ಮಾನ್ಸೂನ್‌ನಲ್ಲಿ ನಾನ್‌ವೆಜ್‌ ಪ್ರಿಯರು ಮಟನ್ ವಡೆ ಮಿಸ್ ಮಾಡೋಕಾಗುತ್ತಾ

By Suvarna News  |  First Published Jul 8, 2022, 1:09 PM IST

ಹೊರಗಡೆ ಜಿಟಿ ಜಿಟಿ ಮಳೆ (Rain).ಮನೆಯ ಒಳಗೆ ಚಳಿ ಚಳಿ. ಹೀಗಿದ್ದಾಗ ಬಿಸಿ ಬಿಸಿಯಾಗಿ ಏನಾದ್ರೂ ತಿನ್ನೋಕೆ ಯಾರ್ ತಾನೇ ಇಷ್ಟಪಡೋದಿಲ್ಲ ಹೇಳಿ. ಅದರಲ್ಲೂ ಮಾನ್ಸೂನ್‌ಗೆ (Monsoon) ನಲ್ಲಿ ನಾನ್‌ವೆಜ್‌ ಪ್ರಿಯರು ಈ ಕೆಲವು ಸ್ನ್ಯಾಕ್ಸ್‌ಗಳನ್ನು ಖಂಡಿತಾ ಮಿಸ್ ಮಾಡ್ಕೊಳ್‌ಬಾರ್ದು.


ಮಳೆಗಾಲ (Monsoon) ಶುರುವಾಗೇ ಬಿಡ್ತು. ಚುಮುಚುಮು ಚಳಿಗೆ ಬಿಸಿ ಬಿಸಿಯಾಗಿ ಏನಾದ್ರೂ ತಿನ್ತಾ ಇರ್ಬೇಕು ಅಂತ ಅನಿಸುತ್ತೆ ಅಲ್ವಾ ? ಅದರಲ್ಲೂ ನಾನ್‌ವೆಜ್‌ (Nonveg) ಪ್ರಿಯರಿಗಂತೂ ತಿನ್ನೋಕೆ ವೆರೈಟಿ ವೆರೈಟಿ ಸ್ನ್ಯಾಕ್ಸ್‌ಗಳಿರುತ್ತವೆ. ಮಟನ್ ವಡೆ, ಚಿಕನ್ 65 ಮತ್ತು ಹೆಚ್ಚಿನವುಗಳು, ಈ ಎಲ್ಲಾ ತಿಂಡಿಗಳು ದಕ್ಷಿಣ ಭಾರತದ ಕ್ಲಾಸಿಕ್‌ಗಳಾಗಿವೆ. ಇದು ಎಲ್ಲರಿಗೂ ಇಷ್ಟವಾಗುವುದು ಖಚಿತ. 

ಮಳೆಗಾಲ ಸುಂದರವಾದ ಮುಂಜಾನೆಯಿಂದ ಸಂಜೆಯ ಹಿತವಾದ ಚಹಾದವರೆಗೆ,ಮನಸ್ಸಿಗೆ ಖುಷಿ ನೀಡುವ ಸಮಯ. ಆಕಾಶದಲ್ಲಿ ತೇಲುತ್ತಿರುವ ಮೋಡಗಳು, ಮಳೆಯ ಲಯ, ಹಚ್ಚ ಹಸಿರಿನ ಹೊರಾಂಗಣ ಮತ್ತು ಸುತ್ತಲೂ ತಾಜಾತನ, ಇವೆಲ್ಲವೂ ಒಟ್ಟಾಗಿ ಈ ಋತುವನ್ನು ನಮಗೆಲ್ಲರಿಗೂ ಆನಂದದಾಯಕವಾಗಿಸುತ್ತದೆ. ಈ ವಿಷಯಗಳ ಜೊತೆಗೆ ಬೇಕೆನಿಸುವುದು ಬಿಸಿ ಬಿಸಿ ಚಹಾ (Tea) ಮತ್ತು ಬಾಯಲ್ಲಿ ನೀರೂರಿಸುವ ತಿಂಡಿಗಳು. ದಕ್ಷಿಣ ಭಾರತೀಯ ಪಾಕಪದ್ಧತಿಯು ಪ್ರಸಿದ್ಧ ಆಹಾರದ ಕೊಡುಗೆಗಳಿಗೆ ಹೆಸರುವಾಸಿಯಾಗಿದೆ. ಈ ಮಾನ್ಸೂನ್ ಅನ್ನು ಆನಂದಿಸಲು ನಾವು ನಿಮಗೆ 5 ಗರಿಗರಿಯಾದ ದಕ್ಷಿಣ ಭಾರತೀಯ ನಾನ್‌ವೆಜ್‌ ತಿಂಡಿಗಳನ್ನು ಪರಿಚಯಿಸುತ್ತೇವೆ. ನೀವೂ ಕೂಡಾ ಈ ರೆಸಿಪಿ (Recipe)ಗಳನ್ನು ಮನೆಯಲ್ಲಿ ಟ್ರೈ ಮಾಡ್ಬೋದು. 

