Food

ನೆಚ್ಚಿನ ಖಾದ್ಯ ಬಿರಿಯಾನಿ

ಬಿರಿಯಾನಿ ಎಲ್ಲಾ ಭಾರತೀಯರ ನೆಚ್ಚಿನ ಆಹಾರವಾಗಿದೆ. ಹೀಗಾಗಿಯೇ ಎಲ್ಲಾ ರೆಸ್ಟೋರೆಂಟ್‌ಗಳಲ್ಲಿ ವಿವಿಧ ರೀತಿಯ ಬಿರಿಯಾನಿ ಸಿದ್ಧಪಡಿಸುತ್ತಾರೆ. ಆದ್ರೆ ಮನೆಯಲ್ಲಿ ಇದನ್ನು ತಯಾರು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಮೆಥಡ್‌.

Image credits: Pixabay

ಚಿಕನ್ ಮ್ಯಾರಿನೇಟ್ ಮಾಡುವುದು

ಚಿಕನ್‌ನ್ನು ಶುಂಠಿ, ಬೆಳ್ಳುಳ್ಳಿ ಪೇಸ್ಟ್‌, ಗರಂ ಮಸಾಲ, ಅರಿಶಿನ, ಕೆಂಪು, ಮೆಣಸಿನ ಪುಡಿ, ಉಪ್ಪು ಮತ್ತು ನಿಂಬೆಯೊಂದಿಗೆ ಬೆರೆಸಿ, ಮೊಸರು ಸೇರಿಸಿ ಚೆನ್ನಾಗಿ ಮ್ಯಾರಿನೇಟ್ ಮಾಡಿ.

Image credits: Pixabay

ಚಿಕನ್ ಹುರಿಯಿರಿ

ಒಂದು ಪಾತ್ರೆಯಲ್ಲಿ ತುಪ್ಪ ಅಥವಾ ಎಣ್ಣೆಯನ್ನು ಬಿಸಿ ಮಾಡಿ, ಬೇ ಎಲೆ, ಏಲಕ್ಕಿ ದಾಲ್ಚಿನ್ನಿ ಮತ್ತು ತೆಳುವಾಗಿ ಕತ್ತರಿಸಿದ ಈರುಳ್ಳಿಯನ್ನು ಸೇರಿಸಿ. ಅದರ ನಂತರ ಮ್ಯಾರಿನೇಟ್ ಮಾಡಿದ ಚಿಕನ್‌ನ್ನು ಹಾಕಿ ಹುರಿಯಿರಿ.

Image credits: Pixabay

ಮೊಟ್ಟೆ ಮತ್ತು ಆಲೂಗಡ್ಡೆ

ಮೇಲೆ ಸಿದ್ಧಪಡಿಸಿದ ಮಸಾಲೆಗೆ ಬೇಯಿಸಿದ ಮೊಟ್ಟೆ ಮತ್ತು ಗೋಲ್ಡನ್ ಫ್ರೈ ಮಾಡಿದ ಆಲೂಗಡ್ಡೆಯನ್ನು ಸೇರಿಸಿ, ಇದನ್ನು ಮೊದಲೇ ಸಿದ್ಧಪಡಿಸಿ ಇಟ್ಟುಕೊಂಡಿರಬೇಕು.

Image credits: Pixabay

ಅನ್ನ ತಯಾರಿಸುವುದು

ದೊಡ್ಡ ಪಾತ್ರೆಯಲ್ಲಿ ಬಾಸ್ಮತಿ ಅಕ್ಕಿಯನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ತೊಳೆಯಿರಿ.ಅಕ್ಕಿಗೆ ಎಳನೀರು ಸೇರಿಸಿ ಅದನ್ನು 30 ನಿಮಿಷಗಳ ಕಾಲ ನೆನೆಸಿಡಿ. ನಂತರ ಬಿಸಿನೀರಿಗೆ ಈ ಅಕ್ಕಿ ಹಾಕಿ.

Image credits: Pixabay

ಪದರಗಳನ್ನು ರಚಿಸಿ

ಮನೆಯಲ್ಲಿ ಲಭ್ಯವಿರುವ ದೊಡ್ಡ ಪಾತ್ರೆಯನ್ನು ತೆಗೆದುಕೊಂಡು ಬ್ರಷ್‌ ಬಳಸಿಕೊಂಡು ತುಪ್ಪ ಅಥವಾ ಎಣ್ಣೆಯನ್ನು ಹಚ್ಚಿ. ನಂತರ ಬೇ ಎಲೆ ಸೇರಿಸಿ ಸ್ಪಲ್ಪ ಅನ್ನವನ್ನು ಸೇರಿಸಿ. ಅದರ ಮೇಲೆ ಮಸಾಲೆ ಹಾಕಿ. 

Image credits: Pixabay

ಪದರವನ್ನು ಪುನರಾವರ್ತಿಸಿ

ಪಾತ್ರೆಗೆ ಇದೇ ರೀತಿ ಅನ್ನ, ಮಸಾಲೆ, ಮೊಟ್ಟೆ, ಆಲೂಗಡ್ಡೆ ಸೇರಿಸುವ ಪದರವನ್ನು ಪುನರಾವರ್ತಿಸುತ್ತಾ ಹೋಗಿ. ಪಾತ್ರೆ ತುಂಬುವ ವರೆಗೂ ಹೀಗೆ ಮಾಡಿ.

Image credits: Pixabay

ಉಳಿದ ಪದಾರ್ಥ ಸೇರಿಸಿ

ಮೇಲಿನ ಪದರವು ಅನ್ನವಾಗಿರಬೇಕು. ಅದರ ಮೇಲೆ ತುಪ್ಪ, ರೋಸ್ ವಾಟರ್‌, ಫ್ರೈ ಮಾಡಿದ ಈರುಳ್ಳಿ ಹರಡಿ, ಮುಚ್ಚಿಡಿ.

Image credits: Pixabay

ಬೇಯಲು ಇಡಿ

ಪಾತ್ರೆಯನ್ನು ಬಿಗಿಯಾದ ಮುಚ್ಚಳದಿಂದ ಮುಚ್ಚಿ. ಮುಚ್ಚಳ ಮೇಲೆ ಬರದಂತೆ ಅದರ ಮೇಲೆ ಭಾರವಾದ ವಸ್ತು ಇಡಿ. ಇದನ್ನು ಒಲೆ ಉರಿಯಲ್ಲಿ 15-20 ನಿಮಿಷಗಳ ಕಾಲ ಹದ ಉರಿಯಲ್ಲಿ ಬೇಯಿಸಿ. ಈಗ ರುಚಿಕರವಾದ ಬಿರಿಯಾನಿ ಸವಿಯಲು ಸಿದ್ಧ.

Image credits: Pixabay
Find Next One