ಈಗಿರುವ ಆರ್ಥಿಕ ಸುಸ್ಥಿತಿ ಮುಂದೂ ಇರುತ್ತೆ ಅನ್ನೋಕೆ ಸಾಧ್ಯವಿಲ್ಲ. ಕೊರೊನಾ ಇದನ್ನು ಅನೇಕರಿಗೆ ತಿಳಿಸಿದೆ. ಆರಾಮವಾಗಿ ಜೀವನ ನಡೆಸ್ತಿದ್ದ ಅದೆಷ್ಟೋ ಮಂದಿ ಕೆಲಸ ಕಳೆದುಕೊಂಡಿದ್ದಾರೆ. ವ್ಯವಹಾರ ಬಂದ್ ಆದ್ರೂ ಎದೆಗುಂದದೆ ಮತ್ತೊಂದು ವ್ಯವಹಾರಕ್ಕೆ ಕೈ ಹಾಕಿ ಗೆದ್ದವರಲ್ಲಿ ಈ ಜೋಡಿ ಕೂಡ ಸೇರಿದ್ದಾರೆ.
ಜೀವನದಲ್ಲಿ ಸಾಕಷ್ಟು ತಿರುವು ಮುರುವುಗಳಿರುತ್ತವೆ. ಒಂದೇ ರೀತಿ ಜೀವನ ನಡೆಸಲು ಸಾಧ್ಯವಿಲ್ಲ. ಏರುಪೇರಿನ ಮಧ್ಯೆ ಧೈರ್ಯದಿಂದ ಜೀವನ ನಡೆಸುವುದು ಮುಖ್ಯವಾಗುತ್ತದೆ. ಯೌವನದಲ್ಲಿ ಹೋರಾಟ ಮಾಡಲು ಧೈರ್ಯ, ಶಕ್ತಿ, ಹುಮ್ಮಸ್ಸು, ಕಲಿಕೆ ಉತ್ಸಾಹ ಎಲ್ಲವೂ ಇರುತ್ತದೆ. ಆದ್ರೆ ವಯಸ್ಸಾದ್ಮೇಲೆ ಹೊಸ ಕ್ಷೇತ್ರಕ್ಕೆ ಕಾಲಿಡೋದು ಸಣ್ಣ ಸಾಹಸವಲ್ಲ. ಮುಂದೆ ಜೀವನ ಹೇಗೆ ಎಂಬ ಪ್ರಶ್ನೆ ಕಾಡ್ತಿರುತ್ತದೆ. ಧೈರ್ಯದ ಜೊತೆ ಕಲಿಕಾ ಮನೋಭಾವ, ಜೀವನೋತ್ಸಾಹ ಅಗತ್ಯವಾಗಿರುತ್ತದೆ. ಒಂದು ಕ್ಷೇತ್ರ ಬಿಟ್ಟು ಇನ್ನೊಂದು ಕ್ಷೇತ್ರದಲ್ಲಿ ದುಡಿಮೆ ಶುರುಮಾಡೋದು ಕಷ್ಟಕರವಾದ ಕೆಲಸ. ಆದ್ರೆ ಫರಿದಾಬಾದ್ ಜೋಡಿಯೊಂದು ಮನೋಬಲವಿದ್ದರೆ ಯಾವ ಕೆಲಸಕ್ಕೂ ವಯಸ್ಸು ಮುಖ್ಯವಲ್ಲ ಎಂಬುದನ್ನು ತೋರಿಸಿದ್ದಾರೆ.
ಫರಿದಾಬಾದ್ (Faridabad) ನ ದಂಪತಿ ಪ್ರಿಂಟಿಂಗ್ ಪ್ರೆಸ್ (Printing Press ) ಕೆಲಸ ಬಿಟ್ಟು ರಸ್ತೆ ಬದಿಯಲ್ಲಿ ರಾಜ್ಮಾ ಚಾವಲ್ (Rajma Chawal) ಮಾರಾಟಕ್ಕೆ ಮುಂದಾಗಿದ್ದು, ಅವರ ಕಥೆ ನೆಟ್ಟಿಗರ ಮನಸ್ಸು ಗೆದ್ದಿದೆ.
