ಕಿಚನ್‌ನಲ್ಲಿ ಇಲಿ, ಆಹಾರದಲ್ಲಿ ಜಿರಳೆ; ಬಡೆಮಿಯಾ ಕಬಾಬ್ ರೆಸ್ಟೋರೆಂಟ್‌ಗೆ ಬೀಗ ಜಡಿದ FDA!

By Suvarna News  |  First Published Sep 16, 2023, 7:01 PM IST

ಮುಂಬೈನ ಬಡೆಮಿಯಾ ಕಬಾಬ್ ರೆಸ್ಟೋರೆಂಟ್ ಅತ್ಯಂತ ಜನಪ್ರಿಯ. ವಿಶೇಷ ಸ್ವಾದಕ್ಕಾಗಿ ಜನ ಕಿಕ್ಕಿರಿದು ತುಂಬಿರುತ್ತಾರೆ. ಆದರೆ ಶುಚಿತ್ವದಲ್ಲಿ ಶೂನ್ಯ. ಅಡುಕೋಣೆಯಲ್ಲಿ ಇಲಿಗಳ ರಾಶಿ, ಆಹಾರದಲ್ಲಿ ಜಿರಳೆಗಳು ಕಾಣಿಸಿಕೊಂಡ ಬೆನ್ನಲ್ಲೇ ಆಹಾರ ಅಧಿಕಾರಿಗಳು ದಾಳಿ ನಡೆಸಿ ಖ್ಯಾತ ಬಡೆಮಿಯಾ ಕಬಾಬ್ ಸೆಂಟರ್‌ಗೆ ಬೀಗ ಜಡಿದಿದ್ದಾರೆ. 
 


ಮುಂಬೈ(ಸೆ.16) ವಾಣಿಜ್ಯ ನಗರಿ ಮುಂಬೈ ಖಾದ್ಯಗಳಿಗೂ ಫೇಮಸ್. ಈ ಪೈಕಿ ಬಡೆಮಿಯಾ ಕಬಾಬ್ ಅತ್ಯಂತ ಜನಪ್ರಿಯ. ಬಡೆಮಿಯಾ ಕಬಾಬ್ ರೆಸ್ಟೋರೆಂಟ್‌ನಲ್ಲಿ ಜನರು ಮುಗಿ ಬೀಳುತ್ತಾರೆ. ಗಂಟೆ ಗಟ್ಟಲೇ ಕಾದು ತಿನಿಸುಗಳನ್ನು ಪಡೆದುಕೊಳ್ಳುತ್ತಾರೆ. ಆದರೆ ಇದೇ ಬಡೇಮಿಯಾಗೆ ಆಹಾರ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಬಡಮಿಯಾ ರೆಸ್ಟೋರೆಂಟ್ ಶುಚಿತ್ವ ಕಾಪಾಡುತ್ತಿಲ್ಲ, ತಿನಿಸುಗಳಲ್ಲಿ ಜಿರಳಗಳು ಪತ್ತೆಯಾಗುತ್ತಿದೆ ಎಂದು ಹಲವು ದೂರುಗಳು ದಾಖಲಾಗಿತ್ತು. ಈ ದೂರುಗಳನ್ನು ಆಧಿರಿಸಿದ ಔಷಧಿ ಆಹಾರ ಆಡಳಿತ ಇಲಾಖೆ( FDA) ಅಧಿಕಾರಿಗಳು ಏಕಾಏಕಿ ದಾಳಿ ಮಾಡಿದ್ದಾರೆ. ಈ ವೇಳೆ ಬಡೆಮಿಯಾ ಅಡುಗೆಕೋಣೆಯಲ್ಲಿ ರಾಶಿ ರಾಶಿ ಇಲಿಗಳು, ತಿನಿಸುಗಳಲ್ಲಿ ಜಿರೆಗಳು ಪತ್ತೆಯಾಗಿದೆ. ಹೀಗಾಗಿ ದಕ್ಷಿಣ ಮುಂಬೈನಲ್ಲಿರುವ ಬಡೆಮಿಯಾ ರೆಸ್ಟೋರೆಂಟ್‌ಗೆ ಬೀಗ ಜಡಿಯಲಾಗಿದೆ.

