ದೇಶದಲ್ಲಿ ಗರಿಷ್ಠ ಆರ್ಡರ್‌ ಮಾಡುವ ಫುಡ್‌ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಕುಸಿದ ಮಟನ್‌ ಬಿರಿಯಾನಿ!

By Santosh Naik  |  First Published Aug 3, 2024, 8:06 PM IST


swiggy food delivery ದೇಶದ ಪ್ರಮುಖ ಫುಡ್‌ ಡೆಲಿವರ್‌ ಅಗ್ರಿಗೇಟರ್‌ ಆಗಿರುವ ಸ್ವಿಗ್ಗಿ 2024ರಲ್ಲಿ ಈವರೆಗೂ ದೇಶದಲ್ಲಿ ಗರಿಷ್ಠ ಆರ್ಡರ್‌ ಮಾಡುವ ಫುಡ್‌ಗಳ ಪಟ್ಟಿಯನ್ನು ರಿಲೀಸ್‌ ಮಾಡಿದೆ.


ಬೆಂಗಳೂರು (ಆ.3): ಫುಡ್‌ ಡೆಲಿವರಿ ಅಗ್ರಿಗೇಟರ್‌ ದೈತ್ಯ ಸ್ವಿಗ್ಗಿ ಇತ್ತೀಚೆಗೆ ತನ್ನ ಫ್ಲಾಟ್‌ಫಾರ್ಮ್‌ನಲ್ಲಿ ದೇಶದ ಜನರು ಗರಿಷ್ಠ ಆರ್ಡರ್‌ ಮಾಡುವ ಫುಟ್‌ ಯಾವುದು ಅನ್ನೋದರ ಲಿಸ್ಟ್‌ಅನ್ನು ಬಿಡುಗಡೆ ಮಾಡಿದೆ. , ಇದು ಸಸ್ಯಾಹಾರಿ ಆಹಾರದ ಬಗ್ಗೆ ಕೆಲವು ಆಸಕ್ತಿದಾಯಕ ಪ್ರವೃತ್ತಿಯನ್ನು ಬಹಿರಂಗಪಡಿಸಿದೆ. ಬೆಳಗ್ಗಿನ ತಿಂಡಿಗೆ ಜನರು ಹೆಚ್ಚು ಬುಕ್‌ ಮಾಡುವ ಫುಡ್‌ ಯಾವುದು, ಸಸ್ಯಾಹಾರಿ ಆಹಾರದ ಟ್ರೆಂಡ್‌ ಯಾವುದು ಅನ್ನೋದನ್ನೂ ತಿಳಿಸಿದೆ. 2024ರಲ್ಲಿ ಇಲ್ಲಿಯವರೆಗೂ ಭಾರತೀಯರು ತಮ್ಮ ಆಪ್‌ನಲ್ಲಿ ಏನನ್ನು ಹೆಚ್ಚಾಗಿ ಆರ್ಡರ್‌ ಮಾಡಿದ್ದಾರೆ ಅನ್ನೋದನ್ನು ಸ್ವಿಗ್ಗಿ ಡೇಟಾ ಬಹಿರಂಗ ಮಾಡಿದೆ. ದೇಶದಲ್ಲಿಯೇ ಸಸ್ಯಹಾರಿ ಊಟವನ್ನು ಅತ್ಯಂತ ಹೆಚ್ಚಾಗಿ ಆರ್ಡರ್‌ ಮಾಡುವ ನಗರದ ಪಟ್ಟಿಯಲ್ಲಿ ಬೆಂಗಳೂರು ಅಚ್ಚರಿ ಎನ್ನುವಂತೆ ಅಗ್ರಸ್ಥಾನದಲ್ಲಿದೆ. ಬಿರಿಯಾನಿಗೆ ಫೇಮಸ್‌ ಆಗಿರುವ ಹೈದರಾಬಾದ್‌ ಮೂರನೇ ಸ್ಥಾನದಲ್ಲಿದೆ. ಹೌದು ದೇಶದಲ್ಲಿಯೇ ಗರಿಷ್ಠ ಸಸ್ಯಹಾರಿ ಊಟವನ್ನು ಆರ್ಡರ್‌ ಮಾಡುವ ಪಟ್ಟಿಯಲ್ಲಿ ಬೆಂಗಳೂರು ಅಗ್ರಸ್ಥಾನದಲ್ಲಿದೆ. ಮಸಾಲೆ ದೋಸೆ, ಪನ್ನೀರ್‌ ಬಟರ್‌ ಮಸಾಲಾ, ಮಾರ್ಗರಿಟಾ ಪಿಜಾ ಮತತ್ತು ಪಾವ್‌ ಬಾಜಿ ಹೆಚ್ಚು ಆರ್ಡರ್‌ ಮಾಡುವ ಸಸ್ಯಹಾರಿ ಡಿಶ್‌ ಆಗಿದೆ ಎಂದು ಸ್ವಿಗ್ಗಿ ತಿಳಿಸಿದೆ.

