ಟೀಯಲ್ಲಿ ನಾನಾ ವಿಧವಿದೆ. ಕೆಲ ಟೀ ಸೇವನೆ ನಮ್ಮ ಆರೋಗ್ಯವನ್ನು ವೃದ್ಧಿಸುತ್ತದೆ. ಒತ್ತಡ, ಖಿನ್ನತೆ, ನಿದ್ರಾಹೀನತೆಯಿಂದ ಬಳಲುತ್ತಿರುವವರು ಆರೋಗ್ಯಕರ ಟೀ ಸೇವನೆ ಮಾಡ್ಬೇಕು. ದಿನಕ್ಕೊಮ್ಮೆ ಈ ಚಹಾ ಸೇವನೆ ಮಾಡಿ ನಿಮ್ಮ ಆರೋಗ್ಯ ವೃದ್ಧಿಸಿಕೊಳ್ಳಿ.
ಟೀಯಲ್ಲಿ ಸಾಕಷ್ಟು ವಿಧವಿದೆ. ಅನೇಕ ಗಿಡಮೂಲಿಕೆ ಚಹಾ ನಮ್ಮ ಆರೋಗ್ಯವನ್ನು ವೃದ್ಧಿಸುತ್ತದೆ. ನಾವು ಶುಂಠಿ ಟೀ, ಲೆಮನ್ ಟೀ ಹೀಗೆ ಬಗೆ ಬಗೆಯ ಟೀ ರುಚಿ ನೋಡಿರ್ತೇವೆ. ನಾವಿಂದು ಆರೋಗ್ಯಕ್ಕೆ ಒಳ್ಳೆಯದಾದ ಕೆಲ ಟೀಗಳ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ.
ಲ್ಯಾವೆಂಡರ್ (Lavender) ಟೀ : ಅನೇಕರಿಗೆ ಲ್ಯಾವೆಂಡರ್ ಟೀ ರುಚಿ ಗೊತ್ತಿಲ್ಲ. ಈ ಲ್ಯಾವೆಂಡರ್ ಟೀ (Tea) ರುಚಿ ಮಾತ್ರವಲ್ಲ ಆರೋಗ್ಯಕ್ಕೂ ಒಳ್ಳೆಯದು. ಲ್ಯಾವೆಂಡರ್ ಟೀ ಸೇವನೆ ಮಾಡುವುದ್ರಿಂದ ಖಿನ್ನತೆ ದೂರವಾಗುವ ಜೊತೆಗೆ ಅನೇಕ ಲಾಭವಿದೆ. ಲ್ಯಾವೆಂಡರ್ ಟೀ ಸೇವನೆ ಮಾಡುವುದ್ರಿಂದ ನಿಮ್ಮ ಆತಂಕ ದೂರವಾಗುತ್ತದೆ. ಈ ಚಹಾ ಸೇವನೆ ನಂತ್ರ ನಿಮ್ಮ ದೇಹ ವಿಶ್ರಾಂತಿಗೊಳ್ಳುತ್ತದೆ. ಮೈಗ್ರೇನ್ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಈ ಟೀ ಒಳ್ಳೆಯದು. ಇದಲ್ಲದೆ ನಿದ್ರಾಹೀನತೆಯಿಂದ ಬಳಲುತ್ತಿರುವವರು ಈ ಚಹಾ ಕುಡಿದ್ರೆ ಆರಾಮವಾಗಿ ನಿದ್ರೆ (Sleep) ಮಾಡಬಹುದು. ಈ ಲ್ಯಾವೆಂಡರ್ ಟೀ ತಯಾರಿಸುವುದು ಕೂಡ ತುಂಬಾ ಸುಲಭ. ಲ್ಯಾವೆಂಡರ್ ಗಿಡ ಇಲ್ಲವೆಂದ್ರೆ ಬೇಸರಪಟ್ಟುಕೊಳ್ಳುವ ಅಗತ್ಯವಿಲ್ಲ. ನಿಮಗೆ ಲ್ಯಾವೆಂಟರ್ ಟೀ ಪುಡಿ ಮಾರುಕಟ್ಟೆಯಲ್ಲಿ ಸಿಗುತ್ತದೆ. ಅದನ್ನು ನೀವು ಬಳಸಬಹುದು.
Healthy Food: ಹಸಿರು ಮೆಣಸಿನ ಕಾಯಿ ಉಪ್ಪಿನಕಾಯಿಯಲ್ಲೂ ಇದೆ ಆರೋಗ್ಯ
undefined
ಲ್ಯಾವೆಂಡರ್ ಟೀ ತಯಾರಿಸುವ ವಿಧಾನ : ಎರಡು ಕಪ್ ನೀರನ್ನು ಒಲೆಯ ಮೇಲಿಟ್ಟು ಚೆನ್ನಾಗಿ ಕುದಿಸಿ. ಈ ನೀರು ಕುದಿಯುತ್ತಿರುವಾಗ ಒಂದು ಚಮಚ ಲ್ಯಾವೆಂಡರ್ ಹೂವನ್ನು ಹಾಕಿ ಮತ್ತಷ್ಟು ಕುದಿಸಿ. ನಂತ್ರ ಗ್ಯಾಸ್ ಬಂದ್ ಮಾಡಿ. ಈ ನೀರನ್ನು ಸೋಸಿ, ಅದಕ್ಕೆ ಸ್ವಲ್ಪ ಜೇನುತುಪ್ಪವನ್ನು ಹಾಕಿ ಕುಡಿಯಿರಿ.
