ಹಬ್ಬದ ಸಂದರ್ಭದಲ್ಲಿ ಉಪವಾಸ ಮಾಡುವುದು ಸಾಮಾನ್ಯ. ಈ ಸಮಯದಲ್ಲಿ ಅನ್ನ ತಿನ್ನುವುದು ಬಹಳ ಕಡಿಮೆ. ಒಂಭತ್ತು ದಿನದ ಈ ನವರಾತ್ರಿಯಲ್ಲಿ ನೀವು ಉಪವಾಸ ಕೈಗೊಂಡಿದ್ದರೆ, ದೇಹಕ್ಕೆ ಅಗತ್ಯ ಪಪೋಷಕಾಂಶವನ್ನು ಪಡೆಯಲು ಕುಂಬಳಕಾಯಿ ಉತ್ತಮ ಆಯ್ಕೆಯಾಗಿದೆ. ಕುಂಬಳಕಾಯಿಯಿAದ ಮಾಡಬಹುದಾದ ಆಹಾರಗಳು ಇಲ್ಲಿವೆ.
ನಮ್ಮ ನಾಡಿನಲ್ಲಿ ಗಣಪತಿ ಹಬ್ಬದ ನಂತರ ಸಂಭ್ರಮದಿಂದ ಆಚರಿಸುವ ಹಬ್ಬ ಎಂದರೆ ಅದು ದಸರಾ ಹಬ್ಬ. ದುರ್ಗೆಯನ್ನು ಒಂಭತ್ತು ದಿನಗಳ ಕಾಲ ಆರಾಧಿಸಲಾಗುತ್ತೆ. ಈ ದಿನಗಳಲ್ಲಿ ಉಪವಾಸ ಆಚರಿಸಲಾಗುತ್ತದೆ. ಉಪವಾಸ ಇರುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ ಮತ್ತು ಹಿಂದೂ ಆರಾದಕರು ದುರ್ಗಾ ದೇವಿಯನ್ನು ಸಮಾಧಾನಪಡಿಸಲು ಮತ್ತು ಅವಳ ಆಶೀರ್ವಾದವನ್ನು ಪಡೆಯಲು ಒಂಭತ್ತು ದಿನಗಳ ಉಪವಾಸವನ್ನು ಆಚರಿಸುತ್ತಾರೆ. ಉಪವಾಸ ಮಾಡುವುದರಿಂದಲೂ ದೇಹವನ್ನು ಟೋನ್ ಮಾಡಲು ಮತ್ತು ಅದನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ. ಆದರೆ ಅದನ್ನು ತಪ್ಪಾಗಿ ಮಾಡುವುದರಿಂದ ಕಿರಿಕಿರಿಗೊಳ್ಳಬಹುದು. ದೇಹಕ್ಕೆ ಅಗತ್ಯವಿರುವ ಪೋಷಣೆ ಮತ್ತು ಶಕ್ತಿಯನ್ನು ನೀಡುವಾಗ ಎಲ್ಲಾ ಧಾರ್ಮಿಕ ಶಾಸನಗಳಿಗೆ ಬದ್ಧವಾಗಿರಲು ಅನುಕೂಲವಾಗುವ ಆಹಾರ ಸೇವಿಸಸುವುದು ನಿರ್ಣಾಯಕವಾಗಿದೆ. ಕುಂಬಳಕಾಯಿಯು ಈ ಸಮಯಕ್ಕೆ ಬಹಳ ಉತ್ತಮ ಆಯ್ಕೆಯಾಗಿದೆ. ಏಕೆಂದರೆ ಇದರಲ್ಲಿ ಪೌಷ್ಟಿಕಾಂಶ ಹೆಚ್ಚಿದ್ದು, ಬೇಯಿಸುವುದು ಸುಲಭವಾಗಿದೆ.
ನವರಾತ್ರಿಯಲ್ಲಿ ಕುಂಬಳಕಾಯಿಯ ಪದಾರ್ಥಗಳು ಇಲ್ಲಿವೆ.
