ಫ್ರೆಂಚ್ ಫ್ರೈಸ್ ಪ್ರೇಮಿಗಳೇ ಎಚ್ಚರ ! McDonald's Outlet ನಲ್ಲಿ ಕಪ್ಪು ಎಣ್ಣೆ, ಕೊಳೆತ ಟೊಮೆಟೊ ಪತ್ತೆ

Published : Feb 19, 2026, 12:06 PM IST
mcdonalds

ಸಾರಾಂಶ

ಮೆಕ್ಡೊನಾಲ್ಡ್ಸ್ ಫ್ರೆಂಚ್ ಫ್ರೈಸ್ ಇಷ್ಟಪಟ್ಟು ತಿನ್ನೋರಿಗೆ ಎಚ್ಚರಿಕೆಯೊಂದಿದೆ. ಇಲ್ಲಿನ ಆಹಾರ ಸುರಕ್ಷಿತವಾಘಿರುತ್ತೆ ಅಂತ ಕಣ್ಮುಚ್ಚಿ ತಿನ್ನೋ ಮುನ್ನ ಈ ಸುದ್ದಿ ಓದಿ. ದೊಡ್ಡ ಆಹಾರ ಚೈನ್ ಹೊಂದಿರುವ ಮೆಕ್ಡೊನಾಲ್ಡ್ಸ್ ಕೂಡ ಜನರ ಆರೋಗ್ಯದ ಜೊತೆ ಆಟ ಆಡ್ತಿದೆ. 

ಸ್ಟ್ರೀಟ್ ಫುಡ್ ತಿನ್ನುವಾಗ ಜನರ ಮನಸ್ಸಿನಲ್ಲಿ ಭಯವಿರುತ್ತೆ. ಆಹಾರ ತಯಾರಿಸಿದ ವಿಧಾನ, ಆರೋಗ್ಯ ಹಾಳು ಮಾಡಿದ್ರೆ ಅಂತ ಜನ ಅನುಮಾನಿಸ್ತಾರೆ. ಕೆಲವರು ಸ್ಟ್ರೀಟ್ ಫುಡ್ ಅಥವಾ ಸಣ್ಣಪುಟ್ಟ ಹೊಟೇಲ್ ಗಳಲ್ಲಿ ಆಹಾರ ತಿನ್ನೋದಿಲ್ಲ. ಅದೇ ಬ್ರ್ಯಾಂಡೆಡ್ ಆಹಾರ ಅಂದ್ರೆ ಕಣ್ಮುಚ್ಚಿ ತಿಂತಾರೆ. ಈ ಬ್ರ್ಯಾಂಡೆಡ್ ಆಹಾರ ಕಂಪನಿ ಪಟ್ಟಿಯಲ್ಲಿ ಮೆಕ್ಡೊನಾಲ್ಡ್ಸ್ (McDonald's) ಕೂಡ ಸೇರಿದೆ. ಮೆಕ್ಡೊನಾಲ್ಡ್ಸ್ ನಲ್ಲಿ ಆಹಾರವನ್ನು ಸರಿಯಾಗಿ ಪ್ರೊಸೆಸ್ ಮಾಡಿ ತಯಾರಿಸಲಾಗುತ್ತೆ ಎನ್ನುವ ನಂಬಿಕೆಯಲ್ಲಿ ನಾವಿದ್ದೇವೆ. ಆದ್ರೀಗ ಮೆಕ್ಡೊನಾಲ್ಡ್ಸ್ ಪ್ರೇಮಿಗಳಿಗೆ ಶಾಕಿಂಗ್ ನ್ಯೂಸ್ ಸಿಕ್ಕಿದೆ. ಮೆಕ್ಡೊನಾಲ್ಡ್ಸ್ ನಲ್ಲಿ ಕಪ್ಪು ಬಣ್ಣದ ಎಣ್ಣೆ ಪತ್ತೆಯಾಗಿದೆ.

ಜೈಪುರ ಮೆಕ್ಡೊನಾಲ್ಡ್ಸ್ ನಲ್ಲಿ ಸಿಕ್ಕಿದ್ದೇನು?

