ಬೇಸಿಗೆ ಶುರುವಾಯ್ತು ಅಂದ್ರೆ ಮಾವಿನಕಾಯಿ ಸೀಸನ್ ಕೂಡಾ ಶುರುವಾಯ್ತು ಅಂತಾನೆ ಅರ್ಥ. ಮಾವಿನಕಾಯಿ ಅಂದ್ಮೇಲೆ ಕೇಳ್ಬೇಕಾ ? ಉಪ್ಪಿನಕಾಯಿ ಹಾಕ್ಲೇಬೇಕು. ಆದ್ರೆ ಬೆಂಗಳೂರಲ್ಲಿ ಎಲ್ಲಿ ವೆರೈಟಿಯ ಮಾವಿನಕಾಯಿ ಸಿಗುತ್ತಪ್ಪಾ ಅನ್ನೋ ಬೇಜಾರಾ. ಡೋಂಟ್ ವರಿ, ಸಿಲಿಕಾನ್ ಸಿಟಿಯಲ್ಲಿ ಸ್ಪೆಷಲ್ ಅಪ್ಪೆ ಮಿಡಿ ಮೇಳ ನಡೆಯಲಿದೆ. ಇಲ್ಲಿ ಎಲ್ಲಾ ವೆರೈಟಿಯ ಮಾವಿನಕಾಯಿ ಲಭ್ಯವಿರಲಿದೆ.
ಮಾವಿನಕಾಯಿ ಅಂದ್ರೆ ಸಾಕು ಬಾಯಲ್ಲಿ ನೀರು ಬರುತ್ತೆ. ರುಚಿ ರುಚಿಯಾದ ಉಪ್ಪಿನಕಾಯಿ ಸವಿಯೋಕೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಅದ್ರಲ್ಲೂ ಈ ಮಾವಿನಕಾಯಿ ಸೀಸನ್ನಲ್ಲಿ ಹೊಸ ಮಾವಿನಕಾಯಿಯ ಉಪ್ಪಿನಕಾಯಿ ಸವಿಯೋ ಖುಷಿಯೇ ಬೇರೆ. ನೀವು ಮಾವಿನಕಾಯಿ ಪ್ರಿಯರಾಗಿದ್ದರೆ ಇಲ್ಲಿದೆ ಗುಡ್ ನ್ಯೂಸ್. ಹೆಸರಘಟ್ಟದ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯು(ಐಐಎಚ್‌ಆರ್) ಮೊಟ್ಟ ಮೊದಲ ಬಾರಿಗೆ ‘ಅಪ್ಪೆಮಿಡಿ’ ಮೇಳವನ್ನು ಏಪ್ರಿಲ್ 12 ಮತ್ತು 13ರಂದು ಆಯೋಜಿಸಿದೆ.
100ಕ್ಕೂ ಹೆಚ್ಚು ಅಪ್ಪೆಮಿಡಿ ತಳಿ ಪ್ರದರ್ಶನ
ಅಪ್ಪೆಮಿಡಿ ಕರ್ನಾಟಕದ ಸಾಂಪ್ರದಾಯಿಕ ಉಪ್ಪಿನಕಾಯಿ (Pickle) ತಳಿಯಾಗಿದೆ. ಇದಕ್ಕೆ ಜಿಐ ಮಾನ್ಯತೆ ಕೂಡ ಸಿಕ್ಕಿದೆ. ರಾಜ್ಯದ ಮಲೆನಾಡು ಪ್ರದೇಶದಲ್ಲಿ ವಿಶೇಷವಾಗಿ ಮಲೆನಾಡಿನ ಯಲ್ಲಾಪುರ, ಶಿರಸಿ, ಸಾಗರ, ಸಿದ್ದಾಪುರ, ತೀರ್ಥಹಳ್ಳಿ, ಕುಮಟಾ, ಸಕಲೇಶಪುರ, ಕೊಡಗು ಮತ್ತು ಚಿಕ್ಕಮಗಳೂರುಗಳಲ್ಲಿ ಬೆಳೆಯಲಾಗುತ್ತದೆ. ಅಪ್ಪೆಮಿಡಿ ಸೇರಿ ಹಲವು ಮಾವಿನ ತಳಿಗಳ ಸಸಿಗಳು ಸಹ ಈ ಮೇಳದಲ್ಲಿ ಸಿಗಲಿವೆ. 100 ತಳಿಗಳ ಮಾವಿನ ಕಾಯಿ ಮತ್ತು ಹಣ್ಣುಗಳನ್ನು (Fruits) ಇಲ್ಲಿ ಪ್ರದರ್ಶಿಸಲಾಗುತ್ತದೆ.ಎಂಟಿಆರ್ ಸೇರಿದಂತೆ ನಾನಾ ಸಂಸ್ಥೆಗಳು ಮಳಿಗೆಗಳನ್ನು ತೆರೆಯಲಿದ್ದು, ಅವು ತಯಾರಿಸುವ ಉಪ್ಪಿನಕಾಯಿಗಳನ್ನು ಪ್ರದರ್ಶಿಸಿ, ಮಾರಾಟ (Sale) ಮಾಡಲಾಗುವುದು ಎಂದು ಐಐಎಚ್‌ಆರ್ ನಿರ್ದೇಶಕ ಸಂಜಯ್‌ಕುಮಾರ್ ಸಿಂಗ್ ಹೇಳಿದ್ದಾರೆ.
