಾಲೆಂಜ್ (Eating challenge)ನಲ್ಲಿ ಯಶಸ್ವಿಯಾಗಲಿಲ್ಲ. ಅನೇಕ ಜನರು ಪ್ರಯತ್ನಿಸಿದರು. ಆದರೆ ಚಾಲೆಂಜ್ ಅನ್ನು ಪೂರ್ಣಗೊಳಿಸಲು ಎಲ್ಲಿಯೂ ಹೋಗಲಿಲ್ಲ ಮತ್ತು ನಾವು ಈಗ 10 ಕೆಜಿ ಸಮೋಸಾವನ್ನು ತಯಾರಿಸಲು ಯೋಜಿಸಿದ್ದೇವೆ ಎಂದು ಅಂಗಡಿ ಮಾಲೀಕರು ಹೇಳಿದ್ದಾರೆ.
ಕ್ಯಾಂಟೀನ್‌ನಲ್ಲಿ ಸಮೋಸಾ ರೇಟ್ ಜಾಸ್ತಿ ಮಾಡಿದ್ರೂಂತ ಕೆಲ್ಸಾನೇ ಬಿಟ್ಬಿಟ್ಟ..!
ಸದ್ಯ ಈ ಬಾಹುಬಲಿ ಸಮೋಸಾ ಎಲ್ಲರ ಗಮನ ಸೆಳೆಯುತ್ತದೆ. ದೇಶದ ವಿವಿಧ ಭಾಗಗಳಿಂದ ಫುಡ್ ಬ್ಲಾಗರ್ (Food blogger) ಗಳು ಬಾಹುಬಲಿ ಸಮೋಸಾ ನೋಡಲು ಬರುತ್ತಿದ್ದು, ರೀಲ್ ಗಳನ್ನು ತಯಾರಿಸುತ್ತಿದ್ದಾರೆ ಎಂದು ಮಾಲೀಕರು ತಿಳಿಸಿದ್ದಾರೆ.