ಆರೋಗ್ಯ ಚೆನ್ನಾಗಿರ್ಲಿ ಅಂತ ಕೆಲವೊಬ್ರು ಎಣ್ಣೆ, ತುಪ್ಪ ಮೊದಲಾದವುಗಳನ್ನು ತಿನ್ನೋದನ್ನೇ ಬಿಟ್ಟು ಬಿಡ್ತಾರೆ. ಆದ್ರೆ ಇಲ್ಲೊಂದೆಡೆ ಸ್ಟ್ರೀಟ್‌ನಲ್ಲಿ ಎಣ್ಣೆ ಸುರಿದು ಆಹಾರ ತಯಾರು ಮಾಡ್ತಿರೋದು ನೋಡಿದ್ರೆ ನೀವು ತಲೆ ಸುತ್ತಿ ಬೀಳೋದು ಖಂಡಿತ.
ಆಹಾರವು ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಇಲ್ಲಿನ ವಿವಿಧ ರಾಜ್ಯಗಳಲ್ಲಿ ಸ್ವಾದಿಷ್ಟಕರವಾದ ಫುಡ್‌ಗಳನ್ನು ನೀವು ಟೇಸ್ಟ್ ಮಾಡಬಹುದು. ಅದರಲ್ಲೂ ಇಂಡಿಯನ್ ಸ್ಟ್ರೀಟ್ ಫುಡ್ ಹೆಚ್ಚು ಫೇಮಸ್ ಆಗಿದೆ. ಆದರೆ ಕೆಲವೊಬ್ಬರು ಬೀದಿ ಬದಿಯಲ್ಲಿ ತಯಾರಿಸುವ ಆಹಾರಗಳಲ್ಲಿ ಹೆಚ್ಚು ಎಣ್ಣೆ, ತುಪ್ಪ ಬಳಸುತ್ತಾರೆ ಅನ್ನೋ ಕಾರಣಕ್ಕೆ ಇದನ್ನು ತಿನ್ನೋದನ್ನು ಅವಾಯ್ಡ್ ಮಾಡ್ತಾರೆ. ಆದ್ರೆ ಇಲ್ಲೊಂದೆಡೆ ಸ್ಟ್ರೀಟ್‌ನಲ್ಲಿ ಎಣ್ಣೆ ಸುರಿದು ಆಹಾರ ತಯಾರು ಮಾಡ್ತಿರೋದು ನೋಡಿದ್ರೆ ನೀವು ತಲೆ ಸುತ್ತಿ ಬೀಳೋದು ಖಂಡಿತ. ಸದ್ಯ ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಜಿಎಸ್ ಫುಡ್ ಟ್ರಾವೆಲ್ಸ್ ಎಂಬ ಹೆಸರಿನ ಫುಡ್ ವ್ಲೋಗರ್ ಹಂಚಿಕೊಂಡ ಕ್ಲಿಪ್ ನಮಗೆ ಪಂಜಾಬ್‌ನ ಸ್ಪೆಷಲ್ ತಿನಿಸು ಪರಾಠವನ್ನು ಪರಿಚಯಿಸುತ್ತದೆ. ಇದರಲ್ಲಿ ಬೀದಿ ವ್ಯಾಪಾರಿ (Street vendor) ಬಿಸಿಯಾದ ಹೆಂಚಿನಲ್ಲಿ ಪರಾಠವನ್ನು ತಯಾರಿಸುತ್ತಾ ಇದಕ್ಕೆ ದೊಡ್ಡ ಡಬ್ಬಿಯಿಂದ ಎಣ್ಣೆ ಸುರಿಯುತ್ತಾರೆ. ಪರಾಠ ಎಣ್ಣೆಯಲ್ಲೇ ತೇಲುವುದನ್ನು ನೀವು ನೋಡಬಹುದು. ನಂತರ ಆತ ಪರಾಠದ ಮೇಲಿನ ಎಣ್ಣೆಯನ್ನು (Oil) ಮತ್ತೆ ಅದೇ ಡಬ್ಬಿಗೆ ಹಾಕಲು ಪ್ರಯತ್ನಿಸುತ್ತಾನೆ. ಆದರೆ ಹೀಗೆ ಮಾಡಿದಾಗಲೂ ಹೆಚ್ಚಿನ ಪ್ರಮಾಣದ ಎಣ್ಣೆ ಪರಾಠದಲ್ಲೇ ಉಳಿದುಕೊಂಡು ಬಿಡುತ್ತದೆ.
ಈ ರೆಸ್ಟೋರೆಂಟಲ್ಲಿ ತಿನ್ನಬೇಕು ಅಂದ್ರೆ ಬರೋಬ್ಬರಿ 4 ವರ್ಷ ಕಾಯಬೇಕು !
