ಕಿರಿಕಿರಿ ಇಲ್ಲದೆ ಅಡುಗೆ ಮುಗಿಸಬೇಕಾ? ಇಲ್ಲಿವೆ ಸಿಂಪಲ್ ಟಿಪ್ಸ್

Published : Sep 25, 2022, 02:50 PM IST
ಕಿರಿಕಿರಿ ಇಲ್ಲದೆ ಅಡುಗೆ ಮುಗಿಸಬೇಕಾ? ಇಲ್ಲಿವೆ ಸಿಂಪಲ್ ಟಿಪ್ಸ್

ಸಾರಾಂಶ

ರುಚಿರುಚಿಯಾದ ಅಡುಗೆ ಮಾಡುವುದು ಒಂದು ಕಲೆ, ಇದು ಯಾರಿಗೂ ಕೂಡ ಅಷ್ಟು ಸಲಭವಾಗಿ ಬರುವುದಿಲ್ಲ. ಅಡುಗೆಗೆ ಬೇಕಾಗುವ ಸಾಮಾಗ್ರಿಗಳನ್ನು ಸಲಭವಾಗಿ ಕತ್ತರಿಸಲು ಜೊತೆಗೆ ಅಷ್ಟೇ ವೇಗವಾಗಿ ಹಾಗೂ ಅಚ್ಚುಕಟ್ಟಾಗಿ ಅಡುಗೆ ಮಾಡಿ ಮುಗಿಸುವ ತಂತ್ರ ಒಂದು ಕಲೆ.

ರುಚಿರುಚಿಯಾದ ಅಡುಗೆ ತಯಾರಿಸಿ ಪ್ರೀತಿ ಪಾತ್ರರಿಗೆ ಬಡಿಸುವುದು ಎಲ್ಲಾ ಹೆಣ್ಣು ಮಕ್ಕಳಿಗೂ ಇಷ್ಟ. ಆದರೆ ಈ ವೇಳೆ ಅನೇಕ ಸವಾಲುಗಳು ಇರುವುದಂತು ಸತ್ಯ. ಅಡುಗೆ ಮನೆ ನೀಟ್ ಆಗಿ ಇಟ್ಟುಕೊಳ್ಳುವುದು ಸೇರಿ ಅಡುಗೆ ತಯಾರಿಸುವಾಗಲೂ ಅನೇಕ ಸಮಸ್ಯೆಗಳು ಕಾಣುತ್ತವೆ. ಅನ್ನ ಮಾಡುವಾಗ ನೀರು ಜಾಸ್ತಿ ಆಗುವುದು, ಬೊಳ್ಳೊಳ್ಳಿ ಸಿಪ್ಪೆ ಸುಲಿಯೋದು, ಹಿಟ್ಟುಗಳಲ್ಲಿ ಕೀಟಗಳು ಸೇರಿ ಅನೇಕ ಕೆಲಸಗಳು ತಲೆ ನೋವು ತರಿಸುತ್ತವೆ.ಅವುಗಳನ್ನು ಸರಳವಾಗಿರಿಸಲು ಇಲ್ಲಿ ಕೆಲ ಟಿಪ್ಸ್ ಕೊಡಲಾಗಿದೆ. ಇದರಿಂದ ಕೆಲಸ ಕೂಡ ಕಡಿಮೆಯಾಗಲಿದ್ದು ಕೆಲ ಗೊಂದಲಗಳು ಪರಿಹಾರಗೊಳ್ಳಲಿವೆ. ಹಾಗೂ ಕೆಲವು ಟ್ರಿಕ್ಸ್’ಗಳಿಂದ ಕೆಲವು ಕೆಲಸಗಳು ಸರಳವಾಗಲಿವೆ. ಇದರಿಂದ ರುಚಿಯಾದ ಅಡುಗೆ ಬೇಗ ಆಗಲಿದೆ. ಜೊತೆಗೆ ಬೇರೆ ಕಿಚನ್’ಗೆ ಸಂಬಂಧಿಸಿದ ಹಲವು ಟಿಪ್ಸ್ ಇಲ್ಲಿವೆ.

