36 ಲಕ್ಷದ ಹಾರ್ಲೆ ಡೇವಿಡ್ಸನ್‌ ಬೈಕ್‌ನಲ್ಲಿ ಬರ್ತಾನೆ ಹಾಲು ಮಾರುವವನು !

By Vinutha PerlaFirst Published Jan 7, 2023, 9:49 AM IST
Highlights

ನಗರಗಳಲ್ಲಿ ಹಾಲು ಪ್ಯಾಕೆಟ್‌ಗಳಲ್ಲಿ ದೊರಕುತ್ತದೆಯಾದರೂ ಹಳ್ಳಿಗಳಲ್ಲಿ ಈಗಲೂ ಪಾತ್ರೆಯಲ್ಲಿ ಮನೆ ಮನೆಗೆ ಹಾಲನ್ನು ವಿತರಿಸಲಾಗುತ್ತದೆ. ಹೀಗೆ ಹಾಲು ಮಾರುವವರು ಸಾಮಾನ್ಯವಾಗಿ ಸೈಕಲ್‌ಗಳಲ್ಲಿ ಬರುತ್ತಾರೆ. ಆದ್ರೆ ಇಲ್ಲೊಬ್ಬ ಹಾಲು ಮಾರೋಕೆ ಬರೋದು ಸೈಕಲಿನಲ್ಲಲ್ಲ. ಬದಲಿಗೆ ಲಕ್ಷ ಲಕ್ಷ ಬೆಲೆ ಬಾಳುವ ಹಾರ್ಲೆ ಡೇವಿಡ್ಸನ್‌ ಬೈಕ್‌ನಲ್ಲಿ. ಆ ಬಗ್ಗೆ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ.

ಇಂಟರ್‌ನೆಟ್ ಒಂದು ಅಚ್ಚರಿಯ ಆಗರ. ಹಲವಾರು ಚಿತ್ರ-ವಿಚಿತ್ರ ವಿಷಯಗಳು ಇಲ್ಲಿ ಆಗಾಗ ವೈರಲ್‌ ಆಗುತ್ತಲೇ ಇರುತ್ತವೆ. ಸಾಮಾನ್ಯಕ್ಕಿಂತ ಅಸಾಮಾನ್ಯವೆನಿಸಿದಂಥಾ ವಿಚಾರಗಳು ಜನರ ಗಮನ ಸೆಳೆಯುತ್ತವೆ. ಸದ್ಯ ಇಂಟರ್‌ನೆಟ್‌ನಲ್ಲಿ ವೈರಲ್‌ ಆಗ್ತಿರೋದು ಯುವಕನೊಬ್ಬ ಹಾರ್ಲೆ ಡೇವಿಡ್ಸನ್‌ ಬೈಕ್‌ನಲ್ಲಿ ಹಾಲು ಮಾರುತ್ತಿರೋ ವೀಡಿಯೋ. amit_bhadana ಎಂಬ Instagram ಬಳಕೆದಾರರು ಈ ಉಬರ್ ಕೂಲ್ ಬೈಕ್ ಬ್ರಾಂಡ್‌ನ ಎರಡೂ ಬದಿಯಲ್ಲಿ ಎರಡು ದೊಡ್ಡ ಮಿಲ್ ಕಂಟೈನರ್‌ಗಳನ್ನು ಕಟ್ಟಿಕೊಂಡು ತನ್ನ ಕಪ್ಪು ಮತ್ತು ಹೊಳೆಯುವ ಹಾರ್ಲೆ ಡೇವಿಡ್‌ಸನ್‌ನಲ್ಲಿ ಸವಾರಿ ಮಾಡಿದ ವ್ಯಕ್ತಿಯ ವೀಡಿಯೊ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ.

ಹಾಲು ಮಾರುವವರು ಎಂ80 ಬೈಕ್‌ ಬಳಸುವುದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಹಾಲು ಮಾರಾಟ ಮಾಡಲು 36.99 ಲಕ್ಷ ರು. ವರೆಗೆ ಬೆಲೆ ಬಾಳುವ ದುಬಾರಿ ಹರ್ಲೆ ಡೇವಿಡ್‌ಸನ್‌ ಬೈಕ್‌ನಲ್ಲಿ ತೆರಳುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ (social media) ಸಖತ್‌ ವೈರಲ್‌ ಆಗಿದೆ. ಬೈಕ್‌ನ ಎರಡು ಬದಿಗಳಲ್ಲಿ ಎರಡು ಬೃಹತ್‌ ಹಾಲಿನ ಕ್ಯಾನ್‌ಗಳನ್ನಿರಿಸಿ ಈತ ಸಾಗುತ್ತಾನೆ. ಈ ಬೈಕ್‌ ತೆಗೆದುಕೊಳ್ಳಬೇಕೆಂಬುದು ಎಷ್ಟೋ ಯುವಕರ ಜೀವಮಾನದ ಆಸೆ. ಆದರೆ ಈತನೊಬ್ಬ ಇದನ್ನು ಸಾಮಾನ್ಯ ಸೈಕಲ್‌ನಂತೆ ಬಳಸುತ್ತಿರುವುದಕ್ಕೆ ನೆಟ್ಟಿಗರು ನಾನಾ ಬಗೆಯ ಕಾಮೆಂಟ್‌ ಬರೆದಿದ್ದಾರೆ. ಆದರೆ ಈ ವೀಡಿಯೊ ಯಾವ ಸ್ಥಳದ್ದು ಎಂಬ ಮಾಹಿತಿ ಇಲ್ಲ.

