Healthy Food : ಮಾವು – ಬಾಳೆ ಹಣ್ಣಿನ ಶೇಕ್ ನಲ್ಲಿ ಯಾವುದು ಬೆಸ್ಟ್?

By Suvarna News  |  First Published Jun 16, 2023, 2:45 PM IST

ಹಣ್ಣುಗಳ ರಾಜ ಮಾವು.. ಎಲ್ಲ ಋತುವಿನಲ್ಲಿ ಸಿಗುವ ಹಣ್ಣು ಬಾಳೆ ಹಣ್ಣು. ಈ ಎರಡೂ ತನ್ನದೇ ಮಹತ್ವ ಹೊಂದಿದೆ. ಆದ್ರೆ ಈ ಎರಡೂ ಹಣ್ಣನ್ನು ಹಾಲಿನ ಜೊತೆ ಮಿಕ್ಸ್ ಮಾಡ್ಬಹುದಾ? ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ.
 


ಬೇಸಿಗೆಯಲ್ಲಿ ಜ್ಯೂಸ್, ಶೇಕ್ಸ್ ಮತ್ತು ಸ್ಮೂಥಿಗಳಿಗೆ ಬೇಡಿಕೆ ಹೆಚ್ಚಿರುತ್ತದೆ. ಇವು ಬಿಸಿಲ ಧಗೆಯಿಂದ ದೇಹವನ್ನು ತಂಪಾಗಿಸುತ್ತವೆ. ಜ್ಯೂಸ್, ಶೇಕ್ಸ್ ಸೇವನೆ ಮಾಡೋದ್ರಿಂದ ಜೀರ್ಣಕ್ರಿಯೆ ಸುಲಭವಾಗುತ್ತದೆ. ದೇಹಕ್ಕೆ ಅಗತ್ಯವಿರುವ ಪೌಷ್ಟಿಕಾಂಶ ಕೂಡ ಸಿಗುತ್ತದೆ. ದೇಹ ಹೈಡ್ರೇಟ್ ಆಗಿರುತ್ತದೆ. ಜೀವಸತ್ವಗಳು, ಖನಿಜಗಳು ಮತ್ತು ಇತರ ಪ್ರಮುಖ ಪೋಷಕಾಂಶಗಳು ದೇಹ ಸೇರುವುದ್ರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ದಿನವಿಡಿ ಶಕ್ತಿ ನಮ್ಮ ದೇಹದಲ್ಲಿ ಇರಬೇಕು ಅಂದ್ರೆ ನಾವು ಆಹಾಗ ಜ್ಯೂಸ್, ಶೇಕ್, ಸ್ಮೂಥಿಗಳ ಸೇವನೆ ಮಾಡೋದು ಒಳ್ಳೆಯದು. 

ಅನೇಕ ಹಣ್ಣು (Fruit) ಗಳಿಂದ ನಾವು ಜ್ಯೂಸ್, ಶೇಕ್ (Shake ) ತಯಾರಿಸಬಹುದು. ಮಾವಿನ ಹಣ್ಣು, ಬಾಳೆಹಣ್ಣು, ಬೆರ್ರಿ ಹಣ್ಣು, ದಾಳಿಂಬೆ, ಕಲ್ಲಂಗಡಿ ಹಣ್ಣಿಗೆ ಬೇಸಿಗೆಯಲ್ಲಿ ಬೇಡಿಕೆ ಹೆಚ್ಚು. ಬೇಸಿಗೆಯಲ್ಲಿ ಜನರು ಹೆಚ್ಚಾಗಿ ಸೇವನೆ ಮಾಡೋದು ಮಾವಿನ ಹಣ್ಣಿನ ಶೇಕ್. ಎಲ್ಲ ಕಾಲದಲ್ಲೂ ಸಿಗುವ ಬಾಳೆ ಹಣ್ಣಿ (Banana)ನ ಶೇಕ್ ಗೂ ಬೇಡಿಕೆ ಕಡಿಮೆ ಏನಿಲ್ಲ. ಮಾವು ಹಾಗೂ ಬಾಳೆ ಹಣ್ಣು ಎರಡೂ ಆರೋಗ್ಯಕ್ಕೆ ಒಳ್ಳೆಯದು. ಆದ್ರೆ ಆಯುರ್ವೇದದ ಪ್ರಕಾರ, ಕೆಲ ಹಣ್ಣಿಗೆ ಹಾಲು ಸೇರಿಸುವುದು ಅಪಾಯಕಾರಿ. ಇದ್ರಿಂದ ಆಹಾರ ವಿಷವಾಗಿ, ಅನೇಕ ಸಮಸ್ಯೆ ನಮ್ಮನ್ನು ಕಾಡುತ್ತದೆ. ನಾವಿಂದು ನೀವು ಸೇವಿಸುವ ಬಾಳೆ ಹಣ್ಣಿನ ಶೇಕ್ ಹಾಗೂ ಮಾವಿನ ಹಣ್ಣಿನ ಶೇಕ್ ನಲ್ಲಿ ಯಾವುದು ಬೆಸ್ಟ್ ಎಂಬುದನ್ನು ಹೇಳ್ತೇವೆ. 

