Drink Hing Water: ತೆಳ್ಳಗಾಗ್ಬೇಕಾ ? ಇಂಗು ನೀರು ಕುಡಿದು ನೋಡಿ

By Suvarna News  |  First Published Feb 3, 2022, 9:07 AM IST

ಇಂಗು (Hing) ಕುಡಿದ ಮಂಗನ ಹಾಗೆ ಆಡ್ತಾನೆ ಅನ್ನೋ ಮಾತಲ್ಲಿ ಬಿಟ್ಟು ಇಂಗಿನ ಬಗ್ಗೆ ಬೇರೆಲ್ಲಾದ್ರೂ ಕೇಳಿದ್ದೀರಾ. ಅಡುಗೆಮನೆ (Kitchen)ಯಲ್ಲಿ ಸ್ಪಲ್ಪ ಸ್ಪಲ್ಪ ಬಳಸ್ತಾರೆ ಅನ್ನೋದು ಗೊತ್ತು. ಅದು ಬಿಟ್ಟು ಇಂಗು ನೀರು ಕುಡಿಯೋದ್ರಿಂದ ಎಷ್ಟೊಂದು ಪ್ರಯೋಜನವಿದೆ ಗೊತ್ತಾ ?


ಕಾಲ ಬದಲಾದ ಹಾಗೇ ಜೀವನಶೈಲಿ (Lifestyle) ಬದಲಾಗುತ್ತದೆ. ಜೀವನಶೈಲಿ ಬದಲಾದಂತೆ ಆಹಾರಕ್ರಮ ಬದಲಾಗಿ ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಗ್ಯಾಸ್ಟ್ರಿಕ್, ಅಜೀರ್ಣ, ಮಲಬದ್ಧತೆ, ತೂಕ ಹೆಚ್ಚಳ ಮೊದಲಾದ ಸಮಸ್ಯೆಗಳು ಸಾಮಾನ್ಯವಾಗಿ ಬಿಡುತ್ತವೆ. ಹೀಗಿದ್ದಾಗ ಆಹಾರಕ್ರಮವನ್ನು ಬದಲಾಯಿಸಿಕೊಳ್ಳುವುದರ ಜತೆಗೆ ಸಮಸ್ಯೆಯನ್ನು ಹೋಗಲಾಡಿಸಲು ಪ್ರಯತ್ನಿಸುವುದು ಸಹ ಮುಖ್ಯ. ಇಂಥಹಾ ಸಮಸ್ಯೆಗಳನ್ನು ಹೋಗಲಾಡಿಸಲು ಕೆಲವರು ಬೆಳಗ್ಗೆದ್ದು ಬಿಸಿ ನೀರು, ಜೇನು ಬೆರೆಸಿದ ನೀರು, ಕೊತ್ತಂಬರಿ ನೀರು ಮೊದಲಾದವನ್ನು ಕುಡಿಯುತ್ತಾರೆ. ಆದರೆ ಬೆಳಗ್ಗೆದ್ದು ಇಂಗು ನೀರು (Hing Water) ಕುಡಿಯೋದು ಅತ್ಯುತ್ತಮ ಅನ್ನೋದು ನಿಮಗೆ ಗೊತ್ತಾ ? 

ಗಂಧರ್ವ ವೆಲ್‌ನೆಸ್ ಸ್ಟುಡಿಯೋದ ಕನ್ಸಲ್ಟಿಂಗ್ ನ್ಯೂಟ್ರಿಷನಿಸ್ಟ್ ಮತ್ತು ಡಯೆಟಿಷಿಯನ್ ಅಸ್ಮಾ ಆಲಂ ಅವರು ಹಿಂಗ್ ವಾಟರ್ ಕುಡಿಯುವ ಪ್ರಯೋಜನಗಳ ಕುರಿತು ಮಾಹಿತಿ ನೀಡಿದ್ದಾರೆ.

Tap to resize

Latest Videos

undefined

ಹಿಂಗ್‌ನ್ನು ಇಂಗು ಎಂದು ಸಹ ಕರೆಯುತ್ತಾರೆ. ಇದೊಂದು ನಿರ್ಜಲೀಕರಣಗೊಂಡ ಸಸ್ಯ ರಸವಾಗಿದೆ. ನೂರಾರು ವರ್ಷಗಳಿಂದ ಇದನ್ನು ಬಳಸಿಕೊಂಡು ಬರಲಾಗುತ್ತಿದೆ. ಇಂಗು ವಿಶಿಷ್ಟವಾದ ಪರಿಮಳವನ್ನು ಹೊಂದಿದ್ದು, ಅಡುಗೆ ತಯಾರಿಕೆಯಲ್ಲಿ ಹೆಚ್ಚಾಗಿ ಬಳಕೆಯಾಗುತ್ತದೆ. ಮಾತ್ರವಲ್ಲದೆ ಹಲವು ಆರೋಗ್ಯ (Health) ಪ್ರಯೋಜನಗಳನ್ನು ಹೊಂದಿದೆ.

