ರೆಸ್ಟೋರೆಂಟ್‌ಗಳಲ್ಲಿ ಆಹಾರದಲ್ಲಿ ನೊಣ, ಜೇಡ ಮತ್ತೇನಾದರೂ ಸಿಗುವುದು ಹೊಸತೇನಲ್ಲ. ಹಾಗೆಯೇ ಇಲ್ಲೊಂದೆಡೆ ಮೆಕ್‌ಡೊನಾಲ್ಡ್‌ನಲ್ಲಿ ವಿತರಿಸಲಾದ ಬರ್ಗರ್‌ನಲ್ಲಿ ಇಲಿಯ ಹಿಕ್ಕೆ ದೊರೆತಿದ್ದು, ಗ್ರಾಹಕರನ್ನು ಬೆಚ್ಚಿ ಬೀಳುವಂತೆ ಮಾಡಿದೆ.
ಲಂಡನ್‌ನಲ್ಲಿರುವ ಮೆಕ್‌ಡೊನಾಲ್ಡ್ ಔಟ್‌ಲೆಟ್‌ಗೆ ಕಳಪೆ ಆಹಾರವನ್ನು ಸುಮಾರು 5.14 ಕೋಟಿ ದಂಡ ವಿಧಿಸಲಾಯಿತು. ಗ್ರಾಹಕರೊಬ್ಬರು ಬರ್ಗರ್‌ನೊಳಗೆ ಇಲಿಗಳ ಹಿಕ್ಕೆ ಇರುವುದನ್ನು ಗಮನಿಸಿದರು. ಈ ಬಗ್ಗೆ ಅಧಿಕಾರಿಗಳಿಗೆ ವರದಿ ಮಾಡಿದ ನಂತರ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಆರೋಗ್ಯ ನಿರೀಕ್ಷಕರು ರೆಸ್ಟೋರೆಂಟ್‌ನಲ್ಲಿ ಪರಿಶೀಲಿಸಿದಾಗ ಸುತ್ತಮುತ್ತಲೂ ಇಲಿಗಳಿರುವುದು ಕಂಡು ಬಂತು. ಪೂರ್ವ ಲಂಡನ್‌ನ ಲೇಟನ್‌ಸ್ಟೋನ್‌ನಲ್ಲಿರುವ ಮೆಕ್‌ಡೊನಾಲ್ಡ್ಸ್ ಡ್ರೈವ್-ಥ್ರೂನಿಂದ ಗ್ರಾಹಕರು ಚೀಸ್‌ಬರ್ಗರ್ ಖರೀದಿಸಿದ್ದರು. ಮಹಿಳೆ ತನ್ನ ಆಹಾರವನ್ನು ಸವಿಯುತ್ತಿದ್ದಂತೆ, ಆಹಾರದಲ್ಲಿ ಇಲಿ ಹಿಕ್ಕೆಗಳನ್ನು ಗುರುತಿಸಿ ಅಸಹ್ಯಗೊಂಡಳು ಎಂದು ವರದಿಯಲ್ಲಿ ಹೇಳಲಾಗಿದೆ.
ಇದರ ನಂತರ, ಗ್ರಾಹಕರು (Customer) ವಾಲ್ತಮ್ ಫಾರೆಸ್ಟ್ ಕೌನ್ಸಿಲ್‌ಗೆ ದೂರು ನೀಡಿದರು ನಂತರ ಆರೋಗ್ಯ ಅಧಿಕಾರಿಗಳು (Health officers) ತನಿಖೆಯನ್ನು ಪ್ರಾರಂಭಿಸಿದರು. ಅಧಿಕಾರಿಗಳು ಮಳಿಗೆಗೆ ಭೇಟಿ ನೀಡಿ ರೆಸ್ಟೋರೆಂಟ್‌ನ ಒಳಗಡೆ ತುಂಬಾ ಅನೈರ್ಮಲ್ಯ ಇರುವುದನ್ನು ಗುರುತಿಸಿದರು. ಇಲಿಯ ಕೊಳೆತ ಅವಶೇಷಗಳು ಮತ್ತು ಹಿಕ್ಕೆಗಳು ಆಹಾರವನ್ನು (Food) ಇರಿಸುವ ಮತ್ತು ತಯಾರಿಸುವ ಪ್ರದೇಶಗಳನ್ನು ಒಳಗೊಂಡಂತೆ ಔಟ್ಲೆಟ್ ಉದ್ದಕ್ಕೂ ಕಂಡುಬಂತು. ಸಿಬ್ಬಂದಿ ಕೊಠಡಿ ಮತ್ತು ಶೇಖರಣಾ ಪ್ರದೇಶವೂ ಅನೈರ್ಮಲ್ಯದಿಂದ ಕೂಡಿರುವುದು ತಪಾಸಣೆ ವೇಳೆ ಕಂಡುಬಂದಿದೆ ಎಂದು ವರದಿ ತಿಳಿಸಿದೆ.
undefined
ಛೀ..ಕೆಎಫ್‌ಸಿ ಚಿಕನ್ ಪೀಸ್‌ನಲ್ಲಿತ್ತು ಸತ್ತ ಜೇಡ..ಟೇಸ್ಟೀ ಎಂದು ತಿಂದ ವ್ಯಕ್ತಿಗೆ ಶಾಕ್!
