
ಪ್ರಪಂಚದ ಅತ್ಯಂತ ಜನಪ್ರಿಯ ಪಾನೀಯಗಳಲ್ಲಿ ಒಂದಾದ ಚಹಾ (Tea)ವು ನೀರಿನ ನಂತರ ಜನರು ಅತಿ ಹೆಚ್ಚು ಸೇವಿಸುವ ಪಾನೀಯವಾಗಿದೆ. ಚಹಾ ಅನೇಕ ಆರೋಗ್ಯ (Health) ಪ್ರಯೋಜನಗಳಿಂದ ಕೂಡಿದೆ. ವಿವಿಧ ರೀತಿಯ ಚಹಾ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ದೀರ್ಘಕಾಲದ ಕಾಯಿಲೆಗಳನ್ನು ಗುಣಪಡಿಸುತ್ತದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ. ಒಂದು ಕಪ್ ಚಹಾದೊಂದಿಗೆ ನಿಮ್ಮ ದಿನವನ್ನು ಪ್ರಾರಂಭಿಸುವುದು ಮತ್ತು ಕೊನೆಗೊಳಿಸುವುದು ತುಂಬಾ ಉತ್ತಮವಾಗಿದೆ.
ಚಹಾ ಸೇವನೆ ವಯಸ್ಸಾದ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ ಮತ್ತು ಚರ್ಮ (Skin)ವನ್ನು ಬಿಗಿಯಾಗಿ ಮತ್ತು ಕಾಂತಿಯುತವಾಗಿರಿಸುತ್ತದೆ. ಒತ್ತಡ (Pressure)ವನ್ನು ನಿವಾರಿಸಿ ಮನಸ್ಸಿಗೆ ವಿಶ್ರಾಂತಿ ನೀಡುತ್ತದೆ. ಚಹಾದಲ್ಲಿರುವ ಉತ್ಕರ್ಷಣ ನಿರೋಧಕಗಳು ಉರಿಯೂತದ ವಿರುದ್ಧದ ಹೋರಾಟದಲ್ಲಿ ಪ್ರಯೋಜನಕಾರಿಯಾಗಿದೆ. ಇದು ರಕ್ತನಾಳಗಳ ಗಟ್ಟಿಯಾಗುವುದನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ಕಂಡುಬಂದಿದೆ. ನಿಯಮಿತವಾಗಿ ಚಹಾ ಸೇವನೆಯು ಪಾರ್ಶ್ವವಾಯು ಮತ್ತು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ತಿಳಿದುಬಂದಿದೆ. ಹಾಗಿದ್ರೆ ಯಾವ ರೀತಿಯ ಟೀ ಕುಡಿಯುವುದರಿಂದ ಯಾವ ರೀತಿಯ ಆರೋಗ್ಯ ಪ್ರಯೋಜನವಿದೆ ತಿಳಿಯೋಣ.
Kitchen Hacks : ಪ್ರಯೋಜನಕ್ಕಿಲ್ಲವೆಂದು ಟೀ ಬ್ಯಾಗ್ ಎಸೆಯಬೇಡಿ, ಹೀಗ್ಮಾಡಿ..
ಕ್ಯಾಮೊಮೈಲ್ ಚಹಾ
ಕ್ಯಾಮೊಮೈಲ್ ಹೂವುಗಳು ಆರಾಮವಾಗಿ ನಿದ್ದೆ (Sleep) ಮಾಡಲು ಅತ್ಯುತ್ತಮ ಟೀಯಾಗಿದೆ. ಕ್ಯಾಮೊಮೈಲ್ ಟೀ ಸೇವನೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಅಲ್ಲದೆ ಉರಿಯೂತವನ್ನು ಕಡಿಮೆ ಮಾಡುತ್ತದೆ. ಈ ಟೀಯಲ್ಲಿರುವ ಉತ್ಕರ್ಷಣ ನಿರೋಧಕಗಳ ಉಪಸ್ಥಿತಿಯಿಂದಾಗಿ ವಯಸ್ಸಾದ ಪ್ರಕ್ರಿಯೆಯನ್ನು ನಿಧಾನಗೊಳಿಸುವಲ್ಲಿ ಸಾಕಷ್ಟು ಉತ್ತಮವಾಗಿದೆ. ಮುಟ್ಟಿನ ಹೊಟ್ಟೆನೋವನ್ನು ಇಲ್ಲವಾಗಿಸಲು ಸಹ ಕ್ಯಾಮೊಮೈಲ್ ಚಹಾ ಸೇವನೆ ಬೆಸ್ಟ್.
ಕ್ಯಾಮೊಮೈಲ್ ಹೂವುಗಳನ್ನು ಬಿಸಿ ನೀರಿನಲ್ಲಿ ಕುದಿಸಿ ಈ ಚಹಾವನ್ನು ಸಿದ್ಧಪಡಿಸಲಾಗುತ್ತದೆ. ಕುದಿಯುವ ನೀರಿಗೆ ಲ್ಯಾವೆಂಡರ್ ಹೂವುಗಳು ಅಥವಾ ಪುದೀನ (Pudina) ಎಲೆಗಳನ್ನು ಕೂಡ ಸೇರಿಸಬಹುದು. ಅಥವಾ ಸ್ಪಲ್ಪ ಸಿಹಿಯಾಗಿರಲಿ ಎಂದು ಬಯಸುವವರು ಸಕ್ಕರೆ ಅಥವಾ ಜೇನುತುಪ್ಪವನ್ನು ಸೇರಿಸಿಕೊಳ್ಳಬಹುದು..
