ಭೂಮಿ ಮೇಲಿನ ಬಂಗಾರ ಶುಂಠಿ.. ಹೀಗೆ ಸೇವಿಸಿ ನೋಡಿ, ನಿಮ್ಮ ದೇಹದ ವಯಸ್ಸು ಇಪ್ಪತು ವರ್ಷ ಕಡಿಮೆ ಆಗುತ್ತೆ!

Published : Feb 14, 2026, 07:24 PM IST
ginger

ಸಾರಾಂಶ

ಹಸಿ ಶುಂಠಿ ಹಾಗೂ ಒಣ ಶುಂಠಿ ಔ‍ಷಧೀಯ ಗುಣಗಳಲ್ಲಿ ವ್ಯತ್ಯಾಸವಿದೆ. ಆರೋಗ್ಯಕ್ಕೆ ಸಂಬಂಧಪಟ್ಟು ಹಸಿ ಶುಂಠಿ ಹಾಗೂ ಒಣ ಶುಂಠಿ ಬೇರೆ ಬೇರೆ ರೀತಿಯಲ್ಲಿ ತನ್ನ ಪಾತ್ರ ವಹಿಸುತ್ತದೆ. ಆಯುರ್ವೇದ ಶಾಸ್ತ್ರದಲ್ಲಿ ಈ ಸಂಗತಿಯ ಬಗ್ಗೆ ವಿವಾರವಾದ ಉಲ್ಲೇಖವಿದೆ. ಏನದು ನೋಡಿ..!

ಶುಂಠಿಯ ಅಪಾರ ಉಪಯೋಗ

ಶುಂಠಿ (Ginger) ಎನ್ನುವುದು ಭಾರತೀಯ ಆಹಾರ ಪದ್ಧತಿಯಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ. ಭಾರತೀಯರ ಮನೆಯ ಅಡುಗೆಮನೆಯಲ್ಲಿ ಶುಂಠಿಗೆ ಪ್ರಮುಖ ಸ್ಥಾನವಿದೆ. ಪ್ರತಿಯೊಬ್ಬರ ಮನೆಯ ಅಡುಗೆಕೋಣೆಯಲ್ಲಿ ಶುಂಠಿ ಹಸಿಯ ರೂಪದಲ್ಲಿ ಅಥವಾ ಒಣಗಿದ ರೂಪದಲ್ಲಿ ಸ್ಥಾನ ಪಡೆದಿರುತ್ತದೆ. ಹಾಗಿದ್ದರೆ ಯಾಕೆ ಶುಂಠಿಗೆ ಅಷ್ಟೊಂದು ಮುಖ್ಯ ಸ್ಥಾನ? ಇಲ್ಲಿದೆ ಶುಂಠಿಯ ಪ್ರಮುಖ ಉಪಯೋಗಗಳು.

ಶುಂಠಿಯ ಮುಖ್ಯ ಪ್ರಯೋಜನ ಎಂದರೆ ಇದು ಜೀರ್ಣಾಂಗ ವ್ಯವಸ್ಥೆಯಲ್ಲಿ ಏನಾದರೂ ಅವ್ಯವಸ್ಥೆ ಆದಾಗ ತ್ವರಿತವಾಗಿ ಪರಿಹಾರ ನೀಡುತ್ತದೆ. ಈ ಕಾರಣಕ್ಕೇ ಭಾರತದಲ್ಲಿ ಪುರಾತನ ಕಾಲದಿಂದಲೂ ಇದನ್ನು ಅಡುಗೆಯಲ್ಲಿ ಬಳಕೆ ಮಾಡಲಾಗುತ್ತದೆ. ಜೊತೆಗೆ, ಹೊಟ್ಟೆ ಸಮಸ್ಯೆ ಏನೇ ಇದ್ದರೂ ಮನೆಗಳಲ್ಲಿ ಹಿರಿಯರು ಹೇಳುವ ಒಂದೇ ಮಾತು ಏನೆಂದರೆ- ಮಜ್ಜಿಗೆ ಜೊತೆ ಸ್ವಲ್ಪ ಶುಂಠಿ, ಉಪ್ಪು ಬೆರೆಸಿ ಕುಡಿಯಿರಿ ಎಂದು. ಅಷ್ಟರಮಟ್ಟಿಗೆ ಅನಕ್ಷರಸ್ಥ ಹಳ್ಳಿಯ ಹೆಂಗಸರಿಗೂ ಶುಂಠಿಯ ಮಹತ್ವ ಗೊತ್ತು.

