Asianet Suvarna News Asianet Suvarna News

ಅಯನ ಸಂಕ್ರಾಂತಿಗೆ ಇಲ್ಲಿ ನಡೆಯತ್ತೆ ಬೆತ್ತಲೆ ಈಜಾಟ, ಈ ಬಾರಿ 3,000 ಮಂದಿ ಭಾಗಿ!

ಅತ್ಯಂತ ಜನಪ್ರಿಯ ಬೆತ್ತಲೆ ಈಜಾಟ ಸಂಪ್ರದಾಯ. ಪುರುಷರು-ಮಹಿಳೆಯರು ಬೆತ್ತಲಾಗಿ ಈಜಾಟದಲ್ಲಿ ಪಾಲ್ಗೊಳ್ಳುತ್ತಾರೆ. ಈ ಬಾರಿ ಬರೋಬ್ಬರಿ 3,000 ಮಂದಿ ಪಾಲ್ಗೊಳ್ಳುವ ಮೂಲಕ ದಾಖಲೆ ಸೃಷ್ಟಿಯಾಗಿದೆ.
 

Dark Mofo solstice nude swim 2024 more than 3000 member participated at river derwent hobart ckm
Author
First Published Jun 22, 2024, 2:28 PM IST

ಹೋಬಾರ್ಟ್(ಜೂ.22) ಸಂಪೂರ್ಣ ಬೆತ್ತಲು. ಪುರುಷ-ಮಹಿಳೆ ಅನ್ನೋ ಬೇಧವಿಲ್ಲ. ಎಲ್ಲರೂ ಜೊತೆಯಾಗಿ ಈಜಾಟ. ಪ್ರತಿ ವರ್ಷ ಇಲ್ಲಿಗೆ ಆಗಮಿಸಿ ಬೆತ್ತಲಾಗಿ ಈಜುವವರ ಸಂಖ್ಯೆ ಹೆಚ್ಚಾಗಿದೆ. ಈ ಬಾರಿ 3,000ಕ್ಕೂ ಹೆಚ್ಚು ಪುರುಷರು-ಮಹಿಳೆಯರು ಆಗಮಿಸಿ ಈ ಬೆತ್ತಲೆ ಈಜಿನಲ್ಲಿ ಪಾಲ್ಗೊಂಡಿದ್ದಾರೆ. ಈ ವಿಡಿಯೋಗಳು, ಫೋಟೋ ಎಲ್ಲೆಡೆ ವೈರಲ್ ಆಗಿದೆ. ಅಷ್ಟಕ್ಕೂ ಬೆತ್ತಲೆ ಈಜು ಸಂಪ್ರದಾಯ ನಡೆಯುತ್ತಿರುವು ಆಸ್ಟ್ರೇಲಿಯಾದ ಹೊಬಾರ್ಟ್‌ನಲ್ಲಿ. ಇಲ್ಲಿನ ಡರ್ವೆಂಟ್ ನದಿಯಲ್ಲಿ ಈ ಬೆತ್ತಲೆ ಈಜು ಆಯೋಜನೆಗೊಳ್ಳುತ್ತದೆ.

ಚಳಿಗಾಳದ ಸೊಲ್ಸ್‌ಟೈಸ್(ಅಯನ ಸಂಕ್ರಾಂತಿ)‌ನಲ್ಲಿ ಈ ಬೆತ್ತಲೆ ಈಜು ನಡೆಯುತ್ತಿದೆ. ಅಂದರೆ ಈ ಬಾರಿ ಜೂನ್ 21ರಂದು 3,000ಕ್ಕೂ ಹೆಚ್ಚು ಮಂದಿ ಬೆತ್ತಲಾಗಿ ಈಜಿ ಸಂಭ್ರಮಿಸಿದ್ದಾರೆ.ಈ ದಿನ ಪಾಶ್ಚಿಮಾತ್ಯ ದೇಶಗಲ್ಲಿ ಜನರು ಸಮುದ್ರದ ಕಿನಾರೆಯಲ್ಲಿ, ಸಮುದ್ರದಲ್ಲಿ ಈಜಾಡುತ್ತ ದಿನ ಕಳೆಯುತ್ತಾರೆ. ಚಳಿಗಾಲದ ಅಯನ ಸಂಕ್ರಾಂತಿ ದಿನ ಹಗಲು ಕಡಿಮೆ. ರಾತ್ರಿ ಹೆಚ್ಚು. ಇನ್ನು ರಾತ್ರಿ ವೇಳೆ ಕ್ಯಾಂಪ್ ಫೈರ್, ಪಾರ್ಟಿ ಹೀಗೆ ಹೊರಗಡೆ ಇರುತ್ತಾರೆ.

11 ದಿನಗಳ ನ್ಯೂಡ್ ಬೋಟ್ ಪ್ರಯಾಣ ಎಂಜಾಯ್ ಮಾಡಬೇಕಾ? ನಗ್ನರಾದರೆ ಮಾತ್ರ ಅವಕಾಶ!

