Mango Benefit : ಮಧುಮೇಹಿಗಳಿಗೆ ಮಾವು ನಿಷಿದ್ಧ, ಆದ್ರೆ ಹೀಗ್ ತಿನ್ನಬಹುದು!

By Suvarna News  |  First Published Apr 10, 2023, 3:11 PM IST

ಮಾವಿನ ಹಣ್ಣು ನೋಡಿದ ತಕ್ಷಣ  ಅನೇಕರ ಬಾಯಲ್ಲಿ ನೀರೂರುತ್ತದೆ. ಮಾವು ತಿನ್ನೋಕೆ ಇಷ್ಟವಾದ್ರೂ ಶುಗರ್ ಎನ್ನುವ ಕಾರಣಕ್ಕೆ ಕೆಲವರು ಅದ್ರ ಸುದ್ಧಿಗೆ ಹೋಗೋದಿಲ್ಲ. ನೀವು ಮಧುಮೇಹಿಗಳಾಗಿದ್ದು, ಮಾಂಗೋ ಪ್ರೇಮಿಗಳಾಗಿದ್ದರೆ ಈ ಟಿಪ್ಸ್ ಅನುಸರಿಸಿ.  
 


ಹಣ್ಣಿನ ರಾಜ ಮಾವಿನ ಹಣ್ಣನ್ನು ಯಾರು ಇಷ್ಟ ಪಡೊಲ್ಲ ಹೇಳಿ? ಸಾಮಾನ್ಯವಾಗಿ ಎಲ್ಲರೂ ಮಾವಿನ ಹಣ್ಣು ತಿನ್ನದವರಿಲ್ಲ.  ವರ್ಷಕ್ಕೊಮ್ಮೆ ಸಿಗುವ ಈ ಹಣ್ಣಿನ ಸೀಸನ್ ಶುರುವಾಗ್ತಿದೆ. ಮಾರುಕಟ್ಟೆಗೆ ತರ ತರಹದ ಮಾವಿನ ಹಣ್ಣು ಬರಲು ಶುರುವಾಗಿದೆ. ಮಾವು ಕಣ್ಣಿಗೆ ಬಿದ್ರೆ ಬೇರೆ ಹಣ್ಣು ರುಚಿಸೋದಿಲ್ಲ. ಎಪ್ರಿಲ್ ನಿಂದ ಆರಂಭವಾಗುವ ಮಾವಿನ ಹಣ್ಣಿನ ಋತು ಜೂನ್ ಜುಲೈ ತನಕವೂ ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ. ಮಾವಿನ ಹಣ್ಣಿನಲ್ಲಿ ಕೂಡ ಹಲವು ವಿಧಗಳಿವೆ. ಎಲ್ಲ ಹಣ್ಣುಗಳು ಕೂಡ ತಮ್ಮದೇ ಆದ ವಿಶಿಷ್ಠತೆಯನ್ನು ಹೊಂದಿರುತ್ತದೆ.