ಅಕ್ಕಿಯಲ್ಲಿ ನೀರನ್ನು ಕಡಿಮೆ ಮಾಡಲು ಸಲಹೆಗಳು:

ಕೆಲವೊಮ್ಮೆ ನಾವು ಅನ್ನವನ್ನು ಮಾಡುವಾಗ ಅಕ್ಕಿಗೆ (Rice)  ಪ್ರಮಾಣಕ್ಕಿಂತ  ಹೆಚ್ಚುವರಿ ನೀರನ್ನು ಸೇರಿಸಿರುತ್ತೇವೆ, ಇಂತಹ ಸಂದರ್ಭದಲ್ಲಿ ನೀವು ಕುದಿಯುವ (Boiling Water) ಅನ್ನದಲ್ಲಿ ಬ್ರೆಡ್ ಸ್ಲೈಸ್ ಅನ್ನು ಹಾಕಬಹುದು. ಸ್ವಲ್ಪ ಸಮಯದ ನಂತರ, ಗ್ಯಾಸ್ ಆಫ್ ಮಾಡಿ ನಂತರ ಅನ್ನದಿಂದ ಬ್ರೆಡ್ ತೆಗೆದುಹಾಕಿ. ಬ್ರೆಡ್ ನೀರನ್ನು ಹೀರಿಕೊಳ್ಳುತ್ತದೆ ಮತ್ತು ಅಕ್ಕಿಯಲ್ಲಿನ ನೀರಿನ ಪ್ರಮಾಣವನ್ನು ಕಡಿಮೆ ಮಾಡುತ್ತದೆ.

ಉಪ್ಪಿನೊಂದಿಗೆ ಮಸಾಲೆಗಳನ್ನು ಸಂಗ್ರಹಿಸುವುದು:

ಮಳೆಗಾಲದಲ್ಲಿ ತೇವಾಂಶದ  ವಾತಾವರಣದ ಕಾರಣದಿಂದಾಗಿ ಮಸಾಲೆಗಳು ತೇವವಾಗುತ್ತವೆ ಎಂಬುದನ್ನು ನಾವು ಗಮನಿಸಿರುತ್ತೇವೆ. ಮಸಾಲೆಗಳು ತೇವಾಂಶಕ್ಕೆ ಒಳಗಾಗುವುದನ್ನು ತಪ್ಪಿಸಲು ಮಸಾಲೆಗಳನ್ನು ಜಾರ್’ನಲ್ಲಿ ಸಂಗ್ರಹಿಸುವಾಗ, ಅದಕ್ಕೆ ಸ್ವಲ್ಪ ಉಪ್ಪು (Salt) ಸೇರಿಸಿ.  ಸೋಡಿಯಂ ಕ್ಲೋರೈಡ್ ತೇವಾಂಶವನ್ನು ಹೀರಿಕೊಳ್ಳುತ್ತದೆ. ಮತ್ತು ಇದು ನಿಮ್ಮ ಮಸಾಲೆಗಳನ್ನು  (Masala)ಒದ್ದೆಯಾಗದಂತೆ ತಡೆಯುತ್ತದೆ.

ಬೆಳ್ಳುಳ್ಳಿ ಸಿಪ್ಪೆ ಸುಲಿಯುವುದು:

ಬೆಳ್ಳುಳ್ಳಿ ಸಿಪ್ಪೆ ಸುಲಿಯುವುದು ಬಹಳ ಸಮಯ ತೆಗೆದುಕೊಳ್ಳುವ ಕೆಲಸವಾಗಿದೆ. ಆದರೆ ಸರಳವಾದ ಟ್ರಿಕ್ ಮೂಲಕ ಸುಲಭವಾಗಿ  ಸಿಪ್ಪೆಯನ್ನು ಸುಲಿಯಬಹುದು. ಬೆಳ್ಳುಳ್ಳಿಯನ್ನು ಬಿಸಿ ನೀರಿನಲ್ಲಿ ನೆನೆಸಿಡಿ. ಸ್ವಲ್ಪ ಸಮಯದ ನಂತರ ಬೆಳ್ಳುಳ್ಳಿಯ ಮೇಲ್ಭಾಗವನ್ನು ಕತ್ತರಿಸಿ ಬೆಳ್ಳುಳ್ಳಿ ದಳ ಸುಲಭವಾಗಿ ಹೊರಬರುತ್ತದೆ. ಇನ್ನೊಂದು ಸುಲಭ ವಿಧಾನವೆಂದರೆ ಇಡೀ ಬೆಳ್ಳುಳ್ಳಿಯನ್ನು ಕೌಂಟರ್’ನಲ್ಲಿ ಇರಿಸಿ ಮತ್ತು ಅವುಗಳನ್ನು ಬಿಡಿಸಲು ಬೆಳ್ಳುಳ್ಳಿಯ ತಳದ ತಲೆಯನ್ನು ಒಡೆದು ಹಾಕಿ. ನಂತರ ಚಾಪಿಂಗ್ ಬೋರ್ಡ್’ನಲ್ಲಿ ಚಾಕುವಿನ ಸಮತಟ್ಟಾದ ಭಾಗದೊಂದಿಗೆ ಬೆಳ್ಳುಳ್ಳಿಯನ್ನು ಒತ್ತಿರಿ. ಈಗ ಸಿಪ್ಪೆಯು ಹೊರಬರುವುದನ್ನು  ನೋಡಬಹುದು.