1. ಕುಂಬಳಕಾಯಿ ಹಲ್ವಾ
ಬೇಕಾಗುವ ಸಾಮಗ್ರಿಗಳು: ತುಪ್ಪ, ಕುಂಬಳಕಾಯಿ, ಹಾಲು, ಏಲಕ್ಕಿ ಪುಡಿ, ಕಂಡೆನ್ಸ್÷್ಡ ಮಿಲ್ಕ್, ತೆಂಗಿನ ತುರಿ, ಹುರಿದ ಗೋಡಂಬಿ, ಬಾದಾಮಿ, ಪಿಸ್ತಾ.
ಮಾಡುವ ವಿಧಾನ: ಒಂದು ಪ್ಯಾನ್ ತುಪ್ಪ ಹಾಕಿ ಅದಕ್ಕೆ ತುರಿದುಕೊಂಡ ಕುಂಬಳಕಾಯಿ ಹಾಕಿ ೧೦ ನಿಮಿಷ ಬೇಯಿಸಿಕೊಳ್ಳಿ. ಬೆಂದ ನಂತರ ಅದಕ್ಕೆ ಒಂದು ಕಪ್ ಹಾಲು ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಿ. ಹಾಲಿನೊಂದಿಗೆ ಚೆನ್ನಾಗಿ ಬೆಂದ ನಂತರ ಗಟ್ಟಿಯಾಗುತ್ತದೆ. ನಂತರ ಅದಕ್ಕೆ ಏಲಕ್ಕಿ ಪುಡಿ, ಕಂಡೆನ್ಸ್÷್ಡ ಮಿಲ್ಕ್, ತೆಂಗಿನ ತುರಿ ಹಾಕಿ ಮತ್ತೆ ೨ ನಿಮಿಷ ಮಧ್ಯಮ ಉರಿಯಲ್ಲಿಇ ಬೇಯಿಸಿಕೊಳ್ಳಿ. ಮಿಶ್ರಣವು ದಪ್ಪಗಾಗುತ್ತಿದ್ದಂತೆ ಹುರಿದುಕೊಂಡ ಗೋಡಂಬಿ, ಬಾದಾಮಿ, ಪಿಸ್ತ ಹಾಕಿ, ಸ್ವಲ್ಪ ತುಪ್ಪ ಹಾಕಿ ಮಿಶ್ರಣವು ಸ್ಮೂತ್ ಆಗುವವರೆಗೂ ಕೈಯ್ಯಾಡಿ. ನಂತರ ತಣ್ಣಗಾದ ಮೇಲೆ ಕುಂಬಳಕಾಯಿ ಹಲ್ವಾ ಒಂದು ಬೌಲ್‌ಗೆ ಹಾಕಿ ಅದನ್ನು ಪಿಸ್ತಾ ಮತ್ತು ಕುಂಬಳಕಾಯಿ ಬೀಜಗಳಿಂದ ಅಲಂಕರಿಸಿ.
Kitchen Tips: ಉಪವಾಸಕ್ಕೆ ಸಾಬೂದಾನ ಖರೀದಿ ಮಾಡ್ತಿದ್ರೆ ಈ ವಿಷ್ಯ ನೆನಪಿಡಿ
2. ಕುಂಬಳಕಾಯಿ ರಾಯಿತಾ
ಬೇಕಾಗುವ ಸಾಮಗ್ರಿಗಳು: ಕುಂಬಳಕಾಯಿ, ಮೊಸರು, ಹಾಲು, ಕೊತ್ತಂಬರಿ ಸೊಪ್ಪು, ಹಸಿ ಮೆಣಸಿನಕಾಯಿ, ಉಪ್ಪು, ಮೆಣಸಿನ ಪುಡಿ, ಜೀರಿಗೆ ಪುಡಿ, ಪುದೀನ, ಕಪ್ಪುಪ್ಪು, ಸಕ್ಕರೆ.
