ಕಿಚ್ಚನ ಅಡುಗೆ ಮನೆ ಬಹಳ ವ್ಯವಸ್ಥಿತವಾಗಿದೆ. ಅವರ ಮನೆಯ ಮೇಲ್ಭಾಗದಲ್ಲಿರುವ ಈ ಅಡುಗೆ ಮನೆ ಮೊದಲ ನೋಟಕ್ಕೆ ಒಳ್ಳೆಯ ಮ್ಯೂಸಿಯಂ ಥರ ಕಾಣುತ್ತೆ.
ಮೊನ್ನೆ ತಾನೇ ಕಿಚ್ಚ ಸುದೀಪ್ ಗೆ ಭಾರತೀಯರೆಲ್ಲ ಹೆಮ್ಮೆ ಪಡುವ ಅವಾರ್ಡ್ ಬಂದಿದೆ. ಈ ವರ್ಷದ ದಾದಾ ಸಾಹೇಬ್ ಪಾಲ್ಕೆ ಇಂಟರ್ ನ್ಯಾಶನಲ್ ಫಿಲ್ಮಂ ಫೆಸ್ಟಿವಲ್ ಅವಾರ್ಡ್ ವಿಭಾಗದಲ್ಲಿ 'ಮೋಸ್ಟ್ ಪ್ರಾಮಿಸಿಂಗ್ ಆಕ್ಟರ್'ಪ್ರಶಸ್ತಿ ಕಿಚ್ಚನಿಗೆ ಸಂದಿದೆ. ಸಲ್ಮಾನ್ ಖಾನ್ ಜತೆಗಿನ 'ದಬಾಂಗ್' ಸಿನಿಮಾದ ಬಲ್ಲಿಸಿಂಗ್ ಗೆ ಸಂದ ಗೌರವ ಇದು. ಇಂಥಾ ಅಭಿನಯ ಚಕ್ರವರ್ತಿಗೆ ನಟನೆ ಅಂದರೆ ನೀರು ಕುಡಿದಷ್ಟೇ ಸಲೀಸು. ಅದರ ಜೊತೆಗೆ ಮತ್ತೊಂದು ವಿಷಯದಲ್ಲೂ ತುಂಬಾ ಆಸಕ್ತಿ. ಅದು ಮತ್ತೇನಲ್ಲ, ಅಡುಗೆ ಮಾಡೋದು. ಹೆಚ್ಚಿನ ಮನೆಗಳಲ್ಲಿ ಅಡುಗೆ ಮನೆಗೆ ಅಂಥಾ ಮಹತ್ವ ಕೊಡಲ್ಲ. ಎಲ್ಲೋ ಒಂದು ಮೂಲೆಯಲ್ಲಿ ಇಬ್ಬರು ನಿಲ್ಲುವಷ್ಟು ಜಾಗದಲ್ಲಿ ಅಡುಗೆ ಮನೆ ಮಾಡ್ಕೊಂಡಿರ್ತಾರೆ. ಇಕ್ಕಟ್ಟಾದ ಅಂಥಾ ಜಾಗದಲ್ಲಿ ಅಡುಗೆ ಮಾಡೋದೇ ಸವಾಲು. ಅದರೆ ಕಿಚ್ಚನ ಅಡುಗೆ ಮನೆ ಬಹಳ ವ್ಯವಸ್ಥಿತವಾಗಿದೆ. ಅವರ ಮನೆಯ ಮೇಲ್ಭಾಗದಲ್ಲಿರುವ ಈ ಅಡುಗೆ ಮನೆ ಮೊದಲ ನೋಟಕ್ಕೆ ಒಳ್ಳೆಯ ಮ್ಯೂಸಿಯಂ ಥರ ಕಾಣುತ್ತೆ.