ಋತು (Season) ವಿಗೆ ಅನುಗುಣವಾಗಿ ಸಿಗುವ ಇಂತಹ ಹಣ್ಣುಗಳು ಹಲವಾರು ರೀತಿಯ ಪೌಷ್ಟಿಕ ಸತ್ವಗಳನ್ನು ಹೊಂದಿದೆ. ಇದು ಆರೋಗ್ಯ (Health) ಕ್ಕೂ ಬಹಳ ಒಳ್ಳೆಯದು. ಮಾವಿನಹಣ್ಣು ವರುಷಕ್ಕೊಮ್ಮೆ ಸಿಗುತ್ತದೆಯಾದರೂ ಅದನ್ನು ಹಲವು ದಿನಗಳ ಕಾಲ ಶೇಖರಿಸಿ ಇಡಬಹುದಾಗಿದೆ. ಬಹಳ ಮಂದಿ ಮಾವಿನ (Mango) ಹಣ್ಣಿನ ಪಲ್ಪ್ ಮಾಡುವ ಮೂಲಕ ಅದನ್ನು ಹಲವು ದಿನಗಳ ಕಾಲ ಶೇಖರಿಸಿಟ್ಟುಕೊಳ್ಳುತ್ತಾರೆ.  ಶರೀರದಲ್ಲಿ ಯಾವುದೇ ತೊಂದರೆ ಇಲ್ಲದೇ ಇರುವವರು ತಮಗೆ ಎಷ್ಟು ಬೇಕೋ ಅಷ್ಟು ಮಾವಿನ ಹಣ್ಣನ್ನು ತಿಂದುಬಿಡ್ತಾರೆ. ಆದರೆ ಮಧುಮೇಹಿಗಳಿಗೆ ಆಗಲ್ಲ. ಅವರ ಶರೀರಕ್ಕೆ ಎಲ್ಲ ಹಣ್ಣುಗಳೂ ಆಗಿಬರೊಲ್ಲ. ಅದರಲ್ಲೂ ಮಾವಿನ ಹಣ್ಣು ಎಂದಾಕ್ಷಣ ಮಧುಮೇಹಿಗಳು ಮಾರು ದೂರ ಸರಿಯುತ್ತಾರೆ. ಮಾವಿನ ಹಣ್ಣಿನಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಿಗೆ ಇರುವುದರಿಂದ ವೈದ್ಯರೇ ತಮ್ಮ ಪೇಷೆಂಟ್ ಗಳಿಗೆ ಮಾವಿನ ಹಣ್ಣನ್ನು ಸೇವಿಸಬೇಡಿ ಎಂದು ಹೇಳುತ್ತಾರೆ. ಇದು ತಪ್ಪು. ಸರಿಯಾದ ಕ್ರಮದಲ್ಲಿ ಮಾವಿನಹಣ್ಣನ್ನು ಸೇವಿಸಿದರೆ ಮಧುಮೇಹಿಗಳು ಕೂಡ ನಿಶ್ಚಿಂತೆಯಿಂದ ಮಾವಿನಹಣ್ಣನ್ನು ಸೇವಿಸಬಹುದು. ಮಧುಮೇಹಿಗಳು ಯಾವ ರೀತಿಯಲ್ಲಿ ಮಾವಿನಹಣ್ಣನ್ನು ಸೇವಿಸಬಹುದೆಂಬ ಮಾಹಿತಿ ಇಲ್ಲಿದೆ.

Tap to resize

Latest Videos

Healthy Food : ಬಾಳೆ ಹಣ್ಣನ್ನಲ್ಲ ಕಾಯಿ ತಿಂದು ಹೃದಯ ಕಾಪಾಡಿಕೊಳ್ಳಿ

ಮಧುಮೇಹಿಗಳೂ ಮಾವಿನಹಣ್ಣನ್ನು ತಿನ್ನಬಹುದು :

ಭೋಜನದ ಜೊತೆಗೆ ಮಾವಿನಹಣ್ಣನ್ನು ತಿನ್ನಬೇಡಿ : ಬಹಳ ಮಂದಿ ಊಟದ ಜೊತೆ ಮಾವಿನಹಣ್ಣನ್ನು ಸೇವಿಸುತ್ತಾರೆ. ಡಯಾಬಿಟೀಸ್ ತೊಂದರೆ ಇರುವವರು ಊಟದ ಜೊತೆ ಮಾವಿನ ಹಣ್ಣನ್ನು ತಿನ್ನಬಾರದು. ಮಾವಿನ ಹಣ್ಣಿನ ಸ್ಮೂದಿ ತಯಾರಿಸಿ ಸ್ವಲ್ಪ ಪ್ರಮಾಣದಲ್ಲಿ ಉಪಹಾರವಾಗಿ ಸೇವಿಸಬಹುದು. ಡಯಾಬಿಟೀಸ್ ಹೆಚ್ಚಿರುವವರು ಸ್ಮೂದಿಯನ್ನು ಕೂಡ ಸೇವಿಸಬಾರದು.

ಮೊಸರಿನ ಜೊತೆ ಮಾವಿನ ಹಣ್ಣು ಸೇವಿಸಿ : ಮೊಸರಿನ ಜೊತೆ ಮಾವಿನಹಣ್ಣನ್ನು ಸೇವಿಸಿದರೆ ಅದರಿಂದ ಮಧುಮೇಹಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಇದು ಗ್ಲೈಸೆಮಿಕ್ ಇಂಡೆಕ್ಸ್ ಅನ್ನು ಕಡಿಮೆ ಮಾಡುತ್ತದೆ.