ಮಾಡುವ ವಿಧಾನ: ಒಂದು ಪ್ಯಾನ್‌ಗೆ ನೀರು ಹಾಕಿ ಕುದಿಸಿ. ಕುದಿಯುವ ನೀರಿಗೆ ಹೆಚ್ಚಿಕೊಂಡ ಕುಂಬಳಕಾಯಿ ಹಾಕಿ ೫ ನಿಮಿಷ ಬೇಯಿಸಿಕೊಳ್ಳಿ. ನಂತರ ನೀರನ್ನೆಲ್ಲಾ ತೆಗೆದು ಬೆಂದ ಕುಂಬಳಕಾಯಿಯನ್ನು ಒಂದು ಬೌಲ್‌ಗೆ ಹಾಕಿ. ಅದಕ್ಕೆ ಮೊಸರು, ಹಾಲು, ಉಪ್ಪು, ಕಪ್ಪುಪ್ಪು, ಜೀರಿಗೆ ಪುಡಿ, ಪುದೀನಾ ಪುಡಿ, ಮೆಣಸಿನ ಪುಡಿ, ಸಕ್ಕರೆ ಹಾಕಿ ಚೆನ್ನಾಗಿ ಕಲಸಿದರೆ ರಾಯಿತಾ ರೆಡಿ. ಇದನ್ನು ಚಪಾತಿ ಹಾಗೂ ಅನ್ನದ ಜೊತೆಗೂ ಸೇವಿಸಬಹುದು.
3. ಕುಂಬಳಕಾಯಿ ಪರೋಟ
ಬೇಕಾಗುವ ಸಾಮಗ್ರಿಗಳು: ಗೋಧಿ ಹಿಟ್ಟು, ಕುಂಬಳಕಾಯಿ, ಉಪ್ಪು, ಚಾಟ್ ಮಸಾಲ, ಮೆಣಸಿನಪುಡಿ, ತುಪ್ಪ, ನೀರು.
ಮಾಡುವ ವಿಧಾನ: ಮೊದಲು ಒಂದು ಪ್ಯಾನ್‌ನಲ್ಲಿ ಕುಂಬಳಕಾಯಿಯನ್ನು ಚೆನ್ನಾಗಿ ಬೇಯಿಸಿಕೊಳ್ಳಬೇಕು. ಗೋಧಿ ಹಿಟ್ಟಿಗೆ ಬೇಯಿಸಿದ ಕುಂಬಳಕಾಯಿ, ಉಪ್ಪು, ಮೆಣಸಿನಪುಡಿ, ಚಾಟ್ ಮಸಾಲ, ತುಪ್ಪ, ನೀರು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ೧೦ ನಿಮಿಷದ ನಂತರ ಸಣ್ಣ ಉಂಡೆ ಮಾಡಿ, ಅದನ್ನು ಚಪಾತಿ ಆಕಾರದಲ್ಲಿ ಲಟ್ಟಿಸಿ ಬೇಯಿಸಿದರೆ ಪರೋಟ ರೆಡಿ. ಇದಕ್ಕೆ ಕಾಂಬಿನೇಷನ್ ಆಗಿ ಯಾವ ಗ್ರೇವಿಯಾದರೂ ಚೆನ್ನಾಗಿರುತ್ತದೆ.
ಮನೆಯಲ್ಲೇ ತಯಾರಿಸಿ ಮಕ್ಕಳಿಗೆ ಇಷ್ಟವಾಗೋ ಡ್ರೈ ಫ್ರೂಟ್ಸ್ ಲಡ್ಡು!
4. ಕುಂಬಳಕಾಯಿ ಸಲಾಡ್
ಬೇಕಾಗುವ ಸಾಮಗ್ರಿಗಳು: ಬೇಯಿಸಿದ ಕುಂಬಳಕಾಯಿ, ಸೌತೆಕಾಯಿ, ಕಾಯಿ ತುರಿ, ಕೊತ್ತೊಂಬರಿ ಸೊಪ್ಪಪು, ಟೊಮೆಟೊ, ಉಪ್ಪು.
ಮಾಡುವ ವಿಧಾನ: ಒಂದು ಬೌಲ್‌ಗೆ ಬೇಯಿಸಿದ ಕುಂಬಳಕಾಯಿ, ಹೆಚ್ಚಿಕೊಂಡ ಸೌತೆಕಾಯಿ, ತೆಂಗಿನಕಾಯಿ ತುರಿ, ಕೊತ್ತೊಂಬರಿ ಸೊಪ್ಪು, ಟೊಮೆಟೊ, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಸರ್ವ ಮಾಡಿದರೆ ಆಯಿತು.