ಮೆಟ್ ಗಾಲಾ ಸದ್ಯ ಸುದ್ದಿಯಲ್ಲಿದೆ. ಆಲಿಯಾ, ಪ್ರಿಯಾಂಕ ಡ್ರೆಸ್ ಮಾತ್ರವಲ್ಲ ಅಲ್ಲಿನ ಮೆನು ಎಲ್ಲರ ಗಮನ ಸೆಳೆದಿದೆ. ಇಷ್ಟೆಲ್ಲ ಹಣ ನೀಡಿಯೂ ಇಂಥ ಆಹಾರ ಸೇವನೆ ಮಾಡ್ಬೇಕಾ ಅಂತಾ ನೆಟ್ಟಿಗರು ಪ್ರಶ್ನೆ ಮಾಡ್ತಿದ್ದಾರೆ. ಅಷ್ಟಕ್ಕೂ ಅಲ್ಲಿ ನೀಡಿದ ಆಹಾರ ಹೇಗಿದೆ ಗೊತ್ತಾ?
ಮೆಟ್ ಗಾಲಾ ಇಡೀ ಚಲನಚಿತ್ರ ಮತ್ತು ಫ್ಯಾಶನ್ ಜಗತ್ತು ಕುತೂಹಲದಿಂದ ಕಾಯುವ ಒಂದು ಇವೆಂಟ್ ಆಗಿದೆ. ಈ ಬಾರಿ ಮೇ 1 ರಂದು ನ್ಯೂಯಾರ್ಕ್ ನಲ್ಲಿ ಮೆಟ್ ಗಾಲಾ ಆಯೋಜಿಸಲಾಗಿತ್ತು. ಆಲಿಯಾ ಭಟ್, ಪ್ರಿಯಾಂಕಾ ಚೋಪ್ರಾ, ಇಶಾ ಅಂಬಾನಿ ಮತ್ತು ನತಾಶಾ ಪೂನಾವಾಲಾ ಸೇರಿದಂತೆ ಅನೇಕ ಭಾರತೀಯ ಸೆಲೆಬ್ರಿಟಿಗಳು ಈ ವರ್ಷದ ಮೆಟ್ ಗಾಲಾ ರೆಡ್ ಕಾರ್ಪೆಟ್ ಮೇಲೆ ಮಿಂಚಿದ್ದಾರೆ. ರೆಡ್ ಕಾರ್ಪೆಟ್ ಮೇಲೆ ಸೆಲೆಬ್ರಿಟಿಗಳನ್ನು ನೋಡೋದೇ ಇಲ್ಲಿನ ವಿಶೇಷ. ಅವರ ಬಟ್ಟೆ, ವಾಕಿಂಗ್ ಶೈಲಿ ವರ್ಷಪೂರ್ತಿ ಸುದ್ದಿಯಾಗ್ತಿರುತ್ತದೆ.
ಡಿಸೈನರ್ (Designer) ದಿವಂಗತ ಕಾರ್ಲ್ ಲಾಗರ್‌ಫೆಲ್ಡ್ ಅವರಿಗೆ ಗೌರವ ಸಲ್ಲಿಸುವುದು ಈ ವರ್ಷದ ಮೆಟ್ ಗಾಲಾ ಥೀಮ್ ಆಗಿತ್ತು. ಹಾಗಾಗಿಯೇ ಈ ಬಾರಿ ಕಪ್ಪು (Black) ಬಿಳುಪು ಡಿಸೈನರ್ ಬಟ್ಟೆಯಲ್ಲಿ ತಾರೆಯರು ಮಿಂಚಿದರು. ಮೆಟ್ ಗಾಲಾ (Met Gala) 2023 ರ ರೆಡ್ ಕಾರ್ಪೆಟ್‌ನಲ್ಲಿ ಮಿಂಚಿದ ಕಲಾವಿದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅನೇಕ ಚರ್ಚೆಗಳು ನಡೆಯುತ್ತಿವೆ. ಆದ್ರೆ ಈ ಬಾರಿ ಹೆಚ್ಚು ಗಮನ ಸೆಳೆದಿದ್ದು ಫ್ಯಾಷನ್ ಈವೆಂಟ್‌ನ ಡಿನ್ನರ್ ಮೆನು.
