ಇಂದು ಮಾಡಿದ್ದನ್ನು ಇಂದೇ ತಿನ್ನು ಎಂದು ವೈದ್ಯರು ಹೇಳ್ತಾರೆ. ನಾಳೆ, ನಾಡಿದ್ದು ಅಂತ ಫ್ರಿಡ್ಜ್ ನಲ್ಲಿಟ್ಟು ತಿಂದ್ರೆ ಆರೋಗ್ಯ ಹದಗೆಡುತ್ತೆ ಅನ್ನೋದು ನಮಗೆಲ್ಲ ಗೊತ್ತು. ಹಾಗಂತ ಮನೆಯಲ್ಲಿ ಗೋಧಿ ಚಪಾತಿ ಮಿಕ್ಕಿದ್ರೆ ಕಸಕ್ಕೆ ಹಾಕ್ಬೇಡಿ. ಅದರಿಂದ ಪ್ರಯೋಜನ ಸಾಕಷ್ಟಿದೆ.
ಅಂದಿನ ಊಟ ತಿಂಡಿಗಳನ್ನು ಅಂದೇ ಮಾಡಿ ತಿನ್ನಬೇಕು. ನಿನ್ನೆಯ, ಹಳಸಿದ ಆಹಾರಗಳನ್ನು ಬಳಸಬಾರದು, ಅದು ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ. ಅನೇಕ ರೀತಿಯ ಕೆಟ್ಟ ಬ್ಯಾಕ್ಟೀರಿಯಾಗಳು ಅದರಲ್ಲಿ ಬೆಳೆಯುತ್ತೆ ಎಂಬುದನ್ನು ನಾವು ಸಾಕಷ್ಟು ಕಡೆ ಓದಿದ್ದೇವೆ. ನಿನ್ನೆ ಮಾಡಿದ ಅಡುಗೆಯೆಂದರೆ ನನಗೆ ಬೇಡ ಎಂದು ಮೂಗುಮುರಿಯುವವರೇ ಹೆಚ್ಚು. ಅದರಲ್ಲೂ ಇತ್ತೀಚೆಗೆ ಕೊರೊನಾ ಮುಂತಾದ ರೋಗಗಳಿಗೆ ಹೆದರುವ ಜನ ಆಹಾರಗಳ ಬಗ್ಗೆ ಹೆಚ್ಚು ಮುತುವರ್ಜಿವಹಿಸುತ್ತಿದ್ದಾರೆ.
ಅನೇಕ ದೇಶ (Country) ಗಳಲ್ಲಿ ಆಹಾರ (Food) ದ ಕೊರತೆ ಇರುವುದನ್ನು ನಾವು ಕಾಣುತ್ತಿದ್ದೇವೆ. ಇಂತಹ ಸಮಯದಲ್ಲಿ ಆಹಾರಗಳನ್ನು ಪೋಲು ಮಾಡುವುದು ಕೂಡ ಸರಿಯಲ್ಲ. ಅದಕ್ಕಾಗಿಯೇ ಇರಬಹುದು ಹಿಂದಿನವರು ರಾತ್ರಿ (Night) ಉಳಿದ ಅನ್ನವನ್ನು ಬೆಳಿಗ್ಗೆ ಚಿತ್ರಾನ್ನ ಅಥವಾ ಮೊಸರನ್ನವನ್ನು ಮಾಡಿ ತಿನ್ನುತ್ತಿದ್ದರು. ಈಗಲೂ ಕೂಡ ಕೆಲ ಮಹಿಳೆಯರು ಆಹಾರವನ್ನು ಪೋಲು ಮಾಡದೇ ಅದರ ಸದ್ಬಳಕೆ ಮಾಡುತ್ತಾರೆ. ನಮ್ಮ ಆರೋಗ್ಯವನ್ನು ಕೂಡ ಲಕ್ಷ್ಯದಲ್ಲಿಟ್ಟುಕೊಂಡು ಆರೋಗ್ಯಕ್ಕೆ ಹಿತವಾದ ಆಹಾರವನ್ನು ತಿಂದರೆ ದೇಹಕ್ಕೆ ಅದರಿಂದ ದುಷ್ಪರಿಣಾಮ ಆಗುವುದಿಲ್ಲ. ಅಂತಹುದೇ ಒಂದು ಆಹಾರ ರೊಟ್ಟಿ (Bread) . ರೊಟ್ಟಿ ಮಾಡಿದ ತಕ್ಷಣ ಬಿಸಿ ಬಿಸಿಯಾದ ರೊಟ್ಟಿಯನ್ನು ನಾವು ತಿನ್ನುತ್ತೇವೆ. ಅದನ್ನೇ ಮಾರನೆಯ ದಿನ ಯಾರೂ ತಿನ್ನುವುದಿಲ್ಲ. ಅದು ನಿನ್ನೆ ಮಾಡಿದ ರೊಟ್ಟಿ, ಇಂದು ಅದು ಹಳಸಿಹೋಗಿರುತ್ತೆ ಎಂದು ಭಾವಿಸಿ ಅದನ್ನು ಕಸದ ಬುಟ್ಟಿಗೋ ಅಥವಾ ಪ್ರಾಣಿಗಳಿಗೋ ಹಾಕುತ್ತೇವೆ. ಇಂತಹ ಹಳಸಿದ ರೊಟ್ಟಿಯೇ ನಮ್ಮ ಎಷ್ಟೋ ಸಮಸ್ಯೆಗಳನ್ನು ನಿವಾರಿಸುತ್ತೆ. ಆಶ್ಚರ್ಯದ ಸಂಗತಿಯಾದರೂ ಇದು ನಿಜ. ಖ್ಯಾತ ವೈದ್ಯರುಗಳೇ ಇದನ್ನು ಶಿಫಾರಸು ಮಾಡಿದ್ದಾರೆ.
Kids Health : 9-5-2-1-0 ಸೂತ್ರದ ಬಗ್ಗೆ ನಿಮಗೆ ಗೊತ್ತಾ?
ಹಳಸಿದ ರೊಟ್ಟಿ ಆರೋಗ್ಯಕ್ಕೆ ಹಿತ : ಹಳಸಿದ ಆಹಾರ ಆರೋಗ್ಯಕ್ಕೆ ಹಾನಿಕರ. ಅದರಿಂದ ಎಸಿಡಿಟಿ ಅಥವಾ ಫುಡ್ ಪೊಯ್ಸನ್ ಆಗಬಹುದು ಎಂದು ನಮಗೆ ಗೊತ್ತು. ಆದರೆ ಎಲ್ಲ ಸಮಯದಲ್ಲಿಯೂ ಇದು ನಿಜವಲ್ಲ. ಅದರಲ್ಲೂ ಗೋಧಿ ಹಿಟ್ಟಿನಿಂದ ಮಾಡಿದ ರೊಟ್ಟಿ ಅಥವಾ ಚಪಾತಿಯ ವಿಷಯದಲ್ಲಂತೂ ಈ ಮಾತು ಸುಳ್ಳಾಗಿದೆ. ಏಕೆಂದರೆ ಭಾರತದಲ್ಲಿ ರೊಟ್ಟಿಯನ್ನು ಗೋಧಿಹಿಟ್ಟು ಮತ್ತು ನೀರಿನಿಂದ ತಯಾರಿಸುತ್ತಾರೆ. ಹೀಗೆ ಕಲಸಿದ ಗೋಧಿ ಹಿಟ್ಟಿನಲ್ಲಿ ಯಾವುದೇ ರೀತಿಯ ತೇವಾಂಶ ಇರುವುದಿಲ್ಲ. ಅದರಿಂದ ಇದನ್ನು ನಾವು ಇಟ್ಟು ತಿನ್ನಬಹುದಾಗಿದೆ. ರಾತ್ರಿ ತಯಾರಿಸಿದ ರೊಟ್ಟಿಯನ್ನು ಮರುದಿನ ಉಪಹಾರಕ್ಕೆ ಅಥವಾ 12-15 ಗಂಟೆಯ ಒಳಗೆ ತಿನ್ನಬಹುದು. ತಜ್ಞರ ಹೇಳುವ ಪ್ರಕಾರ, ಹಳಸಿದ ರೊಟ್ಟಿಯಲ್ಲಿ ಕೆಲವು ಆಶ್ಚರ್ಯಕರ ಪ್ರಯೋಜನಗಳಿವೆ.