Health Tips: ತೆಳ್ಳಗಾಗಬೇಕಾ? ಕೊತ್ತಂಬರಿ ನೀರೇಕೆ ಟ್ರೈ ಮಾಡ್ಬಾರ್ದು?

ಡಯೆಟಿಷಿಯನ್ ಅಸ್ಮಾ ಆಲಂ ಹೇಳುವಂತೆ, ಇಂಗು ನೀರು ಕುಡಿಯುವುದು ಅಜೀರ್ಣ ಸಮಸ್ಯೆಯನ್ನು ಹೋಗಲಾಡಿಸಲು ನೆರವಾಗುತ್ತದೆ. ಹಿಂಗ್ ವಾಟರ್ ಕುಡಿಯುವುದ ಉರಿಯೂತದ ಕರುಳಿನ ಕಾಯಿಲೆಗಳನ್ನು ಗುಣಪಡಿಸುತ್ತದೆ. ಕರುಳಿನ ಕ್ರಮಬದ್ಧತೆಯನ್ನು ಕಾಪಾಡಿಕೊಳ್ಳಲು ನೆರವಾಗುತ್ತದೆ. ಇದಲ್ಲದೆ, ಹಿಂಗ್ ಆ್ಯಂಟಿ ಮೈಕ್ರೊಬಿಯಲ್, ಆ್ಯಂಟಿ ಬ್ಯಾಕ್ಟೀರಿಯಲ್, ಆ್ಯಂಟಿಫಂಗಲ್ ಮತ್ತು ಆ್ಯಂಟಿ ಕ್ಯಾನ್ಸರ್ ಗುಣಲಕ್ಷಣಗಳನ್ನು ಸಹ ಹೊಂದಿದೆ. ಹೀಗಾಗಿ ಇದು ಸೋಂಕಿನ ವಿರುದ್ಧ ಪ್ರಬಲವಾಗಿ ಹೋರಾಡುತ್ತದೆ. 

ಹಿಂಗ್ ಪ್ರಬಲವಾದ ಉತ್ಕರ್ಷಣ ನಿರೋಧಕಗಳ ಅಸಾಧಾರಣ ಮೂಲವಾಗಿದೆ. ಪ್ರತಿದಿನ ಹಿಂಗ್ ನೀರನ್ನು ಕುಡಿಯುವ ಮೂಲಕ ರೋಗ ನಿರೋಧಕ ಶಕ್ತಿಯನ್ನು ಪಡೆಯಬಹುದು. ಇದಲ್ಲದೆ, ಹಿಂಗ್ ನೀರು ಕುಡಿಯುವುದು ಅಸ್ತಮಾ ರೋಗಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ರಕ್ತದ ಗ್ಲೂಕೋಸ್ ಮತ್ತು ರಕ್ತದೊತ್ತಡದ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ಆಲಂ ಹೇಳುತ್ತಾರೆ.

ಹಿಂಗ್ ವಾಟರ್ ಅನ್ನು ತಯಾರಿಸುವುದು ಹೇಗೆ ?
ಇಂಗು ನೀರನ್ನು ತಯಾರಿಸಲು ಮೊದಲಿಗೆ ಒಂದು ಲೋಟ ಉಗುರು ಬೆಚ್ಚನೆಯ ನೀರನ್ನು ತೆಗೆದುಕೊಳ್ಳಿ. ನಂತರ ಇದಕ್ಕೆ ಒಂದು ಚಿಟಿಕೆಯಷ್ಟು ಇಂಗನ್ನು ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ. ನಂತರ ಖಾಲಿ ಹೊಟ್ಟೆಯಲ್ಲಿ ಈ ಪಾನೀಯವನ್ನು ಸೇವಿಸುವುದು ಉತ್ತಮ. ಆಂಟಿ ಆಕ್ಸಿಡೆಂಟ್‌ಗಳ ಹೆಚ್ಚುವರಿ ಪ್ರಮಾಣಕ್ಕಾಗಿ ಮತ್ತು ತೂಕ ನಷ್ಟವನ್ನು ವೇಗಗೊಳಿಸಲು ನೀವು ಇದಕ್ಕೆ ಒಂದು ಚಿಟಿಕೆ ಅರಿಶಿನವನ್ನು ಕೂಡ ಸೇರಿಸಬಹುದು.