Health Tips : ಅಡುಗೆ ಮಾಡೋದು ಬರೀ ಕೆಲಸವಲ್ಲ, ಔಷಧಿ..

ಸ್ನ್ಯಾಕ್ಸ್ ರೀತಿಯಲ್ಲಿ ಮಾವಿನಹಣ್ಣನ್ನು ಸೇವಿಸಿ : ಮಾವಿನ ಹಣ್ಣನ್ನು ಅತಿಯಾಗಿ ಸೇವಿಸದೇ ಸ್ವಲ್ಪ ಸ್ವಲ್ಪವಾಗಿಯೇ ಸೇವಿಸಿದರೆ ಯಾವ ಅಪಾಯವೂ ಆಗುವುದಿಲ್ಲ. ಹಾಗಾಗಿ ಸಂಜೆಯ ಸಮಯದಲ್ಲಿ ಸ್ನ್ಯಾಕ್ಸ್ ತರಹ ಮಾವಿನ ಹಣ್ಣಿನ ಚೂರುಗಳನ್ನು ತಿನ್ನಬಹುದು. ಇಲ್ಲವಾದಲ್ಲಿ 10-12 ಗೋಡಂಬಿ, ಬಾದಾಮಿಗಳನ್ನು ಮಾವಿನ ಹಣ್ಣಿನೊಂದಿಗೆ ಸೇರಿಸಿ ಮಿಲ್ಕ್ ಶೇಕ್ ರೂಪದಲ್ಲಿ ಕೂಡ ಸೇವಿಸಬಹುದು.

ಸಂಸ್ಕರಿಸಿದ ಮಾವಿನ ಹಣ್ಣಿನ ಸೇವನೆ ಬೇಡ : ಯಾವ ಆಹಾರವೇ ಆಗಿರಬಹುದು ಅದು ಸಂಸ್ಕರಿಸಿದ ಆಹಾರವಾಗಿದ್ದರೆ ಅದು ಆರೋಗ್ಯಕ್ಕೆ ಒಳ್ಳೆಯದಲ್ಲ. ಮಾರುಕಟ್ಟೆಯಲ್ಲಿ ನಾನಾ ಬಗೆಯ ಹಣ್ಣಿನ ಪಲ್ಪ್ ಗಳು ಸಂಸ್ಕರಿಸಿದ ರೂಪದಲ್ಲಿ ಮಾರಾಟವಾಗುತ್ತದೆ. ಇಂತಹ ಪ್ರೊಸೆಸ್ಡ್ ಫುಡ್ ಗಳು ಬಹಳ ದಿನಗಳವರೆಗೆ ಕೆಡದೇ ಇರಲು ಅನೇಕ ರೀತಿಯ ರಾಸಾಯನಿಕಗಳನ್ನು ಸೇರಿಸಿರುತ್ತಾರೆ. ಹಾಗಾಗಿ ಇದು ಯಾರಿಗೂ ಒಳ್ಳೆಯದಲ್ಲ. ಅದರಲ್ಲೂ ಮಧುಮೇಹಿಗಳಿಗಂತೂ ಇದು ವರ್ಜ್ಯ.  ಪ್ರೊಸೆಸ್ಡ್ ಜ್ಯೂಸ್ ಬದಲಾಗಿ ತಾಜಾ ಮಾವಿನ ಹಣ್ಣನ್ನು ಸೇವಿಸುವುದು ಉತ್ತಮ.

ಮಾವಿನ ಹಣ್ಣನ್ನು ಮಿತವಾಗಿ ಸೇವಿಸುವುದರಿಂದ ತೂಕವನ್ನು ಕಡಿಮೆ ಮಾಡಬಹುದು. ಇದರಲ್ಲಿ ಫೈಬರ್, ಪೊಟ್ಯಾಸಿಯಮ್ ಮತ್ತು ವಿಟಮಿನ್ ಗಳು ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಇದು ಹೃದಯದ ಅಪಾಯವನ್ನು ಕಡಿಮೆ ಮಾಡುತ್ತದೆ. ಇದರಲ್ಲಿರುವ ವಿಟಮಿನ್ ಸಿ ಮತ್ತು ವಿಟಮಿನ್ ಎ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ.
 

click me!