undefined
Mangoes On EMI: ರಸಭರಿತ ಮಾವಿನ ಹಣ್ಣು ಈಗ್ಲೇ ತಿನ್ನಿ, ಆಮೇಲೆ ಪಾವತಿಸಿ!
ಅಪ್ಪೆಮಿಡಿಯ ವಿಶೇಷತೆ
ಅಪ್ಪೆಮಿಡಿ, ವಿಶೃಷ ವಿನ್ಯಾಸ, ರುಚಿ ಮತ್ತು ಪರಿಮಳದಿಂದಲೇ ಹೆಚ್ಚು ಫೇಮಸ್ ಆಗಿದೆ . ಈ ತಳಿಯ ಮಾವಿನ ಕಾಯಿಗಳನ್ನು ಇಡಿಯಾಗಿ ಬಳಸುವುದು ಮತ್ತೊಂದು ವಿಶೇಷ. ಆದರೂ ಈ ತಳಿಗಳಿಗೆ 10ನೇ ಒಂದರಷ್ಟು ಬೇಡಿಕೆಯಿದೆ. ವರ್ಷಕ್ಕೆ 4ರಿಂದ 5 ಸಾವಿರ ಟನ್ ಉಪ್ಪಿನಕಾಯಿಗೆ ಬಳಕೆಯಾಗುತ್ತದೆ.
ಸಾಮಾನ್ಯವಾಗಿ ರೈತರು ಮಾವು ಬೆಳೆಯಲು ಇಷ್ಟಪಡುತ್ತಾರೆ. ಯಾಕೆಂದರೆ ಇದ್ಕೆ, ದೇಶ-ವಿದೇಶಗಳಲ್ಲಿಉತ್ತಮ ಬೇಡಿಕೆಯಿದೆ. ಜತೆಗೆ ಇದು ವಾರ್ಷಿಕ ಬೆಳೆಯಾಗಿದ್ದು, ಒಮ್ಮೆಲೇ ಲಾಭ ತಂದುಕೊಡುತ್ತದೆ ನೋಡಬಹುದು. ಒಂದು ಬಾರಿ ಎಕರೆವಾರು ಪ್ರದೇಶದಲ್ಲಿ ಮಾವು ಸಸಿಗಳನ್ನು ನಾಟಿ ಮಾಡಿದರೆ, ಸುಮಾರು 30 ರಿಂದ 40 ವರ್ಷಗಳ ಕಾಲ ಪ್ರತಿ ವರ್ಷ ಫಸಲು ಪಡೆಯಬಹುದು. ಕಾಯಿಗಳನ್ನೇ ಉಪ್ಪಿನಕಾಯಿಗೆ ಬಳಸುವುದರಿಂದ. ಗಾತ್ರವೂ ಚಿಕ್ಕದಿರುವುದರಿಂದ ಮಳೆ, ಗಾಳಿಗೆ ಇತರ ಮಾವಿನಂತೆ ಉದುರುವುದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಬೇಗ ಕೊಯ್ಲು ಮಾಡುವುದರಿಂದ ರೋಗಗಳಿಗೆ ಸಿಲುಕುವುದಿಲ್ಲ.ಮೇಳದಲ್ಲಿ ಬೆಳೆಗಾರರಿಗೆ ಅಪ್ಪೆಮಿಡಿ ಬಗ್ಗೆ ಸಮಗ್ರವಾಗಿ ತಿಳಿಸಲಾಗುವುದು ಎಂದು ಐಐಎಚ್‌ಆರ್ ಪ್ರಧಾನ ವಿಜ್ಞಾನಿ ಡಾ. ಶಂಕರನ್ ತಿಳಿಸಿದ್ದಾರೆ.