ಈ ಪಾಟಿ ಎಣ್ಣೆ ಸುರಿದು ಪರಾಠ ಮಾಡಿದ್ರೆ ಹೇಗಪ್ಪಾ
ಪರಾಠವನ್ನು ಪಂಜಾಬ್‌ನ ಹೆಲ್ದೀ ಆಹಾರ ಎಂದು ಹೇಳುತ್ತಾರೆ. ಹೀಗಿರುವಾಗ ಇಲ್ಲಿ ವ್ಯಾಪಾರಿ, ಪರಾಠ ತಯಾರಿಸಿದ ರೀತಿ ಯಾರಿಗೂ ಸುತಾರಂ ಇಷ್ಟವಾಗಿಲ್ಲ. ಈ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ವಾರಗಳ ಹಿಂದೆ ಅಪ್‌ಲೋಡ್ ಮಾಡಿದ ವೀಡಿಯೊಗೆ 28,144 ಲೈಕ್‌ಗಳು ಬಂದಿವೆ. ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.
ಪರಾಠಾದಲ್ಲಿ ಭಾರಿ ಪ್ರಮಾಣದ ತೈಲವನ್ನು ನೋಡಿದ ನೆಟಿಜನ್‌ಗಳು ಸಂಪೂರ್ಣವಾಗಿ ಆಘಾತಕ್ಕೊಳಗಾಗಿದ್ದಾರೆ. ಒಬ್ಬ ಬಳಕೆದಾರರು, 'ಮೊದಲನೇ ಬೈಟ್ ನಿಮ್ಮನ್ನು ಸ್ವರ್ಗಕ್ಕೆ ಕರೆದುಕೊಂಡು ಹೋಗಬಹುದು, ಎರಡನೇ ಬೈಟ್ ತಿಂದು ನೀವು ಸೀದಾ ಸ್ವರ್ಗಕ್ಕೇ ಹೋಗಬಹುದು' ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, '30 ರೂ. ಪರಾಠ ತಿಂದು, 30 ಲಕ್ಷ ರೂಪಾಯಿ ವೆಚ್ಚ ಮಾಡಿ ಹೃದಯ ಕಸಿ ಮಾಡಿಕೊಳ್ಳಬೇಕಾಗಬಹುದು' ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು, 'ವ್ಯಾಪಾರಿ ಎಂಜಿನ್ ಆಯಿಲ್‌ನಂತಹಾ ಫುಡ್ ಆಯಿಲ್ ಬಳಸ್ತಿದ್ದಾರೆ' ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬ ವ್ಯಕ್ತಿ, 'ನನಗೆ ಈ ಆಹಾರ ತಯಾರಿಸುವ ವಿಡಿಯೋ ನೋಡಿ ನನ್ನ ಕಣ್ಣುಗಳಿಗೆ ಹೃದಯಾಘಾತವಾಯಿತು' ಎಂದರು.
ವಾರೆ ವ್ಹಾ..ಇನ್ಮುಂದೆ ಡ್ರೋನ್ ಮೂಲಕ ಮನೆ ಬಾಗಿಲಿಗೆ ಬರಲಿದೆ ಪಿಜ್ಜಾ, ವಿಡಿಯೋ ವೈರಲ್
ಇನ್ನೊಬ್ಬ ಬಳಕೆದಾರರು, 'ಇವರು ಒಂದು ಪ್ಲೇಟ್ ಎಣ್ಣೆಯ ಜೊತೆ ಸ್ಪಲ್ಪ ಪರಾಠವನ್ನು ಸರ್ವ್ ಮಾಡುತ್ತಿದ್ದಾರೆ' ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, 'ಕ್ಯಾನ್ಸರ್ ಪ್ರೀಮಿಯಂ ಸದಸ್ಯತ್ವ ಪ್ಯಾಕೇಜ್' ಎಂದರೆ ಮತ್ತೊಬ್ಬರು. 'ಇದಕ್ಕೆ ಪಂಜಾಬ್ ಕಾ ಕ್ಯಾನ್ಸರ್ ವಾಲಾ ಪರಾಠ ಎಂದು ಹೆಸರಿಸಬಹುದು' ಎಂದು ತಿಳಿಸಿದ್ದಾರೆ. ಮತ್ತೊಬ್ಬ ವ್ಯಕ್ತಿ, 'ಇದು ಜನಸಂಖ್ಯೆ ಇನಿಯಂತ್ರಣಕ್ಕಾಗಿ ಹೊಸ ನೀತಿಯಾಗಿದೆ' ಎಂದು ಕಾಮೆಂಟ್ ಮಾಡಿದ್ದಾರೆ. ಅದೇನೆ ಇರ್ಲಿ, ಅದೆಷ್ಟೇ ಟೇಸ್ಟಿಯಾಗಿದ್ರೂ ಅನ್ ಹೆಲ್ದೀ ಫುಡ್‌ಗೆ ಭಾರತೀಯರು ಮಣೆ ಹಾಕಲ್ಲ ಅನ್ನೋದಕ್ಕೆ ಈ ವಿಡಿಯೋ ಸ್ಪಷ್ಟವಾದ ಉದಾಹರಣೆಯಾಗಿದೆ.