ಆರೋಗ್ಯ (Health)ಕ್ಕೆ ಉತ್ತಮವಾದ ಆಹಾರ (Food)ವನ್ನು ತಿನ್ನುವುದು ಎಷ್ಟು ಮುಖ್ಯವೋ, ಸರಿಯಾದ ಸಮಯದಲ್ಲಿ, ಸರಿಯಾದ ರೀತಿಯಲ್ಲಿ ಆಹಾರ ತಿನ್ನುವುದು ಸಹ ಅಷ್ಟೇ ಮುಖ್ಯ. ಹಾಗಿದ್ರೆ ಊಟ ಮಾಡಿದ ಮೇಲೆ ಸ್ನಾನ (Bath) ಮಾಡ್ಬೇಕಾ ಅಥವಾ ಸ್ನಾನ ಮಾಡಿದ ನಂತರ ಊಟ ಮಾಡ್ಬೇಕಾ ? ಆರೋಗ್ಯಕ್ಕೆ ಯಾವ ಅಭ್ಯಾಸ (Habit) ಒಳ್ಳೆಯದು ಅನ್ನೋದನ್ನು ತಿಳ್ಕೊಳ್ಳೋಣ.
ದಿನದ ಮೂರು ಹೊತ್ತು ಸರಿಯಾದ ಪ್ರಮಾಣದಲ್ಲಿ, ಸರಿಯಾದ ಆಹಾರ (Food)ವನ್ನು ತಿನ್ನುವುದು ಮನುಷ್ಯನ ಆರೋಗ್ಯಕ್ಕೆ (Health) ಅತೀ ಅಗತ್ಯ. ಆದ್ರೆ ಇತ್ತೀಚಿಗೆ ಹೆಚ್ಚಿನವರು ಕಾಲೇಜ್, ಆಫೀಸಿಗೆ ಲೇಟಾಯ್ತು ಅನ್ನೋ ಕಾರಣಕ್ಕೆ ಸರಿಯಾದ ಸಮಯವನ್ನು ಅನುಸರಿಸುವುದಿಲ್ಲ. ಬದಲಾದ ಜೀವನ ಶೈಲಿಯಿಂದ ಯಾವ್ಯಾವುದೋ ಸಮಯದಲ್ಲಿ ತಿನ್ನುವ ಅಭ್ಯಾಸ ಇತ್ತೀಚಿಗೆ ಹೆಚ್ಚಾಗಿದೆ. ನಮ್ಮ ಹಿರಿಯರು ಅನುಸರಿಸುತ್ತಿದ್ದ ಯಾವೊಂದು ಕ್ರಮವೂ ಆಹಾರ ಸೇವನೆಯ ಸಂದರ್ಭ ನಾವ್ಯರೂ ಪಾಲಿಸುತ್ತಿಲ್ಲ. ಹಸಿವಾದಾಗ ತಿಂದು ಬಿಡುವುದು ಅಷ್ಟೆ. ಆದ್ರೆ ಇಂಥಾ ಅಭ್ಯಾಸದಿಂದ ಆರೋಗ್ಯದ ಮೇಲಾಗುವ ಅಪಾಯಗಳು ಒಂದೆರಡಲ್ಲ.
ಸಾಮಾನ್ಯವಾಗಿ ಬೆಳಗ್ಗೆ ಮತ್ತು ಸಂಜೆ ಸ್ನಾನ (Bath) ಮಾಡುವ ಅಭ್ಯಾಸ (Habit) ರೂಢಿಯಲ್ಲಿದೆ. ಆದ್ರೆ ಇತ್ತೀಚಿಗೆ ಅದರಲ್ಲೂ ಸರಿಯಾದ ಸಮಯವನ್ನು ಅನುಸರಿಸುವವರು ಕಡಿಮೆ. ಜನರಿಗೆ ಕೆಲಸದ ಒತ್ತಡದಲ್ಲಿ, ಸ್ನಾನ ಮಾಡಲು ಮತ್ತು ತಿನ್ನಲು ನಿರ್ದಿಷ್ಟ ಸಮಯವಿಲ್ಲ. ನಮ್ಮ ಕೆಲಸ ಅಥವಾ ದಿನಚರಿಗೆ ಅನುಗುಣವಾಗಿ ನಾವು ಆಹಾರವನ್ನು ತಿನ್ನುವುದು ಮತ್ತು ಸಮಯ ಸಿಕ್ಕಾಗ ಸ್ನಾನ ಮಾಡುತ್ತಾರೆ. ಆದರೆ ನಮ್ಮ ಆಹಾರ ಮತ್ತು ಸ್ನಾನದ ನಡುವೆ ನೇರ ಸಂಬಂಧವಿದೆ ಎಂದು ನಿಮಗೆ ತಿಳಿದಿದೆಯೇ ?
ಬ್ರೇಕ್‌ಫಾಸ್ಟ್ ಮಿಸ್ ಮಾಡ್ತೀರಾ ? ಮೈಗ್ರೇನ್ ಬರುತ್ತೆ ಹುಷಾರ್!