ಕಿಚ್ಚ ದೇಶ, ವಿದೇಶಗಳಲ್ಲಿ ಎಲ್ಲೇ ಶೂಟಿಂಗ್, ಪ್ರವಾಸಗಳಿಗೆ ಹೋಗಲಿ, ಉಳಿದವರೆಲ್ಲ ಹರಟುತ್ತಲೋ ಸೋಮಾರಿಗಳಾಗಿ ಬಿದ್ದುಕೊಂಡೋ ಟೈಮ್ ಪಾಸ್ ಮಾಡುತ್ತಿದ್ದರೆ ಕಿಚ್ಚ ಅವರು ಉಳಿದಕೊಂಡ ಹೊಟೇಲ್ ನ ಕಿಚನ್ ನ ಹುಡುಕಾಟದಲ್ಲಿರುತ್ತಾರೆ. ನೇರ ಹೊಟೇಲ್ ನ ಅಡುಗೆ ಮನೆಗೆ ಹೋಗ್ತಾರೆ. ಅಲ್ಲಿರುವ ಕುಕ್ ಗಳು, ಕೆಲಸಗಾರರ ಜೊತೆಗೆ ಬಹಳ ವಿಶ್ವಾಸದಿಂದ ಮಾತಾಡ್ತಾರೆ. ಚೆಫ್ ಗಳನ್ನು ಬಹಳ ಬೇಗ ಫ್ರೆಂಡ್ ಮಾಡ್ಕೊಂಡು ಅವರ ಅಡುಗೆ ಟ್ರಿಕ್ಸ್ ಕಲೀತಾರೆ. ಆ ಕಿಚನ್ ನ ವಿಶೇಷತೆ ತಿಳೀತಾರೆ. ಮನೆಗೆ ಹೋದ ಮೇಲೆ ಆ ಐಟಂಗಳನ್ನು ಮತ್ತೆ ಮತ್ತೆ ಟ್ರೈ ಮಾಡಿ ಒಬ್ಬ ಸ್ಪೆಷಲ್ ವ್ಯಕ್ತಿಗೆ ಬಡಿಸೋದು ಇವರಿಗಿಷ್ಟ. ತಿಂದವರು, 'ವ್ಹಾವ್, ಡಿಲೀಷಿಯಸ್' ಅಂದರೆ ಇವರ ಮುಖದಲ್ಲಿ ತೃಪ್ತಿ ತುಂಬಿ ತುಳುಕುತ್ತಿರುತ್ತದೆ. ನಟ ಚಂದನ್ ಇವರು ಮಾಡುವ ರುಚಿ ರುಚಿಯಾದ ಅಡುಗೆಗಳನ್ನು ಅನೇಕ ಸಲ ಟೇಸ್ಟ್ ಮಾಡಿ ವ್ಹಾ ಅಂದಿದ್ದಾರೆ. ಹಿಂದೆಲ್ಲೋ ಚಂದನ್ ಹೇಳಿರುವ ಪ್ರಕಾರ, 'ಕಿಚ್ಚ ಸುದೀಪ್ ಅವರ ಅಡುಗೆಗಳಲ್ಲಿ ಒಂದು ಹೊಸತನ ಇರುತ್ತೆ. ಅಡುಗೆಯ ಬಗೆಗಿನ ಅವರ ಪ್ರೀತಿ, ಶ್ರದ್ಧೆ ಮಾಡಿರುವ ತಿನಿಸುಗಳಲ್ಲೂ ಎದ್ದು ಕಾಣುತ್ತಿರುತ್ತಿರುತ್ತೆ. ನೀವು ಎಷ್ಟೇ ಚೆನ್ನಾದ ಅಡುಗೆ ಮಾಡಿದ್ರೂ, ಅದರಲ್ಲಿ ನಿಮ್ಮ ಶ್ರದ್ಧೆ, ಪ್ರೀತಿ ಎದ್ದು ಕಾಣದಿದ್ರೆ ಅದು ನಾಮ್ ಕೆ ವಾಸ್ತೆ ಅಷ್ಟೇ ಆಗಿರುತ್ತೆ. ಆದರೆ ಸುದೀಪ್ ಸಾರ್ ಮಾಡಿರುವ ಅಡುಗೆಗಳ ರುಚಿಯಲ್ಲಿ ಅವರ ಪ್ರೀತಿಯೂ ಬೆರೆತಿರುತ್ತೆ. ಹಾಗಾಗಿ ಅದು ಸ್ಪೆಷಲ್.'
ಮತ್ತೊಂದು ವಿಶೇಷ ಏನು ಗೊತ್ತಾ, ಫಾರಿನ್ ಗೆ ಹೋದಾಗ ಬೇರೆಯವ್ರೆಲ್ಲ ಬಟ್ಟೆ, ಪರ್ಫ್ಯೂಮ್ ಇತ್ಯಾದಿ ಶಾಪಿಂಗ್ ಮಾಡಿದರೆ ಕಿಚ್ಚನ ದಾರಿ ಬೇರೆಯೇ ಇರುತ್ತದೆ. ಅವರು ಆ ಊರಿನ ಫ್ಲೇವರ್ ಗಳನ್ನು ಹುಡುಕುತ್ತಿರುತ್ತಾರೆ. ಆ ಜಾಗಗಳ ಅಡುಗೆ ಮನೆಗಳಲ್ಲಿ ಬಹಳಸುವ ವಿಭಿನ್ನ ಬಗೆಯ ಸಾಧನಗಳ ತಲಾಶೆಯಲ್ಲಿರುತ್ತಾರೆ. ತಮಗಿಷ್ಟವಾದ ಅನೇಕ ಬಗೆಯ ಅಡುಗೆ ಪರಿಕರಗಳನ್ನು ಖರೀದಿಸಿ ತಂದು ಮನೆಯ ಕಿಚನ್ ನಲ್ಲಿ ಸಂಗ್ರಹಿಸಿಡುತ್ತಾರೆ. ಅದಕ್ಕೇ ಅವರ ಅಡುಗೆ ಮನೆಯನ್ನು ಮ್ಯೂಸಿಯಂ ಅನ್ನಬಹುದು. ಬೇರೆ ಬೇರೆ ದೇಶಗಳ ನಾನಾ ನಮೂನೆಯ ಅಡುಗೆ ಸಾಮಗ್ರಿಗಳನ್ನು ಕಿಚ್ಚನ ಕಿಚನ್ ನಲ್ಲಿ ನೋಡಬಹುದು.