Tap to resize

Latest Videos

Health Tips: ಬೊಜ್ಜಿರೋರಿಗೆ ಕೊಬ್ಬು ತಿನ್ನೋದನ್ನ ಕಂಟ್ರೋಲ್ ಮಾಡೋದೇಕೆ ಕಷ್ಟ?

ಮಾವಿನ ಹಣ್ಣಿನ ಶೇಕ್ – ಬಾಳೆ ಹಣ್ಣಿನ ಶೇಕ್ ನಲ್ಲಿ ಯಾವುದು ಬೆಸ್ಟ್? : ಆಯುರ್ವೇದದ ಪ್ರಕಾರ, ಎಲ್ಲ ಹಣ್ಣುಗಳು ಹಾಲಿನ ಜೊತೆ ಬೆರೆಯುವುದಿಲ್ಲ. ಹುಳಿಯಾಗಿರುವ ಹಣ್ಣು, ಹಾಲಿನ ಜೊತೆ ಸೇರುವುದಿಲ್ಲ. ಸಿಹಿಯಾದ ಹಾಗೂ ಮಾಗಿದ ಹಣ್ಣುಗಳನ್ನು ಮಾತ್ರ ಹಾಲಿನ ಜೊತೆ ಸೇವನೆ ಮಾಡಬಹುದಾಗಿದೆ. ಹಾಗಿದ್ರೆ ಬಾಳೆ ಹಣ್ಣಿನ ಜೊತೆ ಹಾಲು ಬೆರೆಸಿ ಶೇಕ್ ತಯಾರಿಸಿದ್ರೆ ಉತ್ತಮವೇ ಎಂಬ ಪ್ರಶ್ನೆಗೆ ಆಯುರ್ವೇದ ತಜ್ಞರು ಇಲ್ಲ ಎನ್ನುತ್ತಿದ್ದಾರೆ. ಬಾಳೆ ಹಣ್ಣು ಸಿಹಿಯಾಗಿರುತ್ತದೆ ನಿಜ. ಆದ್ರೆ ಜೀರ್ಣಕಾರಿ ಪರಿಣಾಮ ಹುಳಿಯಾಗಿರುವ ಕಾರಣ, ಹಾಲಿನ ಜೊತೆ ಬಾಳೆ ಹಣ್ಣು ಬೆರೆಸಿದ್ರೆ ಒಳ್ಳೆಯದಲ್ಲ ಎನ್ನುತ್ತಾರೆ ತಜ್ಞರು. ಬಾಳೆಹಣ್ಣಿನ ಶೇಕನ್ನು ಸೇವನೆ ಮಾಡಿದ್ರೆ ಜೀರ್ಣಕ್ರಿಯೆಗೆ ಸಮಸ್ಯೆಯಾಗುವ ಸಾಧ್ಯತೆ ಇರುವ ಕಾರಣ ಬಹಳ ಅಪರೂಪಕ್ಕೆ ಒಮ್ಮೆ ಈ ಶೇಕ್ ಸೇವನೆ ಮಾಡಬಹುದು ಎನ್ನುತ್ತಾರೆ ತಜ್ಞರು. 

