
ಆಹಾರದ ವಿಷಯಕ್ಕೆ ಬಂದಾಗ ಹಲವು ವಿಧಗಳಿವೆ. ಏಷ್ಯನ್, ಸೌತ್, ನಾರ್ಥ್, ವೆಸ್ಟರ್ನ್, ಥಾಯ್ ಇತ್ಯಾದಿ ಇತ್ಯಾದಿ. ಅಷ್ಟೆಲ್ಲ ವೆರೈಟಿ ಇದ್ದರೂ ಸತತ 7 ವರ್ಷಗಳಿಂದ ಬೆಸ್ಟ್ ಡಯಟ್ ಎಂಬ ಪಟ್ಟ ಗೆಲ್ಲುತ್ತಿರುವುದು ಮಾತ್ರ ಮೆಡಿಟರೇನಿಯನ್ ಆಹಾರ.
US ನ್ಯೂಸ್ & ವರ್ಲ್ಡ್ ರಿಪೋರ್ಟ್‌ನ 2024ರ ರೇಟಿಂಗ್‌ಗಳಲ್ಲಿ 'ಅತ್ಯುತ್ತಮ ಒಟ್ಟಾರೆ ಆಹಾರ' ಎಂದು ಗೆದ್ದಿದೆ ಮೆಡಿಟರೇನಿಯನ್ ಡಯಟ್. ಈ ಪುರಸ್ಕಾರ ಸುಮ್ಮನೆ ಬಂದಿದ್ದಲ್ಲ. ತನ್ನ ಅದ್ಭುತ ಆರೋಗ್ಯ ಪ್ರಯೋಜನಗಳಿಗಾಗಿ ಆಹಾರ ಕ್ಷೇತ್ರದಲ್ಲಿ ಮೆಡಿಟರೇನಿಯನ್ ಡಯಟ್ ವ್ಯಾಪಕವಾದ ಮೆಚ್ಚುಗೆಗೆ ಪಾತ್ರವಾಗಿದೆ.
ಮೆಡಿಟರೇನಿಯನ್ ಆಹಾರದ ಶಕ್ತಿ
ಮೆಡಿಟರೇನಿಯನ್ ಆಹಾರವು ಹೆಚ್ಚಾಗಿ ಸಸ್ಯ-ಆಧಾರಿತ ಆಹಾರವಾಗಿದ್ದು, ಆರೋಗ್ಯಕರ ಕೊಬ್ಬನ್ನು ತಿನ್ನುವವರಿಗೆ ನೀಡುತ್ತದೆ. ಈ ಆಹಾರ ವಿಧಾನವು ಪ್ರಧಾನವಾಗಿ ತರಕಾರಿಗಳು, ಹಣ್ಣುಗಳು ಮತ್ತು ಧಾನ್ಯಗಳನ್ನು ಒಳಗೊಂಡಿರುತ್ತದೆ. ಆಲಿವ್ ಎಣ್ಣೆಯು ಕೊಬ್ಬಿನ ಪ್ರಾಥಮಿಕ ಮೂಲವಾಗಿದೆ. ನೈಸರ್ಗಿಕ, ಸಂಸ್ಕರಿಸದ ಆಹಾರಗಳ ಮೇಲಿನ ಈ ಒತ್ತು ಅದರ ಆರೋಗ್ಯ-ಉತ್ತೇಜಿಸುವ ಗುಣಲಕ್ಷಣಗಳ ಮೂಲಾಧಾರವಾಗಿದೆ.
ನಿಮ್ಮ ಪುಟ್ಟ ಮಗುವಿಗೆ ಏನಪ್ಪಾ ತಿನ್ನಿಸೋದು ಎಂಬ ಚಿಂತೆನಾ? ಇಲ್ಲಿದೆ ಬಗೆಬಗೆ ಬೇಬಿ ಫುಡ್
ಮೌಲ್ಯಮಾಪನ ಹೇಗೆ?