Tap to resize

Latest Videos

ಜಿಟಿಜಿಟಿ ಮಳೆಗೆ ಬಿಸಿಬಿಸಿ ಪಕೋಡಾ, ಇಲ್ಲಿದೆ ಸಿಂಪಲ್ ರೆಸಿಪಿ

ಮಟನ್ ವಡೆ
ಎಲ್ಲಾ ಮಟನ್ ಪ್ರಿಯರು ಈ ಪಾಕವಿಧಾನವನ್ನು ಪ್ರಯತ್ನಿಸಲೇಬೇಕು. ಹೊರಗಿನಿಂದ ಗರಿಗರಿಯಾದ ಮತ್ತು ಒಳಗಿನಿಂದ ಬಾಯಿಯಲ್ಲಿ ಕರಗುವ, ಈ ವಡೆ ರೆಸಿಪಿ ಎಲ್ಲರಿಗೂ ಸುಲಭವಾಗಿ ಇಷ್ಟವಾಗುತ್ತದೆ. ಇದನ್ನು ಮಾಡುವ ವಿಧಾನ ಹೀಗಿದೆ.

ಮಾಡುವ ವಿಧಾನ: ಮೊದಲು ದೊಡ್ಡ ಬೌಲ್ ಅನ್ನು ತೆಗೆದುಕೊಳ್ಳಬೇಕು. ಅದರಲ್ಲಿ ಚೆನ್ನಾ ದಾಲ್‌, ಜೀರಿಗೆ ಮತ್ತು ಹಸಿರು ಮೆಣಸಿನಕಾಯಿಗಳನ್ನು ಮಿಶ್ರಣಮಾಡಿ. ಒಂದು ಗ್ರೈಂಡರ್‌ನಲ್ಲಿ, ದಾಲ್ ಅನ್ನು ಸ್ಪಲ್ಪ ರುಬ್ಬಿಕೊಳ್ಳಿ. ಇದಕ್ಕೆ ಕೊಚ್ಚಿದ ಮಾಂಸವನ್ನು ತೆಗೆದುಕೊಂಡು ದಪ್ಪ ಪೇಸ್ಟ್ ಮಾಡಲು ಗ್ರೈಂಡರ್‌ನಲ್ಲಿ ಹಾಕಿ. ಒಂದು ಬೌಲ್ ತೆಗೆದುಕೊಂಡು ಅದರಲ್ಲಿ ಬೇಳೆ ಹಿಟ್ಟು, ಇಂಗು ಮತ್ತು ಗರಂ ಮಸಾಲಾ ಸೇರಿಸಿ. ಪ್ರತ್ಯೇಕ ಬಟ್ಟಲಿನಲ್ಲಿ, ಕರಿಬೇವಿನ ಎಲೆಗಳು, ಕತ್ತರಿಸಿದ ಈರುಳ್ಳಿ, ಕೊತ್ತಂಬರಿ ಸೊಪ್ಪು, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮತ್ತು ಉಪ್ಪು ಮಿಶ್ರಣ ಮಾಡಿ. ಈಗ ಒಂದು ದೊಡ್ಡ ಬಟ್ಟಲಿನಲ್ಲಿ ಎಲ್ಲಾ ಪದಾರ್ಥಗಳನ್ನು ಒಟ್ಟಿಗೆ ಸೇರಿಸಿ. ಮಿಶ್ರಣವನ್ನು ಸಣ್ಣ ಉಂಡೆಗಳಾಗಿ ರೂಪಿಸಿ ಮತ್ತು ಅವುಗಳನ್ನು ವಡೈ ಆಕಾರವನ್ನು ನೀಡಲು ಅವುಗಳನ್ನು ಚಪ್ಪಟೆಗೊಳಿಸಿ. ಬಾಣಲೆಯಲ್ಲಿ ವಡೈ ಅನ್ನು ಗೋಲ್ಡನ್ ಬ್ರೌನ್ ಬಣ್ಣಕ್ಕೆ ಬರುವವರೆಗೆ ಫ್ರೈ ಮಾಡಿ. ಬಿಸಿಬಿಸಿಯಾದ ಮಟನ್ ವಡೆ ಸವಿಯಲು ಸಿದ್ಧ.

ಚಿಕನ್ 65 
ಚಿಕನ್ 65. ತಂಪಾದ ವಾತಾವರಣದಲ್ಲಿ ಬಿಸಿಬಿಸಿ ಚಿಕನ್ 65. ಮಳೆಗಾಲದಲ್ಲಿ ಇದಕ್ಕಿಂತ ಇನ್ನೇನು ಬೇಕು ಹೇಳಿ. ಈ ಮಸಾಲೆಯುಕ್ತ, ಗರಿಗರಿಯಾದ ಮತ್ತು ರುಚಿಕರವಾದ ತಿಂಡಿ ದಕ್ಷಿಣ ಭಾರತದಲ್ಲಿ ಹುಟ್ಟಿಕೊಂಡಿತು, ಕ್ರಮೇಣ ಪ್ರಪಂಚದಾದ್ಯಂತ ಜನಪ್ರಿಯ ಖಾದ್ಯವಾಯಿತು. ಪುದೀನ ಚಟ್ನಿ ಇದರ ಜೊತೆಗೆ ಅತ್ಯುತ್ತಮ ಕಾಂಬಿನೇಷನ್. ಚಿಕನ್‌ 65 ಮಾಡುವ ವಿಧಾನ ಹೀಗಿದೆ.

