Food Tips: ಬಿರಿಯಾನಿ, ಬೇಯಿಸಿದ ಮೊಟ್ಟೆಯನ್ನು ಬಿಸಿ ಮಾಡಿ ತಿನ್ಬೋದಾ ?

By Suvarna News  |  First Published Feb 3, 2022, 7:14 PM IST

ಬಿರಿಯಾನಿ (Biriyani), ಚಿಕನ್ ಕರಿ, ಬೇಯಿಸಿದ ಮೊಟ್ಟೆ (Egg), ಪಿಜ್ಜಾಫ್ರೆಂಚ್ ಫ್ರೈಸ್‌ ಇವೆಲ್ಲಾ ಸಾಮಾನ್ಯವಾಗಿ ಎಲ್ಲರ ಫೇವರಿಟ್. ಹೀಗಾಗಿ ಮನೆಗೆ ತಂದು ಇವೆಲ್ಲಾ ಬಾಕಿಯಾದ್ರೂ ಎಸಿಯೋಕೆ ಎಲ್ರೂ ಹಿಂಜರಿತಾರೆ. ಆದ್ರೆ ಇವೆಲ್ಲವನ್ನೂ ಮತ್ತೆ ಬಿಸಿ ಮಾಡಿ ತಿನ್ನೋದು ಆರೋಗ್ಯ (Health)ಕ್ಕೆ ಒಳ್ಳೇದಾ ?


ಆಹಾರವನ್ನು ಆರ್ಡರ್ ಮಾಡುವಾಗ, ಬಹುಶಃ ಸ್ವಲ್ಪ ಹೆಚ್ಚುವರಿಯಾಗಿ ಆರ್ಡರ್ ಮಾಡಿದ್ದೀರಿ. ಫುಡ್ ಸುಮ್ನೆ ವೇಸ್ಟ್ ಮಾಡೋಕು ಮನಸ್ಸಿಲ್ಲ. ಬಿಸಿ ಮಾಡಿ ತಿನ್ಬೋದಾ, ಹೇಗೆ ಬಿಸಿ ಮಾಡಿ ತಿನ್ನೋದು ಅನ್ನೋ ಕನ್ ಫ್ಯೂಶನ್ ಇದ್ರೆ ಇಲ್ಲಿದೆ ಮಾಹಿತಿ. ಹೆಚ್ಚಿನವರು ಮೈಕ್ರೊವೇವ್‌ನಲ್ಲಿ ಉಳಿದ ಆಹಾರವನ್ನು ಮತ್ತೆ ಬಿಸಿ ಮಾಡುತ್ತಾರೆ. ಆದರೆ ಕೆಲವೊಂದು ಆಹಾರಗಳನ್ನು ಮೈಕ್ರೊವೇವ್‌ನಲ್ಲಿ ಬಿಸಿ ಮಾಡುವುದಾದರೂ ಪ್ರತ್ಯೇಕ ರೀತಿಯನ್ನು ಅನುಸರಿಸಬೇಕು.  ಬಿರಿಯಾನಿ, ಬೇಯಿಸಿದ ಮೊಟ್ಟೆ, ಪಿಜ್ಜಾ ಮೊದಲಾದ ಕೆಲ ಆಹಾರಗಳನ್ನು ಮತ್ತೆ ಬಿಸಿ ಮಾಡುವುದು ಮತ್ತು ಅದರ ತಾಜಾತನವನ್ನು ಕಾಪಾಡಿಕೊಳ್ಳುವುದು ಹೇಗೆ ಎಂದು ತಿಳಿಯಿರಿ.

ಬಿರಿಯಾನಿ 
ಮೈಕ್ರೊವೇವ್‌ನಲ್ಲಿ ಬಿರಿಯಾನಿ (Biriyani)ಯನ್ನು ಮತ್ತೆ ಬಿಸಿ ಮಾಡುವಾಗ, ಒಂದು ಕಪ್ ಅನ್ನಕ್ಕೆ ಒಂದು ಚಮಚ ನೀರನ್ನು ಸೇರಿಸಿ, ಒಂದು ಚಮಚದೊಂದಿಗೆ ಎಲ್ಲವನ್ನೂ ಮಿಕ್ಸ್ ಮಾಡಿ ಮತ್ತು ನೀರು ಹೀರಿಕೊಳ್ಳುವ ವರೆಗೆ ಚೆನ್ನಾಗಿ ಬಿಸಿ ಮಾಡಿ. ಬಿರಿಯಾನಿ ಪಾತ್ರೆಯನ್ನು ಮೈಕ್ರೊವೇವ್‌ನಲ್ಲಿ ಇಡುವ ಮೊದಲು, ಅದಕ್ಕೆ ಪ್ಲೇಟ್ ಮುಚ್ಚಿ ಅಥವಾ ಟವೆಲ್‌ನಿಂದ ಪಾತ್ರೆಯ ಬಾಯಿಯನ್ನು ಮುಚ್ಚಿಕೊಳ್ಳಬಹುದು. ಹೀಗೆ ಮಾಡುವುದರಿಂದ ಅನ್ನದಲ್ಲಿ ತೇವಾಂಶ ಉಳಿಯುತ್ತದೆ. ತಿನ್ನುವಾಗ ಡ್ರೈ ಎನಿಸುವುದಿಲ್ಲ.

