
ಆರೋಗ್ಯಕ್ಕೆ ಒಳ್ಳೆಯದು ಡ್ರೈ ಫ್ರೂಟ್ಸ್ ತಿನ್ನಿ ಅಂದಾಗ ಮನೆಗೆ ಬರೋದು ಬಾದಾಮಿ, ಪಿಸ್ತಾ, ಗೋಡಂಬಿ, ಒಣ ದ್ರಾಕ್ಷಿ. ಇದನ್ನು ಬಿಟ್ರೆ ಎಲ್ಲೋ ಅಪರೂಪಕ್ಕೆ ಇನ್ನೊಂದೆರಡು ಡ್ರೈ ಫ್ರೂಟ್ಸ್ ಮನೆಗೆ ತರಬಹುದು. ನಮ್ಮಲ್ಲಿ 50ಕ್ಕೂ ಹೆಚ್ಚು ಡ್ರೈ ಫ್ರೂಟ್ಸ್ ಗಳಿವೆ. ಪ್ರತಿಯೊಂದೂ ತನ್ನದೇ ಆದ ಗುಣವನ್ನು ಹೊಂದಿದೆ. ಇವುಗಳಲ್ಲಿ ಬ್ರೆಜಿಲ್ ನಟ್ಸ್ ಕೂಡ ಒಂದು. ಇದನ್ನು ಭಾರತದಲ್ಲಿ ಅಮೆಜಾನ್ ನಟ್ಸ್ ಅಂತಾನೂ ಕರೀತಾರೆ.
ಥಟ್ ಅಂತಾ ನೋಡ್ತಾಗ ನಿಮಗೆ ಇದು ಹಲಸಿನ ಬೀಜದಂತೆ ಕಾಣಿಸುತ್ತದೆ. ಆದ್ರೆ ಹಲಸಿನ ಬೀಜವಲ್ಲ. ಬ್ರೆಜಿಲ್ (Brazil) ಕಾಯಿಯಿಂದ ಬರೋದು ಇದು. ಬೊಲಿವಿಯಾ (Bolivia) ಮತ್ತು ಪೆರುವಿನ ಅಮೆಜಾನ್ ಕಾಡುಗಳಲ್ಲಿ ಅತಿ ದೊಡ್ಡ ಹಾಗೂ ದೀರ್ಘಾವಧಿ ಬಾಳಿಕೆ ಬರುವ ಮರಗಳಲ್ಲಿ ಬ್ರೆಜಿಲ್ ಮರ ಸೇರಿದೆ. ಬೆಣ್ಣೆ ರುಚಿಯನ್ನು ಇದು ಹೊಂದಿರುತ್ತದೆ. ಸೆಲೆನಿಯಮ್ ಶ್ರೀಮಂತ ಆಹಾರ ಬ್ರೆಜಿಲ್ ನಟ್ಸ್ (Nuts) ನಲ್ಲಿ ಮೆಗ್ನೀಸಿಯಮ್, ತಾಮ್ರ ಮತ್ತು ಸತುವು ಹೆಚ್ಚಿನ ಪ್ರಮಾಣದಲ್ಲಿವೆ. ಅವು ಸಾಕಷ್ಟು ಕೊಬ್ಬಿನಾಮ್ಲ ಮತ್ತು ಪ್ರೋಟೀನ್ ಅಂಶವನ್ನು ಹೊಂದಿವೆ. ಬ್ರೆಜಿಲ್ ನಟ್ಸ್ ಅನೇಕ ರೋಗಕ್ಕೆ ಮದ್ದು. ಅದ್ರಲ್ಲೂ ಥೈರಾಯ್ಡ್ ರೋಗಿಗಳಿಗೆ ಇದು ಅತ್ಯುತ್ತಮ ಆಹಾರವಾಗಿದೆ. ನಾವಿಂದು ಬ್ರೆಜಿಲ್ ನಟ್ಸ್ ಬಗ್ಗೆ ನಿಮಗೊಂದಿಷ್ಟು ಮಾಹಿತಿ ನೀಡ್ತೇವೆ.
HEALTH TIPS: ಬ್ಲಡ್ ಗ್ರೂಪ್‌ಗೆ ತಕ್ಕಂತೆ ಆಹಾರ ಸೇವಿಸಿದ್ರೆ ಆರೋಗ್ಯ ಭಾಗ್ಯ
ಬ್ರೆಜಿಲ್ ನಟ್ಸ್ ಲಾಭಗಳು :
ಥೈರಾಯ್ಡ್ ಗೆ ಮದ್ದು : ಥೈರಾಯ್ಡ್ ಈಗಿನ ದಿನಗಳಲ್ಲಿ ಸಾಮಾನ್ಯ ಎನ್ನುವಂತಾಗಿದೆ. ಹತ್ತರಲ್ಲಿ 8 ಮಂದಿ ಇದ್ರಿಂದ ಬಳಲುತ್ತಿದ್ದಾರೆ. ಥೈರಾಯ್ಡ್ ಸಮಸ್ಯೆಯಿರುವ ಜನರಿಗೆ ಸೆಲೆನಿಯಮ್ ಭರಿತ ಆಹಾರ ಸೇವನೆ ಮಾಡುವಂತೆ ಸಲಹೆ ನೀಡಲಾಗುತ್ತದೆ. ಸೆಲೆನಿಯಮ್, ಥೈರಾಯ್ಡ್ ಹಾರ್ಮೋನ್ ಮಟ್ಟವನ್ನು ಸುಧಾರಿಸುವ ಕೆಲಸ ಮಾಡುತ್ತದೆ. ಥೈರಾಯ್ಡ್ ನಿಂದ ಬಳಲುವವರು ಬ್ರೆಜಿಲ್ ನಟ್ಸ್ ಬಳಸಬಹುದು. ಇದ್ರಲ್ಲಿ ಸೆಲೆನಿಯಮ್ ಹೆಚ್ಚಿನ ಪ್ರಮಾಣದಲ್ಲಿರುತ್ತದೆ.
ಹೃದಯ ಆರೋಗ್ಯದಲ್ಲಿ (Heart Health) ವೃದ್ಧಿ : ಸೆಲೆನಿಯಮ್ ಹೆಚ್ಚಿರುವ ಬ್ರೆಜಿಲ್ ನಟ್ಸ್ ಸೇವನೆ ಮಾಡೋದ್ರಿಂದ ನಿಮ್ಮ ಹೃದಯವನ್ನು ನೀವು ರಕ್ಷಿಸಿಕೊಳ್ಳಬಹುದು. ಇದು ಬಿಪಿಯನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ. ಆರೋಗ್ಯಕರ ಕೊಬ್ಬು ಮತ್ತು ಫೈಬರ್ ಇದ್ರಲ್ಲಿದ್ದು, ಒಟ್ಟಾರೆ ಇದ್ರ ಸೇವನೆ ಹೃದಯ ಆರೋಗ್ಯಕ್ಕೆ ಒಳ್ಳೆಯದು.
Health Tips: ಗರಿಗರಿ ರಸ್ಕ್ ಅಂದ್ರೆ ಇಷ್ಟವಾ? ಆರೋಗ್ಯ ಹಾಳಾಗೋಕೆ ಇದೊಂದು ಸಾಕು ಬಿಡಿ
ತೂಕ ನಿಯಂತ್ರಣಕ್ಕೆ (Weight Control) ಬೆಸ್ಟ್ : ಬ್ರೆಜಿಲ್ ನಟ್ಸ್ ನಲ್ಲಿ ಫೈಬರ್ ಸಮೃದ್ಧವಾಗಿದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಹಸಿವನ್ನು ದೀರ್ಘಕಾಲದವರೆಗೆ ತಡೆಯುತ್ತದೆ. ಇದ್ರಿಂದಾಗಿ ನೀವು ಜಂಕ್ ಫುಡ್ ಸೇರಿದಂತೆ ಯಾವುದೇ ಆಹಾರವನ್ನು ಅತಿಯಾಗಿ ಸೇವನೆ ಮಾಡೋದಿಲ್ಲ. ಇದ್ರಿಂದ ನಿಮ್ಮ ತೂಕ ನಿಯಂತ್ರಣಕ್ಕೆ ಬರುತ್ತದೆ.
ರೋಗ ನಿರೋಧಕ ಶಕ್ತಿ (Immunity Power) ವೃದ್ಧಿ : ಬ್ರೆಜಿಲ್ ನಟ್ಸ್ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕೆಲಸ ಮಾಡುತ್ತದೆ. ಇದ್ರಲ್ಲಿ ಸತು ಹೆಚ್ಚಿನ ಪ್ರಮಾಣದಲ್ಲಿದ್ದು, ಉರಿಯೂತ ಕಡಿಮೆ ಮಾಡುವ ಜೊತೆಗೆ ದೇಹದಿಂದ ವಿಷವನ್ನು ಹೊರಹಾಕಲು ಇದು ಸಹಕಾರಿ. ಅಲ್ಲದೆ ಸೋಂಕನ್ನು ತಡೆಯುವ ಕೆಲಸವನ್ನು ಬ್ರೆಜಿಲ್ ನಟ್ಸ್ ಮಾಡುತ್ತದೆ.
ಫಲವತ್ತತೆ ಹೆಚ್ಚಳ (Fertility) : ಮಕ್ಕಳ ಪ್ಲಾನ್ ನಲ್ಲಿರುವವರು ಬ್ರೆಜಿಲ್ ನಟ್ಸ್ ಸೇವನೆ ಮಾಡಬಹುದು. ಇದು ಟೆಸ್ಟೋಸ್ಟೆರಾನ್ ಹಾರ್ಮೋನ್ ಮತ್ತು ವೀರ್ಯದ ಪ್ರಮಾಣವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಮೆದುಳಿಗೆ ಒಳ್ಳೆಯದು (Good for Brain) : ನಿಯಮಿತವಾಗಿ ಬ್ರೆಜಿಲ್ ನಟ್ಸ್ ಸೇವನೆ ಮಾಡ್ತಿದ್ದರೆ ನಿಮ್ಮ ಮೆದುಳು ಚುರುಕಾಗುತ್ತದೆ. ಇದ್ರಲ್ಲಿರುವ ಎಲಾಜಿಕ್ ಆಮ್ಲ ಮತ್ತು ಸೆಲೆನಿಯಮ್ ಮೆದುಳಿಗೆ ಪ್ರಯೋಜನಕಾರಿ. ಖಿನ್ನತೆ ಸೇರಿದಂತೆ ಮಾನಸಿಕ ಸಮಸ್ಯೆಯನ್ನು ಕಡಿಮೆ ಮಾಡುವ ಶಕ್ತಿ ಬ್ರೆಜಿಲ್ ನಟ್ಸ್ ಗಿದೆ.
ಪ್ರತಿ ದಿನ ಒಂದರಿಂದ ಮೂರು ನಟ್ಸ್ ಮಾತ್ರ ನೀವು ಸೇವನೆ ಮಾಡ್ಬೇಕು. ಇದಕ್ಕಿಂತ ಹೆಚ್ಚು ಸೇವನೆ ಮಾಡಿದ್ರೆ ಸಮಸ್ಯೆಯಾಗುವ ಸಾಧ್ಯತೆಯಿರುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.