ಮಕ್ಕಳಿಗೆ ಲಂಚ್‌ ಬಾಕ್ಸ್‌ನಲ್ಲಿ ಮಾಂಸಾಹಾರ ಕಳುಹಿಸಿದಂತೆ ಆದೇಶ ನೀಡಿದ ಶಾಲೆ

By Anusha Kb  |  First Published Aug 10, 2024, 12:05 PM IST

ರಾಷ್ಟ್ರ ರಾಜಧಾನಿ ವ್ಯಾಪ್ತಿಗೆ ಒಳಪಡುವ ನೋಯ್ಡಾದಲ್ಲಿರುವ ಶಾಲೆಯೊಂದು ಮಕ್ಕಳ ಲಂಚ್‌ ಹಾಗೂ ಟಿಫಿನ್ ಬಾಕ್ಸ್‌ಗೆ ಮಾಂಸಹಾರ (non vegetarian food) ಕಳುಹಿಸದಿರುವಂತೆ ಆದೇಶಿಸಿದೆ. ಇದು ಸಾಮಾಜಿಕ ಜಾಲತಾಣದಲ್ಲಿ ಈಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ.  


ನೋಯ್ಡಾ: ರಾಷ್ಟ್ರ ರಾಜಧಾನಿ ವ್ಯಾಪ್ತಿಗೆ ಒಳಪಡುವ ನೋಯ್ಡಾದಲ್ಲಿರುವ ಶಾಲೆಯೊಂದು ಮಕ್ಕಳ ಲಂಚ್‌ ಹಾಗೂ ಟಿಫಿನ್ ಬಾಕ್ಸ್‌ಗೆ ಮಾಂಸಹಾರ (non vegetarian food) ಕಳುಹಿಸದಿರುವಂತೆ ಆದೇಶಿಸಿದೆ. ಇದು ಸಾಮಾಜಿಕ ಜಾಲತಾಣದಲ್ಲಿ ಈಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ.  ನೋಯ್ಡಾದ ಸೆಕ್ಟರ್‌ 132ರಲ್ಲಿ ಬರುವ ಖಾಸಗಿ ಶಾಲೆಯೊಂದು ಮಕ್ಕಳ ಟಿಫಿನ್ ಬಾಕ್ಸ್ ಅಥವಾ ಲಂಚ್‌  ಬಾಕ್ಸ್‌ನಲ್ಲಿ ಮಾಂಸದೂಟ ಕಳುಹಿಸದಂತೆ ಪೋಷಕರಿಗೆ ಮನವಿ ಮಾಡಿ ಸುತ್ತೋಲೆ ಹೊರಡಿಸಿದೆ. ಆದರೆ ಶಾಲೆಯ ಆಡಳಿತ ಮಂಡಳಿ ಪೋಷಕರಿಗೆ ಮಾಡಿದ ಈ ಮನವಿ ಈಗ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ವಿವಾದ ಸೃಷ್ಟಿಸಿದೆ. 

ಶಾಲೆಯ ಪ್ರಾಂಶುಪಾಲರು ಈ ವಿಚಾರಕ್ಕೆ ಸಂಬಂಧಿಸಿದಂತೆ ಹೊರಡಿಸಿದ ಪ್ರಕಟಣೆಯ ಪ್ರಕಾರ, ಇದು ಮನವಿ ಅಷ್ಟೇ ಆದೇಶ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.  ನಾವು ನಮ್ಮ ಶಾಲೆಗೆ ಬರುವ ಮಕ್ಕಳ ಪೋಷಕರಿಗೆ ಮಕ್ಕಳ ಟಿಫಿನ್ ಬಾಕ್ಸ್‌ ಅಥವಾ ಮಧ್ಯಾಹ್ನದ ಊಟಕ್ಕೆ ನಾನ್‌ವೆಜ್ ಊಟ ಅಥವಾ ಮಾಂಸದ ಅಡುಗೆಯೂಟ ಕಳುಹಿಸದಂತೆ ಮನವಿ ಮಾಡಿದ್ದೆವು. ಇದು ನಾವು ಮಾಡಿದ ಮನವಿಯಷ್ಟೇ, ಇದು ಶಿಸ್ತುಬದ್ಧವಾದ ಆದೇಶವಲ್ಲ, ಮಾಂಸದೂಟಕ್ಕೆ ಯಾವುದೇ ನಿಷೇಧವಿಲ್ಲ, ಆದೇಶವಿಲ್ಲ, ಸಲಹೆಯೂ ಇಲ್ಲ, ಇದೊಂದು ಗೌರವಯುತವಾದ ಮನವಿಯಷ್ಟೇ ಎಂದು ಪ್ರಾಂಶುಪಾಲರು ಸ್ಪಷ್ಟಪಡಿಸಿದ್ದಾರೆ. 