ಜೈಪುರದ ಮೆಕ್ಡೊನಾಲ್ಡ್ಸ್ ಕಾರ್ಖಾನೆಯಲ್ಲಿ ಅನಿರೀಕ್ಷಿತ ತಪಾಸಣೆ ನಡೆದಿದೆ. ಅಲ್ಲಿ ಸಿಕ್ಕ ಪದಾರ್ಥಗಳು ಆಹಾರ ಸುರಕ್ಷತೆಯ ಬಗ್ಗೆ ಆತಂಕ ಹುಟ್ಟುಹಾಕಿದೆ. ಅಲ್ಲಿನ ಅಡುಗೆ ಎಣ್ಣೆಯಲ್ಲಿ ನಿಗದಿತ ಮಿತಿಗಿಂತ ಹೆಚ್ಚಿನ ಮಟ್ಟದ ಟಿಪಿಸಿ (ಒಟ್ಟು ಧ್ರುವ ಸಂಯುಕ್ತಗಳು) ಇದೆ ಎಂದು ರಾಜ್ಯ ಆರೋಗ್ಯ ಅಧಿಕಾರಿಗಳು ವರದಿ ಮಾಡಿದ್ದಾರೆ. ಜೈಪುರದ ಗೌರವ್ ಟವರ್ನಲ್ಲಿರುವ ಮೆಕ್ಡೊನಾಲ್ಡ್ಸ್ ಔಟ್ಲೆಟ್ನಲ್ಲಿ ತಪಾಸಣೆ ನಡೆಸಲಾಯಿತು. ರಾಜಸ್ಥಾನ ಆಹಾರ ಸುರಕ್ಷತಾ ತಂಡ ಫ್ರೆಂಚ್ ಫ್ರೈಸ್ ಮತ್ತು ಇತರ ಆಹಾರವನ್ನು ಫ್ರೈ ಮಾಡಲು ಬಳಸುವ ಎಣ್ಣೆ ಚೆಕ್ ಮಾಡಿದೆ. ವರದಿ ಪ್ರಕಾರ ಕರಿಯುವ ಎಣ್ಣೆ ಬಣ್ಣ ಅತ್ಯಂತ ಕಪ್ಪಾಗಿತ್ತು. ಅಲ್ಲದೆ ನಿಷ್ಪ್ರಯೋಜಕವಾಗಿತ್ತು. ಅದನ್ನು ಸುಮಾರು 150 ಡಿಗ್ರಿ ಸೆಲ್ಸಿಯಸ್ಗೆ ಬಿಸಿ ಮಾಡಿ ದಿನವಿಡೀ ಬಳಸಲಾಗುತ್ತಿತ್ತು. ಸರಿಸುಮಾರು 40 ಲೀಟರ್ ಎಣ್ಣೆಯನ್ನು ಸ್ಥಳದಲ್ಲೇ ನಾಶಪಡಿಸಲಾಗಿದೆ.

ಪನೀರ್ ಅಂದ್ರೆ ಇಷ್ಟನಾ? ಪ್ರತಿದಿನ ಅತಿಯಾಗಿ ತಿಂದ್ರೆ ಈ ಸಮಸ್ಯೆಗಳು ಗ್ಯಾರಂಟಿ!

ನಾನ್ ವೆಜ್ ಫುಡ್ಗೆ ಬಳಸುವ ಎಣ್ಣೆಯಲ್ಲಿ ಒಟ್ಟು ಧ್ರುವ ಸಂಯುಕ್ತ (TPC) ಮಟ್ಟ ಶೇಕಡಾ 28 ರಷ್ಟಿತ್ತು. ವೆಜ್ ಆಹಾರಕ್ಕೆ ಬಳಸುವ ಎಣ್ಣೆಯಲ್ಲಿನ ಮಟ್ಟ ಶೇಕಡಾ 31 ರಷ್ಟಿದೆ ಎಂದು ಅಧಿಕಾರಿಗಳು ವರದಿ ಮಾಡಿದ್ದಾರೆ. ಆಹಾರ ಸುರಕ್ಷತಾ ಮಾನದಂಡಗಳ ಪ್ರಕಾರ, ಶೇಕಡಾ 25 ಕ್ಕಿಂತ ಹೆಚ್ಚಿನ TPC ಮಟ್ಟವನ್ನು ಅಸುರಕ್ಷಿತವೆಂದು ಪರಿಗಣಿಸಲಾಗುತ್ತದೆ. ಅಲ್ಲಿ ಬಳಸಲಾಗ್ತಿದ್ದ ಕೆಲ ಎಣ್ಣೆಗಳು ಈ ಮಿತಿಯನ್ನು ಮೀರಿದೆ. ಇದು ಕ್ಯಾನ್ಸರ್ ಜನಕ ಸಂಯುಕ್ತಗಳು ಮತ್ತು ಹೆಚ್ಚಿನ ಮಟ್ಟದ ಟ್ರಾನ್ಸ್ ಕೊಬ್ಬನ್ನು ಉತ್ಪಾದಿಸಲು ಪ್ರಾರಂಭಿಸುವ ಸಾಧ್ಯತೆ ಇದೆ. ಇದ್ರಿಂದ ಹೃದಯ ಕಾಯಿಲೆ ಅಪಾಯ ಹೆಚ್ಚಿಸುತ್ತದೆ.

