ಟಿವಿ, ಪತ್ರಿಕೆಯಲ್ಲಿ ಮಾಂಸಾಹಾರ ಜಾಹೀರಾತು ನಿಷೇಧಿಸಿ, ಹೈಕೋರ್ಟ್‌ಗೆ ಸಲ್ಲಿಕೆಯಾಯ್ತು PIL!

By Suvarna News  |  First Published Sep 25, 2022, 9:39 PM IST

ಮಾಂಸಾಹಾರ ಜಾಹೀರಾತು ಸಸ್ಯಾಹಾರಿಗಳ ಶಾಂತಿಯುತ ಬದುಕುವ ಹಕ್ಕನ್ನು ಕಸಿದುಕೊಳ್ಳುತ್ತಿದೆ. ಇದು ಮಕ್ಕಳ ಮನಸ್ಸನ್ನು ಹಾಳುಮಾಡುತ್ತಿದೆ. ಹೀಗಾಗಿ ಮಾಂಸಾಹಾರ ಕುರಿತ ಜಾಹೀರಾತು ನಿಷೇಧಿಸಲು ಅರ್ಜಿಯಲ್ಲಿ ಕೋರಲಾಗಿದೆ.


ಮುಂಬೈ(ಸೆ.25): ಕೋರ್ಟ್‌ಗೆ ಸಲ್ಲಿಕೆಯಾಗುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಪೈಕಿ ಹಲವು ಅರ್ಜಿಗಳು ದೇಶದ ಗಮನಸೆದಿದೆ. ಹಲವು ಅರ್ಜಿಗಳು ಗಂಭೀರ ಚರ್ಚೆಯಾಗಿದೆ. ಇದೀಗ ವಿಶೇಷ ಬೇಡಿಕೆಯೊಂದಿಗೆ ಬಾಂಬೆ ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಕೆಯಾಗಿದೆ. ಟಿವಿ ಹಾಗೂ ಪತ್ರಿಕೆಗಳಲ್ಲಿ ಮಾಂಸಾಹಾರ ಕುರಿತ ಜಾಹೀರಾತುಗಳನ್ನು ನಿಷೇಧಿಸಿ ಅಥವಾ ನಿರ್ಬಂಧಿಸಿ ಎಂದು ಈ ಅರ್ಜಿಯಲ್ಲಿ ಕೋರಲಾಗಿದೆ. ಮುಂಬೈ ನಿವಾಸಿ ಹಾಗೂ ಜೈನ್ ಚಾರಿಟೇಬಲ್ ಟ್ರಸ್ಟ್ ಸದಸ್ಯರಾಗಿರುವ ಅರ್ಜಿದಾರರು ಜೈನ ಧರ್ಮದವರಾಗಿದ್ದಾರೆ. ಜೈನ ಧರ್ಮ ಮಾಂಸಾಹಾರಕ್ಕೆ ವಿರುದ್ಧವಾಗಿದೆ. ಇಷ್ಟೇ ಅಲ್ಲ ಅಹಿಂಸೆಯನ್ನು ಪ್ರತಿಪಾದಿಸುತ್ತದೆ. ಟಿವಿಯಲ್ಲಿ ಈ ಮಾಂಸಾಹಾರ ಜಾಹೀರಾತು ಪ್ರಸಾರವಾಗುವುದರಿಂದ ಅಹಿಂಸೆಯನ್ನು ಪ್ರತಿಪಾದಿಸುವ ಜೈನ ಧರ್ಮದ ಶಾಂತಿಯುತ ಬದುಕುವ ಹಕ್ಕನ್ನು ಉಲ್ಲಂಘಿಸುತ್ತದೆ. ಮಕ್ಕಳ ಮನಸ್ಸನ್ನು ಹಾಳು ಮಾಡುತ್ತದೆ. ಅವರ ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಹೀಗಾಗಿ ಈ ಜಾಹೀರಾತುಗಳನ್ನು ನಿರ್ಬಂಧಿಸಲು ಅರ್ಜಿದಾರರು ಕೋರಿದ್ದಾರೆ.