ರೆಡ್ ಕಾರ್ಪೆಟ್ ನಂತ್ರ ಸೆಲೆಬ್ರಿಟಿಗಳು ಡಿನ್ನರ್ ಗೆ ತೆರಳಿದ್ದರು. ವೋಗ್ ವರದಿ ಪ್ರಕಾರ, ಪ್ರಸಿದ್ಧ ಫ್ಯಾಷನ್ ಡಿಸೈನರ್ ಕಾರ್ಲ್ ಲಾಗರ್‌ಫೆಲ್ಡ್ ಅರಿಗೆ ಇಷ್ಟವಾದ ಆಹಾರವನ್ನೇ ಈ ಬಾರಿ ಮೆಟ್ ಗಾಲಾದಲ್ಲಿ ಬಡಿಸಲಾಗಿತ್ತು. ಲಾಗರ್‌ಫೆಲ್ಡ್ 1978 ರಲ್ಲಿ ತಮ್ಮ ಮನೆಯಲ್ಲಿ ಬಡಿಸಿದ್ದ ಭೋಜನವನ್ನು ಮೆನುವಿನಲ್ಲಿ ಸೇರಿಸಲಾಗಿತ್ತು. ಟ್ವಿಟರ್ ನಲ್ಲಿ ಮೆಟ್ ಗಾಲಾ ಫ್ಯಾಷನ್ ಈವೆಂಟ್ ನ ಮೆನು ಹೆಚ್ಚು ಚರ್ಚೆಗೆ ಕಾರಣವಾಗಿದೆ. ಅಲ್ಲಿ ಬಡಿಸಲಾದ ಆಹಾರ ನೆಟ್ಟಿಗರಿಗೆ ಇಷ್ಟವಾಗಿಲ್ಲ.
ದಿನಾ ಬ್ರೇಕ್‌ಫಾಸ್ಟ್‌ಗೆ ಬರುತ್ತಿದ್ದ ವೃದ್ಧ ವ್ಯಕ್ತಿಗೆ ಹೊಟೇಲ್ ಮಾಲೀಕರಿಂದ ಸರ್‌ಪ್ರೈಸ್
ಮೆಟ್ ಗಾಲಾ ಮೆನುವಿನಲ್ಲಿ ಏನಿದೆ? : ಚಿಲ್ಡ್ ಸ್ಪ್ರಿಂಗ್ ಪೀ ಸೂಪ್ ಜೊತೆಗೆ ಬೇಬಿ ವೆಜಿಟೇಬಲ್ಸ್, ಲೆಮನ್ ಕ್ರೀಮ್ ಫ್ರೈಚೆ ಮತ್ತು ಟ್ರಫಲ್ ಸ್ನೋ ಸೇರಿದೆ. ಇದಲ್ಲದೆ ಓರಾ ಕಿಂಗ್ ಸಾಲ್ಮನ್ ವಿಥ್ ವೆಜಿಟೇಬಲ್ ನೆಜ್, ಶತಾವರಿ ಮತ್ತು ಮಸಾಲೆಯುಕ್ತ ಸ್ಟ್ರಾಬೆರಿ ಮೂಲಂಗಿ ನೀಡಲಾಗಿತ್ತು. ವೈನ್ ಮತ್ತು ಡಯಟ್ ಕೋಕ್ ಪಾನೀಯದಲ್ಲಿ ಸೇರಿತ್ತು. ಇದಲ್ಲದೆ ತಂಪು ಪಾನೀಯದಲ್ಲಿ ಕೂಡ ಕಾರ್ಲ್ ಲಾಗರ್‌ಫೆಲ್ಡ್ ನೆಚ್ಚಿನ ಪಾನೀಯಗಳನ್ನು ಸೇರಿಸಲಾಗಿತ್ತು.