ಮಾಂಸಾಹಾರಿಗಳ ಸ್ವರ್ಗ ಎಂದು ಕರೆಯಲ್ಪಡುವ ಹೈದರಾಬಾದ್, ಸಸ್ಯಾಹಾರಿ ಭಕ್ಷ್ಯಗಳನ್ನು ಆರ್ಡರ್ ಮಾಡುವ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಸ್ವಿಗ್ಗಿ ಗ್ರೀನ್ ಡಾಟ್ ಅವಾರ್ಡ್ಸ್‌ ಘೋಷಣೆಯನ್ನು ಗುರುತಿಸಲು ಬಿಡುಗಡೆಯಾದ ವರದಿಯ ಪ್ರಕಾರ, 2024 ರಲ್ಲಿ ಪ್ಲಾಟ್‌ಫಾರ್ಮ್‌ನಲ್ಲಿ ಮಾಡಲಾದ ಎಲ್ಲಾ ಆಹಾರ ಆರ್ಡರ್‌ಗಳಲ್ಲಿ 60% ಸಸ್ಯಾಹಾರಿ ಆಗಿದೆ.  ದೇಶದಾದ್ಯಂತ ಅತ್ಯುತ್ತಮ ಸಸ್ಯಾಹಾರಿ ರೆಸ್ಟೋರೆಂಟ್‌ಗಳು ಮತ್ತು ಭಕ್ಷ್ಯಗಳನ್ನು ಗುರುತಿಸಲು ತನ್ನ ಚೊಚ್ಚಲ ಗ್ರೀನ್ ಡಾಟ್ ಪ್ರಶಸ್ತಿಗಳನ್ನು ಪ್ರಾರಂಭಿಸುವುದಾಗಿ ಘೋಷಿಸಿತು.

ಸ್ವಿಗ್ಗಿಯಲ್ಲಿ ಗರಿಷ್ಠ ಆರ್ಡರ್‌ ಮಾಡಿದ ಫುಡ್‌:  ಸ್ವಿಗ್ಗಿ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಹೆಚ್ಚು ಆರ್ಡರ್ ಮಾಡಿದ ಟಾಪ್ 10 ಫುಡ್‌ಗಳಲ್ಲಿ ಆರು ಸಸ್ಯಾಹಾರಿ ಆಹಾರ ಎಂದು ತಿಳಿಸಿದೆ. ಮಸಾಲಾ ದೋಸೆ, ಪನೀರ್ ಬಟರ್ ಮಸಾಲಾ, ಪಿಜ್ಜಾ ಮಾರ್ಗರಿಟಾ ಮತ್ತು ಪಾವ್ ಭಾಜಿ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಕಂಪನಿಯ ಆರ್ಡರ್ ವಿಶ್ಲೇಷಣೆಯ ಪ್ರಕಾರ, ಬೆಂಗಳೂರು ಭಾರತದ 'ವೆಜಿಟೇರಿಯನ್‌ ವ್ಯಾಲಿ" ಆಗಿ ಹೊರಹೊಮ್ಮಿದೆ, ಪ್ರತಿ ಮೂರು ಆರ್ಡರ್‌ಗಳಲ್ಲಿ ಒಂದು ವೆಜ್ ಆರ್ಡರ್ ಅನ್ನು ಹೊಂದಿದೆ. ಇನ್ನು ಮುಂಬೈ ನಿವಾಸಿಗಳು ಸಸ್ಯಾಹಾರಿ ಫುಡ್‌ಗಳನ್ನು ಆರ್ಡರ್ ಮಾಡಲು ಒಲವು ತೋರಿದ್ದಾರೆ. ದಾಲ್ ಖಿಚಡಿ, ಪಿಜ್ಜಾ ಮಾರ್ಗರಿಟಾ ಮತ್ತು ಸಾಂಪ್ರದಾಯಿಕ ಪಾವ್ ಭಾಜಿ ಮಂಬೈ ವಾಸಿಗಳಲ್ಲಿ ಫೇವರಿಟ್‌ ಆಗಿದೆ.

