ಮೆಕ್‌ಡೊನಾಲ್ಡ್‌ನಲ್ಲಿ ನಿಧಾನವಾಗಿ ತಿಂದಿದ್ದಕ್ಕೆ 10 ಸಾವಿರ ಪೆನಾಲ್ಟಿನೇ ಕಟ್ಬೇಕಾಯ್ತು!

By Vinutha PerlaFirst Published Jan 25, 2023, 3:22 PM IST
Highlights

ನಿಯಮ ಮೀರಿದಾಗ ಪೆನಾಲ್ಟಿ ಹಾಕಿರೋ ಬಗ್ಗೆ ನೀವು ಕೇಳಿರಬಹುದು. ಆದ್ರೆ ಮೆಕ್‌ಡೊನಾಲ್ಡ್ಸ್‌ ಮಾತ್ರ ಇದೆಲ್ಲಕ್ಕಿಂತ ವಿಚಾರವಾಗಿ ನಿಧಾನವಾಗಿ ತಿಂದಿದ್ದಕ್ಕೆ ವ್ಯಕ್ತಿಗೆ ಪೆನಾಲ್ಟಿ ಹಾಕಿದೆ ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ. 

ಮೆಕ್‌ಡೊನಾಲ್ಡ್ಸ್‌ ತನ್ನ ರುಚಿಕರವಾದ ಆಹಾರದಿಂದ ಎಲ್ಲೆಡೆ ಹೆಸರುವಾಸಿಯಾಗಿದೆ. ಹೀಗಾಗಿ ಹೆಚ್ಚಿನವರು ತಮ್ಮ ಫ್ರೆಂಡ್ಸ್‌, ಫ್ಯಾಮಿಲಿ ಜೊತೆ ಅಲ್ಲಿಗೆ ಹೋಗಿ ತಿನ್ನುತ್ತಾರೆ. ಆದ್ರೆ ಸದ್ಯ ಇಲ್ಲೊಂದೆಡೆ ಮೆಕ್‌ಡೊನಾಲ್ಡ್ಸ್‌ ತನ್ನ ಟೇಸ್ಟೀ ಫುಡ್ ಬದಲಿಗೆ ವಿಚಿತ್ರ ಕಾರಣಕ್ಕೆ ಸುದ್ದಿಯಾಗಿದೆ. ಮೆಕ್‌ಡೊನಾಲ್ಡ್ಸ್‌ನಲ್ಲಿನ ಡೈನರಿಯು 'ತುಂಬಾ ನಿಧಾನವಾಗಿ ತಿಂದಿದ್ದಕ್ಕಾಗಿ' ವ್ಯಕ್ತಿಯೊಬ್ಬರಿಗೆ ದಂಡಗಳನ್ನು ವಿಧಿಸಿದೆ. 
ಶಪೂರ್ ಮೆಫ್ತಾ ತನ್ನ ಸಹೋದರನನ್ನು ಭೇಟಿಯಾಗಲು ಕೇಂಬ್ರಿಡ್ಜ್‌ನ ನ್ಯೂಮಾರ್ಕೆಟ್ ರಸ್ತೆಯಲ್ಲಿರುವ ಮ್ಯಾಕೀಸ್ ಔಟ್‌ಲೆಟ್‌ನಲ್ಲಿದ್ದರು. ಅವರು ತಮ್ಮ ಮನೆಗಳಿಗೆ ತೆರಳುವ ಮೊದಲು ಕಾರ್ ಪಾರ್ಕ್‌ನಲ್ಲಿ ಭೇಟಿ (Meet)ಯಾದರು ಮತ್ತು ಮೆಕ್‌ ಡೊನಾಲ್ಡ್‌ನಿಂದ ಊಟ ಮಾಡಿದರು.