ಈ ಔಟ್ ಲೆಟ್ ನಲ್ಲಿ ಬರೀ ಎಣ್ಣೆ ಮಾತ್ರವಲ್ಲ ಕೊಳೆತ ಟೊಮೆಟೊವನ್ನು ವಶಕ್ಕೆ ಪಡೆಯಲಾಗಿದೆ. ಔಟ್ಲೆಟ್ ನ ಕೋಲ್ಡ್ ರೂಮ್ ನಲ್ಲಿ ಪ್ಲಾಸ್ಟಿಕ್ ಬಾಕ್ಸ್ ನಲ್ಲಿ ಸುಮಾರು 40 ಕಿಲೋಗ್ರಾಂಗಳಷ್ಟು ಕೊಳೆತ ಟೊಮೆಟೊಗಳನ್ನು ಸಂಗ್ರಹಿಸಲಾಗಿತ್ತು.

Tea: ಟೀ ಹೀಗೆ ಮಾಡಿ.. ನಿಮ್ಮ ಜನ್ಮದಲ್ಲೇ ಇಷ್ಟು ರುಚಿಯಾದ ಟೀ ನೀವು ಕುಡಿದಿರಲ್ಲ; ಬೇಕಿದ್ರೆ ಚಾಲೆಂಜ್!

ಜೈಪುರದ ಮೆಕ್ಡೊನಾಲ್ಡ್ಸ್ ನಲ್ಲಿ ನಡೆದ ಈ ಬೆಳವಣಿಗೆಗೆ, ಮೆಕ್ಡೊನಾಲ್ಡ್ಸ್ ವಕ್ತಾರರು ಪ್ರತಿಕ್ರಿಯಿಸಿದ್ದಾರೆ. ಕಂಪನಿ ನಿಯಮಿತ ತಪಾಸಣೆಯನ್ನು ಒಪ್ಪಿಕೊಂಡಿದೆ. ತನಿಖೆಗೆ ಅಧಿಕಾರಿಗಳೊಂದಿಗೆ ಸಂಪೂರ್ಣವಾಗಿ ಸಹಕರಿಸುತ್ತಿದೆ ಎಂದಿದ್ದಾರೆ. ಮೆಕ್ಡೊನಾಲ್ಡ್ಸ್ನ ಕಠಿಣ ಜಾಗತಿಕ ಮಾನದಂಡಗಳನ್ನು ಪಾಲಿಸುತ್ತದೆ. FSSAI ಮತ್ತು ಆಹಾರ ನಿಯಂತ್ರಕ ಅಧಿಕಾರಿಗಳು ನಿಗದಿಪಡಿಸಿದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತದೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ನಮ್ಮ ಮೂಲಮಂತ್ರ. ಗ್ರಾಹಕರ ನಂಬಿಕೆಯನ್ನು ಕಾಪಾಡಿಕೊಳ್ಳಲು ಬದ್ಧವಾಗಿದೆ ಎಂದು ಕಂಪನಿ ಹೇಳಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಪನೀರ್ ಅಂದ್ರೆ ಇಷ್ಟನಾ? ಪ್ರತಿದಿನ ಅತಿಯಾಗಿ ತಿಂದ್ರೆ ಈ ಸಮಸ್ಯೆಗಳು ಗ್ಯಾರಂಟಿ!
Tea: ಟೀ ಹೀಗೆ ಮಾಡಿ.. ನಿಮ್ಮ ಜನ್ಮದಲ್ಲೇ ಇಷ್ಟು ರುಚಿಯಾದ ಟೀ ನೀವು ಕುಡಿದಿರಲ್ಲ; ಬೇಕಿದ್ರೆ ಚಾಲೆಂಜ್!