Tap to resize

Latest Videos

undefined

Food Tips: ಹಸಿವಾಗುತ್ತೆ ಅಂತ ಆಗಾಗ ತಿನ್ಬೇಡಿ..ಊಟದ ಮಧ್ಯೆ ಇಷ್ಟು ಗಂಟೆ ಗ್ಯಾಪ್ ಇರ್ಲೇಬೇಕು

ಜಿಲೇಬಿ
ಸಿಹಿತಿಂಡಿ ಮಿಕ್ಕಿದಾಗ ಎಸೆಯುವುದು ಯಾರಿಗೂ ಇಷ್ಟವಿರುವುದಿಲ್ಲ. ತೆಗೆದಿಟ್ಟು ಆಮೇಲೆ ತಿನ್ನೋಣವೆಂದೇ ಎಲ್ಲರೂ ಬಯಸುತ್ತಾರೆ. ಹೀಗಿದ್ದಾಗ ಮೈಕ್ರೋವೇವ್ ಸುರಕ್ಷಿತ ತಟ್ಟೆಯಲ್ಲಿ ಇರಿಸಿ ಜಿಲೇಬಿಯನ್ನು ಬಿಸಿ ಮಾಡಬಹುದಾಗಿದೆ. ಉಳಿದಿರುವ ಜಿಲೇಬಿಯನ್ನು ಸುಮಾರು 10 ಸೆಕೆಂಡುಗಳ ಕಾಲ ಬಿಸಿ ಮಾಡಿ. ಸ್ವಲ್ಪ ಸಮಯ ಕಳೆದ ನಂತರ, ಮತ್ತೊಮ್ಮೆ ಪರಿಶೀಲಿಸಿ. ಜಿಲೇಬಿಯ ಒಳಭಾಗದಲ್ಲಿ ಬೆಚ್ಚಗಾಗದಿದ್ದರೆ, ಹೆಚ್ಚುವರಿ 10 ಸೆಕೆಂಡುಗಳ ಕಾಲ ಬೇಯಿಸಿ.

ಮೊಮೊಸ್
ಮೊಮೊಸ್ ಬಿಸಿ ಮಾಡಲು ಇದನ್ನು ಒದ್ದೆಯಾದ ಮಸ್ಲಿನ್ ಬಟ್ಟೆ ಅಥವಾ ಪೇಪರ್ ಟವೆಲ್‌ನಿಂದ ಕವರ್ ಮಾಡಿ ಮತ್ತು ಅವುಗಳನ್ನು ಮೈಕ್ರೋವೇವ್ ಸುರಕ್ಷಿತ ಬೌಲ್‌ನಲ್ಲಿ ಇರಿಸಿ. ಮೊಮೊಗಳ ಸಂಖ್ಯೆಯನ್ನು ಅವಲಂಬಿಸಿ, ಅದನ್ನು ಎರಡು ನಿಮಿಷಗಳವರೆಗೆ ಬಿಸಿ ಮಾಡಿ. 

ಬೇಯಿಸಿದ ಮೊಟ್ಟೆಗಳು
ಬೇಯಿಸಿದ ಮೊಟ್ಟೆ (Egg)ಯನ್ನು ಎಂದಿಗೂ ಮೈಕ್ರೋವೇವ್ ನಲ್ಲಿ ಬಿಸಿ ಮಾಡಿ ತಿನ್ನಬೇಡಿ. ಯಾಕೆಂದರೆ, ಬೇಯಿಸಿದ ಮೊಟ್ಟೆಯನ್ನು ಮತ್ತೆ ಬಿಸಿ ಮಾಡುವುದರಿಂದ ಇದರಲ್ಲಿರವ ಹಳದಿ ಲೋಳೆಯು ಸ್ಫೋಟಗೊಳ್ಳಬಹುದು. ಹೀಗಾಗಿ ನೀರನ್ನು ಮಾತ್ರ ಬಿಸಿ ಮಾಡಿ ಮತ್ತು ಬೇಯಿಸಿದ ಮೊಟ್ಟೆಯ ಮೇಲೆ ಸಂಪೂರ್ಣವಾಗಿ ಮುಳುಗುವವರೆಗೆ ನೀರು ಸುರಿಯಿರಿ. ಈಗ ಇದನ್ನು 10 ನಿಮಿಷಗಳ ಕಾಲ ಬಿಸಿ ಮಾಡಿ ಮತ್ತೆ ಬಳಸಬಹುದು..