ನಿನ್ನೆಯ ರೊಟ್ಟಿ ಎಸಿಡಿಟಿ ಸಮಸ್ಯೆಗೆ ಪರಿಹಾರ : ಎಣ್ಣೆ ಮತ್ತು ಮಸಾಲೆಯಿಂದ ಕೂಡಿದ ಆಹಾರ ಸೇವಿಸಿದ ತಕ್ಷಣ ಎಸಿಡಿಟಿ ತೊಂದರೆಯಾಗುತ್ತೆ. ಅಂತಹ ಸಮಯದಲ್ಲಿ ಬೆಳಿಗ್ಗೆ ಹಾಲಿನೊಂದಿಗೆ ಹಿಂದಿನ ದಿನ ಮಿಕ್ಕುಳಿದ ರೊಟ್ಟಿಯನ್ನು ತಿಂದರೆ ಎಸಿಡಿಟಿ ಸಮಸ್ಯೆ ದೂರವಾಗುತ್ತೆ.
ಜೀರ್ಣಕ್ರಿಯೆ ಹೆಚ್ಚಿಸುತ್ತೆ : ಒಂದು ದಿನದ ಹಿಂದೆ ಮಾಡಿದ ರೊಟ್ಟಿಯಲ್ಲಿ ಫೈಬರ್ ನ ಅಂಶ ಹೆಚ್ಚಿರುತ್ತದೆ. ಇದು ಹೊಟ್ಟೆಗೆ ಸಂಬಂಧಿಸಿದ ಅನೇಕ ತೊಂದರೆಗಳನ್ನು ನಿವಾರಿಸುತ್ತದೆ. ಜೀರ್ಣಕ್ರಿಯೆಯ ತೊಂದರೆ ಇದ್ದಲ್ಲಿ ಹಾಲಿನ ಜೊತೆ ರೊಟ್ಟಿ ತಿಂದರೆ ಜೀರ್ಣಕ್ರಿಯೆ ಸರಾಗವಾಗುತ್ತದೆ. ಇದರಿಂದ ಅಜೀರ್ಣದ ತೊಂದರೆ ಕೂಡ ದೂರವಾಗುತ್ತದೆ.
Evening Snacks: ಸಂಜೆಯ ಹಸಿವು ನೀಗಿಸಲು ಈ ಹೆಲ್ದಿ ಆಹಾರ ಸೇವಿಸಿ
ಶುಗರ್ ಮತ್ತು ಬಿಪಿ ನಿಯಂತ್ರಣ : ಹಳಸಿದ ರೊಟ್ಟಿಯಲ್ಲಿ ಅನೇಕ ಒಳ್ಳೆಯ ಬ್ಯಾಕ್ಟೀರಿಯಾಗಳು ಹುಟ್ಟಿಕೊಳ್ಳುತ್ತವೆ. ಹಾಗಾಗಿ ಉಳಿದ ರೊಟ್ಟಿಯನ್ನು ಹಾಲಿನೊಂದಿಗೆ ಸೇವಿಸುವುದರಿಂದ ಬಿಪಿ ಮತ್ತು ಶುಗರ್ ಖಾಯಿಲೆಗಳು ನಿಯಂತ್ರಣದಲ್ಲಿರುತ್ತವೆ. ಮಿಕ್ಕ ರೊಟ್ಟಿ ಮತ್ತು ತಣ್ಣನೆಯ ಹಾಲಿನ ಸೇವನೆಯಿಂದ ಬ್ಲಡ್ ಪ್ರೆಶರ್ ಸಮಸ್ಯೆಗೆ ಮುಕ್ತಿ ಸಿಗುತ್ತದೆ. ರೊಟ್ಟಿಯನ್ನು ಹಾಲಿನಲ್ಲಿ ಸ್ವಲ್ಪ ಸಮಯಗಳ ಕಾಲ ನೆನಸಿಟ್ಟು ತಿಂದರೂ ರಕ್ತದೊತ್ತಡದ ಸಮಸ್ಯೆಯನ್ನು ಹೋಗಲಾಡಿಸಬಹುದು.
ತಂಗಳು ರೊಟ್ಟಿ ಸೇವನೆಯಿಂದ ಶರೀರದ ಉಷ್ಣತೆ ನಾರ್ಮಲ್ : ಹಳಸಿದ ರೊಟ್ಟಿ ದೇಹದ ತಾಪಮಾನ ಏರುಪೇರಾಗದಂತೆ ನೋಡಿಕೊಳ್ಳುತ್ತದೆ. ಬೇಸಿಗೆಯ ದಿನಗಳಲ್ಲಿ ಇದನ್ನು ಸೇವಿಸುವುದರಿಂದ ಹೀಟ್ ಸ್ಟ್ರೋಕ್ ಅಪಾಯದಿಂದ ಕೂಡ ಬಚಾವಾಗಬಹುದು.