ಹಸಿ ಶುಂಠಿ ಹಾಗೂ ಒಣ ಶುಂಠಿ ಔ‍ಷಧೀಯ ಗುಣಗಳು

ಆದರೆ, ಹಸಿ ಶುಂಠಿ ಹಾಗೂ ಒಣ ಶುಂಠಿ ಔ‍ಷಧೀಯ ಗುಣಗಳಲ್ಲಿ ವ್ಯತ್ಯಾಸವಿದೆ. ಆರೋಗ್ಯಕ್ಕೆ ಸಂಬಂಧಪಟ್ಟು ಹಸಿ ಶುಂಠಿ ಹಾಗೂ ಒಣ ಶುಂಠಿ ಬೇರೆ ಬೇರೆ ರೀತಿಯಲ್ಲಿ ತನ್ನ ಪಾತ್ರ ವಹಿಸುತ್ತದೆ. ಆಯುರ್ವೇದ ಶಾಸ್ತ್ರದಲ್ಲಿ ಈ ಸಂಗತಿಯ ಬಗ್ಗೆ ವಿವಾರವಾದ ಉಲ್ಲೇಖವಿದೆ. ಸದ್ಯ ಆರೋಗ್ಯ ಕಾಪಾಡಿಕೊಳ್ಳಲು, ಯಾವ ಸಮಸ್ಯೆಗೆ ಯಾವ ಶುಂಠಿ (ಹಸಿ ಅಥವಾ ಒಣ ಶುಂಠಿ) ಬಳಸಬೇಕು ಎಂಬುದು ಪ್ರತಿಯೊಂದು ಮನೆಯ ಹಿರಯರಿಗೆ ಗೊತ್ತು. ಅವರಿಂದ ಕೇಳಿ ತಿಳಿದುಕೊಳ್ಳುವುದು ಉತ್ತಮ.

ಸಾಮಾನ್ಯವಾಗಿ ಹಸಿ ಶುಂಠಯನ್ನು ಹೊಟ್ಟೆ ಸಮಸ್ಯೆಗೆ ಬಳಕೆ ಮಾಡಿದರೆ ಒಣ ಶುಂಠಿಯನ್ನು ಶ್ವಾಸಕೋಶ ಹಾಗೂ ಗಂಟಲು ಸಂಬಂಧಿತ ಸಮಸ್ಯೆಗಳ ಪರಿಹಾರೋಪಾಯಕ್ಕೆ ಬಳಸಲಾಗುತ್ತದೆ ಎನ್ನಲಾಗುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗೆ ನೀವು ಆಯುರ್ವೇದ ಪಂಡಿತರು, ಪುಸ್ತಕಗಳು ಅಥವಾ ಆಯುರ್ವೇದ ವೈದ್ಯರ ಬಳಿ ಕೇಳಿ ತಿಳಿದುಕೊಳ್ಳಬೇಕು. ಕಾರಣ, ಆಯುರ್ವೇದ ಶಾಸ್ತ್ರದ ಪ್ರಕಾರ, ವಾತ-ಪಿತ್ತ-ಕಫ ಪ್ರಕೃತಿಗೆ ಸಂಬಂಧಪಟ್ಟು ಬೇರೆಬೇರೆ ಸಮಯದಲ್ಲಿ ಅಂದರೆ ಆಯಾ ಕಾಲದಲ್ಲಿ ಆಯಾ ಪ್ರಕೃತಿಯವರು ಶುಂಠಿಯನ್ನು ಹೇಗೆ ಉಪಯೋಗಿಸಬೇಕು ಎಂಬುದನ್ನು ಬಲ್ಲವರಿಂದ ತಿಳಿದುಕೊಂಡು ಉಪಯೋಗಿಸುವುದು ಸೂಕ್ತ.