112 ಬ್ಯಾಗ್‌ನಲ್ಲಿ ಹಣ ತುಂಬಿಕೊಂಡು ಬಂದು ಮೆಚ್ಚಿನ KTM ಬೈಕ್ ಖರೀದಿಸಿದ ತರುಣ

ಸಾಮಾನ್ಯವಾಗಿ ಹಾಲು (Milk) ಮಾರುವವರು ಸೈಕಲ್ ಅಥವಾ ಸಿಂಪಲ್‌ ಬೈಕುಗಳಲ್ಲಿ ಬರುತ್ತಾರೆ ಆದರೆ ಈ ವ್ಯಕ್ತಿ ಬರೋಬ್ಬರಿ 36 ಲಕ್ಷದ ಬೈಕಿನಲ್ಲಿ ಹಾಲು ಮಾರುತ್ತಿರೋದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಹಾಲು ಮಾರುವಾತ ತನ್ನ ಕಪ್ಪು ಮಿನುಗುವ ಬೈಕಿನ ಕಳೆಗುಂದಿದ ಬದಿಗಳಲ್ಲಿ ಎರಡು ದೊಡ್ಡ ಹಾಲಿನ ಡಬ್ಬಿಗಳನ್ನು ನೇತುಹಾಕಿ ಹೊರಬರುತ್ತಾನೆ. ವೀಡಿಯೊ ಸುಮಾರು 3 ಮಿಲಿಯನ್ ವೀಕ್ಷಣೆಗಳನ್ನು (Views) ಕೂಡ ಸಂಗ್ರಹಿಸಿದೆ. ವೀಡಿಯೋ ಹಲವಾರು ಲೈಕ್ಸ್‌ಗಳು ಮತ್ತು ಕಾಮೆಂಟ್‌ಗಳನ್ನು ಪಡೆದುಕೊಂಡಿದೆ. ಇನ್‌ಸ್ಟಾಗ್ರಾಮ್ ಕಾಮೆಂಟ್‌ಗಳಲ್ಲಿ ಒಬ್ಬರು, 'ಇದು ಎಲ್ಲಾ ಹಾಲುಗಾರರಿಗೆ ಹೆಮ್ಮೆಯ ವಿಷಯ' ಎಂದು ಸಂತಸ (Happy) ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬ ವ್ಯಕ್ತಿ ಹೆಲ್ಮೆಟ್‌ ಹಾಕಿ ಬೈಕ್ ಓಡಿಸುವಂತೆ ಒತ್ತಾಯಿಸಿದ್ದಾರೆ.

ಬೈಕಲ್ಲೇ ಬೃಹದಾಕಾರದ ಕಲ್ಲಿನ ಬೆಟ್ಟವೇರಿ ಬೈಕರ್ ಸಾಹಸ : ವಿಡಿಯೋ ವೈರಲ್
ನೆಲದ ಮೇಲೆ ಸಮರ್ಪಕವಾದ ಡಾಮರ್ ರಸ್ತೆಯಲ್ಲೇ ಬೈಕ್ ಚಲಾಯಿಸಲು ಅನೇಕರು ಕಷ್ಟ ಪಡುತ್ತಾರೆ. ಇಳಿಜಾರಿನಲ್ಲಿ ಅಥವಾ ಏರುಮಾರ್ಗದಲ್ಲಿ ಬೈಕ್ ವಾಹನ ಚಾಲನೆ ಸ್ವಲ್ಪ ತ್ರಾಸ ನೀಡುವ ಜೊತೆ ವಾಹನ ಚಾಲಕನಿಂದ ಜಾಗರೂಕತೆಯನ್ನು ಬಯಸುತ್ತದೆ. ಕೆಲವು ತಿರುವುಗಳಲಂತೂ ಸ್ವಲ್ಪ ಮೈಮರೆತರು ಸಾವು ಧುತ್ತನೇ ಎದುರಾಗುತ್ತದೆ. ಆದರೆ ಇಲ್ಲೊಬ್ಬ ಬೈಕರ್‌  ಬೃಹದಾಕಾರ ಕಲ್ಲಿನ ಪರ್ವತದ ತುತ್ತತುದಿಯನ್ನು ಬೈಕ್ ಮೂಲಕ ತಲುಪಿದ್ದಾನೆ. ನೀವು ಸಾವನದುರ್ಗ ಬೆಟ್ಟದಂತಹ ಬೆಟ್ಟವನ್ನು ನೋಡಿದರೆ ಈ ಬೈಕರ್‌ನ ಸಾಹಸವೆಂತದ್ದು ಎಂದು ತಿಳಿಯುವುದು ಸುಲಭ ಸಾಧ್ಯ. ಕಲ್ಲಿನ ಮೇಲೆ ಈತನ ಸಲೀಸಾದ ಬೈಕ್ ಪಯಣದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ. 

ಅಡಕೆ ಮರ ಬಳಿಕ ಈಗ ತೆಂಗಿನ ಮರ ಏರುವ ಟ್ರೀ ಬೈಕ್‌ ಅಭಿವೃದ್ಧಿ

click me!