ಮೆಡಿಟರೇನಿಯನ್ ಆಹಾರದ ಮೇಲೆ ನೀಡಿದ ಮನ್ನಣೆಯು ಕೇವಲ ವ್ಯಕ್ತಿನಿಷ್ಠ ಅಭಿಪ್ರಾಯಗಳನ್ನು ಆಧರಿಸಿಲ್ಲ. ವೈದ್ಯರು, ಆಹಾರ ತಜ್ಞರು ಮತ್ತು ತೂಕ ನಷ್ಟ ಸಂಶೋಧಕರನ್ನು ಒಳಗೊಂಡ ಗೌರವಾನ್ವಿತ ತಜ್ಞರ ಸಮಿತಿಯು ಈ ವಾರ್ಷಿಕ ಮೌಲ್ಯಮಾಪನವನ್ನು ನಡೆಸುತ್ತದೆ. 'ಪೌಷ್ಠಿಕಾಂಶದ ಸಂಪೂರ್ಣತೆ', 'ದೀರ್ಘಾವಧಿಯ ಲಾಭ' ಮತ್ತು 'ಸುಲಭ ಅನುಸರಣೆ' ಮುಂತಾದ ಅಂಶಗಳನ್ನು ಸೂಕ್ಷ್ಮವಾಗಿ ಪರಿಗಣಿಸಲಾಗುತ್ತದೆ.
ಮೆಡಿಟರೇನಿಯನ್ ಡಯಟ್ ಅನುಸರಿಸಲು ಸುಲಭವಾದ ಆಹಾರಕ್ರಮ, ಅತ್ಯುತ್ತಮ ಕುಟುಂಬ-ಸ್ನೇಹಿ ಆಹಾರ, ಮಧುಮೇಹ ನಿರ್ವಹಣೆ, ಮೂಳೆ ಮತ್ತು ಕೀಲುಗಳ ಆರೋಗ್ಯ ಮತ್ತು ಹೃದಯ-ಆರೋಗ್ಯ ಕಾಪಾಡುವಂಥ ಆಹಾರದಂತಹ ನಿರ್ದಿಷ್ಟ ಆರೋಗ್ಯ-ಕೇಂದ್ರಿತ ವಿಭಾಗಗಳಲ್ಲಿ ಉತ್ತಮವಾಗಿದೆ.
'ಅಮೃತಧಾರೆ' ಗೌತಮ್ ಬಾಯಲ್ಲಿ ನೀರೂರಿಸಿದ ಅವರೆಕಾಳು ಉಪ್ಪಿಟ್ಟು ಮಾಡೋದು ಹೇಗೆ?
ಮೆಡಿಟರೇನಿಯನ್ ಆಹಾರದ ಪಟ್ಟಿ
ಜನರು ತಮ್ಮ ತೋಟಗಳಲ್ಲಿ ಸ್ವತಃ ಬೆಳೆಯುವ ಯಾವುದನ್ನಾದರೂ ಸ್ವಲ್ಪ ಡೈರಿ ಮತ್ತು ಆಲಿವ್ ಎಣ್ಣೆಯೊಂದಿಗೆ ಸೇವಿಸಬೇಕು. ಇದು ಬಹುತೇಕ ಸಸ್ಯ ಆಧಾರಿತ ಆಹಾರದ ಬಳಕೆಯನ್ನು ಶಿಫಾರಸು ಮಾಡುತ್ತದೆ. ಬೀನ್ಸ್, ಬಟಾಣಿ ಮುಂತಾದ ತರಕಾರಿಗಳು, ಬೇಳೆಕಾಳುಗಳು, ಹಣ್ಣುಗಳನ್ನು ಬಳಸಿ ಆಹಾರ ತಯಾರಿಸುವಾಗ ಕೊಂಚ ಆಲಿವ್ ಆಯಿಲ್. ಜೊತೆಗೆ ಸ್ವಲ್ಪ ಡೇರಿ ಫುಡ್. ಇದರ ಹೊರತಾಗಿ ಮಾಂಸ, ಮದ್ಯ ಹಾಗೂ ಸ್ವೀಟ್ಸನ್ನು ಅಪರೂಪಕ್ಕೆ ಸ್ವಲ್ಪ ಪ್ರಮಾಣದಲ್ಲಿ ಸೇವಿಸಬೇಕು. ರೆಡ್ ಮೀಟ್, ಪ್ರೊಸೆಸ್ಡ್ ಫುಡ್ ದೂರವೇ ಇರಬೇಕು.
ಇದು 7 ವರ್ಷಗಳಿಂದಲೂ ಬೆಸ್ಟ್ ಡಯಟ್ ಎನಿಸಿಕೊಂಡಿದೆ ಎಂದ ಮೇಲೆ ಆರೋಗ್ಯಕ್ಕಾಗಿ ನಾವೇಕೆ ಇದನ್ನು ಅಳವಡಿಸಿಕೊಳ್ಳಬಾರದು?
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.