ಅಡುಗೆ ಮಾಡುವುದು ಒಂದು ಕಲೆ. ಇದು ಜನರನ್ನು ಒಟ್ಟುಗೂಡಿಸುವ ಕೆಲಸ ಮಾಡುತ್ತದೆ. ಫರಿದಾಬಾದ್ ದಂಪತಿಗೆ ಅಡುಗೆ ಮೇಲಿದ್ದ ಪ್ರೀತಿ ಅವರ ಜೀವನ ದೊಡ್ಡ ತಿರುವು ಪಡೆಯಲು ಕಾರಣವಾಗಿದೆ.
ಇನ್‌ಸ್ಟಾಗ್ರಾಮ್ ಬಳಕೆದಾರ ಜತಿನ್ ಸಿಂಗ್ ವೀಡಿಯೋವನ್ನು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಅವರು foody_jsv ಎಂದು ಹೆಸರಿಸಿದ್ದಾರೆ. ರಸ್ತೆ ಬದಿಯಲ್ಲಿ ರಾಜ್ಮಾ ಚಾವಲ್ ಮಾರಾಟ ಆಡ್ತಿರುವ ದಂಪತಿ ಎಂದು ಜತಿನ್ ಸಿಂಗ್ ವಿಡಿಯೋಕ್ಕೆ ಶೀರ್ಷಿಕೆ ಹಾಕಿದ್ದಾರೆ.
undefined
ಪಾನಿಪುರಿ ಆಸೆಯಿಂದ ಕೆಲಸ ಕಳೆದುಕೊಂಡ ಬಸ್ ಚಾಲಕ
ವಿಡಿಯೋದಲ್ಲಿ ಜತಿನ್ ಸಿಂಗ್, ದಂಪತಿಯನ್ನು ಮಾತನಾಡಿಸ್ತಾರೆ. ಈ ವೇಳೆ ಅವರು ತಮ್ಮ ಕಥೆಯನ್ನು ಹೇಳ್ತಾರೆ. ದಂಪತಿ ಪ್ರಿಂಟಿಂಗ್ ಪ್ರೆಸ್ ತಡೆಸುತ್ತಿದ್ದರು. ಕೊರೊನಾ ಸಂದರ್ಭದಲ್ಲಿ ಕೆಲಸವಿಲ್ಲದೆ ಪ್ರಿಂಟಿಂಗ್ ಪ್ರೆಸ್ ಬಂದ್ ಆಯ್ತು. ನಂತ್ರ ಪತಿ ಬೇರೆ ಕೆಲಸ ಹುಡುಕಿಕೊಂಡಿದ್ದರು. ಆದ್ರೆ ಸಂಬಳ ಕಡಿಮೆಯಿರುವ ಕಾರಣ ಕುಟುಂಬ ನಿರ್ವಹಣೆ ಕಷ್ಟವಾಗಿತ್ತು. ಹಾಗಾಗಿ ತಮ್ಮದೇ ಬ್ಯುಸಿನೆಸ್ ಶುರು ಮಾಡುವ ನಿರ್ಧಾರಕ್ಕೆ ಬಂದರು. ಬರುವ ಅಡುಗೆಯನ್ನೇ ಅವರು ಬಂಡವಾಳ ಮಾಡಿಕೊಂಡು ವ್ಯಾಪಾರಕ್ಕೆ ಇಳಿದರು. ಅವರು ರಾಜ್ಮಾ- ಚಾವಲ್ ಮಾರಾಟ ಮಾಡ್ತಾರೆ.