Tap to resize

Latest Videos

ಇನ್ಮೇಲೆ ಆನ್‌ಲೈನ್‌ನಲ್ಲಿ ಎಣ್ಣೆನೂ ಆರ್ಡರ್‌ ಮಾಡ್ಬಹುದು: ಕರ್ನಾಟಕ ಸೇರಿ 7 ರಾಜ್ಯಗಳಲ್ಲಿ ಮನೆ ಬಾಗಿಲಿಗೆ ಬರಲಿದೆ ಅಲ್ಕೋಹಾಲ್

ಹೈದರಾಬಾದ್‌ನಲ್ಲಿ ಮಸಾಲಾ ದೋಸೆ ಮತ್ತು ಇಡ್ಲಿಗಳಿಗೆ ಹೆಚ್ಚಿನ ಆರ್ಡರ್‌ಗಳಿ ಬರುತ್ತಿದೆ. Swiggy ಡೇಟಾ ಪ್ರಕಾರ, ಭಾರತೀಯರು ಬ್ರೇಕ್‌ಫಾಸ್ಟ್‌ಗೆ ಸಸ್ಯಹಾರವನ್ನು ತಿನ್ನಲೇ ಹೆಚ್ಚಾಗಿ ಇಷ್ಟಪಡುತ್ತಾರೆ ಎಂದಿದೆ. ಶೇ. 90ರಷ್ಟು ಮಂದಿ ಬೆಳಗ್ಗೆ ಸಸ್ಯಾಹಾರ ತಿಂಡಿಯನ್ನೇ ತಿನ್ನುತ್ತಾರೆ. ಅವರ ಆಯ್ಕೆಗಳಲ್ಲಿ ಮಸಾಲಾ ದೋಸೆ, ವಡಾ, ಇಡ್ಲಿ ಮತ್ತು ಪೊಂಗಲ್ ಸೇರಿವೆ. ಮಸಾಲಾ ದೋಸೆಯು ರಾಷ್ಟ್ರವ್ಯಾಪಿ ಅಚ್ಚುಮೆಚ್ಚಿನದಾಗಿದೆ, ದೇಶಾದ್ಯಂತ ಭಾರತೀಯರು ಬೆಳಗಿನ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ ಮಸಾಲೆ ದೋಸೆಯನ್ನು ಸಮಾನವಾಗಿ ಇಷ್ಟಪಡುತ್ತಾರೆ. ತಿಂಡಿಗಳ ವಿಷಯಕ್ಕೆ ಬಂದರೆ, ಪಿಜ್ಜಾ ಮಾರ್ಗರಿಟಾ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ನಂತರ ಸಮೋಸಾ ಮತ್ತು ಪಾವ್ ಭಾಜಿ ಸ್ಥಾನ ಪಡೆದಿದೆ.

ಅಭಿಮಾನಿ ಸೆಲ್ಫಿ ಕೇಳಿದ್ದಕ್ಕೆ ಸಿಡಿಮಿಡಿಗೊಂಡ ತಾಪ್ಸಿ ಪನ್ನು; ವಿಡಿಯೋ ನೋಡಿ

click me!