ಬೆತ್ತಲೆ ಈಜಿನಲ್ಲಿ ಪಾಲ್ಗೊಳ್ಳಲು ಏನೂ ಬೇಕಿಲ್ಲ. ಆದರೆ ಬಿಸಿ ನೀರು ಬೇಕೆ ಬೇಕು ಎಂದು ಬೆಕ್ ವೇಡ್ ಹೇಳಿದ್ದಾರೆ. ಕಾರಣ ಡರ್ವೆಂಟ್ ನದಿ ಸುತ್ತ ಮತ್ತ, ನದಿಯ ತಡ ಎಲ್ಲವೂ ಮಂಜುಗಡ್ಡೆಯಾಗಿರುತ್ತದೆ.  ಕೊರೆವ ಚಳಿಯಲ್ಲಿ ಈಜುವುದು ಸಾಹಸ. ಆದರೆ ಈಜಿ ದಡ ಸೇರಿದರೆ ಚಳಿಯಲ್ಲಿ ನಿಲ್ಲಲು ಸಾಧ್ಯವಿಲ್ಲ. ಈ ವೇಳೆ ಬೆಚ್ಚಗಿನ ನೀರು ಬೇಕೆ ಬೇಕು ಎಂದಿದ್ದಾರೆ.

 

 

2013ರಲ್ಲಿ ಬೆತ್ತಲೆ ಈಜು ಸಂಪ್ರದಾಯ ಆರಂಭಗೊಂಡಿತ್ತು. ಸೋಲ್ಸ್‌ಟೈಸ್ ದಿನ ಜನರು ಹೊರಗಡೆ ಕಳೆಯುತ್ತಾರೆ. ಸಮುದ್ರಕ್ಕೆ ತೆರಳಿ ಈಜಾಡುವುದೇ ಪ್ರಮುಖವಾಗಿದೆ. ಹೀಗಾಗಿ ಈ ಎಲ್ಲಾ ಸಾಧ್ಯತೆಗಳನ್ನು ಉಪಯೋಗಿಸಿಕೊಂಡು ಈ ಬೆತ್ತಲೆ ಸಂಪ್ರದಾಯ ಹುಟ್ಟು ಹಾಕಲಾಗಿತ್ತು. 2013ರಲ್ಲಿ 100 ಮಂದಿ ಈ ಬೆತ್ತಲೇ ಈಜಿನಲ್ಲಿ ಪಾಲ್ಗೊಂಡಿದ್ದರು. ವರ್ಷದಿಂದ ವರ್ಷಕ್ಕೆ ಬೆಳೆಯುತ್ತಾ ಹೋದ ಈ ಸಂಪ್ರದಾಯ ಕಳೆದ ವರ್ಷ 2,000 ಆಸುಪಾಸಿನಲ್ಲಿದ್ದ ಈ ಸಂಖ್ಯೆ ಇದೀಗ 3,000ಕ್ಕೇರಿಕೆಯಾಗಿದೆ.

ಸೋಲ್ಸ್‌ಟೈಸ್ ಅಥವಾ ಅಯನ ಸಂಕ್ರಾಂತಿ. ಪಾಶ್ಚಿಮಾತ್ಯ ದೇಶಗಳಲ್ಲಿ ಸೋಲ್ಸ್‌ಟೈಸ್‌ಗೆ ವಿಶೇಷ ಮಹತ್ತವಿದೆ. ಇದನ್ನು ಬೇಸಿಗೆಯ ಮೊದಲ ದಿನ ಎಂದು ಕರೆಯುತ್ತಾರೆ. ಉತ್ತರ ಗೋಳಾರ್ಧ ಹಾಗೂ ದಕ್ಷಿಣ ಗೋಳಾರ್ಧ ಹೀಗೆ ಎರಡು ಬಾರಿ ಸೋಲ್ಸ್‌ಟೈಸ್ ಘಟಿಸುತ್ತದೆ. ಬೇಸಿಗೆಯ ಅಯನ ಸಂಕ್ರಾಂತಿಯಲ್ಲಿ ಹಲವು ದೀರ್ಘವಾಗಿರುತ್ತದೆ. ಇನ್ನು ಚಳಿಗಾಲದ ಅಯನ ಸಂಕ್ರಾಂತಿಯಲ್ಲಿ ರಾತ್ರಿ ದೀರ್ಘವಾಗಿರುತ್ತದೆ. ಈ ದಿನದಲ್ಲಿ ಪಾಶ್ಚಿಮಾತ್ಯರು ಸೂರ್ಯನ ಕಿರಿಣಗಳಲ್ಲೇ ದಿನ ಕಳೆಯಲು ಇಷ್ಟಪಡುತ್ತಾರೆ. ಸಮುದ್ರಕ್ಕಿಳಿದು ಆಟ, ನೀರಿನಲ್ಲಿ ಈಜಾಟ ಸೇರಿದಂತೆ ಬಯಲು ಪ್ರದೇಶಗಳಲ್ಲೇ ಹೆಚ್ಚಾಗಿ ಕಳೆಯುತ್ತಾರೆ.

 

 

ಬ್ರಿಡ್ಜ್‌ರ್ಟೋನ್ ಸೀಸನ್ 3 ಬೆತ್ತಲೆ ಸೀನ್ ಲೀಕ್, ನಟಿಯ ರೋಮ್ಯಾನ್ಸ್‌ಗೆ ಹೌಹಾರಿದ ಫ್ಯಾನ್ಸ್!

Latest Videos
Follow Us:
Download App:
  • android
  • ios