ಇತ್ತೀಚೆಗೆ ಹಳೆಯ ಹೋಟೆಲ್ ಬಿಲ್, ಹಳೆಯ ಮೋಟಾರ್‌ಸೈಕಲ್ ಬಿಲ್ ಮೊದಲಾದವುಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಅದೇ ರೀತಿ ಸದ್ಯ 1940, 1987ರ ವಿದ್ಯುತ್ ಬಿಲ್, ದಿನಸಿ ಬಿಲ್‌ವೊಂದು ವೈರಲ್ ಆಗ್ತಿದ್ದು, ಎಲ್ಲರಲ್ಲೂ ಅಚ್ಚರಿಗೆ ಕಾರಣವಾಗುತ್ತಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಬೆಲೆಯೇರಿಕೆಯ ಕಾಲಘಟ್ಟದಲ್ಲಿ ನಾವಿದ್ದೇವೆ. ಅಗತ್ಯವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಹೋಗುತ್ತಿದೆ. ಉತ್ತಮ ಗುಣಮಟ್ಟದ ಒಂದು ಕೆಜಿ ಅಕ್ಕಿ (Rice) ತಗೊಳ್ಳಬೇಕು ಅಂದ್ರೆ ಏನಿಲ್ಲಾಂದ್ರೂ ನೂರು ರೂಪಾಯಿಯಂತೂ 50ರಿಂದ 100 ರೂಪಾಯಿಯಂತೂ ಬೇಕೇ ಬೇಕು. ಹತ್ತು ರೂಪಾಯಿಗೆಲ್ಲಾ ಬಿಸ್ಕೆಟ್ ಸಿಗಬಹುದು. ಐದು ರೂಪಾಯಿಗೆ ಚಾಕ್ಲೇಟ್, ಒಂದು ರೂಪಾಯಿಗೆ ಏನಾದ್ರೂ ಕೆಜಿಗಟ್ಟಲೆ ಸಿಗಬಹುದಾ ? ಅಕ್ಕಿ, ಗೋಧಿ, ರಾಗಿ, ಸಕ್ಕರೆ ಹೀಗೆ ಏನಾದ್ರೂ ? ಹೀಗೆಲ್ಲಾ ಕೇಳಿದರೆ ಯಾರಿಗಾದರೂ ನಗು ಬರೋದು ಖಂಡಿತ. ಯಾಕಂದ್ರೆ ಈ ಕಾಲದಲ್ಲಂತೂ 1 ರೂಪಾಯಿಗೆ ಯಾವ ಬೇಳೆನೂ ಸಿಗಲ್ಲ. ಆದ್ರೆ 1 ರೂಪಾಯಿಗೂ ಒಂದು ಕೆಜಿ ಗೋಧಿ (Wheat) ಸಿಗ್ತಿತ್ತಂತೆ ಗೊತ್ತಾ?
1987ರಲ್ಲಿ ಪ್ರತಿ ಕೆಜಿ ಗೋಧಿಗೆ 1.6 ರಂತೆ ಬೆಲೆ ನಿಗದಿ
ನಂಬೋಕೆ ಕಷ್ಟವೆನಿಸಿದ್ರೂ ಇದು ನಿಜ. 1987ರಷ್ಟು ಹಳೆಯ ದಿನಸಿ ಬಿಲ್‌ವೊಂದು ವೈರಲ್ ಆಗಿದ್ದು, ಇದರಲ್ಲಿ ಪ್ರತಿ ಕೆಜಿ ಗೋಧಿಗೆ 1.6 ರಂತೆ ಬೆಲೆ ನಿಗದಿಪಡಿಸಲಾಗಿದೆ. ಭಾರತೀಯ ಅರಣ್ಯ ಸೇವೆ (IFS) ಅಧಿಕಾರಿ ಪರ್ವೀನ್ ಕಸ್ವಾನ್ ಅವರು 1987 ರ ಬಿಲ್‌ನ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದು ಭಾರತೀಯ ಆಹಾರ ನಿಗಮಕ್ಕೆ ಮಾರಾಟವಾದ ಉತ್ಪನ್ನದ ಬಿಲ್ ಆಗಿದೆ. ಅಂದು ಗೋಧಿಯ ಬೆಲೆ ಕೆಜಿಗೆ ₹ 1.6 ಆಗಿತ್ತು ಎಂದು ಹೇಳಿಕೊಂಡಿದ್ದಾರೆ. ಸದ್ಯ ಈ ಫೋಟೋ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ.
