ಗರಿ ಗರಿ ಸಾಬೂದಾನ್ ವಡೆ ಮತ್ತು ಪನ್ನೀರ್‌ ಚಿಲ್ಲಿ ಫ್ರೈ

By Suvarna NewsFirst Published Feb 10, 2020, 5:55 PM IST
Highlights

ಸಾಬೂದಾನ್ ವಡೆ ಹಾಗೂ ಪನ್ನೀರ್‌ ಚಿಲ್ಲಿ ಫ್ರೈ ಸಖತ್ ಟೇಸ್ಟಿ. ಇದನ್ನು ಸಂಜೆ ಟೈಮ್ ಸ್ನಾಕ್ಸ್ ಗೆ ಟ್ರೈ ಮಾಡಬಹುದು. ಕಷ್ಟದ ರೆಸಿಪಿ ಏನಲ್ಲ. ಮಕ್ಕಳಿಗೂ ಇಷ್ಟಪಟ್ಟು ತಿನ್ನುತ್ತಾರೆ.

ಸಾಬೂದಾನ್ ವಡೆ ಮಹಾರಾಷ್ಟ್ರದ ಕಡೆ ಸಖತ್ ಪೇಮಸ್ ರೆಸಿಪಿ. ಇಲ್ಲಿನ ಬೀದಿ ಬದಿ ಅಡ್ಡಾಡಿದರೆ ನಿಮಗೆ ಬಿಸಿ ಬಿಸಿ ಸಾಬೂದಾನ್ ಮಾರೋದು ಕಣ್ಣಿಗೆ ಬೀಳುತ್ತದೆ. ನಮ್ಮಲ್ಲೂ ಮಹಾರಾಷ್ಟ್ರ ಬಾರ್ಡರ್ ನಲ್ಲಿರುವ ಕೆಲವು ಪ್ರದೇಶಗಳಲ್ಲಿ ಇದು ಬಹಳ ಫೇಮಸ್. ಆದರೆ ನಮ್ಮ ರಾಜ್ಯದಲ್ಲಿ ಇದರ ಬಳಕೆ ಕಡಿಮೆ. ಬೆಂಗಳೂರಿನಲ್ಲಿ ಕೆಲವು ಕಡೆ ಸಿಗುತ್ತೆ. ನೀವೇನಾದರೂ ರಂಗ ಶಂಕರಕ್ಕೆ ನಾಟಕ ನೋಡಲು ಹೋದ್ರೆ ಅಲ್ಲಿನ ಕ್ಯಾಂಟೀನ್ ನಲ್ಲಿ ಇದು ಯಾವತ್ತೂ ಸಿಗುತ್ತೆ. ಇದನ್ನು ಮಾಡೋದು ಸುಲಭ. ಆದರೆ ಒಂಚೂರು ಹುಷಾರಾಗಿರಬೇಕು. ಯಾಕಂದ್ರೆ ಒಮ್ಮೊಮ್ಮೆ ಸಾಬೂದಾನ್ ನೀರಲ್ಲಿ ಬೇಗ ನೆನೆದು ಬಿಡುತ್ತೆ, ಕೆಲವೊಮ್ಮೆ ನೆನೆಯೋದಕ್ಕೆ ಹೆಚ್ಚು ಟೈಮ್ ತಗೊಳುತ್ತೆ. ಹಾಗಾಗಿ ಸ್ವಲ್ಪ ಹುಷಾರಾಗಿರಬೇಕು.

 

ಸಂದರ್ಭ : ಸಂಜೆಯ ಸ್ನಾಕ್ಸ್

ಅವಧಿ : 45 ನಿಮಿಷ

ಈ ದೇಸಿ ರೆಸಿಪಿ ಟ್ರೈ ಮಾಡಿ, ಬಾಯಿಗೂ ರುಚಿ, ದೇಹಕ್ಕೂ ಹಿತ

 

ಏನೇನು ಸಾಮಗ್ರಿ ಬೇಕು?

ಸಾಬೂದಾನ್ 1 ಕಪ್, 2 ಆಲೂಗಡ್ಡೆ, ಹುರಿದು ಪುಡಿ ಮಾಡಿದ ಕಡಲೆ ಬೀಜ, ಜಿಂಜರ್ ಪೇಸ್ಟ್ ಅರ್ಧ ಸ್ಪೂನ್, ಕೊತ್ತಂಬರಿ, ಜೀರಿಗೆ ಸ್ವಲ್ಪ, ಮೆಣಸಿನ ಕಾಯಿ, ಉಪ್ಪು, ನಿಂಬೆ ರಸ, ಕರಿಯಲು ಎಣ್ಣೆ.