ಅನ್ನದ ಮೇಲೆ ರಾಜ್ಮಾ ಹಾಕುವ ಅವರು ಅದ್ರ ಮೇಲೆ ಮೂಲಂಗಿ ಹೋಳು ಹಾಗೂ ಪುದೀನಾ ಚಟ್ನಿಯನ್ನು ಹಾಕಿ ಸರ್ವ್ ಮಾಡ್ತಿದ್ದಾರೆ. ಎಲ್ಲವನ್ನೂ ಮನೆಯಲ್ಲಿಯೇ ತಯಾರಿಸಿದ್ದಂತೆ. ಈ ದಂಪತಿ ಒಂದು ಪ್ಲೇಟ್ ಗೆ 40 ರೂಪಾಯಿ ಚಾರ್ಜ್ ಮಾಡ್ತಾರೆ. ಜತಿನ್ ಸಿಂಗ್, ಈ ದಂಪತಿ ಎಲ್ಲಿ ರಾಜ್ಮಾ ಚಾವಲ್ ಮಾರಾಟ ಮಾಡ್ತಾರೆ ಎಂಬುದನ್ನು ಕೂಡ ಕಮೆಂಟ್ ನಲ್ಲಿ ಹೇಳಿದ್ದಾರೆ. ಅವರು ಫರಿದಾಬಾದ್ ಬಳಿಯ ಗ್ರೀನ್‌ಫೀಲ್ಡ್ ಕಾಲೋನಿಯ ಗೇಟ್ ನಂ. 5ರಲ್ಲಿ ಅವರು ರಾಜ್ಮಾ ಚಾವಲ್ ಮಾರಾಟ ಮಾಡ್ತಿದ್ದಾರೆ.
Health Tips: ಆರೋಗ್ಯಕ್ಕೂ ಆಹಾರಕ್ಕೂ ಇದೆ ನೇರ ಸಂಬಂಧ, ಇಲ್ಲಿದೆ ಚಾರ್ಟ್
ಇನ್ಸ್ಟಾ ಬಳಕೆದಾರರಿಂದ ಸಿಕ್ಕಿದೆ ಪ್ರೀತಿ : ಇದುವರೆಗೆ ಈ ವಿಡಿಯೋವನ್ನು 601 ಸಾವಿರ ಬಾರಿ ವೀಕ್ಷಿಸಲಾಗಿದೆ. 26 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ಇದಲ್ಲದೆ ಸಾಕಷ್ಟು ಮಂದಿ ಈ ವಿಡಿಯೋಕ್ಕೆ ಕಮೆಂಟ್ ಮಾಡಿದ್ದಾರೆ. ಜನರು ಈ ದಂಪತಿ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ದಂಪತಿ ನೊಂದವರಿಗೆ ಸ್ಪೂರ್ತಿ ಎಂದು ಕಮೆಂಟ್ ಮಾಡಿದ್ದಾರೆ. ಇದು ನಿಜವಾದ ಪ್ರೀತಿಗೆ ಸರಿಯಾದ ವ್ಯಾಖ್ಯಾನವೆಂದು ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ.
ಇಬ್ಬರಿಗೂ ಒಳ್ಳೆಯದಾಗಲಿ ಎಂದು ಹರಸಿರುವ ವ್ಯಕ್ತಿಯೊಬ್ಬರೂ ಬೀದಿ ಬದಿ ವ್ಯಾಪಾರಿಗಳ ಬಗ್ಗೆ ಜನರಿಗೆ ಮಾಹಿತಿ ನೀಡ್ತಿರುವ ನಿರೂಪಕರಿಗೂ ಧನ್ಯವಾದ ಸಲ್ಲಿಸಿದ್ದಾರೆ. ದೇವರ ಆಶೀರ್ವಾದ ನಿಮಗಿರಲಿ, ನೀವು ಹೆಚ್ಚೆಚ್ಚು ಹಣಗಳಿಸಿ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ದಂಪತಿ ಇದ್ರಿಂದ ಹೆಚ್ಚಿನ ಹಣವನ್ನೇನೂ ಗಳಿಸ್ತಿಲ್ಲ. ಆದ್ರೆ ಅವರ ನಿತ್ಯದ ಜೀವನಕ್ಕೆ ಇದು ಸಾಕಾಗ್ತಿದೆ.