ಮಳೆಗಾಲಕ್ಕೆ Best ಅನಿಸುವ ಸೂಪ್ ಪಟ್ಟಿ ಇಲ್ಲಿದೆ ನೋಡಿ

ಮಾಡುವವಿಧಾನ: ಮೆಣಸಿನ ಪುಡಿ, ಅರಿಶಿನ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ನಿಂಬೆ ರಸ ಮತ್ತು ಅಕ್ಕಿ ಹಿಟ್ಟಿನೊಂದಿಗೆ ಮೊಟ್ಟೆಯನ್ನು ಮಿಶ್ರಣ ಮಾಡಿ.  ಇದಕ್ಕೆ ಸಣ್ಣ ಗಾತ್ರೆಯಲ್ಲಿ ಕತ್ತರಿಸಿದ ಕೋಳಿ ಮಾಂಸವನ್ನು ಹಾಕಿಕೊಳ್ಳಿ. ಉಪ್ಪು ಸೇರಿಸಿ ಮಿಕ್ಸ್ ಮಾಡಿ 30 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಬಿಸಿ ಎಣ್ಣೆಯಲ್ಲಿ ಚಿಕನ್ ಫ್ರೈ ಮಾಡಿ. ಹಸಿ ಈರುಳ್ಳಿ ಮತ್ತು ನಿಂಬೆ ತುಂಡುಗಳೊಂದಿಗೆ ಸವಿಯಲು ಚೆನ್ನಾಗಿರುತ್ತದೆ.

ಆಂಧ್ರ-ಸ್ಟೈಲ್ ಚಿಕನ್ ಫ್ರೈ 
ಆಂಧ್ರ ಪ್ರದೇಶವು ಭಾರತದ ಅತ್ಯಂತ ವೈವಿಧ್ಯಮಯ ರಾಜ್ಯಗಳಲ್ಲಿ ಒಂದಾಗಿದೆ. ಟೇಸ್ಟೀ ಆಹಾರಕ್ಕೂ ಇದು ಹೆಸರುವಾಸಿಯಾಗಿದೆ. ಆಂಧ್ರ ಸ್ಟೈಲ್ ಚಿಕನ್ ಫ್ರೈ ರೆಸಿಪಿಯು ಇತರ ಫ್ರೈಡ್ ಚಿಕನ್ ರೆಸಿಪಿಗಳಿಗೆ ಹೋಲಿಸಿದರೆ ವಿಶಿಷ್ಟವಾದ ರುಚಿಯನ್ನು ಹೊಂದಿರುವ ಆಹಾರವಾಗಿದೆ. ಈ ಚಿಕನ್ ರೆಸಿಪಿಯು ಸಂಜೆಯ ಸ್ನ್ಯಾಕ್ಸ್‌ಗಳಿಗೆ ಉತ್ತಮ ಆಯ್ಕೆಯಾಗಿದೆ, ಜೊತೆಗೆ ಹಬೆಯಾಡುವ ಕಪ್ ಫಿಲ್ಟರ್ ಕಾಫಿ ಅಥವಾ ಚಹಾವನ್ನು ಹೊಂದಿರುತ್ತದೆ. ದೀರ್ಘಾವಧಿಯ ಪ್ರಭಾವ ಬೀರಲು ನಿಮ್ಮ ಅತಿಥಿಗಳಿಗೆ ನೀವು ಇದನ್ನು ಬಡಿಸಬಹುದು.

ಮಾಡುವ ವಿಧಾನ: ಆಂಧ್ರ-ಸ್ಟೈಲ್ ಚಿಕನ್ ಫ್ರೈ ಮಾಡಲು ಮೊದಲು ನೀವು ಚಿಕನ್ ಅನ್ನು ಉಪ್ಪು, ಕೆಂಪು ಮೆಣಸಿನ ಪುಡಿ, ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್, ಅರಿಶಿನ ಮತ್ತು ಮೊಸರುಗಳೊಂದಿಗೆ ಮಿಕ್ಸ್ ಮಾಡಿಟ್ಟುಕೊಳ್ಳಬೇಕು. ಒಂದು ಗಂಟೆಯ ವರೆಗೆ ಅದನ್ನು ಹಾಗೆಯೇ ಇರಲು ಬಿಟ್ಟು. ನಂತರ ಸಣ್ಣಗೆ ಹೆಚ್ಚಿದ ಈರುಳ್ಳಿ, ಕೊತ್ತಂಬರಿ ಸೊಪ್ಪನ್ನು ಸೇರಿಸಿ ಎಣ್ಣೆಯಲ್ಲಿ ಡೀಪ್ ಫ್ರೈ ಮಾಡಬೇಕು. ರುಚಿಕರವಾದ ಆಂಧ್ರ-ಸ್ಟೈಲ್ ಚಿಕನ್ ಫ್ರೈ ಸವಿಯಲು ಸಿದ್ಧ.

click me!