ಮೊಟ್ಟೆ ಒಡೆಯುವುದನ್ನು ತಡೆಯಲು ಉಪಾಯ:

ಮೊಟ್ಟೆಗಳನ್ನು ನೀರಿನಲ್ಲಿ ಕುದಿಸುವಾಗ ಸ್ವಲ್ಪ ಎಣ್ಣೆಯನ್ನು ಸೇರಿಸಿ. ಎಣ್ಣೆನ್ನು ಸೇರಿಸುವುದರಿಂದ ಕುದಿಸುವಾಗ ಮೊಟ್ಟೆಗಳನ್ನು ಒಡೆಯುವುದನ್ನು ತಡೆಯಬಹುದು.

ಗೋಧಿ ಹಿಟ್ಟಿನಿಂದ ಕೀಟಗಳನ್ನು ಬೇರ್ಪಡಿಸುವುದು:

ಗೋಧಿ(Wheat) ಹಿಟ್ಟಿನಲ್ಲಿ ಕ್ರಿಮಿಕೀಟಗಳನ್ನು ಕಂಡರೆ ತುಂಬಾ ಕಿರಿಕಿರಿಯಾಗುತ್ತದೆ. ಸಾಮಾನ್ಯವಾಗಿ ಗೋಧಿಯಿಂದ ಕ್ರಿಮಿಯನ್ನು ಪ್ರತ್ಯೇಕಿಸಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಅಂತಹ ಪರಿಸ್ಥಿತಿಯನ್ನು ತಪ್ಪಿಸಲು  ಕೇವಲ 2 ಬೇವಿನ ಎಲೆಗಳನ್ನು(Curry leaves) ತೆಗೆದುಕೊಳ್ಳಿ. ಅವುಗಳನ್ನು ಹಿಟ್ಟಿನೊಂದಿಗೆ ಹಾಕಿ, ಅದನ್ನು ಮುಚ್ಚಳದಿಂದ ಮುಚ್ಚಿ. ಈ ರೀತಿಯಾಗಿ  ಮಾಡುವುದರಿಂದ ಸುಲಭವಾಗಿ ಯಾವುದೇ ಕೀಟಗಳ ಕಾಟವಿಲ್ಲದೆ ಗೋಧಿಯನ್ನು  ಸಂಗ್ರಹಿಸಬಹುದು.

ಹೆಚ್ಚು ನಿಂಬೆರಸವನ್ನು ಪಡೆಯಲು:

ನಾವು ಸಾಮಾನ್ಯವಾಗಿ ನಿಂಬೆಹಣ್ಣಿನಿಂದ  ಹೆಚ್ಚಿನ ರಸವನ್ನು ಹೊರತೆಗೆಯಲು ಪ್ರಯತ್ನಿಸುತ್ತೇವೆ, ನಿಂಬೆಹಣ್ಣನ್ನು (Lemon) ಹಿಸುಕುವ ಮೊದಲು ಅದನ್ನು 20 ಸೆಕೆಂಡುಗಳ ಕಾಲ ಮೈಕ್ರೋವೇವ್ ಮಾಡಿ. ಇದು ನಿಂಬೆಯನ್ನು ಮೃದುಗೊಳಿಸುತ್ತದೆ ಮತ್ತು  ಗರಿಷ್ಠ ಪ್ರಮಾಣದ ರಸವನ್ನು ಹೊರತೆಗೆಯಬಹುದು.

ಇದನ್ನೂ ಓದಿ: ಹಲವು ಚಮತ್ಕಾರಗಳ ‘ಬ್ರೊಕೊಲಿ’, ಈ ಸೂಪರ್ ಫುಡ್ ಉತ್ತಮ ಆರೋಗ್ಯಕ್ಕೆ ಸಹಾಯಕಾರಿ

ಮನೆಯಲ್ಲಿ ತಯಾರಿಸಿ ಕ್ರಿಸ್ಟಲ್ ಐಸ್ ಕ್ಯೂಬ್:

