Kannada

ಪನೀರ್ ಅಳತೆ ಮೀರಿ ತಿಂದರೆ ಅಡ್ಡಪರಿಣಾಮಗಳು ತಪ್ಪಿದ್ದಲ್ಲ!

ಪನೀರ್ ಪ್ರೋಟೀನ್‌ನ ಉತ್ತಮ ಮೂಲ. ಆದರೆ, ಇದನ್ನು ಅತಿಯಾಗಿ ಸೇವಿಸಿದರೆ ಆರೋಗ್ಯಕ್ಕೆ ಹಾನಿಕಾರಕ. ಇದರಿಂದಾಗುವ ಅಡ್ಡಪರಿಣಾಮಗಳ ಬಗ್ಗೆ ತಿಳಿಯೋಣ ಬನ್ನಿ

Kannada

ಜೀರ್ಣಕ್ರಿಯೆ ಸಮಸ್ಯೆ

ಲ್ಯಾಕ್ಟೋಸ್ ಅಸಹಿಷ್ಣುತೆ (Lactose intolerance) ಇರುವವರಿಗೆ ಪನೀರ್ ಜೀರ್ಣಿಸಿಕೊಳ್ಳುವುದು ಕಷ್ಟ. ಇದು ಗ್ಯಾಸ್, ಹೊಟ್ಟೆ ಉಬ್ಬರ, ಹೊಟ್ಟೆ ನೋವು ಮತ್ತು ಭೇದಿಯಂತಹ ಸಮಸ್ಯೆಗಳನ್ನು ಉಂಟುಮಾಡಬಹುದು.

Image credits: Pinterest
Kannada

ತೂಕ ಹೆಚ್ಚಳಕ್ಕೆ ಕಾರಣ

ಪನೀರ್‌ನಲ್ಲಿ ಕೊಬ್ಬು ಮತ್ತು ಕ್ಯಾಲೋರಿಗಳು ಅಧಿಕವಾಗಿವೆ. ಇದನ್ನು ಹೆಚ್ಚು ತಿಂದರೆ, ದೇಹದ ತೂಕ ವೇಗವಾಗಿ ಹೆಚ್ಚಾಗುವ ಸಾಧ್ಯತೆ ಇರುತ್ತದೆ.

Image credits: Pinterest
Kannada

ಹೃದಯದ ಆರೋಗ್ಯಕ್ಕೆ ಕುತ್ತು

ಪನೀರ್‌ನಲ್ಲಿ ಸ್ಯಾಚುರೇಟೆಡ್ ಕೊಬ್ಬಿನಾಂಶ ಹೆಚ್ಚಾಗಿರುತ್ತದೆ. ಇದನ್ನು ಅತಿಯಾಗಿ ಸೇವಿಸುವುದರಿಂದ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗಿ, ಹೃದಯ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ.

Image credits: Pinterest
Kannada

ಅಧಿಕ ರಕ್ತದೊತ್ತಡ

ಅಂಗಡಿಗಳಲ್ಲಿ ಮಾರಾಟವಾಗುವ ಕೆಲವು ಪನೀರ್‌ಗಳಲ್ಲಿ ಉಪ್ಪಿನಾಂಶ ಹೆಚ್ಚಿರುತ್ತದೆ. ಇದನ್ನು ಹೆಚ್ಚು ತಿಂದರೆ ಅಧಿಕ ರಕ್ತದೊತ್ತಡದ (High BP) ಸಮಸ್ಯೆ ಎದುರಾಗಬಹುದು.

Image credits: freepik.com
Kannada

ಪೌಷ್ಟಿಕಾಂಶದ ಅಸಮತೋಲನ

ಪನೀರ್ ಅನ್ನೇ ಮುಖ್ಯ ಆಹಾರವಾಗಿ ಸೇವಿಸಿದರೆ, ಇತರ ಆಹಾರಗಳಿಂದ ಸಿಗಬೇಕಾದ ವಿಟಮಿನ್‌ಗಳು ಮತ್ತು ಖನಿಜಾಂಶಗಳ ಕೊರತೆ ಉಂಟಾಗಬಹುದು. ಇದು ಪೌಷ್ಟಿಕಾಂಶದ ಅಸಮತೋಲನಕ್ಕೆ ಕಾರಣವಾಗುತ್ತದೆ.

Image credits: freepik
Kannada

ಅಲರ್ಜಿ ಸಮಸ್ಯೆಗಳು

ಕೆಲವರಿಗೆ ಹಾಲಿನ ಉತ್ಪನ್ನಗಳಿಂದ ಅಲರ್ಜಿ ಇರುತ್ತದೆ. ಅಂತಹವರು ಪನೀರ್ ತಿಂದರೆ ತುರಿಕೆ, ಊತ, ಮತ್ತು ಚರ್ಮದ ಮೇಲೆ ದದ್ದುಗಳು ಕಾಣಿಸಿಕೊಳ್ಳಬಹುದು.

Image credits: Freepik
Kannada

ಕಳಪೆ, ಕಲಬೆರಕೆ ಪನೀರ್

ಮಾರುಕಟ್ಟೆಯಲ್ಲಿ ಸಿಗುವ ಕಲಬೆರಕೆ ಪನೀರ್ ಸೇವನೆಯಿಂದ ಜೀರ್ಣಕಾರಿ ಸಮಸ್ಯೆಗಳು ಮಾತ್ರವಲ್ಲದೆ, ಆಂತರಿಕ ಅಂಗಗಳಿಗೂ ಹಾನಿಯಾಗುವ ಅಪಾಯವಿದೆ.

Image credits: Freepik
Kannada

ರಕ್ತದಲ್ಲಿನ ಸಕ್ಕರೆ ಮಟ್ಟದ ಮೇಲೆ ಪರಿಣಾಮ

ಪನೀರ್‌ನಲ್ಲಿ ಕಾರ್ಬೋಹೈಡ್ರೇಟ್ ಕಡಿಮೆ ಇರುತ್ತದೆ. ಆದರೆ, ಇದನ್ನು ಅತಿಯಾಗಿ ಸೇವಿಸಿದರೆ ಮಧುಮೇಹಿಗಳ ಗ್ಲೂಕೋಸ್ ನಿಯಂತ್ರಣದ ಮೇಲೆ ಪರಿಣಾಮ ಬೀರಬಹುದು. ಹಾಗಾಗಿ ಎಚ್ಚರಿಕೆ ಅಗತ್ಯ.

Image credits: Freepik

ನೀವು ಪ್ರತಿದಿನ ಗ್ರೀನ್ ಟೀ ಕುಡೀತೀರಾ? ಹಾಗಿದ್ರೆ ಈ ವಿಷಯಗಳು ನಿಮಗೆ ಗೊತ್ತಿರಲಿ!

ಕಿಡ್ನಿ ಆರೋಗ್ಯ ಹಾಳು ಮಾಡುವ 6 ಆಹಾರಗಳಿವು! ಅಪ್ಪಿತಪ್ಪಿಯೂ ಹೀಗೆ ಮಾಡ್ಬೇಡಿ

ಹಸಿರು ಸೇಬು ತಿನ್ನುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?

ಹಾಲು, ನೀರು ಏನೂ ಬೇಡ ಜಟ್‌ಪಟ್ ಮಾಡಿ ಬೂದು ಕುಂಬಳಕಾಯಿ ಹಲ್ವಾ