 

ಮಾಡೋದು ಹೇಗೆ?

- ಮೊದಲು ಒಂದು ದೊಡ್ಡ ಬೌಲ್ ನಲ್ಲಿ ಸಾಬೂದಾನ್ ನೆನೆಹಾಕಿ. 3 ಗಂಟೆಗಳ ಕಾಲ ನೆನೆಯಬೇಕು.

- ನೀರಿಂದ ಸೋಸಿ ತೆಗೆಯಿರಿ. ಅರ್ಧ ಗಂಟೆ ಒಣಗಲು ಬಿಡಿ.

- ಈಗ ದೊಡ್ಡ ಬೌಲ್ ನಲ್ಲಿ ಸಾಬೂದಾನ್ ತೆಗೆದುಕೊಂಡು ಅದಕ್ಕೆ ಆಲೂಗಡ್ಡೆ. ಕಡಲೆ ಪೌಡರ್ ಎರಡು ಸ್ಪೂನ್ ನಷ್ಟು ಹಾಕಿ.

- ಇದಕ್ಕೆ ಎರಡು ಸ್ಪೂನ್ ಕೊತ್ತಂಬರಿ ಬೀಜ, 1 ಸ್ಪೂನ್ ಜೀರಿಗೆ, ಅರ್ಧ ಸ್ಪೂನ್ ಜಿಂಜರ್, ಹೆಚ್ಚಿದ ಹಸಿಮೆಣಸಿನ ಕಾಯಿ, ಉಪ್ಪು ಹಾಕಿ.

- ಚೆನ್ನಾಗಿ ಮಿಕ್ಸ್ ಮಾಡಿ ಮ್ಯಾಶ್ ಮಾಡಿ.

- ಇದನ್ನು ಉಂಡೆ ಮಾಡಿ ಚಪ್ಪಟೆಯಾಕಾರಕ್ಕೆ ತಟ್ಟಿ.

- ಎಣ್ಣೆ ಕುದಿಯಲು ಇಡಿ.

- ಬಿಸಿಯಾದ ಮೇಲೆ ತಟ್ಟಿದ್ದನ್ನು ಹಾಕಿ.

- ಬೆಂದಾಗ ನಸು ಕಂದು ಬಣ್ಣಕ್ಕೆ ತಿರುಗುತ್ತದೆ. ಇದನ್ನು ಬಿಸಿ ಬಿಸಿ ಟೀಯ ಜೊತೆಗೆ ಸವಿಯೋದು ಸಖತ್ತಾಗಿರುತ್ತೆ. 

ವೆಜ್ ಪರೋಟಾ ಮಾಡೋದು ಹೀಗೆ

 

ಪನ್ನೀರ್ ಚಿಲ್ಲಿ ಫ್ರೈ

ಪನೀರ್ ಇಷ್ಟ ಪಡೆದಿರುವವರಿಗೂ ಇಷ್ಟವಾಗುವ ರೆಸಿಪಿ ಇದು. ಇದನ್ನ ಪಾರ್ಟಿಗೆ ಸರ್ವ್ ಮಾಡಬಹುದು. ಮನೆಯಲ್ಲೂ ಸಂಜೆಯ ರಾತ್ರಿಯ ಹೊತ್ತಿಗೆ ರೆಡಿ ಮಾಡಬಹುದು. ಇದರ ಟೇಸ್ಟ್ ಡಿಫರೆಂಟ್.

 

ಏನೇನೆಲ್ಲ ಬೇಕು?