ರೆಸ್ಟಾರೆಂಟ್ ಮತ್ತು ಕೆಫೆಗಳಲ್ಲಿ  ಪಾನೀಯಗಳೊಂದಿಗೆ ಐಸ್ ಕ್ಯೂಬ್ (Ice Cube)ನೀಡಲಾಗುತ್ತದೆ. ಇಂತಹ ಕ್ರಿಸ್ಟಲ್ ಐಸ್ ಕ್ಯೂಬ್ ಗಳನ್ನು ಮನೆಯಲ್ಲಿ ತಯಾರಿಸಲು ಪ್ರಯತ್ನಿಸಿದರು ವಿಫಲವಾಗುತ್ತೇವೆ. ಹೀಗಾಗಿ  ರೆಸ್ಟಾರೆಂಟ್ ನತಹ ಕ್ರಿಸ್ಟಲ್ ಐಸ್ ಕ್ಯೂಬ್ ಅನ್ನು ಮನೆಯಲ್ಲಿ  ತಯಾರಿಸಲು ಸುಲಭ ಮಾರ್ಗವೆಂದರೆ ಮೊದಲು ನೀರನ್ನು ಕುದಿಸಿ ನಂತರ ಐಸ್ (Ice)ಮಾಡುವುದಾಗಿದೆ.  ಬಿಸಿ ನೀರನ್ನು ಬಳಸಿ ತಯಾರಿಸಿದ ಐಸ್ ಕ್ಯೂಬ್ ಅಲಂಕಾರಿಕ ಮತ್ತು ಅದ್ದೂರಿ ರೆಸ್ಟೋರೆಂಟ್’ಗಳಲ್ಲಿ (Restorant)  ಬಳಸಲಾಗುತ್ತದೆ. ಈ  ಐಸ್ ಕ್ಯೂಬ್ ಸ್ಫಟಿಕದಂತೆ ಕಾಣುತ್ತದೆ.

ಆಲೂಗಡ್ಡೆ ಮತ್ತು ಈರುಳ್ಳಿಯನ್ನು ಪ್ರತ್ಯೇಕವಾಗಿ ಸಂಗ್ರಹಿಸಿ:

ಸಾಮಾನ್ಯವಾಗಿ  ಆಲೂಗಡ್ಡೆ (Potato) ಮತ್ತು ಈರುಳ್ಳಿ (Onion)  ಬೇಗ ಹಾಳಾಗುತ್ತದೆ. ಹೆಚ್ಚಿನ ಜನರು ಆಲೂಗಡ್ಡೆ ಮತ್ತು ಈರುಳ್ಳಿಯನ್ನು ಒಟ್ಟಿಗೆ ಸಂಗ್ರಹಣೆ ಮಾಡಿಡುತ್ತಾರೆ.  ಆಲೂಗಡ್ಡೆ ಮತ್ತು ಈರುಳ್ಳಿ  ತೇವಾಂಶ ಮತ್ತು ಅನಿಲವನ್ನು ಬಿಡುಗಡೆ ಮಾಡುವುದರಿಂದ ಅವುಗಳು ಬೇಗ ಹಾಳು ಮಾಡುತ್ತದೆ ಆದ್ದರಿಂದ ಅವುಗಳನ್ನು ಆದಷ್ಟು ಪ್ರತ್ಯೇಕವಾಗಿ ಸಂಗ್ರಹಿಸಬೇಕು.

ಇದನ್ನೂ ಓದಿ: ನೀವು ತಿನ್ನೋದು ನಕಲಿ ಡ್ರೈ ಫ್ರುಟ್ಸ್ ಅಲ್ಲಾ ತಾನೆ…? ಪತ್ತೆ ಹಚ್ಚೋದು ಹೇಗೆ?

ಹಸಿರು ತರಕಾರಿ ತಾಜಾವಾಗಿಡಲು:

ಹಸಿರು ತರಕಾರಿಗಳನ್ನು (Vegetables) ದೀರ್ಘಕಾಲದವರೆಗೆ ತಾಜಾವಾಗಿಡಲು ರೆಫ್ರಿಜರೇಟರ್’ನಲ್ಲಿ (Refrigerators) ಗಾಳಿ ತುಂಬಿದ ಪ್ಲಾಸ್ಟಿಕ್ ಚೀಲಗಳಲ್ಲಿ ಇಡಬೇಕು. ಈ ತಂತ್ರವನ್ನು ಅನುಸರಿಸಿದರೆ ತರಕಾರಿಗಳು ದೀರ್ಘಕಾಲ ತಾಜಾವಾಗಿರುತ್ತವೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Heart Problemಗೆ ಎಲ್ಲರೂ ಹೇಳೋ ಕಾರಣವಲ್ಲವೇ ಅಲ್ಲ, ಪೌಷ್ಟಿಕ ತಜ್ಞರ ಮಹಾವಂಚನೆ ಬಯಲಿಗೆ
ಆಲೂಗಡ್ಡೆಗೆ ಮೊಳಕೆ ಬಂದರೆ ತಿನ್ನಬಹುದಾ? ತಜ್ಞರ ಎಚ್ಚರಿಕೆ ಏನು, ಯಾವುದು- ಯಾರಿಗೆ ಅಪಾಯ?