Best Winter Soups: ತೂಕ ಇಳಿಸಿಕೊಳ್ಳಬಹುದು ಟ್ರೈ ಮಾಡಿ

ಇಂಗು ನೀರನ್ನು ಕುಡಿಯುವುದರಿಂದ ಸಿಗುವ ಪ್ರಯೋಜನಗಳು

ತೂಕ ನಷ್ಟ
ಹಿಂಗ್ ನೀರು ಚಯಾಪಚಯ ಕ್ರಿಯೆಗೆ ಹೆಚ್ಚು ಅಗತ್ಯವಿರುವ ಉತ್ತೇಜನವನ್ನು ನೀಡುತ್ತದೆ. ವೇಗದ ಚಯಾಪಚಯವು ತೂಕ ನಷ್ಟ (Weight Loss)ವನ್ನು ನೇರವಾಗಿ ನಿರ್ಣಯಿಸುತ್ತದೆ. ಹೆಚ್ಚಿನ ಚಯಾಪಚಯ ದರವು ಆಹಾರವನ್ನು ಉತ್ತಮವಾಗಿ ಜೀರ್ಣಿಸಿಕೊಳ್ಳುತ್ತದೆ. ಉತ್ತಮ ಜೀರ್ಣಕ್ರಿಯೆಯು ಕಳೆದುಕೊಳ್ಳುವ ತೂಕದ ಪ್ರಮಾಣಕ್ಕೆ ನೇರವಾಗಿ ಅನುಪಾತದಲ್ಲಿರುತ್ತದೆ, 

ಹೊಳಪಿನ ಚರ್ಮ
ಪ್ರತಿದಿನ ಹಿಂಗ್ ನೀರನ್ನು ಕುಡಿಯುವುದರ ಹೊಳೆಯುವ ಚರ್ಮ (Skin)ವನ್ನು ಪಡೆಯಬಹುದು. ಹಿಂಗ್ ಉತ್ಕರ್ಷಣ ನಿರೋಧಕಗಳಿಂದ ತುಂಬಿರುತ್ತದೆ. ಇದನ್ನು ನಿಯಮಿತವಾಗಿ ಕುಡಿಯುವುದರಿಂದ  ದೇಹವನ್ನು ಸ್ವತಂತ್ರ ರಾಡಿಕಲ್ ಹಾನಿಯಿಂದ ರಕ್ಷಿಸಬಹುದು. ಆಕ್ಸಿಡೇಟಿವ್ ಒತ್ತಡದಿಂದ ರಕ್ಷಿಸುವ ಮೂಲಕ ಚರ್ಮ ಹಾಳಾಗುವುದನ್ನು ಹಿಂಗ್ ನೀರು ತಡೆಯುತ್ತದೆ.

ಶೀತ ಮತ್ತು ಕೆಮ್ಮಿಗೆ ಒಳ್ಳೆಯದು
ಇದು ಚಳಿಗಾಲ. ಹಲವರಲ್ಲಿ ಈ ಕಾಲದಲ್ಲಿ ಜ್ವರ, ಶೀತ ಕಾಣಿಸಿಕೊಳ್ಳುತ್ತದೆ. ಹಿಂಗ್ ನೀರು ಕುಡಿಯುವುದರಿಂದ ಶೀತದಿಂದ ನಿಮ್ಮನ್ನು ರಕ್ಷಿಸಿಕೊಳ್ಳಬಹುದು. ಹಿಂಗ್ ಕೆಮ್ಮು, ಶೀತ, ಉಸಿರಾಟದ ಸಮಸ್ಯೆಯನ್ನು ಪರಿಹಾರ ನೀಡುತ್ತದೆ.

ಮುಟ್ಟಿನ ನೋವನ್ನು ನಿವಾರಿಸುತ್ತದೆ
ಇಂಗು ನೀರು ಕುಡಿಯುವುದು ಮುಟ್ಟಿನ ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ ಮತ್ತು ಯಾವುದೇ ಔಷಧಿಗಳಿಗಿಂತ ಬೇಗ ನೋವನ್ನು ನಿರಾಳಗೊಳಿಸುತ್ತದೆ ಎಂದು ಆಲಂ ಹೇಳುತ್ತಾರೆ. ಇಂಗನ್ನು ಭಾರತೀಯ ಅಡುಗೆ (Cooking)ಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಭಾರತವು ಅಫ್ಘಾನಿಸ್ತಾನ, ಇರಾನ್ ಮತ್ತು ಉಜ್ಬೇಕಿಸ್ತಾನ್‌ನಂತಹ ದೇಶಗಳಿಂದ ಇಂಗನ್ನು ಆಮದು ಮಾಡಿಕೊಳ್ಳುತ್ತದೆ. ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಕೇಂದ್ರದ (CSIR) ವಿಜ್ಞಾನಿಗಳು ಹಿಮಾಚಲ ಪ್ರದೇಶದಲ್ಲಿ ಹಿಂಗನ್ನು ಯಶಸ್ವಿಯಾಗಿ ಬೆಳೆಸುತ್ತಿದ್ದಾರೆ. ಹಿಂಗಿನ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿದ್ರಲ್ಲಾ, ಇನ್ಮುಂದೆ ಅಡುಗೆ ಮನೇಲಿ ಸ್ಪಲ್ಪ ಹೆಚ್ಚೇ ಹಿಂಗು ಸ್ಟಾಕ್ ಇರ್ಲಿ.

click me!