ಕಳಪೆ ನೈರ್ಮಲ್ಯದ ರೆಸ್ಟೋರೆಂಟ್‌ನಿಂದ ಗ್ರಾಹಕರಿಗೆ ತೊಂದರೆ
ಈ ರೆಸ್ಟೋರೆಂಟ್ ಗ್ರಾಹಕರ ಆರೋಗ್ಯಕ್ಕೆ ತೊಂದರೆಯನ್ನುಂಟು ಮಾಡುತ್ತದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ರೆಸ್ಟೋರೆಂಟ್‌ನ್ನು ತಕ್ಷಣವೇ ಹತ್ತು ದಿನಗಳವರೆಗೆ ಮುಚ್ಚಲು ಆದೇಶಿಸಿದ್ದಾರೆ. ಮೆಕ್‌ಡೊನಾಲ್ಡ್ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗಿದೆ. ಆಹಾರ ನೈರ್ಮಲ್ಯ ಕಾನೂನುಗಳನ್ನು ಉಲ್ಲಂಘಿಸಿದ್ದಕ್ಕಾಗಿ ದಂಡವನ್ನು ವಿಧಿಸಲಾಯಿತು.
ಇದರ ಜೊತೆಗೆ, ಮೆಕ್‌ಡೊನಾಲ್ಡ್ಸ್‌ಗೆ ನ್ಯಾಯಾಲಯವು ಅಂದಾಜು ರೂ. 22.6 ಲಕ್ಷ ಕಾನೂನು ವೆಚ್ಚದಲ್ಲಿ ಮತ್ತು ಗ್ರಾಹಕರಿಗೆ 19,537 ರೂ. ಹೆಚ್ಚುವರಿ ಶುಲ್ಕವಾಗಿ ಪಾವತಿಸಲು ಆದೇಶಿಸಲಾಯಿತು. 'ಇದು ಯಾವುದೇ ಸ್ಟ್ರೀಟ್ ಫುಡ್ ಅಲ್ಲ. ಬ್ರ್ಯಾಂಡ್‌ನ ಔಟ್‌ಲೆಟ್ ನಿರ್ಮಿಸಿ ಆಹಾರ ವಿತರಿಸುವಾಗ ಮೆಕ್‌ಡೊನಾಲ್ಡ್ಸ್‌ನಲ್ಲಿ ಗ್ರಾಹಕರು ಆಹಾರ ನೈರ್ಮಲ್ಯದಲ್ಲಿ ಉನ್ನತ ಗುಣಮಟ್ಟವನ್ನು ನಿರೀಕ್ಷಿಸುತ್ತಾರೆ ಎಂದು ಜಿಲ್ಲಾ ನ್ಯಾಯಾಧೀಶ ಸುಸಾನ್ ಹೋಲ್ಡಮ್ ಗಮನಿಸಿದರು.
Viral News: ಬೆಂಗಳೂರಿಗರನ್ನು ದಂಗಾಗಿಸಿದೆ ಕ್ಲೌಡ್ ಕಿಚನ್ ಫೋಟೋ
ವರದಿಯ ಪ್ರಕಾರ, 'ದೀರ್ಘಕಾಲದವರೆಗೆ ಅಸ್ತಿತ್ವದಲ್ಲಿಲ್ಲದ ಅಥವಾ ಪರಿಣಾಮಕಾರಿಯಲ್ಲದ ಶುಚಿಗೊಳಿಸುವಿಕೆ"ಯಿಂದಾಗಿ ರೆಸ್ಟೋರೆಂಟ್ ಆವರಣವು ಕೊಳಕು ನೀರಿನಿಂದ ತುಂಬಿತ್ತು' ಎಂದು ನ್ಯಾಯಾಧೀಶರು ಹೈಲೈಟ್ ಮಾಡಿದರು. ಔಟ್ಲೆಟ್ ಅನ್ನು ಕೀಟ ಮುಕ್ತವಾಗಿಡಲು ಜವಾಬ್ದಾರರಾಗಿರುವ ಕೀಟ ನಿಯಂತ್ರಣ ಕಂಪನಿಯು ಸತ್ತ ಇಲಿ ಮತ್ತು ಇತರ ಕೊಳೆಯನ್ನು ನಿರ್ಲಕ್ಷಿಸಿದೆ ಎಂದು ನ್ಯಾಯಾಲಯವು ಗಮನಿಸಿದೆ. ಈ ವಿಷಯಕ್ಕೆ ಪ್ರತಿಕ್ರಿಯಿಸಿದ ಮ್ಯಾಕ್‌ಡೊನಾಲ್ಡ್‌ನ ವಕ್ತಾರರು, 'ತಮ್ಮ ಪೂರ್ವ ಲಂಡನ್ ಶಾಖೆಯಲ್ಲಿ ಕಳಪೆ ನೈರ್ಮಲ್ಯ ಪರಿಸ್ಥಿತಿಗಳಿಗಾಗಿ ಕಂಪನಿಯು ಕ್ಷಮೆಯಾಚಿಸಿದೆ ಎಂದು ಹೇಳಿದರು. ಮೆಕ್‌ಡೊನಾಲ್ಡ್ಸ್ ಉತ್ತಮ ಗುಣಮಟ್ಟದ ಆರೋಗ್ಯ, ಸುರಕ್ಷತೆ ಮತ್ತು ನೈರ್ಮಲ್ಯಕ್ಕಾಗಿ ಹೆಸರುವಾಸಿಯಾಗಿದೆ. ಆದರೆ ಕೆಲವೊಮ್ಮೆ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಇಂಥಾ ಘಟನೆಗಳಾಗುತ್ತವೆ' ಎಂದಿದ್ದಾರೆ.