ಪೆನಾಲ್ಟಿ ನೋಟೀಸ್‌ ಕಳುಹಿಸಿದ ಖಾಸಗಿ ಪಾರ್ಕಿಂಗ್ ಕಂಪೆನಿ
ಆದರೆ ಭೇಟಿಯ ಹಲವು ದಿನಗಳ ನಂತರ, ಮೆಫ್ತಾ ತನ್ನ ಲೆಟರ್ ಬಾಕ್ಸ್ ಮೂಲಕ ಎರಡು ಪೆನಾಲ್ಟಿ ನೋಟಿಸ್‌ಗಳನ್ನು ಸ್ವೀಕರಿಸಿದರು. ಸ್ಥಳೀಯ ರೆಸ್ಟೋರೆಂಟ್‌ನಲ್ಲಿ ತನ್ನ ಕಾರ್ ಪಾರ್ಕ್ ಮಿತಿಯನ್ನು ಮೀರಿದ್ದಕ್ಕಾಗಿ ಆತನ ಮೇಲೆ ಆರೋಪ ಹೊರಿಸಲಾಗಿತ್ತು. ವರದಿಗಳ ಪ್ರಕಾರ, ಪೆನಾಲ್ಟಿ ಫಿಕ್ಸೆಡ್ ನೋಟಿಸ್‌ಗಳನ್ನು ಖಾಸಗಿ ಪಾರ್ಕಿಂಗ್ ಕಂಪನಿ ಹೊರಡಿಸಿದೆ. ಜನವರಿ 4 ಮತ್ತು ಜನವರಿ 6, 2023ರ ಸಂಜೆ ಔಟ್‌ಲೆಟ್‌ಗೆ ಅವರ ಎರಡು ಭೇಟಿಗಳಿಗಾಗಿ ದಂಡ ಕಟ್ಟಬೇಕಿತ್ತು.

ಕೂಲ್ ಡ್ರಿಂಕ್ಸ್ ನಲ್ಲಿ ಸತ್ತ ಹಲ್ಲಿ, ಅಹಮದಾಬಾದ್ ಮೆಕ್ ಡೊನಾಲ್ಡ್ ಸೀಲ್ ಮಾಡಿದ ಅಧಿಕಾರಿಗಳು!

ಗ್ರಾಹಕ 90 ನಿಮಿಷಗಳ ಸಮಯದ ಮಿತಿಯನ್ನು ಮೀರಿದ್ದಕ್ಕೆ ದಂಡ
ವರದಿಗಳ ಪ್ರಕಾರ, ಮೆಕ್‌ಡೊನಾಲ್ಡ್‌ನ ಗ್ರಾಹಕ ಕಾರ್ ಪಾರ್ಕ್‌ಗಾಗಿ ಮೆಫ್ತಾ 90 ನಿಮಿಷಗಳ ಸಮಯದ ಮಿತಿಯನ್ನು ಮೀರಿದ್ದಾರೆ ಎಂದು ಹೇಳಲಾಗಿದೆ. ಅವರು ಒಂದು ವಾರದೊಳಗೆ ದಂಡ (Penalty)ವನ್ನು ಪಾವತಿಸದಿದ್ದರೆ, ಇದು ಹೆಚ್ಚುವರಿಯಾಗಬಹುದು ಎಂದು ತಿಳಿಸಲಾಗಿದೆ. 'ಇದು ನಾನು ತೆರಳಿದ ಅತ್ಯಂತ ದುಬಾರಿ ಮೆಕ್‌ಡೊನಾಲ್ಡ್ಸ್ ಆಗಿತ್ತು. ಒಳಗೆ ನೀವು ಕುಳಿತುಕೊಳ್ಳಲು, ತಿನ್ನಲು ಮತ್ತು ಹೋಗಲು 90 ನಿಮಿಷಗಳ ಕಾಲಾವಕಾಶವಿದೆ ಎಂದು ಹೇಳುವ ಯಾವುದೇ ಫಲಕ ಅಲ್ಲಿರಲ್ಲಿಲ್ಲ. ಹೀಗಾಗಿಯೇ ನಾವು ಸಾಕಷ್ಟು ಫುಡ್ ಆರ್ಡರ್ ಮಾಡಿ ಆರಾಮವಾಗಿ ತಿಂದೆವು' ಎಂದು ಮೆಫ್ತಾ ತಿಳಿಸಿದ್ದಾರೆ.  ಮೆಫ್ತಾ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಮೆಕ್‌ಡೊನಾಲ್ಡ್ಸ್ ವಕ್ತಾರರು ಪೆನಾಲ್ಟಿ ನೋಟಿಸ್‌ಗಳನ್ನು ನೀಡುವುದು ಪಾರ್ಕಿಂಗ್ ನಿಯಂತ್ರಣ ಕಂಪನಿಗೆ ಬಿಟ್ಟದ್ದು ಎಂದು ಹೇಳಿದರು.