ಸ್ನಾನ ಮಾಡುವ ಮೊದಲು ತಿನ್ನಬಹುದಾ ?
ನಮ್ಮ ಪೂರ್ವಜರು ಆರೋಗ್ಯಕರ ಮತ್ತು ಪರಿಶುದ್ಧ ಜೀವನವನ್ನು ನಡೆಸಲು ಕಾರಣವಾಗುವ ಎಲ್ಲಾ ಕ್ರಮಗಳನ್ನು ಪಾಲಿಸುತ್ತಿದ್ದರು. ಸರಿಯಾದ ರೀತಿಯಲ್ಲಿ ಆಹಾರವನ್ನು ಸೇವಿಸುತ್ತಿದ್ದರು. ಅದರೆ ಇಂದು ಬಿಡುವಿಲ್ಲದ ಜೀವನವು ಸರಿಯಾದ ಸಮಯದಲ್ಲಿ ಸ್ನಾನದಂತಹ ಸರಳ ದೈನಂದಿನ ಚಟುವಟಿಕೆಗಳನ್ನು ಸಹ ನಿರ್ಲಕ್ಷಿಸುವಂತೆ ಮಾಡುತ್ತದೆ. ಸಮತೋಲಿತ ಆಹಾರವು ಕೆಲಸ ಮಾಡುವುದು ಮಾತ್ರವಲ್ಲದೆ ನಮ್ಮ ದೈನಂದಿನ ಜೀವನದ ಪ್ರತಿಯೊಂದು ಚಟುವಟಿಕೆಯನ್ನು ಸಮತೋಲನಗೊಳಿಸುವುದು ಆರೋಗ್ಯಕರ ಜೀವನವನ್ನು ನಡೆಸಲು ಬಹಳ ಮುಖ್ಯವಾದ ಅಂಶವಾಗಿದೆ. ಇದರ ಬಗ್ಗೆ ವೈದ್ಯಕೀಯ ವಿಜ್ಞಾನ ಮತ್ತು ಆಯುರ್ವೇದ ಏನು ಹೇಳುತ್ತದೆ ಎಂಬುದನ್ನು ನೋಡೋಣ.
ಆಯುರ್ವೇದ ಏನು ಹೇಳುತ್ತದೆ ?
ಆಯುರ್ವೇದದ ಪ್ರಕಾರ, ಪ್ರತಿಯೊಂದು ಚಟುವಟಿಕೆಯು ಒಂದು ನಿರ್ದಿಷ್ಟ ಅವಧಿಯನ್ನು ಹೊಂದಿದೆ ಮತ್ತು ಅದನ್ನು ಮೀರಿ ಮಾಡುವುದರಿಂದ ಮಾನವನ ದೇಹಕ್ಕೆ ಹಾನಿಯಾಗುತ್ತದೆ. ಊಟ ಮಾಡುವ ಮೊದಲು , ಅಥವಾ ಊಟದ ನಂತರ ಸ್ನಾನ ಮಾಡುವುದದರಿಂದ ದೇಹದಲ್ಲಿ ಹಲವು ಬದಲಾವಣೆಗಳಾಗುತ್ತವೆ. ಆದ್ದರಿಂದ ನೀವು ಸ್ನಾನ ಮಾಡುವ, ಆಹಾರ ಸೇವಿಸುವ ಸಂದರ್ಭ ಕೆಲವೊಂದು ವಿಚಾರಗಳನ್ನು ಗಮನಿಸಿಕೊಳ್ಳಬೇಕು.
ಸ್ನಾನಕ್ಕೂ ಮೊದಲು ಊಟ ಮಾಡೋದ್ರಿಂದ ಆರೋಗ್ಯಕ್ಕಾಗುವ ತೊಂದ್ರೆಯೇನು ?
ರೋಗಗಳು ಕಾಡಲ್ಲ: ಊಟ ಮಾಡುವ ಮೊದಲು ನಮ್ಮ ಕೈಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಬೇಕು ಎಂದು ವೈದ್ಯರು ಸೂಚಿಸುತ್ತಾರೆ. ಇದರಿಂದ ಎಲ್ಲಾ ರೀತಿಯ ಬ್ಯಾಕ್ಟಿರೀಯಾಗಳು ಕೈಯಿಂದ ಹೋಗಿ ಕೈ ಸ್ವಚ್ಛವಾಗುತ್ತದೆ. ಈಗ ಊಟ ಮಾಡಿದರೆ ಯಾವುದೇ ರೀತಿಯ ತೊಂದರೆಯಿಲ್ಲ ಎನ್ನುತ್ತಾರೆ. ಅದೇ ರೀತಿ, ನೀವು ಸ್ನಾನ ಮಾಡಿದ ನಂತರ ಆಹಾರವನ್ನು ಸೇವಿಸಿದರೆ, ನಿಮ್ಮ ದೇಹವು ಸಂಪೂರ್ಣವಾಗಿ ಸ್ವಚ್ಛವಾಗುತ್ತದೆ. . ಸ್ನಾನವು ಒಬ್ಬರನ್ನು ತಾಜಾ ಮತ್ತು ಶಕ್ತಿಯುತವಾಗಿ ಕಾಣುವಂತೆ ಮಾಡುತ್ತದೆ. ಇದು ನಿಮಗೆ ಹೆಚ್ಚು ಭೌತಿಕತೆಯನ್ನು ನೀಡುತ್ತದೆ.