ಪನ್ನೀರ್ - ಕಾಲು ಕೆ.ಜಿ, ದಪ್ಪ ಮೆಣಸಿನಕಾಯಿ - 1 ಕಪ್, ಈರುಳ್ಳಿ - 1, ಹಸಿಮೆಣಸಿನಕಾಯಿ -6, ಶುಂಠಿ -ಬೆಳ್ಳುಳ್ಳಿ ಪೇಸ್ಟ್ - 1 ಚಮಚ, ಅಕ್ಕಿಹಿಟ್ಟು - 3 ಚಮಚ, ಕಾರ್ನ್‌ಪ್ಲೋರ್ - 2 ಚಮಚ, ಅಚ್ಚಖಾರದ ಪುಡಿ - 1 ಚಮಚ, ಟೊಮ್ಯಾಟೋ ಸಾಸ್ - 1 ಚಮಚ, ಚಿಲ್ಲಿ ಸಾಸ್ - 1ಚಮಚ, ಕಾಳು ಮೆಣಸಿನ ಪುಡಿ - ಅರ್ಧ ಚಮಚ, ಉಪ್ಪು - ರುಚಿಗೆ ತಕ್ಕಷ್ಟು,  ಎಣ್ಣೆ - ೨೫೦ ಗ್ರಾಂ.

 

ಮಾಡೋ ವಿಧಾನ ಹೇಗೆ? 

- ಒಂದು ಬೌಲ್‌ಗೆ ನೀಟಾಗಿ ಹೆಚ್ಚಿದ ಪನ್ನೀರ್ ಹಾಕಿ.

- ಇದಕ್ಕೆ ಶುಂಠಿ - ಬೆಳ್ಳುಳ್ಳಿ ಪೇಸ್ಟ್, ಅಕ್ಕಿಹಿಟ್ಟು, ಕಾರ್ನ್‌ಫ್ಲೋರ್, ಅಚ್ಚ ಖಾರದ ಪುಡಿ, ಉಪ್ಪು ಹಾಗೂ ಸ್ವಲ್ಪ ನೀರನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.

- ಸ್ವಲ್ಪ ಹೊತ್ತು ಹಾಗೇ ಬಿಡಿ. ಈ ಮಸಾಲೆಯನ್ನು ಇದು ಹೀರಿಕೊಳ್ಳಬೇಕು.

- ಆಮೇಲೆ ಬಾಣಲೆಗೆ ಎಣ್ಣೆ ಹಾಕಿ.

- ಅದು ಕಾದ ಮೇಲೆ ಪನ್ನೀರನ್ನು ಹಾಕಿ ಕರಿಯಿರಿ. ಎಲ್ಲ ಕರಿದು ಪಕ್ಕಕ್ಕಿಡಿ.

- ಈಗ ಮತ್ತೊಂದು ಪ್ಯಾನ್‌ ತೆಗೆದುಕೊಂಡು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ಸ್ಟೌ ಮೇಲಿಡಿ.

-  ಅದು ಕಾದ ಮೇಲೆ ಉದ್ದುದ್ದ ಹೆಚ್ಚಿದ ಈರುಳ್ಳಿ ಹಾಕಿ ಫ್ರೖ ಮಾಡಿ.

- ಇದಕ್ಕೆ ಹಸಿ ಮೆಣಸಿನಕಾಯಿ, ದಪ್ಪ ಮೆಣಸಿನ ಕಾಯಿ ಅಥವಾ ಕ್ಯಾಪ್ಸಿಕಂ ಹಾಕಿ ಕೆಂಪಗೆ ಹುರಿಯಿರಿ.

-  ನಂತರ ಕರಿದು ತೆಗೆದಿಟ್ಟಿದ್ದ ಪನ್ನೀರನ್ನು ಹಾಕಿ ಫ್ರೈ ಮಾಡಿ.

- ಇದಕ್ಕೆ ಚಿಲ್ಲಿ ಸಾಸ್ ಹಾಕಿ, ನಂತರ ಟೊಮ್ಯಾಟೋ ಸಾಸ್ ಸೇರಿಸಿ.

- ಮೇಲಿಂದ ಸ್ವಲ್ಪ ಕಾಳು ಮೆಣಸಿನ ಪೌಡರ್ ಉದುರಿಸಿ.

- ಇದನ್ನು ಸರಿಯಾಗಿ ಮಿಕ್ಸ್ ಮಾಡಿ .

- ಸಖತ್ ಟೇಸ್ಟ್ ಇರೋ ಈ ರೆಸಿಪಿ ಮಾಡಿದ ಕೆಲವೇ ಕ್ಷಣಗಳಲ್ಲಿ ಖಾಲಿಯಾಗದಿದ್ದರೆ ಕೇಳಿ!

ಮಂಗಳೂರು ಬನ್ಸ್ ಟ್ರೈ ಮಾಡಿ ನೋಡಿ...

click me!