ರಾಜಮೌಳಿ ಚಿತ್ರದಲ್ಲಿ ಸುದೀಪ್ ನಟಿಸೋಲ್ಲ!
undefined
ಕಿಚ್ಚನ ಅಡುಗೆ ವೆರೈಟಿ
ಆಮ್ಲೆಟ್ ದೋಸೆ : ಸುದೀಪ್ ಅವರು ಅಡುಗೆಯಲ್ಲಿ ಎಕ್ಸ್ ಪೆರಿಮೆಂಟ್ ಮಾಡುತ್ತಲೇ ಇರುತ್ತಾರೆ. ಹೊಸ ರುಚಿ ಟ್ರೈ ಮಾಡೋದು ಅವರಿಗಿಷ್ಟ. ಕಳೆದ ವರ್ಷ ಅಕ್ಟೋಬರ್ ನಲ್ಲಿ ಸುದೀಪ್ ಸೈರಾ ಶ್ಯೂಟಿಂಗ್ ನಲ್ಲಿದ್ದರು. ಬ್ಯುಸಿ ಶೆಡ್ಯೂಲ್ ನಡುವೆ ಒಂಚೂರು ಬಿಡುವು ಮಾಡಿಕೊಂಡು ಅಡುಗೆ ಮನೆ ಹೊಕ್ಕರು. ಅಲ್ಲಿ ಸುದೀಪ್ ಟ್ರೈ ಮಾಡಿದ್ದು ಆಮ್ಲೆಟ್ ದೋಸೆ. ಅವುಕು ರಾಜನ ಈ ನಳಪಾಕಕ್ಕೆ ಅಭಿಮಾನಿಗಳು ಫಿದಾ ಆಗೋದರ ಜೊತೆಗೆ ಸಹಕಲಾವಿದರೂ ಕಿಚ್ಚನ ಅಡುಗೆ ಅಭಿಮಾನಿಗಳಾದರು. ರಾಜನ ಕಾಸ್ಟ್ಯೂಮ್ ನಲ್ಲೇ ಕಿಚ್ಚ ಬಿಸಿ ಬಿಸಿ ದೋಸೆ ಬಡಿಸೋದು ಸಖತ್ ವೈರಲ್ ಆಯ್ತು.
ಇದರ ಜೊತೆಗೆ ಸುದೀಪ್ ಬಿಗ್ ಬಾಸ್ ನಲ್ಲಿ ಅಡುಗೆ ಮಾಡಿ ಬಡಿಸಿ ಸೈ ಅನಿಸಿಕೊಂಡಿದ್ದಾರೆ. ಸುದೀಪ್ ಸೋಷಲ್ ಮೀಡಿಯಾದಲ್ಲೂ ಅಡುಗೆ ವೀಡಿಯೋ ಹಂಚಿಕೊಳ್ಳುತ್ತಾರೆ. ಚಪಾತಿ ಹಿಟ್ಟಿನಲ್ಲಿ ಬೇರೆ ಬೇರೆ ಶೇಪ್ ಮಾಡಿ ವಿಶಿಷ್ಟವಾಗಿ ಮಡಿಚಿ ಬೇಯಿಸುವ ಒಂದು ರೆಸಿಪಿ ವೀಡಿಯೋವಂತೂ ಸಖತ್ ಕ್ಲಿಕ್ ಆಗಿತ್ತು.
ಆಲಿಯಾ ಭಟ್ ಹೇಳಿ ಕೊಡೋ ಪಲ್ಯ ಮಾಡಿ ನೋಡಿ..
ಅಡುಗೆಯನ್ನು ಪೂರ್ವಾಗ್ರಹದಿಂದ ನೋಡುವ, ಅಡುಗೆ ಮಾಡೋದು ಕೀಳು ಕೆಲಸ, ಸಾಮಾನ್ಯ ಕೆಲಸ ಅಂತೆಲ್ಲ ಕೇವಲವಾಗಿ ಮಾತಾಡೋ ಮಂದಿ ಕಿಚ್ಚನನ್ನ ನೋಡಿ ಕಲಿಯೋದು ಬಹಳಷ್ಟಿದೆ. ಅಡುಗೆಯಿಂದ ಸಿಗುವ ಖುಷಿ ಅಡುಗೆ ಮಾಡಿದವರಿಗೇ ಗೊತ್ತು. ಅದೊಂಥರಾ ಮೆಡಿಟೇಶನ್ ಇದ್ದ ಹಾಗೆ ಅನ್ನುವ ಸುದೀಪ್ ಈ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.