Food Tips: ಮೊಸರು ಮತ್ತು ಯೋಗರ್ಟ್ ಒಂದೇನಾ ? ಬೇರೆ ಬೇರೆನಾ ?

ಪಿಜ್ಜಾ
ಪಿಜ್ಜಾ ಹೆಚ್ಚಾಯ್ತು ಅಂತ ಯಾರಾದ್ರೂ ಎಸಿತಾರಾ. ತಣ್ಣಗಿದ್ರೂ ತಿನ್ನೋದ, ಬಿಸಿ ಮಾಡಿಯಾದ್ರೂ ತಿನ್ನೋದೆ. ಪಿಜ್ಜಾ ಬಿಸಿ ಮಾಡೋಕೆ ಮೊದಲಿಗೆ ಪಿಜ್ಜಾವನ್ನು ಮೈಕ್ರೋವೇವ್‌ನಲ್ಲಿ 30 ಸೆಕೆಂಡುಗಳ ಕಾಲ ಒಂದು ಲೋಟ ನೀರಿನೊಂದಿಗೆ ಇರಿಸಿ. ಪರಿಣಾಮವಾಗಿ ಪಿಜ್ಜಾ ಸ್ಲೈಸ್ ಬಿಸಿಯಾಗಿರುತ್ತದೆ ಮತ್ತು ಗರಿಗರಿಯಾಗುತ್ತದೆ. ಮೂಲ ವಿನ್ಯಾಸವು ಹಾಗೇ ಉಳಿಯುತ್ತದೆ.

ಚಿಕನ್
ಚಿಕನ್ ಅನ್ನು ಮೈಕ್ರೋವೇವ್ ಮಾಡುವುದು ತುಂಬಾ ಬಿಸಿಯಾಗಲು ಕಾರಣವಾಗುತ್ತದೆ. ಆದ್ದರಿಂದ ಚಿಕನ್ ಮೇಲೆ ಸ್ವಲ್ಪ ಎಣ್ಣೆಯನ್ನು ಬ್ರಷ್ ಮಾಡಿ ಮತ್ತು ಸುಮಾರು 10 ನಿಮಿಷಗಳ ಕಾಲ ಒಲೆಯಲ್ಲಿ ಬೇಯಿಸಿ. ಈ ರೀತಿ ಮಾಡುವುದರಿಂದ, ಚಿಕನ್ ತಾಜಾ ರುಚಿಯನ್ನು ಹೊಂದಿರುತ್ತದೆ.

ಫ್ರೆಂಚ್ ಫ್ರೈಸ್
ಈಗಾಗಲೇ ಕರಿದ ಆಹಾರವನ್ನು ಮೈಕ್ರೋವೇವ್‌ನಲ್ಲಿಡುವುದು ಸೂಕ್ತವಲ್ಲ. ಅದನ್ನು ಮಾಡಬೇಡಿ. ಫ್ರೆಂಚ್ ಫ್ರೈಸ್‌ನ್ನು ಹೀಗೆ ಮಾಡಿದಾಗ ಅವು ಮತ್ತಷ್ಟು ಮೆತ್ತಗಾಗುತ್ತವೆ. ಬದಲಾಗಿ, ನೀವು ಅವುಗಳನ್ನು ಮೂರು ನಿಮಿಷಗಳವರೆಗೆ ಏರ್ ಫ್ರೈಯರ್‌ನಲ್ಲಿ ಇರಿಸಬಹುದು. ಈ ರೀತಿ ಮಾಡಿದರೆ ಫ್ರೆಂಚ್ ಫ್ರೈಸ್ ಗರಿಗರಿಯಾಗಿ ಬದಲಾಗುತ್ತದೆ.
ಸೋ, ಇನ್ಮುಂದೆ ನೀವು ಬಿರಿಯಾನಿ, ಬೇಯಿಸಿದ ಮೊಟ್ಟೆ, ಪಿಜ್ಜಾ ಮೊದಲಾದವು ಮಿಕ್ಕಿದ್ರೆ ತಿನ್ನೋಕಾಗಲ್ಲ ಅಂತ ವರಿ ಮಾಡ್ಕೋಬೇಕಾಗಿಲ್ಲ. ಎಲ್ಲವನ್ನೂ ಸುರಕ್ಷಿತವಾಗಿ ಬಿಸಿ ಮಾಡಿ ತಿನ್ಬೋದು.

click me!