ಕ್ಯಾಮೊಮೈಲ್ (Chamomile) ಟೀ : ನಿದ್ರೆ ಬರ್ತಿದ್ರೆ ಟೀ ಸೇವನೆ ಮಾಡಿ. ನಿದ್ರೆ ಹೋಗುತ್ತೆ ಎನ್ನುವುದನ್ನು ನಾವು ಕೇಳಿರ್ತೇವೆ. ಆದ್ರೆ ಈ ಟೀ ನಿದ್ರೆ ತರಿಸುವ ಕೆಲಸ ಮಾಡುತ್ತದೆ. ನಿದ್ರಾಹೀನತೆಯಿಂದ ಬಳಲುವ ಜನರಿಗೆ ಕ್ಯಾಮೊಮೈಲ್ ಟೀ ಒಳ್ಳೆಯದು. ಕ್ಯಾಮೊಮೈಲ್ ಒಂದು ರೀತಿಯ ಹೂವಾಗಿದೆ. ಅದರ ಟೀ ತಯಾರಿಸುವುದು ಕೂಡ ತುಂಬಾ ಸುಲಭ. ಎರಡು ಕಪ್ ನೀರನ್ನು ಕುದಿಸಿ, ಒಂದು ಚಮಚ ಕ್ಯಾಮೊಮೈಲ್ ಹೂವನ್ನು ಹಾಕಿ, ಚೆನ್ನಾಗಿ ಕುದಿಸಿ ಗ್ಯಾಸ್ ಆಫ್ ಮಾಡಿ. ನಂತ್ರ ಇದಕ್ಕೆ ಅಗತ್ಯವಿದ್ರೆ ಜೇನುತುಪ್ಪ ಹಾಕಿ ಸೇವನೆ ಮಾಡಿ.
ಅರಿಶಿನದ ಟೀ : ಅರಿಶಿನದ ಹಾಲನ್ನು ಸಾಮಾನ್ಯವಾಗಿ ಎಲ್ಲರೂ ಸೇವನೆ ಮಾಡಿರ್ತಾರೆ. ಆದ್ರೆ ಅರಿಶಿನದ ಟೀ ಕುಡಿದಿದ್ದೀರಾ? ಅರಿಶಿನದ ಟೀ ಆಯಾಸ ಮತ್ತು ಚಡಪಡಿಕೆಯನ್ನು ಹೋಗಲಾಡಿಸಲು ಸಹಕಾರಿಯಾಗಿದೆ. ಮೊದಲು ಒಂದುವರೆಗ ಕಪ್ ನೀರನ್ನು ಕುದಿಸಿ. ಅದಕ್ಕೆ ಕಾಲು ಚಮಚ ಅರಿಶಿನ ಅಥವಾ ಒಂದು ಅರಿಶಿನದ ಪೀಸನ್ನು ಹಾಕಿ. ನಂತ್ರ ಸ್ವಲ್ಪ ದಾಲ್ಚಿನಿ ಪೌಂಡರ್, ಸಣ್ಣ ಶುಂಠಿ ಪೀಸ್, ಪುಡಿ ಮಾಡಿದ ಕಾಳು ಮೆಣಸನ್ನು ನೀರಿಗೆ ಹಾಕಿ. 7 ನಿಮಿಷ ಚೆನ್ನಾಗಿ ಕುದಿಸಿ. ನಂತ್ರ ತುಪ್ಪ ಹಾಕಿ ಮಿಕ್ಸ್ ಮಾಡಿ ಗ್ಯಾಸ್ ಬಂದ್ ಮಾಡಿ.
ಅರಿಶಿನ ಬೆರೆಸಿದ ಹಾಲಲ್ಲ, ಕಾಫಿ ಕುಡಿಯೋದ್ರಿಂದ ಸಿಗುತ್ತೆ ಬಹಳಷ್ಟು ಲಾಭ
ಲೆಮನ್ ಗ್ರಾಸ್ ( ನಿಂಬೆ ಹುಲ್ಲಿ) ನ ಟೀ : ಲೆಮನ್ ಗ್ರಾಸ್ ಟೀ ಒತ್ತಡವನ್ನು ಕಡಿಮೆ ಮಾಡುವ ಕೆಲಸ ಮಾಡುತ್ತದೆ. ಇದ್ರಲ್ಲಿ ಸಾಕಷ್ಟು ಜೀವಸತ್ವಗಳು ಮತ್ತು ಖನಿಜಗಳು ಕಂಡುಬರುತ್ತವೆ. ಇದನ್ನು ಕೂಡ ನೀವು ಅಗತ್ಯವಾಗಿ ಸೇವನೆ ಮಾಡಬಹುದು. ಒಂದು ಪಾತ್ರೆಗೆ ನಾಲ್ಕು ಲೋಟ ನೀರನ್ನು ಹಾಕಿ ಅದಕ್ಕೆ ನಿಂಬೆ ಹುಲ್ಲನ್ನು ಸಣ್ಣದಾಗಿ ಕತ್ತರಿಸಿ ಹಾಕಿ. ನೀರು ಕುದಿಯಲು ಆರಂಭಿಸಿದ ಮೇಲೆ ಸ್ವಲ್ಪ ಟೀ ಪುಡಿ ಹಾಕಿ ಕುದಿಸಿ. ಗ್ಯಾಸ್ ಆಫ್ ಮಾಡಿ, ಟೀ ಸೋಸಿ ಅದಕ್ಕೆ ನಿಂಬೆ ರಸವನ್ನು ಹಾಕಿ ಸೇವನೆ ಮಾಡಿ.