ಸಾಮಾಜಿಕ ಜಾಲತಾಣದಲ್ಲಿ ಮೆನುಗೆ ಆಕ್ರೋಶ : ಟ್ವಿಟರ್ ನಲ್ಲಿ ಪೋಸ್ಟ್ ಆದ ಮೆಟಾ ಗಾಲಾ ಮೆನುವಿಗೆ ನೆಟ್ಟಿಗರು ಟೀಕಿಸಿದ್ದಾರೆ. ವಿಶ್ವದಾದ್ಯಂತ ಪ್ರಸಿದ್ಧಿಪಡೆದಿರುವ, ದುಬಾರಿ ಟಿಕೆಟ್ ದರ ಹೊಂದಿರುವ, ಎ ಗ್ರೇಡ್ ಸೆಲೆಬ್ರಿಟಿಗಳನ್ನು ಆಹ್ವಾನಿಸುವ ಈ ಕಾರ್ಯಕ್ರಮದಲ್ಲಿ ಇಂಥ ಆಹಾರ ವಿತರಣೆ ಮಾಡೋದು ಸೂಕ್ತವಲ್ಲವೆಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.
Healthy Food : ಮಧ್ಯರಾತ್ರಿ ಗ್ಯಾಸ್ಟ್ರಿಕ್ – ಹುಳಿತೇಗಿಗೆ ಇದಿರಬಹುದು ಕಾರಣ
ಗಾಲಾ ಟಿಕೆಟ್ ಬೆಲೆ 41 ಲಕ್ಷ ರೂಪಾಯಿ. ಆದ್ರೆ ಈ ಈವೆಂಟ್‌ನಲ್ಲಿ ಬಡಿಸಿದ ಆಹಾರ ಮಾತ್ರ ಹೀಗಿದೆ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಮೆಟ್ ಗಾಲಾ ಮೆನು ನೋಡಿದ್ರೆ ಹಸಿವು ಹೆಚ್ಚಾಗ್ತಿದೆ ಅಂತಾ ಒಬ್ಬರು ಕಮೆಂಟ್ ಮಾಡಿದ್ದಾರೆ. ಇದು ಆಹಾರವೇ? ತುಂಬಾ ತಮಾಷೆಯಾಗಿದೆ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನು ಕೆಲ ನೆಟ್ಟಿಗರಿಗೆ ಗಾಲಾದಲ್ಲಿ ಏನು ಮಾಡ್ತಾರೆ ಎಂಬುದು ತಿಳಿದಿಲ್ಲ. ಹಾಗಾಗಿ ಅದ್ರ ಬಗ್ಗೆಯೂ ಪ್ರಶ್ನೆ ಮಾಡಿದ್ದಾರೆ. ಮೆಟ್ ಗಾಲಾದಲ್ಲಿ ಏನು ಮಾಡುತ್ತಾರೆ? ಆಹಾರ ಬಫೆ ಶೈಲಿ ಅಥವಾ ಟೇಬಲ್ ಸೇವೆಯೇ? ಆಟಗಳಿವೆಯೇ? ಎಂದೆಲ್ಲ ಪ್ರಶ್ನೆ ಮಾಡಿದ್ದಾರೆ. ಮೆಟ್ ಗಾಲಾ ಮೆನುವಿನಲ್ಲಿರುವ ಆಹಾರವು ಅಸಹ್ಯಕರವಾಗಿದೆಯೇ? ಎಂಬ ಶೀರ್ಷಿಕೆಯೊಂದಿಗೆ ಮೆನುವನ್ನು ಟ್ವಿಟರ್ ನಲ್ಲಿ ಹಂಚಿಕೊಳ್ಳಲಾಗಿದೆ.
The food on the menu at the Met Gala all sounds disgusting? pic.twitter.com/aXbKQlGmsk
— jake (@jakeelordi)