ಶುಂಠಿ ಉಷ್ಣ ಪದಾರ್ಥ?

ಶುಂಠಿ ಸ್ವಾಭಾವಿವಾಗಿ ಉಷ್ಣ ಪದಾರ್ಥ. ಅದನ್ನು ಮಜ್ಜಿಗೆ ಅಥವಾ ತಂಪು ಪ್ರಕೃತಿಯುಳ್ಳ ಪದಾರ್ಥಗಳೊಂದಿಗೆ ಮಿಕ್ಸ್ ಮಾಡಿ ಸೇವಿಸಲು ಹೇಳುತ್ತಾರೆ. ಆದರೂ ವೈದ್ಯರ ಸಲಹೆಯ ಮೇರೆಗೆ ತಮ್ಮತಮ್ಮ ಪ್ರಕೃತಿ ಅರಿತು ಹಸಿ ಶುಂಠ ಅಥವಾ ಒಣ ಶುಂಠಿಯನ್ನು ಸೇವಿಸಿ ತಮಗಿರುವ ನಿರ್ಧಿಷ್ಠ ಸಮಸ್ಯೆಯನ್ನು ಪರಿಹರಿಸಿಕೊಳ್ಳಿ. ಶುಂಠಿಯನ್ನು ಹಿತಮಿತವಾಗಿ, ವೈದ್ಯರು ಅಥವಾ ಹಿರಿಯರ ಮಾರ್ಗದರ್ಶನದ ಮೂಲಕವೇ ಸೇವಿಸಬೇಕು. ಇಲ್ಲದಿದ್ದರೆ ಇರುವ ಸಮಸ್ಯೆ ಉಲ್ಬಣಗೊಂಡು ಜೊತೆಗೆ ಮತ್ತೊಂದು ಸಮಸ್ಯೆಯನ್ನು ಸೃಷ್ಟಿಮಾಡಿಕೊಂಡಂತಾಗಬಹುದು.

ಸೂಚನೆ: ಶುಂಠಿಯ ಬಳಕೆ ಹಿತಮಿತವಾಗಿರಲಿ. ಹಿರಿಯರ ಅಥವಾ ವೈದ್ಯರ ಮಾರ್ಗದರ್ಶನದಂತೆ ಶುಂಠಿಯನ್ನು ಬಳಸಿ. ಶುಂಠಿಯ ಬಳಕೆ ಹಾಗೂ ಪರಿಹಾರದ ಬಗ್ಗೆ ಸೂಕ್ತ ವ್ಯಕ್ತಿಯಿಂದ ಸರಿಯಾದ ಮಾಹಿತಿ ಪಡೆದು ಬಳಿಸಿ. ಬಳಕೆ ಮಾಡಿದ ಬಳಿಕ ಹೆಚ್ಚಿನ ಅಡ್ಡಪರಿಣಾಮಗಳೇನಾದರೂ ಕಂಡುಬಂದಲ್ಲಿ ತಕ್ಷಣವೇ ವೈದ್ಯರ ಮಾರ್ಗದರ್ಶನ ಪಡೆಯಿರಿ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಈ ಸಿಂಪಲ್‌ ಟಿಪ್ಸ್‌ ಫಾಲೋ ಮಾಡ್ರಿ.. ಮನೇಲಿ ಮೆಹೆಂದಿ ಗಿಡ ಸೊಂಪಾಗಿ ಬೆಳೆಯುತ್ತೆ!
Garlic Water: ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ನೀರು ಕುಡಿದರೆ ಏನಾಗುತ್ತೆ? ಈ ಸಮಸ್ಯೆಗಳಿರೋರು ಕುಡಿಯಿರಿ!!