Mullein Tea: ನಿದ್ದೆ ಬರ್ತಿಲ್ವಾ ? ಜಸ್ಟ್ ಒಂದು ಕಪ್ ಸ್ಪೆಷಲ್ ಟೀ ಕುಡೀರಿ ಸಾಕು
ರೋಸ್ ಟೀ
ಗುಲಾಬಿಯ ಪರಿಮಳ ಒತ್ತಡವನ್ನು ಕಡಿಮೆ ಮಾಡಿ ಮನಸ್ಸನ್ನು ಉಲ್ಲಸಿತಗೊಳಿಸುತ್ತದೆ. ಹಾಗೆಯೇ ಗುಲಾಬಿ ದಳಗಳನ್ನು ಬಳಸಿ ತಯಾರಿಸಿದ ರೋಸ್ ಟೀ ಸಹ ಆರೋಗ್ಯಕ್ಕೆ ಉತ್ತಮವಾಗಿದೆ. ರೋಸ್ ಟೀ ಮಾಡಲು ಗುಲಾಬಿ ದಳಗಳನ್ನು ತಾಜಾ ಅಥವಾ ಒಣಗಿಸಿ ಬಳಸಬಹುದು. ಟೀ ಮಾಡುವ ಮೊದಲು ಗುಲಾಬಿ ದಳವನ್ನು ನೀರಿನಲ್ಲಿ ನೆನೆಸಿಡಬೇಕು. ಮಲಗುವ ಮೊದಲು 1 ಸಿಪ್ ರೋಸ್ ಟೀ ಕುಡಿದರೆ ನೆಮ್ಮದಿಯ ನಿದ್ದೆ ಬರುತ್ತದೆ.
ಶುಂಠಿ ಚಹಾ
ಆರ್ಯುವೇದದಲ್ಲಿ ಶುಂಠಿಗೆ ಹೆಚ್ಚು ಮಹತ್ವವಿದೆ. ಶುಂಠಿ (Ginger) ಚಹಾ ಸೇವನೆ ಉತ್ಕರ್ಷಣಾ ನಿರೋಧಕ ಗುಣವನ್ನು ಹೊಂದಿದೆ. ಉರಿಯೂತದ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣಗಳನ್ನು ಹೊಂದಿವೆ. ಇದನ್ನು ತಯಾರಿಸುವುದು ಸಹ ಸುಲಭ. 1 ಲೋಟದಷ್ಟು ನೀರನ್ನು ಕುದಿಯಲು ಬಿಟ್ಟು. ಇದಕ್ಕೆ ಒಂದು ಚಿಟಿಕೆಯಷ್ಟು ಚಹಾ ಪುಡಿ ಮತ್ತು ಒಂದು ದೊಡ್ಡ ಶುಂಠಿಯನ್ನು ಜಜ್ಜಿ ಹಾಕಿಕೊಳ್ಳಿ. 5 ನಿಮಿಷಗಳ ಕಾಲ ಚೆನ್ನಾಗಿ ಕುದಿಸಿ. ಸೋಸಿಕೊಂಡು ಕುಡಿಯಿರಿ.
ತುಳಸಿ ಚಹಾ
ತುಳಸಿ (Tulsi) ಚಹಾವನ್ನು ಸೇವಿಸುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಇದು ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ, ತುಳಸಿ ಚಹಾ ಸೇವನೆ ಚರ್ಮ ಸಂಬಂಧಿತ ಸಮಸ್ಯೆಗಳನ್ನು ಗುಣಪಡಿಸಲು ಸಹ ನೆರವಾಗುತ್ತದೆ. ತುಳಸಿ ಟೀ ಮಾಡಲು ಮೊದಲಿಗೆ ತುಳಸಿ ಎಲೆಗಳನ್ನು ಹಾಕಿ ನೀರಿನಲ್ಲಿ ಚೆನ್ನಾಗಿ ಕುದಿಸಿಕೊಳ್ಳಿ. ಇದಕ್ಕೆ ಒಂದು ಚಿಟಿಕೆಯಷ್ಟು ಟೀ ಪುಡಿ ಹಾಕಿ ಸೋಸಿಕೊಂಡು ಕುಡಿಯಿರಿ.
ಪುದೀನ, ನಿಂಬೆ ಹಸಿರು ಚಹಾ
ಹಸಿರು ಚಹಾದಲ್ಲಿರುವ ಕ್ಯಾಟೆಚಿನ್ ಅಂಶ ಹೆಚ್ಚಿನ ಉತ್ಕರ್ಷಣ ನಿರೋಧಕಗಳನ್ನು ಒದಗಿಸುತ್ತವೆ. ಹಸಿರು ಚಹಾ ಎಲೆಗಳನ್ನು ಪುದೀನದೊಂದಿಗೆ ಬಿಸಿ ನೀರಿನಲ್ಲಿ ಕುದಿಸಿಕೊಳ್ಳಿ. ನಂತರ ಫಿಲ್ಟರ್ ಮಾಡಿ. ಇದಕ್ಕೆ ನಿಂಬೆ (Lemon) ಹನಿಗಳನ್ನು ಸೇರಿಸಿ ಕುಡಿಯಬೇಕು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.