Tap to resize

Latest Videos

undefined

ಫ್ರೆಶ್ ಆಹಾರ ತಿನ್ಬೇಕು ನಿಜ ಆದರೆ ಪ್ಲೇಟ್‌ನಲ್ಲಿ ಫುಡ್ ಹೊರಳಾಡುವಷ್ಟು ಫ್ರೆಶ್ ಇದ್ರೆ ಹೇಗೆ?

ಎರಡು ಪ್ರಾಥಮಿಕ ಹಾಗೂ ಪ್ರಮುಖ ಕಾರಣಗಳಿಗಾಗಿ ಈ ಮನವಿ ಮಾಡಲಾಗಿತ್ತು. ಅದರಲ್ಲಿ ಮೊದಲನೇಯದ್ದು ಆರೋಗ್ಯ ಹಾಗೂ ಸುರಕ್ಷತೆ, ಸರಿಯಾಗಿ ಸಂಗ್ರಹಿಸದೇ ಮಾಡಿದ ಮಾಂಸದ ಅಡುಗೆಯಿಂದ ಆರೋಗ್ಯ ಸಮಸ್ಯೆಗಳು ಹೆಚ್ಚು ಎಂಬ ಕಾರಣ ಹಾಗೂ ಬೆಳಗ್ಗೆ ಮಾಡಿದ ಮಾಂಸದೂಟವನ್ನು ಮಧ್ಯಾಹ್ನದ ವೇಳೆ ಸೇವನೆ ಮಾಡುವುದು ಗಂಭೀರ ಆರೋಗ್ಯ ಸಮಸ್ಯೆ ತರಬಹುದು ಎಂಬ ಕಾಳಜಿಗಾಗಿಯಷ್ಟೇ. ನಾವು ನಮ್ಮ ಮಕ್ಕಳ ಆರೋಗ್ಯ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುತ್ತೇವೆ. 

ಎರಡನೇಯದಾಗಿ ಸಸ್ಯಹಾರದ ವಾತಾವರಣ ನಮಗೆ ಮಕ್ಕಳನ್ನು ಚಟುವಟಿಕೆಯಿಂದ ಇರುವಂತೆ ಮಾಡುತ್ತದೆ ಎಂಬ ಕಾರಣಕ್ಕೆ ಹೀಗಾಗಿ ಸಸ್ಯಾಹಾರವನ್ನು ಮಕ್ಕಳಿಗೆ ನೀಡುವುದರಿಂದ ಮಕ್ಕಳು ಆರಾಮದಾಯಕವಾಗಿ ಚುರುಕಾಗಿ ಇರಬಹುದು, ತರಗತಿ ಚಟುವಟಿಕೆಯಲ್ಲಿ ಭಾಗಿಯಾಗಬಹುದು ಎಂಬ ಕಾರಣಕ್ಕೆ ಹಾಗೂ ಜೊತೆಯಲ್ಲಿ ಕುಳಿತು ಆಹಾರ ಸೇವನೆ ಮಾಡುವಾಗ ಮಕ್ಕಳು ಯಾವುದೇ ಭೇದಕ್ಕೆ ಒಳಗಾಗದೇ ಆರಾಮವಾಗಿರಬಹುದು ಎಂಬ ಕಾರಣಕ್ಕೆ ಎಂದು ಶಾಲಾಡಳಿತ ಮಂಡಳಿ ಸ್ಪಷ್ಟಪಡಿಸಿದೆ. ಆದರೆ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಅನೇಕರು ಇದು ಒಳ್ಳೆಯ ಚಿಂತನೆ ಎಂದರೆ ಮತ್ತೆ ಕೆಲವರು ಇದು ಆಹಾರ ಸಂಸ್ಕೃತಿ ಆಹಾರ ವೈವಿಧ್ಯಕ್ಕೆ ವಿರುದ್ಧವಾಗಿದೆ ಎಂದು ದೂರಿದ್ದಾರೆ. 

ಒಳಗೆ ಜೀವಂತ ಹುಳು ತುಂಬಿಸಿ ಮಾಡಿದ ಮೊಮೊಸ್ : ವಾಂತಿ ಬರಿಸುವ ವೀಡಿಯೋ ಸಖತ್ ವೈರಲ್‌

click me!