ಗ್ಯಾಸ್ ಗೀಸರ್ ಬಳಸೋ ಮುನ್ನ ಎಚ್ಚರ, ಮಾರಣಾಂತಿಕ ಕಾಯಿಲೆನೂ ಬರುತ್ತೆ !
ಜೀರ್ಣಾಂಗ ವ್ಯವಸ್ಥೆ ಉತ್ತಮಗೊಳುತ್ತದೆ:: ಉತ್ತಮ ಜೀರ್ಣಾಂಗ ವ್ಯವಸ್ಥೆಗಾಗಿ, ನೀವು ಸ್ನಾನ ಮಾಡಿದ ನಂತರವೇ ತಿನ್ನಬೇಕು. ಸ್ನಾನಕ್ಕೂ ಮೊದಲು ಆಹಾರ ಸೇವಿಸಿದರೆ ಜೀರ್ಣಾಂಗ ವ್ಯವಸ್ಥೆ ಚೆನ್ನಾಗಿರುವುದಿಲ್ಲ. ಆಹಾರವನ್ನು ಸೇವಿಸಿದ ನಂತರ, ನಿಮ್ಮ ಚಯಾಪಚಯ ಕ್ರಿಯೆಯು ಹೆಚ್ಚಾಗುತ್ತದೆ ಮತ್ತು ನಿಮ್ಮ ಹೊಟ್ಟೆಯ ಕಡೆಗೆ ರಕ್ತದ ಹರಿವು ಹೆಚ್ಚಾಗಬಹುದು. ನೀವು ಊಟ ಮಾಡಿದ ನಂತರ ಸ್ನಾನ ಮಾಡಿದರೆ, ಅದು ಇದ್ದಕ್ಕಿದ್ದಂತೆ ದೇಹದ ತಾಪಮಾನವನ್ನು ಕಡಿಮೆ ಮಾಡುತ್ತದೆ, ಇದರಿಂದಾಗಿ ನಿಮ್ಮ ಜೀರ್ಣಕ್ರಿಯೆ ನಿಧಾನವಾಗುತ್ತದೆ.
ರಿಫ್ರೆಶ್ ಆಗಿರಲು ಸಾಧ್ಯವಾಗುತ್ತದೆ: ಬೆಳಗ್ಗೆ ಎದ್ದು ಸ್ನಾನ ಮಾಡದ ಮಂದಿ ದಿನವಿಡೀ ನೀರಸವಾಗಿರುವುದನ್ನು ನೀವು ನೋಡಿರಬಹುದು. ವಾಸ್ತವವಾಗಿ, ಸ್ನಾನ ಮಾಡುವುದರಿಂದ, ನಿಮ್ಮ ದೇಹದ ಎಲ್ಲಾ ಶಕ್ತಿಗಳು ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಅದೇ ಸ್ನಾನ ಮಾಡದೇ ಇದ್ದಲ್ಲಿ ದೇಹಕ್ಕೆ ಜಡತ್ವ ಆವರಿಸಿಕೊಳ್ಳುತ್ತವದೆ. ಹೀಗಾಗಿ ಯಾವಾಗಲೂ ಮೊದಲು ಸ್ನಾನ ಮಾಡಿ, ನಂತರ ಹೊಟ್ಟೆ ತುಂಬಾ ತಿನ್ನಿ. ಇದರಿಂದ ದಿನವಿಡೀ ಖುಷಿಯಾಗಿರಲು ಸಾಧ್ಯವಾಗುತ್ತದೆ.
ಆಧುನಿಕ ವೈದ್ಯಕೀಯ ವಿಜ್ಞಾನ ಏನು ಹೇಳುತ್ತದೆ ?: ಆಯುರ್ವೇದದ ಪ್ರಕಾರ, ಆಧುನಿಕ ವೈದ್ಯಕೀಯ ವಿಜ್ಞಾನವು ಸ್ನಾನ ಮಾಡುವುದರಿಂದ ದೇಹದ ಉಷ್ಣತೆಯು ಕಡಿಮೆಯಾಗುತ್ತದೆ ಮತ್ತು ರಕ್ತ ಪರಿಚಲನೆಯು ಬೇರೆಡೆಗೆ ತಿರುಗುತ್ತದೆ ಎಂದು ಹೇಳುತ್ತದೆ, ಇದರ ಪರಿಣಾಮವಾಗಿ, ಜೀರ್ಣಕ್ರಿಯೆಗೆ ಸಹಾಯ ಮಾಡುವ ರಕ್ತವು ತಾಪಮಾನವನ್ನು ಕಾಪಾಡಿಕೊಳ್ಳಲು ಚರ್ಮದ ಕಡೆಗೆ ಹರಿಯಲು ಪ್ರಾರಂಭಿಸುತ್ತದೆ ಎನ್ನುತ್ತಾರೆ.