undefined
ನಕಲಿ ಗೋಧಿಹಿಟ್ಟು ಮಾರಾಲಾಗುತ್ತಿದೆ… ಎಚ್ಚರದಿಂದ ಅಯ್ಕೆ ಮಾಡಿ
ಅಧಿಕಾರಿ ಪರ್ವೀನ್ ಕಸ್ವಾನ್ ಟ್ವೀಟ್‌ನಲ್ಲಿ 'ಈ ಹಿಂದೆ ಗೋಧಿ ಕೆಜಿಗೆ 1.6 ರೂಪಾಯಿ ಇತ್ತು. ನನ್ನ ಅಜ್ಜ 1987 ರಲ್ಲಿ ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾಗೆ ಮಾರಾಟ (Sale) ಮಾಡಿದ ಗೋಧಿ ಬೆಳೆ ಬೆಲೆಯಿದು' ಎಂದು ಹೇಳಿಕೊಂಡಿದ್ದಾರೆ. ನಂತರದ ಟ್ವೀಟ್‌ನಲ್ಲಿ, ನನ್ನ ಅಜ್ಜನಿಗೆ ಎಲ್ಲಾ ದಾಖಲೆಗಳನ್ನು ಹಾಗೆಯೇ ಇಡುವ ಅಭ್ಯಾಸವಿತ್ತು ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಪೋಸ್ಟ್ 38,400 ವೀಕ್ಷಣೆಗಳು, 643 ಲೈಕ್ಸ್‌ಗಳು ಮತ್ತು ಹಲವಾರು ಕಾಮೆಂಟ್‌ಗಳನ್ನು ಸಂಗ್ರಹಿಸಿದೆ. ಒಂದು ರೂಪಾಯಿಗೆ ಗೋಧಿ ಸಿಗುತ್ತಿದ್ದ ಬಿಲ್‌ನ ಪೋಸ್ಟ್‌ಗೆ ಹಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
Time when wheat used to be at 1.6 rupees per kg. The wheat crop my grandfather sold in 1987 to Food Corporation of India. pic.twitter.com/kArySiSTj4
— Parveen Kaswan, IFS (@ParveenKaswan)ಒಬ್ಬ ಬಳಕೆದಾರರು 'ಇದನ್ನು ಪೋಸ್ಟ್ ಮಾಡಿದ್ದಕ್ಕಾಗಿ ಧನ್ಯವಾದಗಳು ಸರ್. ನಾನು ಇಂದು ಮೊದಲ ಬಾರಿಗೆ ಜೆ ಫಾರ್ಮ್ ಬಗ್ಗೆ ಓದಿದ್ದೇನೆ' ಎಂದು ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರರು, 'ಅದ್ಭುತ. ಆಗ ಹಿರಿಯರು ಖರ್ಚು ಮಾಡಿದ ಪ್ರತಿ ಪೈಸೆಯ ಎಲ್ಲಾ ವಿವರಗಳನ್ನು ಬರೆಯುತ್ತಿದ್ದರು. ಅವರು ಮಾರಾಟ ಮಾಡಿದ ಬೆಳೆಗೆ ಈ ರೀತಿಯ ದಾಖಲೆಗಳನ್ನು ಇರಿಸಿಕೊಳ್ಳುತ್ತಿದ್ದರು. ಅವರಿಂದ ಕಲಿಯಲು ತುಂಬಾ ಇದೆ' ಎಂದು ಕಾಮೆಂಟ್ ಮಾಡಿದ್ದಾರೆ.
Invention: ಹಳ್ಳಿ ಹುಡುಗನಿಂದ ಗಣಿತದ ಮೂಲಕ್ರಿಯೆ ತೋರಿಸುವ ಲೈಟಿಂಗ್ ಡಿವೈಸ್ ಆವಿಷ್ಕಾರ
1940ರಲ್ಲಿ ಒಂದು ತಿಂಗಳಿಗೆ ಕೇವಲ 5 ರೂ. ವಿದ್ಯುತ್ ಬಿಲ್
ಮಂತ್ ಎಂಡ್‌ಗೆ ಲೈಟ್ ಬಿಲ್ ಬರೋವಾಗ ಒಂದ್ ಸಾರಿ ತಲೆ ಗಿರ್ ಅನ್ನುತ್ತೆ. ಯಾಕಂದ್ರೆ ಈ ವಿದ್ಯುತ್ ಬಿಲ್ ಸಾಮಾನ್ಯವಾಗಿ 500ರಿಂದ 1000 ರೂ. ಖಂಡಿತ ಇರುತ್ತೆ. ಕೆಲವೊಮ್ಮೆ ಅದಕ್ಕಿಂತ ಹೆಚ್ಚು ಕೂಡಾ. ತಿಂಗಳ ಸ್ಯಾಲರಿಯಲ್ಲಿ ಇಂತಿಷ್ಟು ದುಡ್ಡನ್ನು ಲೈಟ್ ಬಿಲ್ ಕಟ್ಟಲೆಂದೇ ಮೀಸಲಿಡಬೇಕಾಗುತ್ತದೆ. ಆದ್ರೆ 1940ರಲ್ಲಿ ಬರ್ತಿದ್ದ ಲೈಟ್ ಬಿಲ್ ಎಷ್ಟ್ ಗೊತ್ತಾ ? ಕೇವಲ 5 ರೂ. ಅಷ್ಟೆ. ಇದು ಒಂದು ತಿಂಗಳ ಪೂರ್ಣ ಪ್ರಮಾಣದ ವಿದ್ಯುತ್ ಸರಬರಾಜಿನ ಬಿಲ್ ಮೊತ್ತವೆಂದು ತೋರಿಸಲಾಗಿದೆ. ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ಈ ಬಿಲ್ ವೈರಲ್ ಆಗುತ್ತಿದೆ ಮತ್ತು ನೆಟಿಜನ್‌ಗಳು ಈ ಬಿಲ್ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಈ ವಿದ್ಯುತ್ ಬಿಲ್ ಅಕ್ಟೋಬರ್ 15, 1940ರ ದಿನಾಂಕದ್ದಾಗಿದೆ. ಬಾಂಬೆ ಎಲೆಕ್ಟ್ರಿಕ್ ಸಪ್ಲೈ ಮತ್ತು ಟ್ರಾಮ್‌ವೇ CO. ಲಿಮಿಟೆಡ್, ಸರ್ಕಾರೇತರ ಕಂಪನಿಯಾಗಿದ್ದು, ಇದನ್ನು ಆಗಸ್ಟ್ 7, 1947 ರಂದು ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ಸ್ವಾಧೀನಪಡಿಸಿಕೊಂಡಿತು.