ಇನ್ನು ಮಾವಿನ ಹಣ್ಣಿನ ಶೇಕ್ ಬಗ್ಗೆ ಹೇಳೋದಾದ್ರೆ, ಇದನ್ನು ಸೇವನೆ ಮಾಡ್ಬಹುದು ಎನ್ನುತ್ತಾರೆ ತಜ್ಞರು. ಆದ್ರೆ ಹಣ್ಣು ಮಾಗಿರಬೇಕು. ಸಿಹಿಯಾಗಿರಬೇಕು. ಮಾಗಿದ, ಸಿಹಿಯಾದ ಹಣ್ಣನ್ನು ಹಾಲಿನ ಜೊತೆ ಬೆರೆಸಿ ಸೇವನೆ ಮಾಡಿದಾಗ ಅದು ವಾತ ಮತ್ತು ಪಿತ್ತವನ್ನು ಶಾಂತಗೊಳಿಸುತ್ತದೆ. ದೇಹಕ್ಕೆ ಪೋಷಕಾಂಶ ನೀಡುತ್ತದೆ. ದೇಹಕ್ಕೆ ಶಕ್ತಿ ನೀಡುವ ಕೆಲಸ ಮಾಡುತ್ತದೆ. ಇಷ್ಟೇ ಅಲ್ಲ ದೇಹವನ್ನು ಕಾಮೋತ್ತೇಜಕಗೊಳಿಸುವುದಲ್ಲದೆ ಮೈಬಣ್ಣವನ್ನು ಸುಧಾರಿಸುತ್ತದೆ. ಆಯುರ್ವೇದದ ಪ್ರಕಾರ, ಮಾವಿನ ಋತುವಿನಲ್ಲಿ ನೀವು ಮಾವಿನ ಹಣ್ಣಿನ ಶೇಕನ್ನು ಆರಾಮವಾಗಿ ಸೇವನೆ ಮಾಡಬಹುದು. ಯಾವುದಾದ್ರೂ ಕಾಯಿಲೆಯಿಂದ ಬಳಲುತ್ತಿದ್ದರೆ ಮಾತ್ರ ತಜ್ಞರನ್ನು ಸಂಪರ್ಕಿಸಿ ನಂತ್ರ ಸೇವನೆ ಮಾಡಿ.

ಸಿಂಪಲ್ ಟಿಪ್ಸ್ ಫಾಲೋ ಮಾಡಿ, ಮನೆಯಲ್ಲೇ ಬಿರಿಯಾನಿ ಮಾಡಿ

ಯಾವ ಹಣ್ಣಿನ ಜೊತೆ ಹಾಲು ಬೆರೆಸಬೇಕು ಗೊತ್ತಾ? : ಎಲ್ಲ  ಹಣ್ಣುಗಳ ಶೇಕ್ ತಯಾರಿ ಸಾಧ್ಯವಿಲ್ಲ. ಹಣ್ಣು ಸಿಹಿಯಾಗಿರುವುದು ಬಹಳ ಮುಖ್ಯವಾಗುತ್ತದೆ. ನಾವು ಮಾವಿನ ಹಣ್ಣಿನ ಶೇಕ್ ಜೊತೆ ಆವಕೋಡಾ ಹಣ್ಣಿನ ಶೇಕ್ ತಯಾರಿಸಿ ಕುಡಿಯಬಹುದು. ಆರೋಗ್ಯಕ್ಕೆ ಅತ್ಯುತ್ತಮವಾದ ಒಣ ಹಣ್ಣುಗಳಾದ, ಒಣ ದ್ರಾಕ್ಷಿ, ಅಂಜೂರ ಹಾಗೂ ಖರ್ಜೂರವನ್ನು ಹಾಲಿನೊಂದಿಗೆ ಸೇರಿಸಿ ಕುಡಿಯೋದು ಬಹಳ ಉತ್ತಮ. ಎಲ್ಲ ಹಣ್ಣುಗಳನ್ನು ಹಾಲಿಗೆ ಸೇರಿಸಿ ಶೇಕ್ ತಯಾರಿಸುತ್ತಿದ್ದರೆ ಆ ಅಭ್ಯಾಸ ಬಿಡಿ. ಸ್ಟ್ರಾಬೆರಿ ಶೇಕ್ ಕುಡಿಯಲು ರುಚಿಯಾಗಿರುತ್ತದೆ. ಆದ್ರೆ ಅದು ಆರೋಗ್ಯಕ್ಕೆ ಹಾನಿಕರ ಎನ್ನುತ್ತಾರೆ ತಜ್ಞರು.

click me!