ಮಾಹಿತಿ ಮತ್ತು ಪ್ರಸಾರ ಸಚಿವಾಲ , ಆಹಾರ ಮತ್ತು ನಾಗರೀಕರ ಸರಬರಾಜು, ಗ್ರಾಹಕರ ಸಂರಕ್ಷಣಾ ಇಲಾಖೆ, ಭಾರತೀಯ ಜಾಹೀರಾತು ಗುಣಟ್ಟ ಮಂಡಳಿ, ರಾಜ್ಯ ಪ್ರೆಸ್ ಕೌನ್ಸಿಲ್ ಮಂಡಳಿ ಇದಕ್ಕೆ ಪರಿಹಾರ ಸೂಚಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.  ಈ ಅರ್ಜಿಯಲ್ಲಿ ಲೀಶಿಯಸ್, ಫ್ರೆಶ್‌ ಟು ಹೋಮ್ ಫುಡ್ಸ್, ಸೇರಿದಂತೆ ಇತರ ಮಾಂಸಾಹಾರ ಕುರಿತು ಜಾಹೀರಾತು ನೀಡುತ್ತಿರುವ ಕಂಪನಿಗಳನ್ನು ಪ್ರತಿವಾದಿಗಳಾಗಿ ಮಾಡಿದ್ದಾರೆ.

Tap to resize

Latest Videos

ಪುಟಾಣಿ ಮಕ್ಕಳು ತಾವಾಗಿಯೇ ಆಹಾರ ತಿನ್ನುವಂತೆ ಮಾಡೋದು ಹೇಗೆ?

ಸಸ್ಯಾಹಾರದ ಮಾರ್ಗದಲ್ಲಿ ಬದುಕು ನಡೆಸುತ್ತಿರುವ ಜನರಿಗೆ ಈ ಮಾಂಸಾಹಾರ ಜಾಹೀರಾತುಗಳು ತೀವ್ರ ಕಿರುಕುಳ ನೀಡುತ್ತಿದೆ. ಇದು ಸಸ್ಯಾಹಾರಿಗಳ ಖಾಸಿಗಿತನದ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಅರ್ಜಿದಾರರು ಹೇಳಿದ್ದಾರೆ. ಸಂವಿಧಾನದ 51 ಎ(ಜಿ) ನಿಯಮ ಉಲ್ಲಂಘಿಸಿದೆ. ಮಾಂಸಾ ಉತ್ಪನ್ನಗಳ ಜಾಹೀರಾತುಗಳು ಕ್ರೌರ್ಯವನ್ನು ಉತ್ತೇಜಿಸುತ್ತದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ. 

ಈ ರೀತಿಯ ಜಾಹೀರಾತುಗಳು ಸಸ್ಯಾಹಾರಿ ಕುಟುಂಬದ ಮಕ್ಕಳ ಮೇಲೆ ತೀವ್ರ ಪರಿಣಾಮ ಬೀರತ್ತದೆ. ಇಷ್ಟೇ ಅಲ್ಲ ಸಸ್ಯಾಹಾರಿ ಮಕ್ಕಳು ಮಾಂಸಾಹಾರ ಸೇವಿಸುವಂತೆ ಪ್ರಚೋದಿಸುತ್ತದೆ. ಮಾಂಸಾಹಾರ ಆರೋಗ್ಯಕ್ಕೂ ಉತ್ತಮವಲ್ಲ, ಇದು ಪರಿಸರಕ್ಕೂ ಹಾನಿಯಾಗಿದೆ. ಮದ್ಯ ಹಾಗೂ ಸಿಗರೇಟ್ ಜಾಹೀರಾತು ನಿಷೇಧಿಸಿದ ರೀತಿಯಲ್ಲಿ ಮಾಂಸಾಹಾರ ಜಾಹೀರಾತು ನಿಷೇಧಿಸಿ ಎಂದು ಕೋರಲಾಗಿದೆ. 

ಕಿರಿಕಿರಿ ಇಲ್ಲದೆ ಅಡುಗೆ ಮುಗಿಸಬೇಕಾ? ಇಲ್ಲಿವೆ ಸಿಂಪಲ್ ಟಿಪ್ಸ್

ಈ ಅರ್ಜಿಯಲ್ಲಿ ಅರ್ಜಿಾದಾರರು ಮತ್ತೊಂದು ಪ್ರಮುಖ ವಿಚಾರ ಎತ್ತಿದ್ದಾರೆ. ಅರ್ಜಿದಾರರು ಮಾಂಸಾಹಾರಿಗಳು ಮಾಂಸಾಹಾರ ಸೇವನೆಯನ್ನು ವಿರೋಧಿಸುತ್ತಿಲ್ಲ. ಅವರ ಇಚ್ಚೆಗೆ ತಕ್ಕಂತೆ ಆಹಾರ ಸೇವನೆಗೆ ಯಾವುದೇ ಅಡ್ಡಿಯಿಲ್ಲ. ಆದರೆ ಮಾಂಸಾಹಾರದ ಜಾಹೀರಾತು ನಿಷೇಧಿಸಿ ಅನ್ನೋದು ಮಾತ್ರ ಕಳಕಳಿ ವಿನಂತಿ ಎಂದು ಅರ್ಜಿಯಲ್ಲಿ ಹೇಳಿದ್ದಾರೆ.  

click me!