ಮ್ಯಾಂಗೋ ಪ್ರಿಯರಿಗೆ ಸಿಹಿ ಸುದ್ದಿ..ಅಂಚೆ ಮೂಲಕ ಮನೆಬಾಗಿಲಿಗೆ ರಸಭರಿತ ಮಾವು
ಅಪ್ಪೆ ಮಿಡಿಗೆ ಮಾರುಕಟ್ಟೆಯಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡ್
IIHR ಪ್ರಕಾರ, ಅಪ್ಪೆ ಮಿಡಿ ಮಾವಿನಕಾಯಿಯಿಂದ ತಯಾರಿಸಿದ ಉಪ್ಪಿನಕಾಯಿಗಳು ಸೊಗಸಾದ ಪಾಕಶಾಲೆಯ ಅನುಭವವನ್ನು ನೀಡುತ್ತದೆ. ಉಪ್ಪಿನಕಾಯಿಯ ಬೇಡಿಕೆಯು (Demand) ವರ್ಷಕ್ಕೆ 4,000 ರಿಂದ 5,000 ಟನ್‌ಗಳವರೆಗೆ ಬದಲಾಗುತ್ತದೆ ಎಂದು ತಿಳಿದುಬಂದಿದೆ. ಅಪ್ಪೆ ಮಿಡಿಯು ಮಾರುಕಟ್ಟೆಯಲ್ಲಿ ಬೇಡಿಕೆಯ ಹತ್ತನೇ ಒಂದು ಭಾಗದಷ್ಟು ಮಾತ್ರ ಪೂರೈಕೆಯಾಗುವುದರಿಂದ, ಅವುಗಳನ್ನು ಸಾಮಾನ್ಯವಾಗಿ ಸಾಮಾನ್ಯ ಕೋಮಲ ಮಾವಿನಕಾಯಿಗಳೊಂದಿಗೆ ಬೆರೆಸಲಾಗುತ್ತದೆ. ಅಪ್ಪೆ ಮಿಡಿ ಉತ್ಪನ್ನಗಳು (Products) ಮಾರುಕಟ್ಟೆಗೆ ಹೆಚ್ಚಿನ ಸಾಮರ್ಥ್ಯವನ್ನು ಹೊಂದಿವೆ ಮತ್ತು ಸಂರಕ್ಷಣೆಗೆ ಗಮನ ಹರಿಸಬೇಕು. ಮಾವಿನ ವಿಶಿಷ್ಟ ಗಾತ್ರ ಮತ್ತು ರುಚಿಯು ಅದರ ಉಪ್ಪಿನಕಾಯಿಯನ್ನು ದೇಶದಲ್ಲೇ ಅತ್ಯುತ್ತಮವಾದದ್ದು, ಅದರ ಪರಿಮಳವು ತುಂಬಾ ಪ್ರಬಲವಾಗಿದೆ ಎಂದರೆ ಸಾಮಾನ್ಯ ಉಪ್ಪಿನಕಾಯಿಗೆ ಕೆಲವು ಮಿಡಿಗಳನ್ನು ಸೇರಿಸುವುದರಿಂದ ಅದರ ರುಚಿ ಮತ್ತು ವಾಸನೆಯನ್ನು ಬದಲಾಯಿಸಬಹುದು, ಎಂದು ಶ್ರೀ ಶಂಕರನ್ ವಿವರಿಸಿದರು.
ಒಂದು ಕಾಡು ಅಪ್ಪೆ ಮಿಡಿ ಮರವು ಹಲವಾರು ಟನ್‌ಗಳಷ್ಟು ಮಾವಿನ ಕಾಯಿಗಳನ್ನು ನೀಡುತ್ತದೆ, ಮರದಿಂದ ಮರಕ್ಕೆ ವೈಶಿಷ್ಟ್ಯಗಳನ್ನು ಹೊಂದಿರುತ್ತದೆ. ಕರ್ನಾಟಕದಲ್ಲಿ, 100 ಕೃಷಿ ಕುಟುಂಬಗಳು ವರ್ಷಕ್ಕೆ ಕನಿಷ್ಠ 100 ಟನ್ ಉಪ್ಪಿನಕಾಯಿ ಉತ್ಪಾದಿಸುವ ಅಪ್ಪೆ ಮಿಡಿ ಉಪ್ಪಿನಕಾಯಿ ತಯಾರಿಕೆಯಲ್ಲಿ ತೊಡಗಿವೆ. ICAR-IIHR ಇದುವರೆಗೆ ಅಪ್ಪೆ ಮಿಡಿ ಮಾವಿನ 250 ಕ್ಕೂ ಹೆಚ್ಚು ಸೇರ್ಪಡೆಗಳನ್ನು ಸಮೀಕ್ಷೆ ಮಾಡಿ, ಸಂಗ್ರಹಿಸಿ ಸಂರಕ್ಷಿಸಿದೆ. ಈ ಮಾವುಗಳಿಗೆ ಗೋವಾ, ತಮಿಳುನಾಡು ಮತ್ತು ಕೇರಳದಲ್ಲಿ ದೊಡ್ಡ ಮಾರುಕಟ್ಟೆ ಇದೆ ಎಂದು ಐಐಎಚ್‌ಆರ್ ತಿಳಿಸಿದೆ..