'ನಾವು ಹಲವಾರು ರೆಸ್ಟೋರೆಂಟ್‌ಗಳಲ್ಲಿ ಪಾರ್ಕಿಂಗ್ ನಿರ್ಬಂಧಗಳನ್ನು ಹೊಂದಿದ್ದೇವೆ. ನಮ್ಮ ಎಲ್ಲಾ ಗ್ರಾಹಕರಿಗೆ ಸಾಕಷ್ಟು ಪಾರ್ಕಿಂಗ್ ಇದೆ ಎಂದು ಖಚಿತಪಡಿಸಿಕೊಳ್ಳಲು ಸಮಯ ಮಿತಿಯನ್ನು (Time limit) ಮಾಡಿಕೊಂಡಿದ್ದೇವೆ.' ಎಂದು ಅಧಿಕಾರಿಗಳು ತಿಳಿಸಿದ್ದಾರೆ. 'ಕಾರ್ ಪಾರ್ಕ್‌ಗೆ ಚಾಲನೆ ಮಾಡುವಾಗ ಮತ್ತು ಅದರೊಳಗಿನ ವಿವಿಧ ಲ್ಯಾಂಪ್‌ಪೋಸ್ಟ್‌ಗಳ ಮೇಲೆ ಈ ನಿರ್ಬಂಧಗಳ ಬಗ್ಗೆ ಸಾಕಷ್ಟು ಸೂಚನಾ ಫಲಕಗಳನ್ನು ಸ್ಪಷ್ಟವಾಗಿ ಪ್ರದರ್ಶಿಸಲಾಗುತ್ತದೆ. ಗ್ರಾಹಕರು (Customer)ಅವರಿಗೆ ತಪ್ಪಾಗಿ ಪೆನಾಲ್ಟಿ ಹಾಕಲಾಗಿದೆ ಎಂದು ಭಾವಿಸಿದರೆ, ಅವರು ಪಾರ್ಕಿಂಗ್ ನಿಯಂತ್ರಣ ಕಂಪನಿಯ ಮಾರ್ಗಸೂಚಿಗಳ ಪ್ರಕಾರ ಮೇಲ್ಮನವಿ ಸಲ್ಲಿಸಬೇಕು' ಎಂದು ವಕ್ತಾರರು ತಿಳಿಸಿದ್ದಾರೆ.

ಕೊತ್ತಂಬರಿ ಸೊಪ್ಪಿನ ಐಸ್‌ಕ್ರೀಮ್‌.. ಹೊಸ ತಿನಿಸು ಬಿಡುಗಡೆ ಮಾಡಿದ ಮ್ಯಾಕ್‌ಡೊನಾಲ್ಡ್‌

ದಂಡದ ವಿರುದ್ಧ ಮೆಫ್ತಾ ಮೇಲ್ಮನವಿ ಸಲ್ಲಿಸಬಹುದೇ ?
ಗ್ರಾಹಕ ಸಲಹೆಯ ವೆಬ್‌ಸೈಟ್ MoneySavingExpert ಹೇಳುವಂತೆ ಖಾಸಗಿ ಪಾರ್ಕಿಂಗ್ ಕಂಪನಿಗಳಿಗೆ ದಂಡ ವಿಧಿಸುವ ಯಾವುದೇ ಅಧಿಕೃತ ಹಕ್ಕು ಇರುವುದಿಲ್ಲ. ಖಾಸಗಿ ಪಾರ್ಕಿಂಗ್ ಸಂಸ್ಥೆಗಳಿಂದ ಪಾರ್ಕಿಂಗ್ ಟಿಕೆಟ್‌ಗಳನ್ನು ಪಡೆಯುವ ಪ್ರತಿಯೊಬ್ಬರೂ ಪಾವತಿಸುವ ಮೊದಲು ಮತ್ತು ನಂತರ ಈ ಬಗ್ಗೆ ತಿಳಿದುಕೊಳ್ಳುವಂತೆ ಸಲಹೆ ನೀಡಿದರು.

click me!