ದಾಳಿ ವೇಳೆ ಆಹಾರ ಸುರಕ್ಷತಾ ಅಧಿಕಾರಿಗಳು ಬೆಚ್ಚಿ ಬಿದ್ದಿದ್ದಾರೆ. ಕಾರಣ ಕಳೆದ 76 ವರ್ಷಗಳಿಂದ ಮುಂಬೈನಲ್ಲಿ ಕಬಾಬ್ ಮೂಲಕ ಖ್ಯಾತಿಗಳಿಸಿರುವ ಬಡೆಮಿಯಾ ರೆಸ್ಟೋರೆಂಟ್ ಇದುವರೆಗೂ  ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಿಂದ ಯಾವುದೇ ಅನುಮತಿ ಪತ್ರ ಪಡೆದಿಲ್ಲ. ಶುಚಿತ್ವ ಕಾಪಾಡುವಲ್ಲಿ ವಿಫಲ ಹಾಗೂ ಲೈಸೆನ್ಸ್ ಇಲ್ಲದೆ ರೆಸ್ಟೋರೆಂಟ್ ನಡೆಸುತ್ತಿದ್ದ ಕಾರಣ ತಕ್ಷಣವೇ ಬಡೇಮಿಯಾ ಸೆಂಟರ್‌ಗೆ ಬೀದಗ ಜಡಿಯಲಾಗಿದೆ.

Tap to resize

Latest Videos

ಬಿರಿಯಾನಿಗೆ ರಾಯಿತಾ ಕೇಳಿದ್ದಕ್ಕೆ ಥಳಿಸಿದ ಹೋಟೆಲ್‌ ಸಿಬ್ಬಂದಿ: ಕೆಲವೇ ಕ್ಷಣದಲ್ಲಿ ಗ್ರಾಹಕ ಸಾವು!

ಸೌತ್ ಮುಂಬೈನನಲ್ಲಿರುವ ಬಡೆಮಿಯಾ ರೆಸ್ಟೋರೆಂಟ್‌ನಿಂದ ಪಕ್ಕದಲ್ಲಿರುವ ಇತರ ಬಡೆಮಿಯಾ ಬ್ರಾಂಚ್‌ಗಳಿಗೆ ಆಹಾರ ತಯಾರಿಸಿ ಪೂರೈಕೆ ಮಾಡುತ್ತಿದೆ.  ಆಹಾರ ಸುರಕ್ಷತೆ  ಮತ್ತು ಗುಣಮಟ್ಟ ಪ್ರಾಧಿಕಾರದಿಂದ ಯಾವುದೇ ಲೈಸೆನ್ಸ್ ಪಡೆಯದೇ ಇದುವರೆಗೆ ಜನರಿಗೆ ಆಹಾರ ನೀಡಿದೆ. ಇಷ್ಟೇ ಅಲ್ಲ ಶುಚಿತ್ವವನ್ನು ಕಾಪಾಡಿಕೊಂಡಿಲ್ಲ. ಹೀಗಾಗಿ ಬಡೆಮಿಯಾ ವಿರುದ್ಧ ಅಧಿಕಾರಿಗಳು ಗರಂ ಆಗಿದ್ದಾರೆ.

ಮುಂಬೈನ ಹಲವು ರೆಸ್ಟೋರೆಂಟ್, ತಿನಿಸುಗಳ ಕೇಂದ್ರದ ಮೇಲೆ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಈ ಪೈಕಿ ಕೆಲ ಕೇಂದ್ರಗಳಿಗೆ ಬೀಗ ಜಡಿದಿದ್ದಾರೆ. ಇದರಲ್ಲಿ ಪ್ರಖ್ಯಾತ ಬಡೆಮಿಯಾ ಸೆಂಟರ್ ಕೂಡ ಒಂದು. ಸಾರ್ವಜನಿಕರ ಆರೋಗ್ಯ ಸುರಕ್ಷತೆ, ಶುಚಿತ್ವ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಹೀಗಾಗಿ ತಕ್ಷಣವೇ ಬೀಗ ಜಡಿಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕುರಿ ಮಾಂಸದ ಬದಲು ದನದ ಮಾಂಸದ ಬಿರಿಯಾನಿ; ಮಲೆನಾಡಿಗೆ ಬರುವ ಪ್ರವಾಸಿಗರೇ ಎಚ್ಚರ!

ಮುಂಬೈನಲ್ಲಿ ಬಡೆಮಿಯಾ ಹಲವು ಬ್ರಾಂಚ್ ಹೊಂದಿದೆ. 1946ರಲ್ಲಿ ಆರಂಭಗೊಂಡ ಈ ಹೊಟೆಲ್ ಅತ್ಯಂತ ಜನಪ್ರಿಯವಾಗಿದೆ. ಮುಂಬೈನ ಕೊಲಾಬಾ ವಲಯದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವ ಕಾರಣ ಬಡೆಮಿಯಾ ಈ ಏರಿಯಾದಲ್ಲಿ ಭಾರಿ ಖ್ಯಾತಿಗಳಿಸಿದೆ.

click me!